ಸರಕಾರಿ ಯೋಜನೆ

PM KISAN 15th Installment : ಸಣ್ಣ ರೈತರ ಬ್ಯಾಂಕ್ ಖಾತೆಗೆ ₹2,000 ಹಣ ಜಮಾ | ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

WhatsApp Group Join Now
Telegram Group Join Now

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ 2,000 ರೂಪಾಯಿ ಇಂದು ಫಲಾನುಭವಿ ಸಣ್ಣ ರೈತರ ಬ್ಯಾಂಕ್ ಖಾತೆ ಜಮೆಯಾಗಿದೆ. ನಿಮ್ಮ ಖಾತೆಗೆ ಹಣ ಬರುತ್ತಾ? ಈಗಲೇ ಚೆಕ್ ಮಾಡಿ…

PM KISAN 15th Installment : ಬೆಳಕಿನ ಹಬ್ಬ ದೀಪಾವಳಿಯಂದು ದೇಶದ ಸಣ್ಣ ರೈತರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗೆ ಜಮೆಯಾಗಿದೆ. ಇಂದು 15ನೇ ಕಂತು (ನವೆಂಬರ್ 15, 2023) ಕರ್ನಾಟಕ ಸೇರಿದಂತೆ ದೇಶಾದ್ಯಂತ ಕೋಟ್ಯಂತರ ರೈತರ ಖಾತೆಗಳಿಗೆ ತಲಾ 2,000 ರೂಪಾಯಿ ಜಮೆಯಾಗಿದೆ.

2019ರ ಫೆಬ್ರವರಿ 24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದ್ದು; ಅಲ್ಲಿಂದ ಇಲ್ಲಿಯ ತನಕ ಫಲಾನುಭವಿ ರೈತರಿಗೆ ಒಟ್ಟು 14 ಕಂತುಗಳಲ್ಲಿ ಹಣ ಪಾವತಿಸಲಾಗಿದೆ. ದೇಶದ 10 ಕೋಟಿಗೂ ಹೆಚ್ಚು ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಸರ್ಕಾರವು ಪ್ರತಿ ವರ್ಷ ರೈತರಿಗೆ 6,000 ರೂಪಾಯಿ ಆರ್ಥಿಕ ನೆರವು ನೀಡುತ್ತದೆ. ಈ ಮೊತ್ತವನ್ನು ತಲಾ 2,000 ರೂಪಾಯಿಯಂತೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದನ್ನೂ ಓದಿ: 2023-24ನೇ ಸಾಲಿನ ತೋಟಗಾರಿಕೆ ಇಲಾಖೆಯ ಸಬ್ಸಿಡಿ ಯೋಜನೆಗಳ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನ

4 ಕೋಟಿ ರೈತರಿಗಿಲ್ಲ ಹಣ

ಕಳೆದ 14 ಕಂತುಗಳಲ್ಲಿ ಗರಿಷ್ಠ 11 ಕೋಟಿ 27 ಲಕ್ಷ 90 ಸಾವಿರ 89 ರೈತರು ಏಪ್ರಿಲ್-ಜುಲೈ 2022-23ರಲ್ಲಿ ಯೋಜನೆಯ ಲಾಭವನ್ನು ಪಡೆದಿದ್ದಾರೆ. ಇದಾದ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಯೋಜನೆಯ ಲಾಭವನ್ನು ನಕಲಿ ಅಥವಾ ತಪ್ಪು ರೀತಿಯಲ್ಲಿ ಪಡೆಯುತ್ತಿರುವ ಫಲಾನುಭವಿಗಳ ಮೇಲೆ ಬಿಗಿ ಹಿಡಿತ ಸಾಧಿಸಲು ಪ್ರಾರಂಭಿಸಿದವು.

ಕಟ್ಟುನಿಟ್ಟಿನ ಕಾರಣದಿಂದಾಗಿ ಆಗಸ್ಟ್-ನವೆಂಬರ್ 2022-23ರಲ್ಲಿ ಫಲಾನುಭವಿಗಳ ಸಂಖ್ಯೆಯು ಎರಡು ಕೋಟಿಗಿಂತ ಕಡಿಮೆಯಾಗಿ ಕೇವಲ 9 ಕೋಟಿಗೆ ಇಳಿಯಿತು. ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ ಪಿಎಂ ಕಿಸಾನ್‌ನ ಡಿಸೆಂಬರ್-ಮಾರ್ಚ್ 2022-23 ಕಂತುಗಳನ್ನು ಕೇವಲ 8.81 ಕೋಟಿ ರೈತರ ಖಾತೆಗಳಿಗೆ ಕಳುಹಿಸಲಾಗಿದೆ. ಇದರ ನಂತರ, 9.53 ಕೋಟಿ ರೈತರಿಗೆ 14ನೇ ಕಂತಿನ ಹಣ ಕಳುಹಿಸಲಾಗಿದೆ.

