ಪಶುಪಾಲನೆಸರಕಾರಿ ಯೋಜನೆ

ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ ಗರಿಷ್ಠ ₹3 ಲಕ್ಷ ಸಾಲ | Pashu Kisan Credit Card Yojana (PKCC)

WhatsApp Group Join Now
Telegram Group Join Now

Pashu Kisan Credit Card Yojana (PKCC)

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (ಪಿಕೆಸಿಸಿ) ಯೋಜನೆಯಡಿ ಗಾಗಿ ರೈತರಿಗೆ ಸಾಲ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದ್ದರೆ, ಯಾವುದೇ ಗ್ಯಾರಂಟಿ ಇಲ್ಲದೆ ಪಶುಪಾಲನೆ ಮಾಡಲು ಸಾಲ ಪಡೆಯಬಹುದು. ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು? ಅದನ್ನು ಪಡೆಯುವುದು ಹೇಗೆ? ಸಾಲ ಮಂಜೂರಾತಿ ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ…

ಮೀನುಗಾರಿಕೆ ಮತ್ತು ಪಶು ಸಂಗೋಪನೆಯನ್ನು ಕೃಷಿಗೆ ಪೂರಕ ಕ್ಷೇತ್ರಗಳೆಂದು ಘೋಷಿಸಿ, ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ವಿಸ್ತರಿಸಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ಪಶುಪಾಲಕರಿಗೆ ಹಾಗೂ ಮೀನುಗಾರರಿಗೆ ಆದ್ಯತೆ ಮೇಲೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವಂತೆ ರಾಜ್ಯಮಟ್ಟದ ಬ್ಯಾಂಕರುಗಳ ಸಭೆಯಲ್ಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದನ್ನೂ ಓದಿ: ಬ್ಯಾಂಕುಗಳಿ೦ದ ಕಡಿಮೆ ಬಡ್ಡಿ ಸಾಲ ಬೇಕೆ? ಇಲ್ಲಿದೆ ಸರಳ ಮಾರ್ಗ | ಮೊಬೈಲ್‌ನಲ್ಲೇ ಚೆಕ್ ಮಾಡಿ ನಿಮ್ಮ ಸಾಲ ಪಡೆಯುವ ಅರ್ಹತೆ How to Check CIBIL Score?

ಏನಿದು ಪಶು ಕಿಸಾನ್ ಕ್ರೆಡಿಟ್ ಕಾರ್ಡ್? 

ಕಿಸಾನ್ ಕ್ರೆಡಿಟ್ ಕಾರ್ಡ್ (KCC) ಯೋಜನೆಯನ್ನು ದೇಶದ ರೈತ ಬಾಂಧವರ ಹಿತದೃಷ್ಠಿಯಿಂದ ಕೇಂದ್ರ ಸರಕಾರ ಜಾರಿಗೆ ತಂದಿದ್ದು; 2019-20ನೇ ಸಾಲಿನಿಂದ ಪಶುಪಾಲನೆಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (PKCC) ಯೋಜನೆಯಡಿ ಮೀನು ಸಾಕಣೆ, ಕೋಳಿ ಸಾಕಣೆ, ಕುರಿ-ಮೇಕೆ, ಹಸು ಮತ್ತು ಎಮ್ಮೆ ಪಾಲನೆಗಾಗಿ ರೈತರಿಗೆ ಸಾಲ ನೀಡಲಾಗುತ್ತದೆ. ಈ ಕಾರ್ಡ್ ಹೊಂದಿದ್ದರೆ, ರೈತರು ಯಾವುದೇ ಗ್ಯಾರಂಟಿ ಇಲ್ಲದೆ ಪಶುಪಾಲನೆ ಮಾಡಲು ಸಾಲ ಪಡೆಯಬಹುದು.

ಹರಿಯಾಣವು ತನ್ನ ರಾಜ್ಯದ ರೈತರಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪಡೆದ ದೇಶದ ಮೊದಲ ರಾಜ್ಯವಾಗಿದೆ. ಈ ಯೋಜನೆ ಈಗ ದೇಶದ ಎಲ್ಲ ರಾಜ್ಯಗಳಲ್ಲಿ ಅಸ್ಥಿತ್ವದಲ್ಲಿದ್ದು; ಕೃಷಿಗೆ ಪೂರಕವಾದ ಉಪ ಕಸುಬುಗಳಿಗೆ ಗರಿಷ್ಠ 2ರಿಂದ 3 ಲಕ್ಷ ರೂಪಾಯಿ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.

