ತಂತ್ರಜ್ಞಾನ ಸುದ್ದಿಸಾಲ ಯೋಜನೆ

ಸಾಲ ಪಡೆಯುವವರಿಗೆ PhonePe ಹೊಸ ಅಪ್ಡೇಟ್ | PhonePe Loan Credit score Advice

WhatsApp Group Join Now
Telegram Group Join Now

2015ರಿಂದಲೂ ಡಿಜಿಟಲ್ ಹಣಕಾಸು ಸೇವೆ ಒದಗಿಸುತ್ತ ಬಂದಿರುವ ಪೋನ್ ಪೇ ಇದೀಗ ಸಾಲ ಮತ್ತು ಸಾಲ ಪಡೆಯಲು ಸಲಹೆ ನೀಡುವ ಹೊಸ ವೈಶಿಷ್ಟ್ಯವನ್ನು ಜಾರಿಗೆ ತರುತ್ತಿದೆ…

PhonePe Loan Credit score Advice : ಯಾವುದೇ ಸಾಲ ಪಡೆಯಲು ಮುಖ್ಯವಾಗಿ ಬೇಕಾಗಿರುವುದು ಕ್ರೆಡಿಟ್ ಸ್ಕೋರ್ (Credit Score). ಈ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ (Cibil Score) 750ಕ್ಕಿಂತ ಕಡಿಮೆ ಇದ್ದರೆ, ಸಾಲ ಪಡೆಯುವುದು ಬಹುಶಃ ಕಷ್ಟ. ಒಂದು ವೇಳೆ ಸಾಲ ಸಿಕ್ಕರೂ ದುಬಾರಿ ಬಡ್ಡಿ ತೆರಬೇಕಾಗುತ್ತದೆ. ಹೀಗಾಗಿ ಡಿಜಿಟಲ್ ಹಣಕಾಸು ಸಂಸ್ಥೆಯಾದ ‘ಫೋನ್ ಪೇ’ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿಸಿಕೊಂಡು, ಸರಳವಾಗಿ ಸಾಲ ಪಡೆಯಲು ಅನುಕೂಲವಾಗುವಂತೆ ಹೊಸ ಅಪ್ಡೇಟ್ ನೀಡಿದೆ.

ಇದನ್ನೂ ಓದಿ: Home loan low interest Banks : ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವ ಸರಳ ವಿಧಾನ | ಸರಳ ಬಡ್ಡಿಯಲ್ಲಿ ಗೃಹಸಾಲ ನೀಡುವ ಬ್ಯಾಂಕ್‌ಗಳ ಪಟ್ಟಿ ಇಲ್ಲಿದೆ

ಕ್ರೆಡಿಟ್ ಸ್ಕೋರ್ ವಿಭಾಗ ಆರಂಭ

ಕಳೆದ 2015ರಿಂದಲೂ ಡಿಜಿಟಲ್ ಹಣಕಾಸು ಸೇವೆಗಳನ್ನು ನೀಡುತ್ತ ಬಂದಿರುವ ವಾಲ್ ಮಾರ್ಟ್ ಒಡೆತನದ ಫೋನ್ ಪೇ ಕಾಲಕಾಲಕ್ಕೆ ಹಲವು ವೈಶಿಷ್ಟö್ಯಗಳನ್ನು ಒದಗಿಸುತ್ತ ಬಂದಿದೆ. ಆ್ಯಪ್ ಮೂಲಕ ಸಾಲ ಸೌಲಭ್ಯವನ್ನು ಒದಗಿಸಲು ಮುಂದಾಗಿರುವ ಸದರಿ ಹಣಕಾಸು ಸಂಸ್ಥೆ ಇದೀಗ ತನ್ನ ಬಳಕೆದಾರರಿಗೆ ಹಣಕಾಸು ವಿಷಯಗಳನ್ನು (Financial subjects) ಸುಲಭವಾಗಿ ಪಡೆಯಲು ಹೊಸದಾಗಿ ಕ್ರೆಡಿಟ್ ಸ್ಕೋರ್ (Credit Score) ಎಂಬ ವಿಭಾಗವನ್ನು ತೆರೆದಿದೆ.

