ಸರಕಾರಿ ಯೋಜನೆ

New Ration Card: ಹೊಸ ಕಾರ್ಡ್ ವಿತರಣೆಗೆ ಸರಕಾರದ ಗ್ರೀನ್ ಸಿಗ್ನಲ್ : ಯಾರಿಗೆಲ್ಲ ಸಿಗಲಿದೆ ಹೊಸ ರೇಷನ್ ಕಾರ್ಡ್?

WhatsApp Group Join Now
Telegram Group Join Now

ಹೊಸ ರೇಷನ್ ಕಾರ್ಡ್ ವಿತರಣೆಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆಯಾಗಲಿದ್ದು; ಯಾರಿಗೆಲ್ಲ ಹೊಸ ರೇಷನ್ ಕಾರ್ಡ್ ಸಿಗಲಿದೆ? ಇಲ್ಲಿದೆ ಮಾಹಿತಿ…

New Ration Card : ರಾಜ್ಯ ಸರ್ಕಾರ ಇತ್ತೀಚೆಗಷ್ಟೇ ರೇಷನ್ ಕಾರ್ಡ್ ತಿದ್ದಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಎಡೆಬಿಡದೇ ಸರ್ವರ್ ಸಮಸ್ಯೆ ಎದುರಾದ್ದರಿಂದ ತಿದ್ದುಪಡಿ ಅವಕಶವನ್ನು ಮತ್ತೆ ಮತ್ತೆ ವಿಸ್ತರಿಸುತ್ತ ಬರಲಾಗಿದೆ. ಇದೀಗ ಹೊಸ ರೇಷನ್ ಕಾರ್ಡ್ ವಿತರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. ಕೂಡಲೇ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿವರುವ ಅವರು, ರಾಜ್ಯದಲ್ಲಿ ಹೊಸ ಪಡಿತರ ಚೀಟಿಗಾಗಿ 2.90 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಆದಷ್ಟು ಶೀಘ್ರದಲ್ಲೇ ಈ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹ ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಪಡಿತರ ಚೀಟಗೆ ಈಗಾಗಲೇ ಅರ್ಜಿ ಸಲ್ಲಿಸಿದವರ ಅರ್ಜಿಗಳ ಶೇಕಡಾ 75ರಷ್ಟು ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಇದು ಮುಗಿದ ನಂತರದಲ್ಲಿ ಅರ್ಜಿ ಸಲ್ಲಿಸಿದವರ ಪೈಕಿ ಅರ್ಹರಿಗೆ ಮಾತ್ರವೇ ಪಡಿತರ ಚೀಟಿ ಸಿಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಹಣ ಪ್ರತಿ ತಿಂಗಳು ಈ ದಿನ ಗ್ಯಾರಂಟಿ ಜಮಾ : ಪಕ್ಕಾ ಡೇಟ್ ಫಿಕ್ಸ್ | Gruhalakshmi, Annabhagya Pension Money Deposit Date fix

ಹೊಸ ರೇಷನ್ ಕಾರ್ಡ್ ಸರ್ಕಾರಿ ಆದೇಶ

ಹೊಸ ರೇಷನ್ ಕಾರ್ಡ್’ಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಮಾನ್ಯ ಮಾಡಲು ಆಹಾರ ಇಲಾಖೆಯು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮತಿಗಾಗಿ ಕಾದು ಕುಳಿತಿತ್ತು. ಕಳೆದ ಸೆಪ್ಟೆಂಬರ್ 29ರಂದು ಹೊಸ ಪಡಿತರ ಚೀಟಿಗಾಗಿ ಬಾಕಿ ಉಳಿದಿರುವ ಅರ್ಜಿಗಳನ್ನು ಅಧಿಕಾರಿಗಳು ಇತ್ಯರ್ಥಪಡಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸರ್ಕಾರಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ಬಿಪಿಎಲ್ ಮತ್ತು ಎಪಿಎಲ್ ಎರಡೂ ರೀತಿಯ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದ ಫಲಾನುಭವಿಗಳಿಗೆ ಹೊಸ ರೇಷನ್ ಕಾರ್ಡ್ ವಿತರಿಸುವಂತೆ ಇಲಾಖೆಗೆ ನಿರ್ದೇಶಿಸಲಾಗಿದೆ.