ಇದನ್ನೂ ಓದಿ: Anganwadi Teacher Job Karnataka : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಈ ಯೋಜನೆಯಲ್ಲಿ ಪ್ರತಿ ಎಮ್ಮೆಗೆ 60,249 ರೂಪಾಯಿ, ಪ್ರತಿ ಹಸುವಿಗೆ 40,783 ರೂಪಾಯಿ, ಮೊಟ್ಟೆ ಇಡುವ ಕೋಳಿಗೆ 720 ರೂಪಾಯಿ ಮತ್ತು ಕುರಿ/ಮೇಕೆಗೆ 4,063 ರೂಪಾಯಿ ಸಾಲ ನೀಡಲಾಗುತ್ತದೆ. 1.6 ಲಕ್ಷ ರೂಪಾಯಿ ವರೆಗಿನ ಸಾಲಗಳಿಗೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಹಣಕಾಸು ಸಂಸ್ಥೆಗಳು/ಬ್ಯಾಂಕ್‌ಗಳು 7% ಬಡ್ಡಿದರದಲ್ಲಿ ಸಾಲವನ್ನು ನೀಡಿದರೆ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಜಾನುವಾರು ಮಾಲೀಕರು 4% ರಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು.

ಎಲ್ಲ ಅರ್ಹ ಅರ್ಜಿದಾರರು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಫಲಾನುಭವಿಗಳಾಗಬಹುದು ಎಂದು ಬ್ಯಾಂಕರ್ಸ್ ಕಮಿಟಿ ಸರಕಾರಕ್ಕೆ ಭರವಸೆ ನೀಡಿದೆ. ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಅಡಿಯಲ್ಲಿ, ಪ್ರಾಣಿಗಳ ಮಾಲೀಕರು ವಾರ್ಷಿಕ ಶೇ. 4ರಷ್ಟು ಬಡ್ಡಿ ಪಾವತಿಸಬೇಕಾಗುತ್ತದೆ. ಕೇಂದ್ರ ಸರಕಾರದಿಂದ ಶೇ.3ರಷ್ಟು ರಿಯಾಯಿತಿ ನೀಡಲು ಅವಕಾಶವಿದೆ. ಗರಿಷ್ಠ 2ರಿಂದ 3 ಲಕ್ಷ ರೂಪಾಯಿವರೆಗೆ ಸಾಲ ಲಭ್ಯವಿದೆ.

ಇದನ್ನೂ ಓದಿ: ಆಡು-ಕುರಿ, ಹೈನುಗಾರಿಕೆ ಉಚಿತ ತರಬೇತಿ; ವಸತಿ, ಊಟೋಪಚಾರ ಕೂಡ ಉಚಿತ | ಈಗಲೇ ಹೆಸರು ನೋಂದಣಿ ಮಾಡಿ…

ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು

  1. ಅರ್ಜಿದಾರರ ಆಧಾರ್ ಕಾರ್ಡ್
  2. ಪ್ಯಾನ್ ಕಾರ್ಡ್
  3. ಮತದಾರರ ಗುರುತಿನ ಚೀಟಿ
  4. ಮೊಬೈಲ್ ನಂಬರ್
  5. ಪಾಸ್‌ಪೋರ್ಟ್ ಫೋಟೋ
  6. ಬ್ಯಾಂಕ್ ಪಾಸ್‌ಬುಕ್

ಇದನ್ನೂ ಓದಿ: Government Business Loan Schemes : ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯುವುದು ಹೇಗೆ?

ಕಿಸಾನ್ ಕ್ರೆಡಿಟ್ ಕಾರ್ಡ್ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಲಭ್ಯವಿದೆ. ಆದ್ದರಿಂದ ಯಾವುದೇ ಆನ್‌ಲೈನ್ ಅರ್ಜಿ ಸಲ್ಲಿಸಲು ರಾಷ್ಟ್ರೀಕೃತ ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ. ವೆಬ್‌ಸೈಟ್‌ನಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆಮಾಡಿ ಮತ್ತು ‘ಅನ್ವಯಿಸು ಕ್ಲಿಕ್ ಮಾಡಿ.

ಮುಂದಿನ ಪುಟದಲ್ಲಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ. ಸಲ್ಲಿಸು ಕ್ಲಿಕ್ ಮಾಡಿ. ನೀವು ಅಪ್ಲಿಕೇಶನ್ ಉಲ್ಲೇಖವನ್ನು ಸ್ವೀಕರಿಸುತ್ತೀರಿ. ಯಶಸ್ವಿ ಅಪ್ಲಿಕೇಶನ್ ನಂತರ, ಸಂಬಂಧಪಟ್ಟ ಬ್ಯಾಂಕ್ ಸಿಬ್ಬಂದಿ 3-4 ವ್ಯವಹಾರ ದಿನಗಳಲ್ಲಿ ನಿಮ್ಮನ್ನು ಸಂಪರ್ಕಿಸುತ್ತಾರೆ.

