ಸರಕಾರಿ ಯೋಜನೆ

8ನೇ ತರಗತಿ ಪಾಸಾಗಿದ್ದರೆ ಸ್ವಯಂ ಉದ್ಯಮ ಪ್ರಾರಂಭಿಸಲು ಸಿಗಲಿದೆ 25 ಲಕ್ಷ ರೂಪಾಯಿ ಸಾಲ ಸೌಲಭ್ಯ | ಶೇ.35ರಷ್ಟು ಸಬ್ಸಿಡಿ | PMEGP Scheme

WhatsApp Group Join Now
Telegram Group Join Now

8ನೇ ಕ್ಲಾಸ್ ಪಾಸಾಗಿದ್ದರೆ ಸಾಕು ಕೇಂದ್ರ ಸರಕಾರದ ಈ ಯೋಜನೆಯಡಿ ನಿರುದ್ಯೋಗಿಗಳು 10 ಲಕ್ಷದಿಂದ 25 ಲಕ್ಷ ರೂಪಾಯಿ ಸಬ್ಸಿಡಿ ಸಹಿತ ಸಾಲ ಪಡೆಯಬಹುದು. ಏನಿದು ಯೋಜನೆ? ಸಾಲ ಪಡೆಯುವುದು ಹೇಗೆ? ಸಬ್ಸಿಡಿ ಎಷ್ಟು? ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… 

ಇದು ‘ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಯೋಜನೆ’ (Prime Ministers Employment Generation Programme-PMEGP). ಸಂಕ್ಷಿಪ್ತವಾಗಿ PMEGP ಯೋಜನೆ ಎಂದು ಪ್ರಸಿದ್ಧವಾಗಿರುವ ಸದರಿ ಯೋಜನೆಯ ಮುಖ್ಯ ಉದ್ದೇಶ ದೇಶದಲ್ಲಿ ಸಣ್ಣ ಉದ್ಯಮಗಳನ್ನು ಉತ್ತೇಜಿಸುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವುದಾಗಿದೆ. ಹೆಸರೇ ಹೇಳುವಂತೆ ಉದ್ಯೋಗ ಸೃಷ್ಟಿಯೇ ಪಿಎಂಇಜಿಪಿ ಯೋಜನೆಯ ಪ್ರಧಾನ ಉದ್ದೇಶವಾಗಿದೆ.

ಇದನ್ನೂ ಓದಿ: ಗ್ರಾಮ ಪಂಚಾಯತಿ 6,406 ಹುದ್ದೆಗಳಿಗೆ ಪಿಯುಸಿ ಅಭ್ಯರ್ಥಿಗಳ ನೇಮಕಾತಿ

ಇದು ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಬೃಹತ್ ಯೋಜನೆಗಳಲ್ಲಿ ಒಂದಾಗಿದ್ದು; ಈ ಯೋಜನೆಯಡಿ ಉದ್ಯಮ ಆರಂಭಿಸಲು ಸಬ್ಸಿಡಿ ಸಹಿತ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಯಡಿ ನಿರುದ್ಯೋಗಿಗಳು 10 ಲಕ್ಷದಿಂದ 25 ಲಕ್ಷ ರೂಪಾಯಿ ಬಂಡವಾಳದೊ೦ದಿಗೆ ಹೊಸ ಉದ್ಯಮ ಆರಂಭಿಸಬಹುದು. 2022-23ನೇ ಸಾಲಿನಲ್ಲಿ ಸದರಿ ಯೋಜನೆಯಡಿ ದೇಶಾದ್ಯಂತ ಒಟ್ಟು 4,35,580 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಈ ಪೈಕಿ ಕರ್ನಾಟಕದಿಂದ 44,137 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಲಕ್ಷಾಂತರ ಜನ ನಿರುದ್ಯೋಗಿಗಳು ಈ ಯೋಜನೆಯ ಲಾಭ ಪಡೆದು ಸ್ವಾವಲಂಬಿಗಳಾಗುತ್ತಿದ್ದಾರೆ. ಮಾತ್ರವಲ್ಲ ಸ್ವತಃ ತಾವೂ ಕೂಡ ಹಲವರಿಗೆ ಸಣ್ಣಪುಟ್ಟ ಉದ್ಯೋಗ ಕಲ್ಪಿಸುತ್ತಿದ್ದಾರೆ. ಹೊಸ ಉದ್ಯಮ ಆರಂಭಿಸಲು ಮಾತ್ರ ಈ ಯೋಜನೆಯಡಿ ನೆರವು ನೀಡಲಾಗುತ್ತದೆಯೇ ವಿನಃ ಈಗಾಗಲೇ ಆರಂಭಿಸಿರುವ ಉದ್ಯಮವನ್ನು ವಿಸ್ತರಿಸಲು ನೆರವು ನೀಡುವುದಿಲ್ಲ.

