ಪಂಚಾಯತಿ ಸುದ್ದಿ

Service Security for Gram Panchayat staff : ಗ್ರಾಮ ಪಂಚಾಯತಿ ಜವಾನರು, ಸ್ವಚ್ಛತಾಗಾರರು, ಕರವಸೂಲಿಗಾರರು, ನೀರುಗಂಟಿಗಳಿಗೆ ರಾಜ್ಯ ಸರಕಾರದ ಬಂಪರ್ ಗಿಫ್ಟ್ | ಇನ್ಮುಂದೆ ಸಂಬಳಕ್ಕಿಲ್ಲ ಪರದಾಟ

WhatsApp Group Join Now
Telegram Group Join Now

ಸೇವಾ ಭದ್ರತೆ ಇಲ್ಲದೇ ತಿಂಗಳ ಸಂಬಳಕ್ಕಾಗಿ ವರ್ಷಗಟ್ಟಲೇ ಪರದಾಡುತ್ತಿದ್ದ ಗ್ರಾಮ ಪಂಚಾಯತಿ ಸಿಬ್ಬಂದಿಗೆ ರಾಜ್ಯ ಸರಕಾರ ಬಂಪರ್ ಗಿಫ್ಟ್ ನೀಡಿದೆ. ಯಾರಿಗೆಲ್ಲ ಈ ಸೌಲಭ್ಯ ಸಿಗಲಿದೆ? ನೌಕರರಿಗೆ ಸಿಗುವ ಅನುಕೂಲವೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

Service Security for Gram Panchayat staff : ಹಲವು ದಿನಗಳಿಂದ ತಮ್ಮ ಬೇಡಿಕೆಗೆ ಆಗ್ರಹಿಸಿ ಹೋರಾಟ ಮಾಡುತ್ತ ಬಂದಿದ್ದ ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ರಾಜ್ಯ ಸರಕಾರ ಬಂಪರ್ ಉಡುಗೊರೆ ನೀಡಿದೆ. ಕನಿಷ್ಟ ವಿದ್ಯಾರ್ಹತೆಯ ಕಾರಣಕ್ಕೆ ಅಭದ್ರತೆಯಲ್ಲೇ ಜೀವನ ಸಾಗಿಸುತ್ತಿದ್ದ ಗ್ರಾಮ ಪಂಚಾಯತಿ ಕರವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ವಾಟರ್ ಅಪರೇಟರ್, ಸ್ವಚ್ಛತಾಗಾರರು, ಅಟೆಂಡರ್ ಸೇರಿದಂತೆ ಹಲವು ಉದ್ಯೋಗಿಗಳಿಗೆ ರಾಜ್ಯ ಸರಕಾರ ಸೇವಾ ಭದ್ರತೆ ಕಲ್ಪಿಸಲು ಮುಂದಾಗಿದೆ.

ಇನ್ಮು೦ದೆ ಈ ನೌಕರರು ಸ್ಥಳೀಯ ಪುಢಾರಿಗಳ ಮುಲಾಜಿಗೆ ಒಳಗಾಗಬೇಕಿಲ್ಲ. ಕಷ್ಟಪಟ್ಟು ದುಡಿದ ಸಂಬಳಕ್ಕಾಗಿ 10-20 ತಿಂಗಳು ಕಾಯಬೇಕಿಲ್ಲ. ಸರಕಾರಿ ಅಧೀನದ ಗ್ರಾಮ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸಿಯೂ ಕೂಡ ಸರಕಾರದ ಸವಲತ್ತುಗಳಿಂದ ವಂಚಿತರಾಗಬೇಕಿಲ್ಲ. ಇನ್ಮುಂದೆ ಈ ಸಿಬ್ಬಂದಿಗೆ ಸರಕಾರದ ಎಲ್ಲ ರೀತಿಯ ಸೌಲಭ್ಯಗಳು ದೊರೆಯಲಿವೆ. ಅಂತಹದೊ೦ದು ಸುಭಧ್ರತೆಯನ್ನು ರಾಜ್ಯ ಸರಕಾರ ಕಲ್ಪಿಸುತ್ತಿದೆ.

ಇದನ್ನೂ ಓದಿ: ಹಸು ಖರೀದಿಗೆ ₹58,500 ರೂಪಾಯಿ ಸಹಾಯಧನ : ಕೂಡಲೇ ಅರ್ಜಿ ಸಲ್ಲಿಸಿ… subsidy for purchase of cow

ಬೇಡಿಕೆಗಳು ಏನಿದ್ದವು?

  • ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್, ಕ್ಲರ್ಕ್ ಕಮ್ ಡಿಇಓ, ಡಾಟ ಎಂಟ್ರೀ ಅಪರೇಟರ್, ಅಟೆಂಡರ್, ಕ್ಲೀನರ್ಸ್, ವಾಟರ್ ಮ್ಯಾನ್, ಚಾಲಕರುಗಳು ಭವಿಷ್ಯ ನಿಧಿ ಇಲ್ಲದೇ, ಆರೋಗ್ಯ ಭದ್ರತೆ ಇಲ್ಲದೇ, ಸರಿಯಾದ ವೇತನ ಶ್ರೇಣಿ ಇಲ್ಲದೇ, ಉದ್ಯೋಗ ಭದ್ರತೆ ಇಲ್ಲದೇ, ನಿವೃತ್ತಿ ಜೀವನಕ್ಕೆ ಭದ್ರತೆ ಇಲ್ಲದೇ ಕೇವಲ ಕನಿಷ್ಠ ವೇತನ ನೀಡಿ ಹಗಲಿರುಳು ದುಡಿಸಿಕೊಳ್ಳಲಾಗುತ್ತಿದೆ ಎಂಬುವುದು ಈ ನೌಕರರ ಅಳಲಾಗಿದೆ. ಹೀಗಾಗಿ ಹಲವು ದಿನಗಳಿಂದ ಈ ಕೆಳಗಿನ ಬೇಡಿಕೆಗಳಿಗೆ ಆಗ್ರಹಿಸುತ್ತಾ ಬಂದಿದ್ದಾರೆ.
  • ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲರ್ಕ್/ ಕ್ಲಕ್ ಕಮ್ ಡಿಇಓ, ಬಿಲ್ಲ್ ಕಲೆಕ್ಟರ್ ಹಾಗೂ ಡಾಟ ಎಂಟ್ರೀ ಅಪರೇಟರ್‌ಗಳಿಗೆ ಸಿ ದರ್ಜೆ ಸ್ಥಾನಮಾನ ಮತ್ತು ಅಟೆಂಡರ್, ಕ್ಲೀನರ್ಸ್, ವಾಟರ್ ಮ್ಯಾನ್ ಇತ್ಯಾದಿ ವೃಂದದವರಿಗೆ ಡಿ ದರ್ಜೆ ನೀಡಿ, ನಗರ ಮತ್ತು ಪಟ್ಟಣ ಪಂಚಾಯತ್‌ನ೦ತೆ ವೇತನ ಶ್ರೇಣಿ ನಿಗಧಿಪಡಿಸಬೇಕು.
  • ಎಲ್ಲಾ ವಾಟರ್ ಮ್ಯಾನ್, ಶುಚಿತ್ವ ನೌಕರರು ಹಾಗೂ ಇತರ ನೌಕರರಿಗೆ ಅವರ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಗಣಿಸದೇ ಹಾಗೂ ಪಂಚಾಯತಿಗಳಲ್ಲಿ ಹುದ್ದೆಗಳ ಗರಿಷ್ಠ ಮಿತಿ ಮತ್ತು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿದೆ ಜಿಲ್ಲಾ ಪಂಚಾಯತ್‌ನಿAದ ಅನುಮೋದನೆ ನೀಡಬೇಕು.
  • ಪಂಚಾಯತ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಡಾಟ ಎಂಟ್ರೀ ಅಪರೇಟರ್‌ಗಳಿಗೆ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿ ಸೇವಾ ಭದ್ರತೆ ಒದಗಿಸಬೇಕು.
    ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ಇತರೆ ಸಮಸ್ಯೆಗಳಿಂದ ಜಿಲ್ಲಾ ಪಂಚಾಯತ್ ಅನುಮೋದನೆಯಾಗದೇ ನಿವೃತ್ತಿಯಾದ ಹಾಗೂ ಮುಂದೆ ನಿವೃತ್ತಿಯಾಗುವ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಗೆ ನಿವೃತ್ತಿ ಉಪಧನ ಮಂಜೂರು ಮಾಡಬೇಕು.
  • ಸದರಿ ನಿವೃತ್ತಿ ಉಪಧನ ಪಾವತಿಸಲು ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಸರಕಾರವೇ ಒಂದು ಶಾಶ್ವತ ನಿಧಿಯನ್ನು ಕಾಯ್ದಿರಿಸಿ ಪಂಚಾಯತ್ ನೌಕರರ ನಿವೃತ್ತಿ ಆದ ಒಂದು ತಿಂಗಳ ಒಳಗಾಗಿ ಗೌರವ ನಿವೃತ್ತಿ ಉಪಧನ ಮಂಜೂರು ಮಾಡಬೇಕು.

