ಉದ್ಯೋಗ

ರೋಜಗಾರ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿಗಳೇ ನಿಮ್ಮ ತಯಾರಿ ಹೀಗಿರಲಿ | PM Rozgar Mela | Central Govt Recruitment 2022

WhatsApp Group Join Now
Telegram Group Join Now

ಕೇಂದ್ರ ಸರಕಾರದ ನಾನಾ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರೋಜ್‌ಗಾರ್ ಮೇಳ ಉದ್ಘಾಟಿಸಲಾಗಿದೆ. ಇಲ್ಲಿ ಉದ್ಯೋಗ ಪಡೆಯಲು ಅನುಸರಿಸಬೇಕಾದ ಕ್ರಮಗಳೇನು? ಅರ್ಹತೆ, ನೇಮಕಾತಿ ಮಾನದಂಡಗಳೇನು? ಅಗತ್ಯವಾದ ದಾಖಲೆಗಳು ಯಾವವು? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…

ಯಾವುದೇ ಸರಕಾರಿ ನೇಮಕಾತಿ ಬಗ್ಗೆ ಅಧಿಸೂಚನೆ ಹೊರಬಿದ್ದ ಕೂಡಲೇ ನಾನಾ ನಮೂನೆಯ ಊಹಾಪೋಹಗಳು ಹುಟ್ಟಿಕೊಳ್ಳುತ್ತವೆ. ಅದರಲ್ಲೂ ದೊಡ್ಡ ಸಂಖ್ಯೆಯಲ್ಲಿ ನೇಮಕಾತಿ ಪ್ರಕ್ರಿಯೆ ಶುರುವಾದರಂತೂ ಇಲ್ಲಸಲ್ಲದ ಪುಕಾರುಗಳು ಹರಿದಾಡಲಾರಂಭಿಸುತ್ತವೆ. ಉದ್ಯೋಗಾಕಾಂಕ್ಷೆಗಳನ್ನು ತಪ್ಪು ದಾರಿಗೆ ಎಳೆಯುವ ವಂಚಕರ ದಂಡು ತಾನೇ ತಾನಾಗಿ ಸೃಷ್ಟಿಯಾಗುತ್ತದೆ. ಸುಲಭದಲ್ಲಿ ಅರ್ಹತೆಗೆ ಮೀರಿದ ನೌಕರಿ ಕೊಡಿಸುವ ಆಮಿಷಗಳು ಹರಿದಾಡುತ್ತವೆ.

ಈಚೆಗೆ ವಿಡಿಯೋ ಕಾನರೆನ್ಸ್ ಮೂಲಕ ರೋಜಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ನೇಮಕ ಪತ್ರಗಳನ್ನು ವಿತರಿಸಿ, ಹಂತ ಹಂತವಾಗಿ 10 ಲಕ್ಷ ಹುzಗಳಿಗೆ ಈ ಯೋಜನೆಯಡಿ ನೇಮಕ ಮಾಡಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದೇ ಉದ್ಯೋಗಾಂಕ್ಷಿಗಳನ್ನು ತಪ್ಪು ದಾರಿಗೆ ಸೆಳೆಯುವ ಸಂಚುಗಳು ಹೆಚ್ಚಾಗಿವೆ.

ಇದನ್ನೂ ಓದಿ: ಯುವಕ ಸಂಘ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ಸಿಗಲಿದೆ ₹5 ಲಕ್ಷ ಆರ್ಥಿಕ ನೆರವು

ಕೇಂದ್ರ ಸರಕಾರದ ನಾನಾ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಆರಂಭವಾಗಿರುವ ರೋಜ್‌ಗಾರ್ ಮೇಳದ ಮೊದಲ ದಿನ ರಾಜ್ಯಕ್ಕೆ 1,000 ಉದ್ಯೋಗಾವಕಾಶ ಲಭ್ಯವಾಗಿದೆ. ಬೆಂಗಳೂರಿನಲ್ಲಿ ರೋಜ್‌ಗಾರ್ ಉದ್ಯೋಗ ಮೇಳದ ಅಂಗವಾಗಿ ಅಭ್ಯರ್ಥಿಗಳಿಗೆ ನೇಮಕ ಪತ್ರ ವಿತರಿಸಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಈ ವಿಷಯ ಪ್ರಕಟಿಸಿದ್ದಾರೆ. ಕೇಂದ್ರ ಸರಕಾರದ 38 ಇಲಾಖೆಗಳಲ್ಲಿ ಒಂದು ಸಾವಿರ ಮಂದಿಗೆ ನೇಮಕ ಆದೇಶ ಹಸ್ತಾಂತರ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಈ ಕಾರ್ಯಕ್ರಮ ನಡೆದಿದೆ. ಮುಂದಿನ 12 ತಿಂಗಳು ಈ ಕಾರ್ಯಕ್ರಮ ಮುಂದುವರಿಯಲಿದೆ.