ಇದನ್ನೂ ಓದಿ: ರೈತರಿಗೆ 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ಸಾಲ ಏಪ್ರಿಲ್ 1ರಿಂದ ಜಾರಿ: ಯಾರಿಗೆಲ್ಲ ಸಿಗಲಿದೆ ಈ ಸೌಲಭ್ಯ?

ಸಹಾಯಧನ ಎಷ್ಟು?

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮ ಆರಂಭಿಸಲು ಶೇ.15ರ ವರೆಗೆ ಸಬ್ಸಿಡಿ ನೀಡಲಾಗುವುದು. ನಗರ ಪ್ರದೇಶಗಳಲ್ಲಿ ಉದ್ಯಮ ಆರಂಭಿಸಲು ಶೇ.25ರ ವರೆಗೆ ಸಬ್ಸಿಡಿ ಒದಗಿಸಲಾಗುತ್ತದೆ. ಉದ್ಯಮ ಆರಂಭಿಸಲು ಬೇಕಾಗುವ ಒಟ್ಟು ವೆಚ್ಚದ ಶೇ.10ರಷ್ಟನ್ನು ತಮ್ಮ ಸ್ವಂತ ಹೂಡಿಕೆ ಮಾಡಬೇಕು.

ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಮಾಜಿ ಸೈನಿಕರು ಯೋಜನೆಯಡಿ ಉದ್ಯಮ ಆರಂಭಿಸಿದರೆ, ಅವರಿಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯಮ ಆರಂಭಿಸಲು ಶೇ.35ರಷ್ಟು ಸಬ್ಸಿಡಿ ಮತ್ತು ನಗರ ಪ್ರದೇಶದಲ್ಲಿ ಉದ್ಯಮ ಆರಂಭಿಸಲು ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಇವರು ಒಟ್ಟು ವೆಚ್ಚದ ಶೇ.5ರಷ್ಟನ್ನು ಸ್ವಂತ ಬಂಡವಾಳ ಹೂಡಿಕೆ ಮಾಡಬೇಕು.

ಇದನ್ನೂ ಓದಿ: 2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಅರ್ಹತಾ ಮಾನದಂಡಗಳೇನು?

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಯೋಜನೆಯ ಮೂಲಕ ಸಬ್ಸಿಡಿ ಸಹಿತ ಸಾಲ ಪಡೆದು ಉದ್ಯಮ ಆರಂಭಿಸಲು ಅರ್ಜಿದಾರರು ಭಾರತೀಯ ಪ್ರಜೆಯಾಗಿರಬೇಕು. ವಯಸ್ಸು 18 ವರ್ಷ ಅಥವಾ ಮೇಲ್ಪಟ್ಟವರಾಗಿರಬೇಕು. ಅರ್ಜಿದಾರರು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು.