ಇದನ್ನೂ ಓದಿ: ಮೂರು ತಿಂಗಳ ಗೃಹಲಕ್ಷ್ಮೀ ಹಣ ಒಟ್ಟಿಗೆ ಜಮಾ : 15 ದಿನಗಳೊಳಗೆ ಹಣ ಸಂದಾಯ

ಸರಕಾರದ ಹೊಸ ಆದೇಶವೇನು?

ಇದೀಗ ರಾಜ್ಯ ಸರಕಾರ ಗ್ರಾಮ ಪಂಚಾಯತಿ ಸಿಬ್ಬಂದಿಯ ಬೇಡಿಕೆಗಳಿಗೆ ಪೂರಕವಾದ ಹೊಸ ಆದೇಶ ಹೊರಡಿಸಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ 2017ಕ್ಕೆ ಮುಂಚಿತವಾಗಿ ನೇಮಕಗೊಂಡು ಜಿಪಂ ಅನುಮೋದನೆಯಾಗದೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ವಿದ್ಯಾರ್ಹತೆ ಹೊರತುಪಡಿಸಿ, ಅದರಲ್ಲೂ ಜವಾನ, ಸ್ವಚ್ಛತಾಗಾರರು, ನೀರುಗಂಟಿಗಳಿಗೆ ವಿದ್ಯಾರ್ಹತೆ ಕೈಬಿಟ್ಟು ವೇತನ ಪಾವತಿ, ಹಾಜರಾತಿ ಆಧಾರದಲ್ಲಿ ಒಂದು ಬಾರಿಗೆ ಘಟನೋತ್ತರ ಅನುಮೋದನೆ ನೀಡುವಂತೆ ಪಂಚಾಯತ್ ರಾಜ್ ಆಯುಕ್ತಾಲಯ ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಸರ್ಕಾರದ ಈ ನಿರ್ಣಯದಿಂದ ಗ್ರಾಮ ಪಂಚಾಯತಿ ಸಿಬ್ಬಂದಿಗಳ ಜೀವನಕ್ಕೆ ಭದ್ರತೆ ಸಿಕ್ಕಂತಾಗಿದೆ. ಇನ್ಮುಂದೆ ಸರ್ಕಾರದಿಂದ ನಿಶ್ಚಿತ ಮತ್ತು ನಿಗದಿತ ಸಮಯಕ್ಕೆ ವೇತನ ಪಾವತಿಯಾಗುತ್ತದೆ. ಮೂರು ಸಾವಿರ, ಐದು ಸಾವಿರ ಸಂಬಳಕ್ಕೆ ಪರದಾಡುವ ಪ್ರಮೆಯವೇ ಬರುವುದಿಲ್ಲ. ಎಲ್ಲಕ್ಕೂ ಮಿಗಿಲಾಗಿ ಎಲ್ಲ ನೌಕರರಿಗೆ ಸಲ್ಲುವಂತೆ ಸರ್ಕಾರದ ಇತರ ಸವಲತ್ತುಗಳು ಇವರಿಗೂ ದೊರೆಯುತ್ತವೆ.

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

ಎಷ್ಟು ಜನ ಸಿಬ್ಬಂದಿಗೆ ಅನುಕೂಲವಾಗಲಿದೆ?

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ 2017ಕ್ಕೂ ಮೊದಲು ಕರವಸೂಲಿಗಾರರು, ಕ್ಲರ್ಕ್ ಕಂ ಡೇಟಾ ಎಂಟ್ರಿ ಅಪರೇಟರ್, ವಾಟರ್ ಅಪರೇಟರ್, ಸ್ವಚ್ಛತಾಗಾರರು, ಅಟೆಂಡರ್ ಸೇರಿದಂತೆ ಒಟ್ಟು 18,672 ಸಿಬ್ಬಂದಿ ನೇಮಕಗೊಂಡು ಬೇರೆ ಬೇರೆ ಕಾರಣಗಳಿಗಾಗಿ ಜಿಪಂ ಅನುಮೋದನೆ ಸಿಕ್ಕಿರಲಿಲ್ಲ. ವಿಶೇಷವೆಂದರೆ ಇವರಲ್ಲಿ ಒಟ್ಟು 11,543 ಸಿಬ್ಬಂದಿ ಕನಿಷ್ಠ ವಿದ್ಯಾರ್ಹತೆ ಹೊಂದಿಲ್ಲವೆAಬ ಕಾರಣ ನೀಡಲಾಗಿತ್ತು. ಹೀಗಾಗಿ ಇವರಿಗೆ ಸಂಬಳ ಸೇರಿದಂತೆ ಸರ್ಕಾರದ ಯಾವ ಸವಲತ್ತುಗಳು ಸಮರ್ಪಕವಾಗಿ ದೊರೆಯುತ್ತಿರಲಿಲ್ಲ.