ಈ ಹೊಸ ವಿಭಾಗದಿಂದ ಫೋನ್ ಪೇ ಬಳಕೆದಾರರಿಗೆ ತಮ್ಮ ಕ್ರೆಡಿಟ್ ಕಾರ್ಡ್’ಗಳನ್ನು (Credit Score) ಸುಲಭವಾಗಿ ನಿರ್ವಹಿಸಬಹುದು ಮತ್ತು ಎಲ್ಲಾ ತರಹದ ಬಿಲ್’ಗಳು, ಮರುಪಾವತಿಗಳು (Repayments) ಮತ್ತು ಸಾಲಗಳನ್ನು ಸುಲಭವಾಗಿ ಪಾವತಿಸಲು ‘ಫೋನ್ ಪೇ ಮೊಬೈಲ್ ಅಪ್ಲಿಕೇಶನ್’ನಲ್ಲಿನ ಹೊಸ ವೈಶಿಷ್ಟ್ಯಗಳು ಬಳಕೆದಾರರಿಗೆ ಬಹಳ ಅನುಕೂಲವಾಗಲಿದೆ.

ಇದನ್ನೂ ಓದಿ: Income Tax Department New Rules : ತೆರಿಗೆ ಇಲಾಖೆ ಹೊಸ ನಿಯಮದ ಪ್ರಕಾರ ಮನೆಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬೇಕು? ನಿಯಮ ತಪ್ಪಿದರೆ ಬೀಳಲಿದೆ ಭರ್ತಿ ದಂಡ

ಫೋನ್ ಪೇ ಹೊಸ ವೈಶಿಷ್ಟ್ಯಗಳು

ಫೋನ್ ಪೇ ಇತ್ತೀಚೆಗೆ ಸೇರಿಸಿದ ಹೊಸ ಕ್ರೆಡಿಟ್ ವಿಭಾಗದಲ್ಲಿ ಬಳಕೆದಾರರು ತಮ್ಮ ಕ್ರೆಡಿಟ್ ಸ್ಕೋರನ್ನು ಸುಲಭವಾಗಿ ಪರಿಶೀಲಿಸಬಹುದು. ಈ ಕ್ರೆಡಿಟ್ ಸ್ಕೋರನ್ನು ಪರಿಶೀಲಿಸಿಕೊಳ್ಳಲು ಯಾವುದೇ ಹಣ ಪಾವತಿಸಬೇಕಾಗಿಲ್ಲ. ಉಚಿತವಾಗಿ ಪರಿಶೀಲಿಸಿಕೊಳ್ಳಬಹುದು. ಕ್ರೆಡಿಟ್ ಸ್ಕೋರ್ ಎಂಬುದು ಒಬ್ಬ ವ್ಯಕ್ತಿ ಯಾವುದೇ ಸಾಲವನ್ನು ಪಡೆಯಬೇಕಾದರೆ ಅತಿ ಮುಖ್ಯ ಪಾತ್ರ ವಹಿಸುವುದು. ಯಾವುದೇ ಖಾಸಗಿ ಬ್ಯಾಂಕ್, ಫೈನಾನ್ಸ್ ಕಂಪನಿ ಅಥವಾ ಸರ್ಕಾರಿ ಬ್ಯಾಂಕ್’ಗಳು ಸಾಲ ನೀಡಲು ಮೊಟ್ಟಮೊದಲಿಗೆ ಪರಿಶೀಲಿಸುವುದೇ ಕ್ರೆಡಿಟ್ ಸ್ಕೋರ್. ಕ್ರೆಡಿಟ್ ಸ್ಕೋರ್ ಆಧಾರದ ಒಬ್ಬ ವ್ಯಕ್ತಿಗೆ ಕೃಷಿ ಸಾಲ, ಟ್ರಾಕ್ಟರ್ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ ಇತ್ಯಾದಿ ಸಾಲವನ್ನು ನೀಡಲಾಗುತ್ತದೆ.

How to increase credit score?

ಸಾಲ ಪಡೆಯಲು ಪ್ರತಿಯೊಬ್ಬರ ಕ್ರೆಡಿಟ್ ಸ್ಕೋರ್ or Cibil Score ಕನಿಷ್ಠ 750 ಇರುವುದು ಕಡ್ಡಾಯವಾಗಿರುತ್ತದೆ. ಈ ಕ್ರೆಡಿಟ್ ಸ್ಕೋರ್ ನಿಮ್ಮ ಎಲ್ಲಾ ಸಾಲದ ಸಾರಾಂಶವನ್ನು ಹೊಂದಿದ್ದು, ಒಬ್ಬ ವ್ಯಕ್ತಿಯ ಸಾಲದ ಮರುಪಾವತಿ, ಸಮಯಕ್ಕೆ ಸರಿಯಾದ ಮರುಪಾವತಿಯ ಬಗ್ಗೆ ತಿಳಿಸಿ ಕೊಡುತ್ತದೆ. ಫೋನ್ ಪೇ ಹೊಸ ವಿಭಾಗವು ಬಳಕೆದಾರರಿಗೆ ಈ ಒಂದು ಉಪಯುಕ್ತ ಮಾಹಿತಿ ಬಗ್ಗೆ ಸಲಹೆಯನ್ನು ನೀಡಲು ಸಹಾಯಕವಾಗಿದೆ.

