ತಂತ್ರಜ್ಞಾನ ಸುದ್ದಿಹಣಕಾಸು

Paytm Payments Bank Banned : ಫೆಬ್ರವರಿ 29ರಿಂದ ಪೇಟಿಎಂ ಬಳಸೋಕೆ ಆಗಲ್ವಾ? ರಿಸರ್ವ್ ಬ್ಯಾಂಕ್ ಮಹತ್ವದ ಆದೇಶ

WhatsApp Group Join Now
Telegram Group Join Now

Paytm Payments Bank Banned

ಇದೇ ಫೆಬ್ರವರಿ 29ರಿಂದ Paytmಗೆ  ಭಾರತೀಯ ರಿಸರ್ವ್ ಬ್ಯಾಂಕ್  ನಿರ್ಬಂಧ ಅನ್ವಯವಾಗಲಿದ್ದು; ಇನ್ಮುಂದೆ ಮೊಬೈಲ್’ನಲ್ಲಿ ಪೇಟಿಎಂ ಯುಪಿಐ ಬಳಸೋಕೆ ಆಗಲ್ವಾ? ಸಂಪೂರ್ಣ ಮಾಹಿತಿ ಇಲ್ಲಿದೆ…

ಗೂಗಲ್ ಪೇ, ಫೋನ್ ಪೇ ಯುಪಿಐ ಅಪ್ಲಿಕೇಷನ್’ಗಳಿಗಿಂತ ಹೆಚ್ಚು ಜನಪ್ರಿಯವಾಗಿದ್ದ Paytmನ ಕೆಲವು ವ್ಯವಹಾರಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಹಠಾತ್ ನಿರ್ಬಂಧ ಹೇರಿದೆ. ಇದೇ ಫೆಬ್ರವರಿ 29ರಿಂದ ಈ ನಿರ್ಬಂಧ ಅನ್ವಯವಾಗಲಿದ್ದು; ಇನ್ಮುಂದೆ ಮೊಬೈಲ್’ನಲ್ಲಿ ಪೇಟಿಎಂ ಯುಪಿಐ ಬಳಸೋಕೆ ಆಗಲ್ವಾ? ಎಂಬ ಪ್ರಶ್ನೆಯನ್ನು ಗ್ರಾಹಕರಲ್ಲಿ ಹುಟ್ಟು ಹಾಕಿದೆ.

ನಿನ್ನೆ (ಜನವರಿ 31) ಭಾರತೀಯ ರಿಜರ್ವ್ ಬ್ಯಾಂಕ್ ಪೇಟಿಎಂ ಕೆಲವು ಪ್ರಮುಖ ವಹಿವಾಟುಗಳ ಮೇಲೆ ನಿರ್ಬಂಧ ಹೇರಿದ್ದು; ಇನ್ಮುಂದೆ ಗ್ರಾಹಕರು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ನ ತಮ್ಮ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಖಾತೆಯಿಂದ ಹಣ ಹಿಂಪಡೆಯಲು ಅನುಮತಿ ನೀಡಲಾಗಿದೆ.

ಇದನ್ನೂ ಓದಿ: Pradhan Mantri Suryoday Yojana 2024 : ಇನ್ಮುಂದೆ ಮನೆಮನೆಗೂ ಸೋಲಾರ್ ವಿದ್ಯುತ್ | ಕೇಂದ್ರ ಸರಕಾರದ ಹೊಸ ಯೋಜನೆ

ಆರ್‌ಬಿಐ ನಿರ್ಬಂಧ ಹೇರಿದ್ದೇಕೆ?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ನ (Paytm Payments Bank Ltd) ಹಲವು ವಹಿವಾಟುಗಳು ಆರ್‌ಬಿಐ ನಿಯಮಕ್ಕೆ ವಿರುದ್ಧವಾಗಿವೆ ಎಂಬ ಆಪಾದನೆ ಕೇಳಿ ಬಂದಿದೆ. ಇದೇ ಕಾರಣಕ್ಕೆ 2022ರ ಮಾರ್ಚ್ ತಿಂಗಳಲ್ಲಿ ತಕ್ಷಣದಿಂದಲೇ ಹೊಸ ಗ್ರಾಹಕರನ್ನು ಸೆಳೆಯದಂತೆ ಪೇಮೆ ಪಿಪಿಬಿಎಲ್‌ಗೆ ನಿರ್ದೇಶಿಸಲಾಗಿತ್ತು. ಅಲ್ಲಿಂದ ಶುರುವಾದ ಸಮಸ್ಯೆಗಳು ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿವೆ.

ಇದೀಗ ಕೇಂದ್ರ ಬ್ಯಾಂಕ್ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹಲವು ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಆಡಿಟ್ ವರದಿಯಲ್ಲಿ ಬಹಿರಂಗವಾಗಿದೆ ಎಂದು ಹೇಳಿದೆ. ತತ್ಪರಿಣಾಮ ಬ್ಯಾಂಕಿAಗ್ ನಿಯಂತ್ರಣ ಕಾಯಿದೆ, 1949ರ ಸೆಕ್ಷನ್ 35ಎ ಅಡಿಯಲ್ಲಿ (Banking Regulation Act, 1949 Section 35A) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ವಿರುದ್ಧ ಕ್ರಮ ಜರುಗಿಸಲಾಗಿದೆ.

ಇದನ್ನೂ ಓದಿ: PhonePe, GooglePay, Paytm ಬಳಸುವವರಿಗೆ ತಿಳಿದಿರಲೇ ಬೇಕಾದ ಮಹತ್ವದ ಮಾಹಿತಿ… | ಈ ಕ್ರಮ ಅನುಸರಿಸಿದರೆ ಫುಲ್‌ಸೇಪ್ How can I block UPI accounts when my mobile is lost?