ರಾಜ್ಯ ಸರಕಾರದ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಜತೆಗೆ ವಿವಿಧ ಯೋಜನೆಗಳಿಗೂ ರೇಷನ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಮೇಲಾಗಿ ವರ್ಷಗಳಿಂದ ರೇಷನ್ ಕಾರ್ಡ್ ಅರ್ಜಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಕಾರಣಕ್ಕೆ ಹೊಸ ರೇಷನ್ ಕಾರ್ಡ್ ವಿತರಿಸುವಂತೆ ಪದೇ ಪದೆ ಆಗ್ರಹ ಕೇಳಿ ಬರುತ್ತಿತ್ತು. ವಿಧಾನಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆಗಳಾಗಿವೆ. ಹೀಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಹೊಸ ಪಡಿತರ ಚೀಟಿ ವಿತರಿಸುವಂತೆ ಸರಕಾರ ಆಹಾರ ಇಲಾಖೆಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಎಷ್ಟು ಜನಕ್ಕೆ ಸಿಗಲಿದೆ ಹೊಸ ರೇಷನ್ ಕಾರ್ಡ್?

ಶೇ.96ರಷ್ಟು ಇ-ಕೆವೈಸಿ ಕಾರ್ಯವು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಪ್ರಸ್ತುತ ದಿನಾಂಕ: 16-08-2023ರಂತೆ 2,95,986 ಅರ್ಜಿದಾರರು ಆದ್ಯತಾ ಪಡಿತರ ಚೀಟಿಗಾಗಿ ಹಾಗೂ 71,410 ಅರ್ಜಿದಾರರು ಆದ್ಯತೇತರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿದಾರರಿಗೆ ರೇಷನ್ ಕಾರ್ಡ್ ವಿತರಿಸುವಂತೆ ಕೋರಿದ್ದಾರೆ.

ಆಹಾರ ಇಲಾಖೆಗೆ ಕಳೆದ ಆಗಸ್ಟ್ 16, 2023ರ ವರೆಗೂ ಒಟ್ಟು 2,96,986, ಆದ್ಯತಾ ಪಡಿತರ (PHH) ಚೀಟಿಗಾಗಿ ಹಾಗೂ 71,410 ಆದ್ಯೇತರ ಪಡಿತರ ಚೀಟಿಗಾಗಿ (NPHH /APL) ಫಲಾನುಭವಿಗಳು ಅರ್ಜಿ ಸಲ್ಲಿದ್ದಾರೆ. ಎರಡೂ ಪ್ರಕಾರದ ಪಡಿತರ ಚೀಟಿಗಳಿಗಾಗಿ ಒಟ್ಟು 3,68,396 ಅರ್ಜಿಗಳು ಸಲ್ಲಿಕೆಯಾಗಿವೆ. ಕೆಲವು ಷರತ್ತುಗಳ ಅನ್ವಯ ಈ ಎಲ್ಲರಿಗೂ ಪಡಿತರ ಚೀಟಿ ವಿತರಿಸುವಂತೆ ಸರಕಾರ ಆಹಾರ ಇಲಾಖೆಗೆ ತಿಳಿಸಲಾಗಿದೆ.

ಇದನ್ನೂ ಓದಿ: ಅನ್ನಭಾಗ್ಯ ಹಣ ಬಂದ್’ಗಾಗಿ ನ್ಯಾಯಬೆಲೆ ಅಂಗಡಿಕಾರರ ಹೋರಾಟ

ಹೊಸ ಕಾರ್ಡ್ ವಿತರಣೆಗೆ ಷರತ್ತುಗಳು

ಪ್ರಸ್ತುತ ಆದ್ಯತಾ ಮತ್ತು ಆದ್ಯತೇತರ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಅರ್ಹ ಅರ್ಜಿದಾರರಿಗೆ ಪಡಿತರ ಚೀಟಿಯನ್ನು ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ವಿತರಿಸಲು ಸರ್ಕಾರವು ಆದೇಶಿಸಿದೆ.