ಇದೀಗ ಜಿಪಂ ಅನೋದನೆಗೆ ಒಳಗಾಗಿರುವ 18,672 ಸಿಬ್ಬಂದಿ ಸಿಬ್ಬಂದಿಗಳ ಜತೆಗೆ 2017ರಿಂದ ಈಚೆಗೆ ನೇಮಕಗೊಂಡಿರುವ ಅಂದಾಜು 3,000 ಸಿಬ್ಬಂದಿಗಳು ಇನ್ನೂ ಜಿಲ್ಲಾ ಪಂಚಾಯಿತಿಗಳಿ೦ದ ಅನುಮೋದನೆ ಪಡೆಯದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಯನ್ನೂ ಹೊಸ ಆದೇಶದ ವ್ಯಾಪ್ತಿಗೆ ಸೇರಿಸಬೇಕು ಎಂಬ ಆಗ್ರಹ ಕೂಡ ಸರ್ಕಾರದ ಮುಂದಿದೆ.

ಇದನ್ನೂ ಓದಿ: ತೋಟಗಾರಿಕೆ ಬೆಳೆಗಳಿಗೆ ನರೇಗಾ ಸಹಾಯಧನ: ಯಾವ ಬೆಳೆ ಎಷ್ಟು ಹಣ? ಅರ್ಜಿ ಸಲ್ಲಿಕೆ ಹೇಗೆ? Mnarega Subsidy for Horticulture Crops

ಏನೆಲ್ಲ ಅನುಕೂಲ ಸಿಗಲಿದೆ?

ಸರಕಾರದ ಈ ಹೊಸ ಆದೇಶದಿಂದ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಸೇವಾ ಭದ್ರತೆಯ ಭಾವನೆ ಬಲಗೊಳ್ಳಲಿದೆ. ಸ್ಥಳೀಯ ಪುಢಾರಿಗಳಿಂದ ಅನುಭವಿಸುತ್ತಿದ್ದ ಕಿರುಕುಳ, ಮೇಲಾಧಿಕಾರಿಗಳ ಬಿಗಿಹಿಡಿತದಿಂದ ನೆಮ್ಮದಿಯ ಉಸಿರು ಬಿಡಬಹುದು.

ನಿವೃತ್ತಿಯ ನಂತರದ ಪಿಂಚಣಿ ಇತರ ಸೌಲಭ್ಯ ಪಡೆಯಬಹುದು. ಮೊದಲಿನಂತೆ ತಿಂಗಳ ಸಂಬಳಕ್ಕಾಗಿ 10-20 ತಿಂಗಳು ಕಾಯದೇ ನಿಗದಿತ ಸಮಯಕ್ಕೆ ನಿಶ್ಚಿತ ವೇತನ ಕೈ ಸೇರಲಿದೆ. ಪಂಚತ೦ತ್ರ-2 ಅಧೀನದಲ್ಲಿ ಬರುವುದರಿಂದ ನೇರವಾಗಿ ಸರ್ಕಾರದಿಂದ ಕನಿಷ್ಠ ವೇತನ ಪಾವತಿಯಾಗಲಿದೆ. ಆಕಸ್ಮಾತ್ ತಾವು ಮಾಡುತ್ತಿರುವ ವೃತ್ತಿಗೆ ಅನುಗುಣವಾಗಿ ವಿದ್ಯಾರ್ಹತೆ ಗಳಿಸಿಕೊಂಡರೆ ಅಂಥವರಿಗೆ ಬಡ್ತಿ ಕೂಡ ಸಿಗಲಿದೆ.

Service Security for Gram Panchayat staff

Gram Panchayat Recruitment 2023 : ಗ್ರಾಮ ಪಂಚಾಯತಿ ನೇಮಕಾತಿ: 733 ಹುದ್ದೆಗಳಿಗೆ ಅರ್ಜಿ ಆಹ್ವಾನ | PDO, SDA, ಕಾರ್ಯದರ್ಶಿ ಹುದ್ದೆಗಳ ನೇಮಕ

WhatsApp Group Join Now
Telegram Group Join Now

Related Posts

error: Content is protected !!