ನೀವು ಯಾವಾಗ ನಿಮ್ಮ ಕ್ರೆಡಿಟ್ ಸ್ಕೋರನ್ನು ಅರ್ಥ ಮಾಡಿಕೊಳ್ಳುವುದು ಮತ್ತು ನಿರ್ವಹಣೆ ಮಾಡಿಕೊಳ್ಳುವುದನ್ನು ಕಲಿಯುತ್ತಿರೋ ಆವತ್ತು ಹಣಕಾಸಿನ ಸಬಲೀಕರಣ ಆರಂಭವಾಗುತ್ತದೆ. ಫೋನ್ ಪೇಯ ಈ ಹೊಸ ವಿಭಾಗವು ಬಳಕೆದಾರರಿಗೆ ತಿಳುವಳಿಕೆಯುಳ್ಳ ಹಣಕಾಸಿನ ನಿರ್ಧಾರಗಳನ್ನು ಮತ್ತು ಅದರ ಬಗ್ಗೆ ತಕ್ಕ ಮಟ್ಟಿಗೆ ಮಾಹಿತಿ ಒದಗಿಸಲು ಬಹಳ ಉಪಯುಕ್ತವಾಗಿದ್ದು; ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ವೈಶಿಷ್ಟಗಳನ್ನು ನಾವು ತರಲಿದ್ದೇವೆ ಎನ್ನುತ್ತಾರೆ PhonePe ಕ್ರೆಡಿಟ್ ವಿಭಾಗದ ನಿರ್ವಾಹಕರು.

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

PhonePe loan service

ಇದರ ಜತೆಗೆ ಶೀಘ್ರದಲ್ಲಿಯೇ ಫೋನ್ ಪೇ ಗ್ರಾಹಕರಿಗೆ ಆನ್‌ಲೈನ್ ಮುಖಾಂತರ ಸಾಲವನ್ನು ನೀಡಲು ಫೋನ್ ಪೇ ಸಾಲ ಸೌಲಭ್ಯ (PhonePe loan service ) ಕೊಡುಗೆಯನ್ನು ಆರಂಭಿಸುತ್ತಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ಬ್ಯಾಂಕ್‌ಗಳು ಮತ್ತು ಬ್ಯಾಂಕಿ೦ಗ್ ಅಲ್ಲದ ಹಣಕಾಸು ಕಂಪನಿಗಳೊ೦ದಿಗೆ NFBC (Non Banking Financial Company) ಮಾತುಕತೆ ಮಾಡಿಕೊಂಡಿದೆ.

ಆರು ತಿಂಗಳಿನಲ್ಲಿ Phonepe loan service ಜೊತೆಗೆ ಇನ್ನು ಹಲವಾರು ಉತ್ಪನ್ನಗಳೊಂದಿಗೆ ಜನರಿಗೆ ಅನುಕೂಲವಾಗುವಂತೆ ಅನೇಕ ಪ್ರಾಡಕ್ಟ್ಗಳನ್ನು ಸಿದ್ಧ ಮಾಡುತ್ತಿದೆ. ಸದ್ಯ ಫೋನ್ ಪೇ ಕಂಪನಿಯವರು ತಮ್ಮಲ್ಲಿರುವ ಡೇಟಾಬೇಸ್’ನಿಂದ ಸಾಲ ಸೌಲಭ್ಯಕ್ಕೆ ಅರ್ಹರಿರುವ ಗ್ರಾಹಕರನ್ನು ಹುಡುಕುತ್ತಿದೆ. ಈ ಅರ್ಹ ಗ್ರಾಹಕರಿಗೆ ಮೊಬೈಲ್’ನಲ್ಲಿಯೆ ಸಾಲ ಸೌಲಭ್ಯದ ಜೊತೆಗೆ ಇನ್ನು ಹಲವಾರು ಪ್ರಾಡಕ್ಟ್’ಗಳನ್ನು ನೀಡಲು ಮುಂದಾಗಿದೆ.

PhonePe Loan Credit score Advice

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

WhatsApp Group Join Now
Telegram Group Join Now

Related Posts

error: Content is protected !!