ಸರಕಾರಿ ಯೋಜನೆ

ಜನವರಿ 28ಕ್ಕೆ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ | PM Kisan 13th Installment Date 2023

WhatsApp Group Join Now
Telegram Group Join Now

ಕಡೆಗೂ ಕೃಷಿ ಸಚಿವಾಲಯದಿಂದ ಬಹು ನಿರೀಕ್ಷಿತ ಪಿಎಂ-ಕಿಸಾನ್ ಯೋಜನೆಯ 13ನೇ ಕಂತಿನ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ದಿನಾಂಕ ಪಕ್ಕಾ ಆಗಿದೆ. ಆದರೆ ಈ ಕಂತಿನ ಹಣ ನಮಗೆ ಸಿಗುತ್ತೋ ಇಲ್ಲವೋ ಎಂಬ ಗೊಂದಲ ಅನೇಕ ರೈತರಲ್ಲಿದೆ. ಅಂತಹ ರೈತರು ಈ ಲೇಖನದಲ್ಲಿ ನೀಡಿರುವ ಲಿಂಕ್ ಬಳಸಿ ಮೊಬೈಲ್‌ನಲ್ಲಿಯೇ ಹಣ ಜಮಾ ಕುರಿತ ಅನುಮಾನ ಬಗೆಹರಿಸಿಕೊಳ್ಳಬಹುದು…

PM-Kisan ಯೋಜನೆಯ 13ನೇ ಕಂತಿನ ಹಣ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವ ದಿನಾಂಕ ಪಕ್ಕಾ ಆಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಕೃಷಿ ಸಚಿವಾಲಯವು ಜನವರಿ 28, 2023ರೊಳಗೆ ಫಲಾನುಭವಿ ರೈತರು ಇ-ಕೆವೈಸಿ ಪರಿಶೀಲನೆ ಮಾಡುವುದು ಅಗತ್ಯವಾಗಿದ್ದು; ಇ-ಕೆವೈಸಿ ಪರಿಶೀಲಿಸಿದ ರೈತರಿಗೆ ಮಾತ್ರ 13ನೇ ಕಂತಿನ ಹಣವನ್ನು ನೀಡಲಾಗುವುದು ಎಂಬ ಸೂಚನೆಯನ್ನು ನೀಡಿದೆ.

ಇದನ್ನೂ ಓದಿ: ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ಇ-ಕೆವೈಸಿ ಮಾಡದಿದ್ದರೆ ರೈತರ ಹೆಸರಿನಲ್ಲಿ ಸ್ವೀಕರಿಸಿದ ೧೩ನೇ ಕಂತಿನ ಹಣವನ್ನು ಫ್ರೀಜ್ ಮಾಡಲಾಗುತ್ತದೆ. ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಒಟಿಪಿ ಆಧಾರದಲ್ಲಿ ಮೊಬೈಲ್ ಮೂಲಕವೂ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಬಯೋ ಮೆಟ್ರಿಕ್ ಆಧಾರದಲ್ಲೂ ಇ-ಕೆವೈಸಿ ಮಾಡಿಸಬಹುದು. ಖಚಿತ ಮೂಲಗಳ ಪ್ರಕಾರ, ಸರ್ಕಾರವು ರೈತರ ಖಾತೆಗಳಿಗೆ ಜನವರಿ ೨೬ ರಂದು ಹಣವನ್ನು ವರ್ಗಾಯಿಸಬಹುದು. ಸದ್ಯ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಆರ್ಥಿಕ ಬೆಂಬಲದ ಅಗತ್ಯವಿರುವ ರೈತ ಕುಟುಂಬಗಳಿಗೆ ಪಿಂಚಣಿ ನೀಡುವ ಪಿಎಂ-ಕಿಸಾನ್ ಯೋಜನೆಗೆ 2019ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಸದರಿ ಯೋಜನೆಯಡಿ, ಸಣ್ಣ ಮತ್ತು ಅತಿಸಣ್ಣ ರೈತರ ಬ್ಯಾಂಕ್ ಖಾತೆಗೆ ಪ್ರತಿವರ್ಷ ಕೇಂದ್ರ ಸರ್ಕಾರ 6,000 ಹಾಗೂ ರಾಜ್ಯ ಸರ್ಕಾರ 4,000 ಸೇರಿ ಒಟ್ಟು 10,000 ರೂಪಾಯಿ ನೇರವಾಗಿ ಜಮೆ ಮಾಡಲಾಗುತ್ತಿದೆ.

ಇದನ್ನೂ ಓದಿ: ರೈತರು ಕೃಷಿ ಯಂತ್ರಗಳಿಗೆ ಉಚಿತ ಡಿಸೇಲ್ ಪಡೆಯಲು ಮೊಬೈಲ್ ಮೂಲಕವೇ ಹೆಸರು ನೋಂದಣಿ ಮಾಡುವುದು ಹೇಗೆ?