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

ಕಠಿಣ ನಿಯಮಗಳು ಜಾರಿ

ಅನರ್ಹರ ಹಾವಳಿಯಿಂದಾಗಿ ಈ ಇಡೀ ಯೋಜನೆಯ ನಿಯಮಗಳು ಈಗ ಬಹಳಷ್ಟು ಕಠಿಣವಾಗಿವೆ. ಈ ಯೋಜನೆ ದುರ್ಬಳಕೆ ತಪ್ಪಿಸಿ ನಿಜವಾದ ರೈತರಿಗೆ ಯೋಜನೆಯ ಲಾಭ ಸಿಗಲು ಸರ್ಕಾರ ಹಲವು ಮಾರ್ಪಾಡುಗಳನ್ನು ಮಾಡಿದೆ. ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ಪೈಕಿ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಇಕೆವೈಸಿ (eKYC) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಕಡ್ಡಾವಾಗಿ ಇಕೆವೈಸಿ ಮಾಡಲು ಈಗಾಗಲೇ ಹಲವು ಬಾರಿ ಗಡುವು ನೀಡಲಾಗಿದೆ. ಇದನ್ನು ಸಮರ್ಪಕವಾಗಿ ಮಾಡಿದ ರೈತರಿಗೆ ಮಾತ್ರ 15ನೇ ಕಂತು ಹಣ ಜಮೆಯಾಗಲಿದೆ. ಇಕೆವೈಸಿ ಕಾರಣಕ್ಕೆ 15ನೇ ಕಂತಿನ ಹಣ ಬಾರದಿದ್ದರೆ ಅಂತಹ ರೈತರಗೆ ಈಗಲೂ ಇಕೆವೈಸಿ ಮಾಡಿಸುವ ಅವಕಾಶ ನೀಡಲಾಗಿದೆ. ರೈತರು ತಮ್ಮ ಸಮೀಪದ ಗ್ರಾಮ ಒನ್ ಕೇಂದ್ರ, ಅಂಚೆ ಕಚೇರಿ, ಸಾಮಾನ್ಯ ಸೇವಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳ ಮೂಲಕ ಕಿಸಾನ್ ಸಮ್ಮಾನ್‌ಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವ ಮೂಲಕ ಇಕೆವೈಸಿ ಮಾಡಬಹುದಾಗಿದೆ.

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

ನಿಮ್ಮ ಹಣ ಜಮಾ ಚೆಕ್ ಮಾಡಿ…

ನಿಮ್ಮೂರಿನ ಎಷ್ಟು ಜನರಿಗೆ ಪಿಎಂ ಕಿಸಾನ್ 15ನೇ ಕಂತಿನ ಹಣ ಬರುವುದಿಲ್ಲ ಎಂಬುವುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ನಿಮಗೆ ಪಿಎಂ ಕಿಸಾನ್ ತಂತ್ರಾಶದ  BENIFICIARY LIST (ಫಲಾನುಭವಿಗಳ ಪಟ್ಟಿ) ಡ್ಯಾಶ್‌ಬೋರ್ಡ್ ತೆರೆದುಕೊಳ್ಳುತ್ತದೆ.

ಅಲ್ಲಿ ರಾಜ್ಯ, ಜಿಲ್ಲೆ, ಸಬ್ ಜಿಲ್ಲೆ (ತಾಲ್ಲೂಕು), ವಿಲೇಜ್ ಸೆಲೆಕ್ಟ್ ಮಾಡಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿದರೆ ನಿಮ್ಮೂರಿನ ಅಷ್ಟೂ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮಗೆ 15ನೇ ಕಂತಿನ 2,000 ರೂಪಾಯಿ ಸಂದಾಯವಾಗಿದೆ ಎಂದರ್ಥ.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ಪಿಎಂ ಕಿಸಾನ್ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಪಡೆಯಲು ಉಚಿತ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ 011-23381092 ಅನ್ನು ಸಂಪರ್ಕಿಸಬಹುದು. ಇ-ಮೇಲ್ ಮೂಲಕವೂ ನೀವು ದೂರು ನೀಡಬಹುದಾಗಿದ್ದು; ಇದಕ್ಕಾಗಿ [email protected]ಗೆ ಮೇಲ್ ಮಾಡಬಹುದು. ಎಲ್ಲ ರೈತ ಬಾಂಧವರು ಇಕೆವೈಸಿ (eKYC) ಮಾಡಿಸುವ ಮೂಲಕ ಯೋಜನೆಯನ್ನು ಸದುಪಯೋಗ ಮಾಡಿಕೊಳ್ಳಬೇಕಿದೆ.

Bagarhukum Land Issue : ಈ ರೈತರಿಗೆ ಸರಕಾರಿ ಜಮೀನು ಮಂಜೂರು : ಶೀಘ್ರವೇ ಹಕ್ಕುಪತ್ರ ವಿತರಣೆ | ಸರಕಾರದ ಮಹತ್ವದ ತೀರ್ಮಾನ

WhatsApp Group Join Now
Telegram Group Join Now

Related Posts

error: Content is protected !!