ಸರಕಾರಿ ಯೋಜನೆ

PM-kisan eKYC Update: ಜೂನ್ 30 ರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ!

WhatsApp Group Join Now
Telegram Group Join Now

ಕೃಷಿ ಆಯುಕ್ತರು ಜೂನ್ 30ರೊಳಗೆ ಎಲ್ಲಾ ಅರ್ಹ ರೈತರು ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದ್ದಾರೆ. ಅಷ್ಟರೊಳಗೆ ಇ-ಕೆವೈಸಿ ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟವಾಗಲಿದೆ…

ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯ ಸವಲತ್ತು ಪಡೆಯಲು ಇ-ಕೆವೈಸಿ ಕಡ್ಡಾಯವಾಗಿದ್ದು, ರಾಜ್ಯದಲ್ಲಿ ಲಕ್ಷಾಂತರ ರೈತರು ಇದುವರೆಗೆ ಇ-ಕೆವೈಸಿ ಮಾಡಿಸದ ಪರಿಣಾಮ ಅವರಿಗೆ ಈ ಯೋಜನೆಯ ಪ್ರೋತ್ಸಾಹಧನ ದೊರೆಯುತ್ತಿಲ್ಲ.

Crop Loss Compensation: ಈ ರೈತರಿಗೆ 74 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ… 

ಈಗಾಗಲೇ 13 ಕಂತು ಹಣ ಪಾವತಿ ಮಾಡಲಾಗಿದ್ದು, ಇ-ಕೆವೈಸಿ ಇಲ್ಲದ ರೈತರಿಗೆ ಈ ಹಣ ಪಾವತಿ ಮಾಡಿಲ್ಲ. ಇದೀಗ 14ನೇ ಸುತ್ತಿನ ಹಣವನ್ನು ಬಿಡುಗಡೆ ಮಾಡಲು ಇ-ಕೆವೈಸಿ ಅತ್ಯಗತ್ಯವಾಗಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಈ ಬಾರಿಯೂ ಇ-ಕೆವೈಸಿ ಮಾಡದ ರೈತರಿಗೆ ಹಣ ಪಾವತಿಯಾಗುವುದಿಲ್ಲ.

ಸದರಿ ಯೋಜನೆಯಡಿ, ಸಣ್ಣ ಮತ್ತು ಅತಿಸಣ್ಣ ರೈತರ ಬ್ಯಾಂಕ್ ಖಾತೆಗೆ ಪ್ರತಿವರ್ಷ ಕೇಂದ್ರ ಸರ್ಕಾರ 6000 ಹಾಗೂ ರಾಜ್ಯ ಸರ್ಕಾರ 4000 ಸೇರಿ ಒಟ್ಟು 10 ಸಾವಿರ ರೂಪಾಯಿ ನೇರವಾಗಿ ಜಮೆ ಮಾಡಲಾಗುತ್ತಿದೆ. ಆದರೆ ಸಮರ್ಪಕವಾಗಿ ಇ-ಕೆವೈಸಿ ಆಗದ ಕಾರಣ ಈ ಸಹಾಯಧನವು ಅನೇಕ ರೈತರ ಖಾತೆಗೆ ಜಮೆ ಆಗುತ್ತಿಲ್ಲ. ಹೀಗಾಗಿ ರೈತರು ಆದಷ್ಟು ಬೇಗ ಅಗತ್ಯ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಬೇಕು.

Pashu Sanjeevini Ambulance : ಜೂನ್ 15ರ ನಂತರ ರೈತರ ಮನೆ ಬಾಗಿಲಿಗೇ ಬರಲಿದೆ ಸಂಚಾರಿ ಪಶು ಕ್ಲಿನಿಕ್… 

ಇ-ಕೆವೈಸಿ ಎಲ್ಲಿ ಮಾಡಿಸಬೇಕು?

ಇದುವರೆಗೆ ಇ-ಕೆವೈಸಿ ಮಾಡಿಸಿಕೊಳ್ಳದ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ನಾಗರೀಕ ಸೇವಾ ಕೇಂದ್ರ ಅಥವಾ ಸೈಬರ್ ಸೆಂಟರ್‌ಗಳಲ್ಲಿ ಆಧಾರ್ ಆಧಾರಿತ ಒಟಿಪಿ ಮೂಲಕ ಅಥವಾ ಹೆಬ್ಬೆಟ್ಟಿನ ಗುರುತು ನೀಡುವ ಮೂಲಕ ಇ-ಕೆವೈಸಿ ಮಾಡಿಸಬಹುದು.