ಏನೆಲ್ಲ ಬಂದ್ ಆಗಲಿದೆ?

ಇದೇ ಫೆಬ್ರವರಿ 29ರ ನಂತರ ಹೆಚ್ಚು ಕಡಿಮೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ನ ಎಲ್ಲಾ ಸೇವೆಗಳು ಸ್ಥಗಿತಗೊಳ್ಳಲಿವೆ. ಪೇಟಿಎಂನ ಮೂಲ ಕಂಪನಿ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ (One97 Communications Limited) ಮತ್ತು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PBBL ನೋಡಲ್ ಖಾತೆಗಳನ್ನು ಕೇಂದ್ರೀಯ ಬ್ಯಾಂಕ್ ಅಂತ್ಯಗೊಳಿಸಿದೆ.

ಗ್ರಾಹಕರ ಖಾತೆಗಳು ಅಥವಾ ಪ್ರಿಪೇಯ್ಡ್ ಸೇವೆಗಳಾದ ವ್ಯಾಲೆಟ್‌ಗಳು ಮತ್ತು ಫಾಸ್ಟ್ಟ್ಯಾಗ್‌ಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವುದು, ಕ್ರೆಡಿಟ್ ವಹಿವಾಟುಗಳನ್ನು ನಡೆಸುವುದು ಅಥವಾ ಟಾಪ್-ಅಪ್ ತೆಗೆದುಕೊಳ್ಳುವುದು ಬಂದ್ ಆಗಲಿವೆ. ಈ ವಹಿವಾಟುಗಳಿಗೆ ಆರ್‌ಬಿಐ ನಿರ್ಬಂಧ ಹೇರಿದೆ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಮೊಬೈಲ್’ನಲ್ಲಿ ಪೇಟಿಎಂ ಬಳಸೋಕೆ ಆಗಲ್ವಾ?

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ಗಿ೦ತಲೂ ಪೇಟಿಎಂ ಯುಪಿಐ ಅಪ್ಲಿಕೇಶನ್ (UPI Application) ಹೆಚ್ಚಿ ಜನಪ್ರಿಯವಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ತರು, ಗ್ರಾಹಕರು ವೈಯಕ್ತಿಕವಾಗಿ ಪೇಟಿಎಂ ಯುಪಿಐ ಅಪ್ಲಿಕೇಶನ್ ಹೆಚ್ಚಾಗಿ ಬಳಸುತ್ತಾರೆ. ಆರ್‌ಬಿಐ ಆದೇಶದಿಂದ ಇನ್ಮುಂದೆ ಪೇಟಿಎಂ ಯುಪಿಐ ಅಪ್ಲಿಕೇಶನ್ ಬಳಸಲು ಸಾಧ್ಯವಿಲ್ವಾ? ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿದೆ.

ರಿಸರ್ವ್ ಬ್ಯಾಂಕ್ ಆದೇಶದನ್ವಯ 29ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ನ ಕೆಲವು ಪ್ರಮುಖ ಸೇವೆಗಳು ಸ್ಥಗಿತಗೊಳ್ಳಲಿವೆ. ಆದರೆ ಗ್ರಾಹಕರು ತಮ್ಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್’ನ ಉಳಿತಾಯ ಮತ್ತು ಚಾಲ್ತಿ ಖಾತೆಗಳಿಂದ ನಿರ್ಬಂಧವಿಲ್ಲದೆ (ಮತ್ತು) ಲಭ್ಯವಿರುವ ಮಿತಿಯನ್ನು ಒಳಗೊಂಡAತೆ ಬ್ಯಾಲೆನ್ಸ್ ಅನ್ನು ಬಳಸಬಹುದಾಗಿದೆ.

ಇದನ್ನೂ ಓದಿ: PhonePe, Google pya, Paytm ಮೂಲಕ ಬೇರೆಯವರಿಗೆ ತಪ್ಪಾಗಿ ಹಣ ಕಳಿಸಿದರೆ ವಾಪಾಸು ಪಡೆಯುವುದು ಹೇಗೆ? Online Money Transaction

ಆರ್‌ಬಿಐ ಆದೇಶವು ಪೇಟಿಎಂನ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ (Unified Payments Interface – UPI) ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಗ್ರಾಹಕರು ಬೇರೆ ಬ್ಯಾಂಕ್ ಖಾತೆಗೆ ಪೇಟಿಎಂ ಯುಪಿಐ ಲಿಂಕ್ ಮಾಡಿದ್ದಲ್ಲಿ ಡಿಜಿಟಲ್ ಪಾವತಿಗೆ ಪೇಟಿಎಂ ಬಳಸಬಹುದು. ಈ ಬಗ್ಗೆ ಪೇಟಿಎಂ ಅಥವಾ ಅದರ ಸಂಸ್ಥಾಪಕ (ಸಿಇಒ) ವಿಜಯ್ ಶೇಖರ್ ಶರ್ಮಾ ಅವರ ಪ್ರತಿಕ್ರಿಯೆ ನಂತರ ಇನ್ನಷ್ಟು ವಿವರ ತಿಳಿಯಲಿದೆ.

RBI ಹೊರಡಿಸಿರುವ ಸಂಪೂರ್ಣ ಪತ್ರಿಕೆ ಪ್ರಕಟಣೆ ಓದಲು ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

WhatsApp Group Join Now
Telegram Group Join Now

Related Posts

error: Content is protected !!