ಸರಕಾರಿ ಯೋಜನೆ

ಪಿಎಂ ಕಿಸಾನ್ 13ನೇ ಕಂತಿನ ಹಣ ಪಡೆಯಬಯಸುವ ರೈತರೇ ನಿಮ್ಮ eKYC ಮಾಹಿತಿ ಮೊಬೈಲ್‌ನಲ್ಲೇ ಚೆಕ್ ಮಾಡಿ | PM-kisan eKYC Status

WhatsApp Group Join Now
Telegram Group Join Now

ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಕೃಷಿ ಇಲಾಖೆ ಪದೇ ಪದೆ ಇಕೆವೈಸಿ ಬಗ್ಗೆ ಗಡುವು ನೀಡುವುದರಿಂದ ಈಗಾಗಲೇ ಇಕೆವೈಸಿ ಮಾಡಿದ ರೈತರೂ ಕೂಡ ನಮ್ಮ ಇಕೆವೈಸಿ ಯಶಸ್ವಿಯಾಗಿದೆಯೋ? ಇಲ್ಲವೋ? ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ಅಂತಹ ರೈತರು ತಮ್ಮ ಮೊಬೈಲ್‌ನಲ್ಲೇ ಇಕೆವೈಸಿ ಮಾಹಿತಿಯನ್ನು ಚೆಕ್ ಮಾಡಬಹುದು….

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM-Kisan) 13ನೇ ಕಂತಿನ ಹಣ ಫಲಾನುಭವಿ ರೈತರ ಖಾತೆಗೆ ಜಮೆಗೆ ದಿನಗಣನೆ ಶುರುವಾಗಿದೆ. ಸದರಿ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರ ಬ್ಯಾಂಕ್ ಖಾತೆಗೆ ಪ್ರತಿವರ್ಷ ಕೇಂದ್ರ ಸರ್ಕಾರ ಸಮಾನ ಮೂರು ಕಂತುಗಳಲ್ಲಿ 6,000 ರೂಪಾಯಿ ನೇರವಾಗಿ ಜಮೆ ಮಾಡುತ್ತದೆ. ಈಗಾಗಲೇ 12 ಕಂತಿನಲ್ಲಿ ರೈತರಿಗೆ ಆರ್ಥಿಕ ನೆರವು ಲಭ್ಯವಾಗಿದೆ. ಇದೀಗ 13ನೇ ಕಂತಿನ ಹಣ ಬಿಡುಗಡೆಗೆ ಸರಕಾರ ಸನ್ನದ್ಧವಾಗಿದೆ. ಆದರೆ ಇತ್ತೀಚೆಗೆ ಈ ಆರ್ಥಿಕ ನೆರವು ಪಡೆಯಲು ಇಕೆವೈಸಿ ಕಡ್ಡಾಯ ಮಾಡಿದ್ದು; ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಮಾಡದ ರೈತರಿಗೆ ಪಿಎಂ-ಕಿಸಾನ್ ಹಣವನ್ನು ನಿಲ್ಲಿಸಲಾಗಿದೆ.

ಇದನ್ನೂ ಓದಿ:  ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ಹತ್ತಾರು ಬಾರಿ ಗಡುವು ನೀಡಿದರೂ ಲಕ್ಷಾಂತರ ರೈತರು ಇಕೆವೈಸಿ ಮಾಡುವ ಗೊಡವೆಗೆ ಹೋಗಿಲ್ಲ. ಈಗಲೂ eKYC ಮಾಡದಿದ್ದರೆ 13ನೇ ಕಂತಿನ ಹಣ ಖಂಡಿತ ನಿಮ್ಮ ಖಾತೆಗೆ ಬರುವುದು ಅನುಮಾನ. ಹೀಗಾಗಿ ಕೂಡಲೇ ಇಕೆವೈಸಿ ಮಾಡುವ ಮೂಲಕ ಫಲಾನುಭವಿ ರೈತರು ಪಿಎಂ-ಕಿಸಾನ್ ಯೋಜನೆಯ 2,000 ರೂಪಾಯಿ ನೆರವು ಪಡೆಯಲು ಕೃಷಿ ಇಲಾಖೆ ಮತ್ತೊಮ್ಮೆ ಪ್ರಕಟಣೆ ಹೊರಡಿಸಿದೆ.