ಕೇಂದ್ರ ಸರ್ಕಾರದ ಸುಮಾರು 39 ಇಲಾಖೆ, ಸೇನೆ, ಅರೆಸೇನಾಪಡೆ, ನಿಗಮ, ಸಂಸ್ಥೆ, ನಿಯಮಿತ ಹಾಗೂ ಇನ್ನಿತರ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಖಾಲಿ ಹುದ್ದೆಗಳನ್ನು ಈಗಾಗಲೇ ಪಟ್ಟಿ ಮಾಡಲಾಗುತ್ತಿದ್ದು, ಇವುಗಳಿಗೆ ಮುಂದಿನ ಒಂದು ವರ್ಷದಲ್ಲಿ ನೇಮಕ ಮಾಡಿಕೊಂಡು, ಪ್ರಧಾನಿ ಸಮ್ಮುಖದಲ್ಲಿಯೇ ಅವರಿಗೆಲ್ಲಾ ನೇಮಕಾತಿ ಪತ್ರ ವಿತರಿಸುವ ಯೋಜನೆ ಇದಾಗಿದೆ. ಹೀಗಾಗಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ವಿಫುಲ ಅವಕಾಶಗಳು ಲಭ್ಯವಿದ್ದು; ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ, ವಂಚಕರ ಜಾಲಕ್ಕೆ ಬಲಿಯಾಗದೇ ಸೂಕ್ತ ತಯಾರಿ ಮೂಲಕ ಪ್ರಯತ್ನಿಸಿದರೆ ಉದ್ಯೋಗ ನಿಶ್ಚಿತ.

ಇದನ್ನೂ ಓದಿ: GKVK KrishiMela-2022 | ರೈತರ ಆದಾಯ ಹೆಚ್ಚಿಸುವ ತಂತ್ರಜ್ಞಾನ ಅನಾವರಣ… 

ಮೊದಲನೇಯದಾಗಿ ಉದ್ಯೋಗಾಂಕ್ಷಿಗಳು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಾದದು ಏನೆಂದರೆ ಸರಕಾರ ನೇರವಾಗಿ ಕಾಯಂ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಯಾವುದೇ ಹುದ್ದೆಗೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ), ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೇ ಇಲಾಖೆಯಲ್ಲಿನ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹೀಗೆ ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕವೇ ನೇಮಕ ಮಾಡಿಕೊಳ್ಳುತ್ತವೆ.

ಮೊದಲಿಗೆ ಅರ್ಜಿ ಆಹ್ವಾನಿಸಿ, ನಿಗದಿತ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ಇರುವ ಹುದ್ದೆಗಳಿಗೆ ಕೌಶಲ ಪರೀಕ್ಷೆ, ದೈಹಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇನ್ನು ಕೆಲವು ಹುದ್ದೆಗಳಿಗೆ ಸಂದರ್ಶನವೂ ನಡೆಯಲಿದೆ. ಯಾವುದೇ ಹುದ್ದೆಗಳಿಗೆ ನೇರವಾಗಿ ಅಂದರೆ ಪರೀಕ್ಷೆಗಳನ್ನು ನಡೆಸದೇ ನೇಮಕ ಮಾಡಿಕೊಳ್ಳುವ ಪರಿಪಾಠ ಇಲ್ಲ. ನೆನಪಿರಲಿ ರೋಜಗಾರ್ ಉದ್ಯೋಗ ಮೇಳದಲ್ಲೂ ಕೂಡ ಇದೇ ನಿಯಮವನ್ನು ಅನುಸರಿಸಲಾಗುತ್ತದೆ.

ಇದನ್ನೂ ಓದಿ: ನಿರಂತರ ವಿದ್ಯುತ್ ಪಡೆಯಲು ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಬಂಪರ್ ಸಹಾಯಧನ

ಹೀಗಾಗಿ ನೇಮಕಾತಿಯ ಅಧಿಸೂಚನೆ ಪ್ರಕಟಗೊಂಡಿದೆ ಎಂಬ ಮಾಹಿತಿ ಬಂದಾಗ ಅದು ಅಧಿಕೃತ ವೆಬ್‌ಸೈಟ್ ಹೌದೋ ಅಲ್ಲವೋ ಎಂಬುವುದನ್ನು  ಖಚಿತಪಡಿಸಿಕೊಂಡೇ ಮುಂದುವರಿಯಿರಿ. ಸರ್ಕಾರಿ ನೇಮಕಾತಿಗೆ (ಖಾಯಂ) ನೀತಿ, ನಿಯಮಗಳಿರುತ್ತವೆ. ಸರ್ಕಾರ ರೂಪಿಸಿದ ನೇಮಕಾತಿ ನಿಯಮದ ಪ್ರಕಾರವೇ ಪ್ರಕಟಣೆ ಹೊರಡಿಸಿ, ನೇಮಕ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಯಾರಾದರೂ ಸರ್ಕಾರಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ಹಣ ಕೇಳಿದರೆ ಮೋಸ ಹೋಗಬೇಡಿ. ಸರ್ಕಾರದ ಯಾವುದೇ ನೇಮಕಾತಿಯನ್ನು ಹಾಗೇ ಗುಟ್ಟು ಗುಟ್ಟಾಗಿ ಮಾಡಿಕೊಳ್ಳುವುದಿಲ್ಲ. ಪ್ರತಿಯೊಂದು ನೇಮಕಾತಿಯ ಕುರಿತು ದಿನಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ.