ಆಸಕ್ತ ಫಲಾನುಭವಿಗಳು ಹತ್ತಿರದ ಬ್ಯಾಂಕ್‌ಗೆ ಭೇಟಿ ನೀಡುವ ಮೂಲಕ ಪಶು ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು.

ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಬ್ಯಾಂಕ್ ಅಧಿಕಾರಿಗೆ ಸಲ್ಲಿಸಬೇಕು. ಅರ್ಜಿಯ ಪರಿಶೀಲನೆಯ ನಂತರ ಒಂದು ತಿಂಗಳ ಬಳಿಕ ನಿಮಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.

ಇದನ್ನೂ ಓದಿ:  Home loan low interest Banks : ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ

ಹೈನುಗಾರಿಕೆ, ಕುರಿ-ಮೇಕೆ, ಹಂದಿ, ಕೋಳಿ ಸಾಕಣೆ ಹಾಗೂ ಮೀನುಗಾರಿಕೆ ಉಪ ಕಸುಬುಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯಲ್ಲಿನ ರೈತರು ಅರ್ಜಿ ಸಲ್ಲಿಸಲು ಹಾಗೂ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ನಿರ್ದೇಶಕರು, ಪಶು ಸಮಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳಿಗೆ ಭೇಡಿ ನೀಡಿ, ಅಗತ್ಯವಾಗಿರುವ ದಾಖಲಾತಿಗಳನ್ನು ಸಲ್ಲಿಸಿ, ದುಡಿಮೆ ಬಂಡವಾಳಕ್ಕೆ ಆರ್ಥಿಕ ನೆರವು ಪಡೆಯಬಹುದಾಗಿದೆ.

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ, ಸರ್ಕಾರವು ಪಶುಸಂಗೋಪನೆಗಾಗಿ ರೈತರಿಗೆ ಕಡಿಮೆ ಬಡ್ಡಿಗೆ ಸಾಲ ನೀಡುತ್ತದೆ. ಈ ಮೊತ್ತವನ್ನು ಆರು ಕಂತುಗಳಲ್ಲಿ ನೀಡಲಾಗುತ್ತಿದ್ದು; ಮೊದಲ ಕಂತು ಪಡೆದ ದಿನದಿಂದ ಸಾಲದ ಅವಧಿ ಪ್ರಾರಂಭವಾಗುತ್ತದೆ.

Pashu Kisan Credit Card Yojana (PKCC)

================================

ಇವುಗಳನ್ನೂ ಓದಿ:

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ರಾಮಮಂದಿರ ಹೆಸರಿನಲ್ಲಿ ಸೈಬರ್ ವಂಚನೆ : ಕರ್ನಾಟಕ ಪೊಲೀಸ್ ಇಲಾಖೆ ಎಚ್ಚರಿಕೆ! Ram Mandir Cyber ​​Scam : Police department alert

SSLC ಪಾಸಾದವರಿಗೆ 4,237 ಸರಕಾರಿ ಬಸ್ ಕಂಡಕ್ಟರ್ ಹುದ್ದೆಗಳು | BMTC And KKRTC Bus Conductor Recruitment 2024

PhonePe, Google pya, Paytm ಮೂಲಕ ಬೇರೆಯವರಿಗೆ ತಪ್ಪಾಗಿ ಹಣ ಕಳಿಸಿದರೆ ವಾಪಾಸು ಪಡೆಯುವುದು ಹೇಗೆ? Online Money Transaction

ಉಚಿತ ಹೊಲಿಗೆ ಯಂತ್ರ ಮತ್ತು ವಿವಿಧ ವೃತ್ತಿ ಉಪಕರಣ ಪಡೆಯಲು ಅರ್ಜಿ ಆಹ್ವಾನ Free Sewing Machine & Free Improved Tool Kits

ಲೇಬರ್ ಕಾರ್ಡ್ ಅರ್ಜಿ ಆರಂಭ | ಈ ಕಾರ್ಡ್ ಇದ್ದರೆ ಸಿಗಲಿವೆ ಹಲವು ಸೌಲಭ್ಯ Karnataka Labour card application online 2024

LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

fake sim card fraud : ನಿಮ್ಮ ಹೆಸರಿನಲ್ಲಿ ಯಾರಾದರೂ ನಕಲಿ ಸಿಮ್ ಖರೀದಿಸಿದ್ದಾರಾ? ಮೋಸ ಹೋಗುವ ಮೊದಲು ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ…

WhatsApp Group Join Now
Telegram Group Join Now

Related Posts

error: Content is protected !!