53,91,573 ಲಕ್ಷ ರೈತರು ರಾಜ್ಯದಲ್ಲಿ ಆಧಾರ್ ಆಧಾರಿತ ಪಿಎಂ ಕಿಸಾನ್ ಯೋಜನೆಯಡಿ ನೊಂದಾಯಿತರಾಗಿದ್ದು ಇದರಲ್ಲಿ ಸುಮಾರು 37 ಲಕ್ಷ ರೈತರಷ್ಟೇ ಇ-ಕೆವೈಸಿ ಮಾಡಿಸಿದ್ದಾರೆ. ಬರೋಬ್ಬರಿ 16,89,402 ಅನ್ನದಾತರು ಇನ್ನೂ ಇ-ಕೆವೈಸಿ ಮಾಡಿಲ್ಲ. ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ OTP ಆಧಾರದಲ್ಲಿ ಮೊಬೈಲ್ ಮೂಲಕ ಹಾಗೂ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಬಯೋ ಮೆಟ್ರಿಕ್ (ಕೈ ಬೆರಳಿನ ಗುರುತು) ಆಧಾರದಲ್ಲಿ ಇ-ಕೆವೈಸಿ ಮಾಡಿಸಬಹುದು.

ಇದನ್ನೂ ಓದಿ: ಈ ರೈತರಿಗೆ ಗಂಗಾಕಲ್ಯಾಣ ಬೋರ್‌ವೆಲ್ ಕೊರೆಸಲು 2 ಲಕ್ಷ ರೂಪಾಯಿ ಸಹಾಯಧನ | ಮಾರ್ಚ್ 2ರೊಳಗೆ ಅರ್ಜಿ ಸಲ್ಲಿಸಿ

ಮೊಬೈಲ್‌ನಲ್ಲಿ cKYC ಹೇಗೆ ಮಾಡಬೇಕು?

ರೈತರು ಇಕೆವೈಸಿ ಮಾಡಿಸಲು ಇಲ್ಲಿ ಕ್ಲಿಕ್ ಮಾಡಿದರೆ https://exlink.pmkisan.gov.in/aadharekyc.aspxಪಿಎಂ ಕಿಸಾನ್ ಯೋಜನೆಯ OTP ಆಧಾರಿತ ಇಕೆವೈಸಿ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಂಬರ್ ಮತ್ತು ಆಧಾರ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನೀವು ನಮೂದಿಸಿದ ಮೊಬೈಲ್‌ಗೆ ಬರುವ OTP ಹಾಕಿ ಇಕೆವೈಸಿ ಪ್ರಕ್ರಿಯೆ ಇಕೆವೈಸಿ ಪೂರ್ಣಗೊಳಿಸಬಹುದು.

ಒಂದು ವೇಳೆ ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ನಂಬರ್ ಜೋಡಣೆಯಾಗಿರದಿದ್ದರೆ ರೈತರು ಗ್ರಾಮ ಪಂಚಾಯತ್‌ನಲ್ಲಿ ಹೊಸದಾಗಿ ಶುರುವಾಗಿರುವ ಗ್ರಾಮಒನ್ ಸೇವಾ ಕೇಂದ್ರಗಳಲ್ಲಿ, ಇಲ್ಲವೇ ಹತ್ತಿರದ ಸೈಬರ್ ಸೆಂಟರ್‌ಗಳಲ್ಲಿ ಬಯೋ ಮೆಟ್ರಿಕ್ ಆಧಾರದಲ್ಲಿ ಅಂದರೆ ಕೈ ಬೆರಳಿನ ಗುರುತು ನೀಡಿಯೂ ಕೂಡ ಇ-ಕೆವೈಸಿ ಮಾಡಿಸಬಹುದು. ಈ ಬಗೆಗಿನ ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ನೈಸರ್ಗಿಕ ಕೃಷಿ: ಎಕರೆಗೆ 7,000 ರೂಪಾಯಿ ಪ್ರೋತ್ಸಾಹ ಧನ