ಸರ್ಕಾರಿ ಶಿಕ್ಷಣ ಸಂಸ್ಥೆಗಳಿ0ದ ತರಬೇತಿ ಪಡೆಯುವ ಯುವಕರಿಗೆ ಆದ್ಯತೆ ನೀಡಲಾಗುವುದು. ಅರ್ಜಿದಾರರು ಈಗಾಗಲೇ ಯಾವುದೇ ಯೋಜನೆಯಿಂದ ಸಹಾಯಧನ ತೆಗೆದುಕೊಳ್ಳುತ್ತಿದ್ದರೆ, ನಂತರ ಅವರು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಆರಂಭಿಸಲು ಶೇ.25ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಇವರು ಒಟ್ಟು ವೆಚ್ಚದ ಶೇ.5ರಷ್ಟನ್ನು ಸ್ವಂತ ಬಂಡವಾಳ ಹೂಡಿಕೆ ಮಾಡಬೇಕು.

ಇದನ್ನೂ ಓದಿ: ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಬೇಕಾಗುವ ದಾಖಲೆಗಳೇನು?

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಮೊಬೈಲ್ ಸಂಖ್ಯೆ ಮತ್ತು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ವಿಳಾಸ ಪುರಾವೆ, ಅಂಕಪಟ್ಟಿ ಸೇರಿದಂತೆ ಮುಂತಾದ ಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರಬೇಕು.

ಅರ್ಜಿ ಸಲ್ಲಿಕೆ ಹೇಗೆ?

ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿ ಸಬ್ಸಿಡಿ ಸಹಿತ ಸಾಲಸೌಲಭ್ಯ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

https://kviconline.gov.in/pmegpeportal/jsp/pmegponline.jsp

Prime Ministers Employment Generation Programme-PMEGP ಅಧಿಕೃತ ವೆಬ್‌ಸೈಟ್‌ನ PMEGP Online Application ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಕಾಣುವ ಅರ್ಜಿ ನಮೂನೆಯನ್ನು ಸಂಪೂರ್ಣ ಭರ್ತಿ ಮಾಡಿ.

ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ಎಲ್ಲ ಅಗತ್ಯ ದಾಖಲೆಗಳ ಸ್ಕ್ಯಾನ್‌ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಬೇಕು. ಅಂತಿಮವಾಗಿ ‘ಸಬ್‌ಮಿಟ್’ ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ, ನೀವು ಪ್ರಿಂಟ್‌ಔಟ್ ತೆಗೆದುಕೊಂಡು ಅದನ್ನು ಹತ್ತಿರದ KVIC/KVIB ಅಥವಾ DICಗೆ ಸಲ್ಲಿಸಬೇಕು. ಅರ್ಜಿ ಸ್ವೀಕರಿಸಿದ ನಂತರ ಬ್ಯಾಂಕ್‌ನಿAದ ಸಾಲ ನೀಡಲಾಗುತ್ತದೆ ಮತ್ತು ಸಾಲದ ಮೇಲೆ ಸಹಾಯಧನವೂ ಸಿಗುತ್ತದೆ.

PMEGP ಯೋಜನೆ ಕುರಿತ ಸಂಪೂರ್ಣ ಗೈಡ್‌ಲೈನ್ ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here

ಇದನ್ನೂ ಓದಿ: 

PUC ಅಭ್ಯರ್ಥಿಗಳಿಂದ ಗ್ರಾಮ ಪಂಚಾಯತಿ ಹುದ್ದೆಗಳಿಗೆ ಅರ್ಜಿ ಆಹ್ವಾನ | 2,000 ಹುದ್ದೆಗಳು ಶೀಘ್ರದಲ್ಲೇ ನೇಮಕಾತಿ

ಒಂದು ಲಕ್ಷ ಸರಕಾರಿ ಹುದ್ದೆಗಳ ನೇಮಕಾತಿಗೆ ತಯಾರಿ ಶುರು: ಇಲಾಖಾವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿAgriculture Budget 2023: ರೈತರಿಗೆ ರೂ.5 ಲಕ್ಷ ಬಡ್ಡಿ ಇಲ್ಲದ ಸಾಲ, ಹೊಸ ಸಬ್ಸಿಡಿ ಯೋಜನೆಗಳ ಕಂಪ್ಲೀಟ್ ಡಿಟೇಲ್ಸ್

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

WhatsApp Group Join Now
Telegram Group Join Now

Related Posts

error: Content is protected !!