ಕೇಂದ್ರ ಸರ್ಕಾರದ ನೌಕರರಾಗಬೇಕೆಂಬ ಆಸೆ ಹೊತ್ತಿರುವವರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಇದಕ್ಕಾಗಿ ಅವರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗುವವರು ಕೆಲವು ಸಾಮಾನ್ಯ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಅಂತಹ ಅಗತ್ಯ ದಾಖಲೆಗಳನ್ನು ಹೊಂದಿಸಿಟ್ಟುಕೊಳ್ಳಬೇಕು. ಅಂತೆಯೇ ಲಿಖಿತ ಪರೀಕ್ಷೆಗಳಿಗೆ ಅಭ್ಯಾಸ ಆರಂಭಿಸುವುದು ಕೂಡ ಅಗತ್ಯವಾಗಿದೆ.

ಇದನ್ನೂ ಓದಿ: ನವೆಂಬರ್ 5ರೊಳಗೆ ಅರ್ಜಿ ಸಲ್ಲಿಸಿ ₹4 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಉದ್ಯೋಗ ಪಡೆಯಲು ಬೇಕಾಗುವ ದಾಖಲೆಗಳು

  1. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಎಲ್ಲಾ ವರ್ಷಗಳ/ ಸೆಮಿಸ್ಟರ್‌ಗಳ ಅಂಕಪಟ್ಟಿಗಳು ಅಥವಾ ಪ್ರಮಾಣ ಪತ್ರ /ಪಿಪಿಸಿ
  2. ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ /ಶಾಲೆಯ ವರ್ಗಾವಣೆ ಪ್ರಮಾಣ ಪತ್ರ / ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉದೃತ ಭಾಗ
  3. ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ ಸೈನಿಕ ಸೇವೆಯಿಂದ ಬಿಡುಗಡೆಯಾದ ಪ್ರಮಾಣ ಪತ್ರ ಮತ್ತು ಪಿಂಚಣಿ /ಗ್ರಾಚ್ಯುಟಿ ಪಡೆಯುತ್ತಿರುವ ಪ್ರಮಾಣ ಪತ್ರ ಮಾಜಿ ಸೈನಿಕ ಅವಲಂಬಿತರಾಗಿದ್ದಲ್ಲಿ, ಮಾಜಿ ಸೈನಿಕರು ಸೇವೆಯಲ್ಲಿರುವಾಗ ಮೃತಪಟ್ಟಿದ್ದಲ್ಲಿ ಅಥವಾ ಖಾಯಂ ಆಗಿ ಗಾಯಗೊಂಡಿರುವ ಪ್ರಮಾಣ ಪತ್ರ
  4. ಮೀಸಲಾತಿ ಕೋರಿದ್ದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು -3ಬಿ ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಗಳಲ್ಲಿ ಮೀಸಲಾತಿ ಪ್ರಮಾಣ ಪತ್ರಗಳು
  5. ಮೀಸಲಾತಿ ಕೋರಿದ್ದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಪ್ರಮಾಣ ಪತ್ರ, ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರ, ಸೇವಾನುಭವ ಪ್ರಮಾಣ ಪತ್ರಗಳು
  6. ಹೈದರಾಬಾದ್-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳ ಮೀಸಲಾತಿಗೆ ಸಂಬಂಧಿಸಿದ ಅರ್ಹತಾ ಪ್ರಮಾಣ ಪತ್ರ, ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರಿದ್ದಲ್ಲಿ ಸ್ವ ಗ್ರಾಮ ಪ್ರಮಾಣ ಪತ್ರ
  7. ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅವರ ನೇಮಕಾತಿ ಪ್ರಾಕಾರದ ಸಹಿ ಹಾಗೂ ಮೊಹರುನೊಂದಿಗೆ ಪಡೆಯಲಾದ ನಿರಾಕ್ಷೇಪಣ ಪ್ರಮಾಣ ಪತ್ರ. ಕ್ರೂಢೀಕೃತ/ ಆನ್‌ಲೈನ್ ಮುಖಾಂತರ ಪಡೆದಿರುವ ನಿರಾಕ್ಷೇಪಣ ಪ್ರಮಾಣ ಪತ್ರಗಳಿದ್ದಲ್ಲಿ ಅಂತಹ ನಿರಾಕ್ಷೇಪಣ ಪತ್ರಗಳನ್ನು ನೇಮಕಾತಿ ಪ್ರಾಧಿಕಾರಿದಿಂದ ದೃಢೀಕರಿಸಿರಬೇಕು.

ಇದನ್ನೂ ಓದಿ: ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ ಹಾಗೂ ವಿದ್ಯಾಸಿರಿ ಊಟ-ವಸತಿ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಕೆಲವು ಅಧಿಕೃತ ವೆಬ್‌ಸೈಟ್ ಕೊಂಡಿಗಳು

WhatsApp Group Join Now
Telegram Group Join Now

Related Posts

error: Content is protected !!