  1. ಪ್ರಸ್ತುತ ಅನುಮತಿಸಿರುವ ಹೊಸ ಆದ್ಯತಾ ಪಡಿತರ ಚೀಟಿಗಳ 2.96 ಲಕ್ಷ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೆ ಹೊಸ ಪಡಿತರ ಚೀಟಿಗೆ ಸಂಬ೦ಧಿಸಿದ೦ತೆ ಯಾವುದೇ ಅರ್ಜಿಗಳನ್ನು, ಸ್ವೀಕರಿಸುವಂತಿಲ್ಲ.
  2. ಆದ್ಯತೇತರ (APL) ಪಡಿತರ ಚೀಟಿಯನ್ನು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಅನುಮೋದನೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿಗೊಳಿಸಲಾಗಿದೆ.
  3. ಅದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಿರುವ 2.96 ಲಕ್ಷ ಅರ್ಜಿಗಳ ವಿತರಣೆಯ ನಂತರ ಪ್ರಸ್ತುತ ಚಾಲ್ತಿಯಲಿರುವ ಆದ್ಯತಾ/ಅಂತ್ಯೋದಯ ಪಡಿತರ ಚೀಟಿಗಳ ಸಂಖ್ಯೆಯನ್ನು ಮೀರುವಂತಿಲ್ಲ.
  4. ಆರು ತಿಂಗಳಿ೦ದ ನಿರಂತರವಾಗಿ ಆಹಾರ ಧಾನ್ಯ ಪಡೆಯದೇ ಇರುವ ಪಡಿತರ ಚೀಟಿಗಳನ್ನು ಅಮಾನತ್ತುಗೊಳಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯತಕ್ಕದು.
  5. ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಕೆಯಾಗಿರುವ 2.96 ಲಕ್ಷ ಅರ್ಜಿಗಳ ವಿಲೇವಾರಿಯೊಂದಿಗೆ ಏಕ ಕಾಲದಲ್ಲಿ, ಆರು ತಿಂಗಳ ನಿರಂತರ ಪಡಿತರವನ್ನು ಪಡೆಯದ ಆದ್ಯತಾ ಪಡಿತರ ಚೀಟಿಗಳನ್ನು ಅಮಾನತುಗೊಳಿಸುವುದು.
  6. ಅಮಾನತ್ತುಪಡಿಸಿರುವ ಪಡಿತರ ಚೀಟಿಗಳನ್ನು ಪುನರ್‌ಸ್ಥಾಪಿಸುವುದಕ್ಕೆ ಸಂಬ೦ಧಿಸಿದ೦ತೆ ಸಂಬ೦ಧಪಟ್ಟ ತಾಲೂಕಿನ ತಹಶೀಲ್ದಾರರು ಖುದ್ದು ಸ್ಥಳ ಪರಿಶೀಲನೆ ಮತ್ತು ದಾಖಲಾತಿ ಪರಿಶೀಲನೆ ನಡೆಸಿ ವರದಿ ನೀಡತಕ್ಕದ್ದು, ಸದರಿ ವರದಿಯನ್ನು ಅಧರಿಸಿ ಸಂಬ೦ಧಪಟ್ಟ ಜಿಲ್ಲೆಯ ಜಂಟಿ/ ಉಪನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಅನುಮೋದಿಸುವುದು.

ಹೊಸ ಕಾರ್ಡ್ ವಿತರಣೆ ಸಿದ್ಧತೆ ಕುರಿತ ಆದೇಶ ಪ್ರತಿ ಓದಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: ಗಂಗಾಕಲ್ಯಾಣ ಯೋಜನೆಯಡಿ ಉಚಿತ ಬೋರ್‌ವೆಲ್ ಸೌಲಭ್ಯ ಕಲ್ಪಿಸಲು ಸಣ್ಣ ರೈತರಿಂದ ಆಹ್ವಾನ: ಯಾವೆಲ್ಲ ಜಾತಿಯ ರೈತರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!