ಈ ನಡುವೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕಿನ ಹೋಬಳಿಗಳಿಗೆ ಅಧಿಕಾರಿಗಳ ತಂಡ ತೆರಳಿ ಗ್ರಾಮದ ಕೇಂದ್ರ ಸ್ಥಾನ ಅಥವಾ ಚಾವಡಿಗಳ ಬಳಿ ಇ-ಕೆವೈಸಿ ಮಾಡುತ್ತಿದೆ. ವಿದ್ಯಾವಂತ ಯುವಕರಲ್ಲಿ ಇ-ಕೆವೈಸಿ ಮಾಡುವ ಸುಲಭ ವಿಧಾನಗಳನ್ನು ತಿಳಿಸಿಕೊಡಲಾಗುತ್ತಿದೆ. ಇದರಿಂದ ಆಯಾ ಗ್ರಾಮದಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಬೇಗ ಇತ್ಯರ್ಥವಾಗಲು ಸಹಾಯವಾಗುತ್ತದೆ. ಹೀಗಾಗಿ ರೈತರು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ: ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

ಜೂನ್ 30ರೊಳಗೇ ಇ-ಕೆವೈಸಿ ಮಾಡಿಸಿ…

ಕೃಷಿ ಆಯುಕ್ತರು ಜೂನ್ 3ರಂದು ನಡೆದ ಗೂಗಲ್ ಸಭೆಯಲ್ಲಿ ಜೂನ್ 30ರೊಳಗೆ ಎಲ್ಲಾ ಅರ್ಹ ರೈತರು ಇ-ಕೆವೈಸಿ ಮಾಡಿಸಲು ಸೂಚನೆ ನೀಡಿದ್ದಾರೆ. ವಿಶೇಷ ಆಂದೋಲನ ರೂಪದಲ್ಲಿ ರೈತರಿಗೆ ಇ-ಕೆವೈಸಿ ಮಾಡಿಸಲು ಸೂಕ್ತ ಕ್ರಮ ಕೈಗೊಳ್ಳಲು ತಮ್ಮ ಎಲ್ಲಾ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿದ್ದು, ನಿಗದಿತ ದಿನಾಂಕದೊಳಗೆ ಎಲ್ಲಾ ರೈತರು ಇ-ಕೆವೈಸಿ ಪೂರ್ಣಗೊಳಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕಿದೆ.

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಅಥವಾ ರೈತರು ತಮ್ಮ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೃಷಿ ಸಂಕೀರ್ಣ, ಬನಶಂಕರಿ, ಬೆಂಗಳೂರು ಅಥವಾ ದೂರವಾಣಿ: 080-26711594 ಅನ್ನು ಸಂಪರ್ಕಿಸಬಹುದು.

ಇಕೆವೈಸಿ ಮಾಡಲು, ಹೊಸ ರೈತರ ನೋಂದಾವಣಿಗೆ, ಆಧಾರ್ ವೈಫಲ್ಯದ ದಾಖಲೆ ತಿದ್ದುಪಡಿ ಮಾಡಲು, ಫಲಾನುಭವಿ ರೈತರ ಅರ್ಜಿ ಸ್ಥಿತಿ ಪರಿಶೀಲಿಸಲು ಇತ್ಯಾದಿ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ಲಿಂಕ್: https://www.pmkisan.gov.in/

PM-Kisan Helpline No. 155261 / 011-24300606

ಇದನ್ನೂ ಓದಿ:

ರೈತರು ಮತ್ತು ರೈತ ಮಹಿಳೆಯರಿಂದ ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ತರಬೇತಿಗೆ ಅರ್ಜಿ ಆಹ್ವಾನ

ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ: ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

ಹೊಸ ರೇಷನ್ ಕಾರ್ಡ್ ವಿತರಣೆಗೆ ಆನ್‌ಲೈನ್ ಅರ್ಜಿ ಆಹ್ವಾನ | ಬಿಪಿಎಲ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು?

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!