ಸರಕಾರಿ ಯೋಜನೆ

Pashu Sanjeevini Ambulance : ಜೂನ್ 15ರ ನಂತರ ರೈತರ ಮನೆ ಬಾಗಿಲಿಗೇ ಬರಲಿದೆ ಸಂಚಾರಿ ಪಶು ಕ್ಲಿನಿಕ್

WhatsApp Group Join Now
Telegram Group Join Now

ಕಡೆಗೂ ‘ಪಶು ಸಂಜೀವಿನಿ ಯೋಜನೆ’ಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಗ್ರಾಮೀಣ ಪ್ರದೇಶದ ಜಾನುವಾರುಗಳಿರುವ ರೈತರ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲು ಸಜ್ಜಾಗಿ ನಿಂತಿವೆ…

ಇದೇ ಜೂನ್ 15, 2023ರ ನಂತರ ರಾಜ್ಯಾದ್ಯಂತ ಮೊಬೈಲ್ ವೆಟರ್ನರಿ ಕ್ಲಿನಿಕ್‌ಗಳು ಕಾರ್ಯಾರಂಭ ಮಾಡಲಿದ್ದು; ಎತ್ತು, ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಯಾವುದೇ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೂ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡಲಿವೆ ಎಂದು ಬೆಂಗಳೂರಿನ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ.ಪಿ.ಟಿ. ಶ್ರೀನಿವಾಸ್ ಮಾಹಿತಿ ಹಂಚಿಕೊ೦ಡಿದ್ದಾರೆ.

Monsoon Rain: ರಾಜ್ಯದಲ್ಲಿ ಜೂನ್ 11ರಿಂದ ಮುಂಗಾರು ಮಳೆ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ ಮಾಹಿತಿ

ಏನಿದು ಪಶು ಸಂಜೀವಿನಿ? 

ಕೇಂದ್ರ ಸರಕಾರ ಪುರಷ್ಕೃತ ಯೋಜನೆ ಇದು. ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಶೇ.60 ಮತ್ತು 40ರ ಅನುಪಾತದ ಅನುದಾನದಲ್ಲಿ ಒಟ್ಟು 44 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಕರ್ನಾಟಕ ರಾಜ್ಯಕ್ಕೆ 290 ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನಗಳು ಮಂಜೂರಾಗಿದ್ದವು. ಅದರಂತೆ ರಾಜ್ಯ ಸರಕಾರ ಒಟ್ಟು 290 ವಾಹನಗಳನ್ನು ಖರೀದಿಸಿ, ಒಂದು ಲಕ್ಷ ಜಾನುವಾರಿಗೆ ಒಂದು ವಾಹನದಂತೆ ಬೆಂಗಳೂರು ವಿಭಾಗಕ್ಕೆ 75, ಮೈಸೂರು 68, ಬೆಳಗಾವಿ 82, ಕಲಬುರಗಿ ವಿಭಾಗಕ್ಕೆ 65 ವಾಹನಗಳನ್ನು ಹಂಚಿಕೆ ಮಾಡಿತ್ತು.

ಆದರೆ, ಈ ಹಿಂದೆ ಸಂಸ್ಥೆಯೊ೦ದಕ್ಕೆ ನೀಡಿದ್ದ ಗುತ್ತಿಗೆ ರದ್ದಾದ ಕಾರಣಕ್ಕೆ ಈ ವಾಹನಗಳು ಸೇವೆ ನೀಡದೆ ಇಲಾಖೆಯ ಕಚೇರಿಗಳ ಆವರಣದಲ್ಲಿಯೇ ನಿಂತಿದ್ದವು. ಈಗ ಪಶು ಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಈ ವಾಹನಗಳನ್ನು ನಿರ್ವಹಣೆಯ ಹೊಣೆಯನ್ನು ಏಜೆನ್ಸಿ ಒಂದಕ್ಕೆ ಟೆಂಡರ್ ನೀಡಿ, ಕಾರ್ಯಾದೇಶ ನೀಡಿರುವುದರ ಪರಿಣಾಮ ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ಚಿಕಿತ್ಸೆ ನೀಡಲು ಈ ವಾಹನಗಳು ತಯಾರಾಗಿವೆ.

ಸ್ವಯಂ ಉದ್ಯೋಗ ಮಾಡಲು ಉಚಿತ ತರಬೇತಿಗೆ ಅರ್ಜಿ ಆಹ್ವಾನ

1962ಕ್ಕೆ ಕಾಲ್ ಮಾಡಿ 

ಜೂನ್ 15ರ ಬಳಿಕ ಈ ವಾಹನಗಳು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಎತ್ತು, ಹಸು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಯಾವುದೇ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದರೆ, ಜಾನುವಾರುಗಳ ಮಾಲೀಕರು ಸಹಾಯವಾಣಿಗೆ ಕರೆ ಮಾಡಿದ ಕೆಲ ಸಮಯದಲ್ಲಿಯೇ ಮನೆ ಬಾಗಿಲಿಗೆ ವಾಹನಗಳು ತೆರಳಿ, ಜಾನುವಾರುಗಳಿಗೆ ಚಿಕಿತ್ಸೆ ನೀಡಲಿವೆ.

ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯು ಗ್ರಾಮೀಣ ಪ್ರದೇಶದ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದಾಗ ಅವುಗಳಿಗೆ ತುರ್ತು ಸೇವೆ ಒದಗಿಸಲು 1962 ಸಂಖ್ಯೆಯ ಸಹಾಯವಾಣಿ ಸ್ಥಾಪಿಸಿದೆ. ಈ ಸಹಾಯವಾಣಿಗೆ ಜಾನುವಾರುಗಳ ಮಾಲೀಕರು ಕರೆ ಮಾಡಿದ ಕೆಲವೇ ಸಮಯದಲ್ಲಿ ವಾಹನಗಳು 109 ಆಂಬುಲೆನ್ಸ್ ಮಾದರಿಯಲ್ಲಿ ಸ್ಥಳಕ್ಕೆ ಧಾವಿಸಿ, ಸ್ಥಳದಲ್ಲಿಯೇ ಜಾನುವಾರುಗಳಿಗೆ ಚಿಕಿತ್ಸೆ ನೀಡಲಿವೆ.

ಇದನ್ನೂ ಓದಿ:

ರೈತರು ಮತ್ತು ರೈತ ಮಹಿಳೆಯರಿಂದ ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ತರಬೇತಿಗೆ ಅರ್ಜಿ ಆಹ್ವಾನ

ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ: ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

ಹೊಸ ರೇಷನ್ ಕಾರ್ಡ್ ವಿತರಣೆಗೆ ಆನ್‌ಲೈನ್ ಅರ್ಜಿ ಆಹ್ವಾನ | ಬಿಪಿಎಲ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು?

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!