ಕಳೆದ 2022ರ ಅಕ್ಟೋಬರ್ 17ರಂದು 12ನೇ ಕಂತಿನ ಹಣವನ್ನು ಫಲಾನುಭವಿ ರೈತರ ಖಾತೆಗೆ ನೇರ ವರ್ಗಾವಣೆ ಮಾಡಲಾಗಿತ್ತು. ರಾಜ್ಯದ 50.36 ಲಕ್ಷ ರೈತರಿಗೆ ಒಟ್ಟು 1007.26 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಆದರೆ ಅನೇಕ ರೈತರಿಗೆ 12ನೇ ಕಂತಿನ ಹಣ ಸಿಕ್ಕಿಲ್ಲ. ಇದೀಗ 13ನೇ ಕಂತಿನ ಹಣ ಪಾವತಿಗೆ ಸರಕಾರ ಸಕಲ ಸಿದ್ಧವಾಗಿದ್ದು; ಈ ಕಂತು ಕೂಡ ನಮಗೆ ಸಿಗುತ್ತೋ ಸಿಗುವುದಿಲ್ಲವೋ ಎಂಬ ಗೊಂದಲ ರಾಜ್ಯದ ಲಕ್ಷಾಂತರ ರೈತರಲ್ಲಿದೆ. ಈಗಲೂ ಇ-ಕೆವೈಸಿ ಮಾಡದ ರೈತರ ಬ್ಯಾಂಕ್ ಖಾತೆಗೆ 13ನೇ ಕಂತಿನ ಹಣ ಜಮೆಯಾಗುವುದು ಅನುಮಾನ.

ಹಾಗಾದರೆ ಈ ಬಾರಿಯೂ ನಮಗೆ ಪಿಎಂ ಕಿಸಾನ್ ಆರ್ಥಿಕ ನೆರವು 2,000 ರೂಪಾಯಿ ಸಿಗುತ್ತೋ? ಸಿಗುವುದಿಲ್ಲವೋ? ಎಂಬ ಗೊಂದಲ ಬಹಳಷ್ಟು ರೈತರಲ್ಲಿದೆ. ನಿಮಗೆ ಪಿಎಂ ಕಿಸಾನ್ 13ನೇ ಕಂತಿನ ಹಣ ಬರುತ್ತದೋ? ಇಲ್ಲವೋ? ಎಂಬುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. https://pmkisan.gov.in/VillageDashboard_Portal.aspx ಪಿಎಂ ಕಿಸಾನ್ ತಂತ್ರಾಶದ Village Dashboard ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ, ಸಬ್ ಜಿಲ್ಲೆ (ತಾಲ್ಲೂಕು), ವಿಲೇಜ್ ಸೆಲೆಕ್ಟ್ ಮಾಡಿ Submit ಬಟನ್ ಕ್ಲಿಕ್ ಮಾಡಬೇಕು.

ಆಗ Summary, Payment status, Aadhaar Authentication Status ಹಾಗೂ Online Registration Status ಹೀಗೆ ನಾಲ್ಕು ಆಯ್ಕೆಗಳು ಕಾಣುತ್ತವೆ. ಅದರಲ್ಲಿ ನೀವು Aadhar Authentication status ಮೇಲೆ ಕ್ಲಿಕ್ ಮಾಡಿದರೆ 5 ಬಾಕ್ಸ್‌ಗಳು ಕಾಣಿಸಿಕೊಳ್ಳುತ್ತವೆ. ಕೊನೆಯಲ್ಲಿ ಕಾಣುವ Total ineligible ಅಂದರೆ ಪಿಎಂ ಕಿಸಾನ್ ಯೋಜನೆಗೆ ಅನರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ 13ನೇ ಕಂತಿನ ಹಣ ಬರುವುದು ಅನುಮಾನ.

ಇದನ್ನೂ ಓದಿ: ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

PM-Kisan ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ ಈ ಸಂಖ್ಯೆ 011-23381092 ಅನ್ನು ಸಂಪರ್ಕಿಸಬಹುದು. ಇದಲ್ಲದೆ [email protected] ಇಮೇಲ್ ಐಡಿಗೆ ಮೇಲ್ ಮಾಡುವ ಮೂಲಕ ನಿಮ್ಮ ಸಮಸ್ಯೆಯನ್ನು ಹೇಳಿ ಹೇಳಬಹುದು.

ಮಹಿಳೆಯರಿಗೆ ಉಚಿತ ನಾಟಿಕೋಳಿ ವಿತರಣೆ | ಪ್ರತಿಯೊಬ್ಬ ಫಲಾನುಭವಿಗೆ 2,600 ರೂಪಾಯಿ ಕೋಳಿಗಳು

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆ: ರೈತರ ಖಾತೆಗೆ ನೇರ ಹಣ ಜಮೆ

ಪಿಎಂ ಕಿಸಾನ್ ಯೋಜನೆ 13ನೇ ಕಂತಿನ ಹಣ ನಿಮಗೆ ಸಿಗುತ್ತೋ? ಇಲ್ವೋ? ಮೊಬೈಲ್‌ನಲ್ಲೇ ಚೆಕ್ ಮಾಡಿ

 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!