eKYC ಸಕ್ಸೆಸ್ ಆಗಿರುವ ಮಾಹಿತಿ ಚೆಕ್ ಮಾಡುವುದು ಹೇಗೆ?

ಕೃಷಿ ಇಲಾಖೆ ಪದೇ ಪದೆ ಇಕೆವೈಸಿ ಬಗ್ಗೆ ಗಡುವು ನೀಡುವುದರಿಂದ ಈಗಾಗಲೇ ಇಕೆವೈಸಿ ಮಾಡಿದ ರೈತರೂ ಕೂಡ ನಮ್ಮ ಇಕೆವೈಸಿ ಯಶಸ್ವಿಯಾಗಿದೆಯೋ? ಇಲ್ಲವೋ? ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ. ರೈತರು ತಮ್ಮ ಮೊಬೈಲ್‌ನಲ್ಲಿ ತಕ್ಷಣವೇ ಅದನ್ನು ಖಚಿತಪಡಿಸಿಕೊಳ್ಳಬಹುದು. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್‌ನಲ್ಲಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿದರೆ https://pmkisan.gov.in/BeneficiaryStatus.aspx/

ನಿಮಗೆ ಪಿಎಂ-ಕಿಸಾನ್ ಯೋಜನೆಯ BENEFICIARY STATUS ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ಬಳಿಕ Get Data ಮೇಲೆ ಒತ್ತಿದರೆ Beneficiary Status ಚಾಟ್ ಓಪನ್ ಆಗುತ್ತದೆ. ಅಲ್ಲಿ ರೈತರ ಹೆಸರು, ಗ್ರಾಮ, ತಾಲ್ಲೂಕು, ಜಿಲ್ಲೆ, ನೋಂದಣಿ ದಿನಾಂಕ, ಅರ್ಹತೆ, ಇಕೆವೈಸಿ, ಪೇಮೆಂಟ್ ಮೋಡ್, ಬ್ಯಾಂಕ್ ಸ್ಟೇಟಸ್ ಇತ್ಯಾದಿ ಮಾಹಿತಿ ಇರುತ್ತದೆ. ಅದರಲ್ಲಿ ಬಹುಮುಖ್ಯವಾಗಿ eKYC Done, Eligibility, Land Seeding ಮುಂದೆ Yes ಎಂದಿದ್ದರೆ ನಿಮ್ಮ ಇಕೆವೈಸಿ ಯಶಸ್ವಿಯಾಗಿದೆ ಮತ್ತು ನಿಮಗೆ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ನಿಶ್ಚಿತವಾಗಿಯೂ ಬರುತ್ತದೆ ಎಂದರ್ಥ.

ಹೆಚ್ಚಿನ ಮಾಹಿತಿಗೆ ಪಿಎಂ-ಕಿಸಾನ್ ಯೋಜನೆಯ ತಂತ್ರಾಂಶಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಪಿಎಂ-ಕಿಸಾನ್ ಯೋಜನೆಯ ಸಹಾಯವಾಣಿ ಸಂಖ್ಯೆಗೆ (155261 / 011-24300606) ಕರೆ ಮಾಡಿಯೂ ರೈತರು ಈ ಬಗೆಗಿನ ಸಮಸ್ಯೆ ಪರಿಹರಿಸಿಕೊಳ್ಳಬಹುದು. 

ಇದನ್ನೂ ಓದಿ:

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!