ಸರಕಾರಿ ಯೋಜನೆ

PMSBY Insurance Scheme: ವರ್ಷಕ್ಕೆ 20 ರೂಪಾಯಿ ಪಾವತಿಸಿ 2 ಲಕ್ಷ ರೂಪಾಯಿ ವಿಮೆ ಪಡೆಯಿರಿ | ಈ ಜೂನ್‌ನಲ್ಲಿ ತಪ್ಪದೇ ಈ ಅಪಘಾತ ವಿಮೆ ಮಾಡಿಸಿ

WhatsApp Group Join Now
Telegram Group Join Now

ಪ್ರಧಾನಮತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಎಂದು ಕರೆಯಲ್ಪಡುವ ಸದರಿ ವಿಮಾ ಯೋಜನೆಯು ಅಪಘಾತ ಸಮಯದಲ್ಲಿ ಸರ್ಕಾರವು ಸಂತ್ರಸ್ತರಿಗೆ 2 ಲಕ್ಷ ರೂಪಾಯಿ ವಿಮಾ ರಕ್ಷಣೆಯನ್ನು ನೀಡುವ ವಿಶಿಷ್ಟ ಯೋಜನೆಯಾಗಿದೆ….

ಜಗತ್ತಿನಲ್ಲಿಯೇ ಅತ್ಯಂತ ಅಗ್ಗದ ವಿಮಾ ಯೋಜನೆ ಇದು. ಈ ಯೋಜನೆಯಡಿಯಲ್ಲಿ ವರ್ಷಕ್ಕೆ ಕೇವಲ 20 ರೂಪಾಯಿ ಹೂಡಿಕೆ ಮಾಡಿ, ಬರೋಬ್ಬರಿ 2 ಲಕ್ಷ ರೂಪಾಯಿಗಳ ಅಪಘಾತ ವಿಮಾ ರಕ್ಷಣೆಯನ್ನು ಪಡೆಯಬಹುದು. ಅಪಘಾತದ ಸಮಯದಲ್ಲಿ 2 ಲಕ್ಷ ರೂಪಾಯಿ ವಿಮೆಯ ಅಡಿಯಲ್ಲಿ ಸರ್ಕಾರವು ಸಂತ್ರಸ್ತರಿಗೆ ಹಣಕಾಸಿನ ನೆರವು ನೀಡುತ್ತದೆ.

Rain Damage Compensation: ಮುಂಗಾರು ಮಳೆ ಬೆಳೆಹಾನಿ, ಮನೆಹಾನಿ ಪರಿಹಾರ ಹೆಚ್ಚಳ: ಯಾವುದಕ್ಕೆ ಎಷ್ಟು? ಇಲ್ಲಿದೆ ಮಾಹಿತಿ

ಏನಿದು ವಿಮಾ ಯೋಜನೆ?

ಪಿಎಂಎಸ್‌ಬಿವೈ ಅರ್ಥಾತ್ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಎಂದು ಕರೆಯಲ್ಪಡುವ ಸದರಿ ವಿಮಾ ಯೋಜನೆಯು ಅಪಘಾತ ಸಮಯದಲ್ಲಿ ಸರ್ಕಾರವು ಸಂತ್ರಸ್ತರಿಗೆ 2 ಲಕ್ಷ ರೂಪಾಯಿ ವಿಮಾ ರಕ್ಷಣೆಯನ್ನು ನೀಡುವ ವಿಶಿಷ್ಟ ಯೋಜನೆಯಾಗಿದೆ. ಅಪಘಾತದಿಂದ ಮರಣ ಹಾಗೂ ಅಪಘಾತದಿಂದ ಅಂಗವೈಕಲ್ಯಗಳಿಗೂ ವಿಮಾ ಸುರಕ್ಷೆ ನೀಡುತ್ತಿದೆ. 2015-16ನೇ ಇಸ್ವಿಯ ಭಾರತ ಸರಕಾರದ ಬಜೆಟ್‌ಲ್ಲಿ ಘೋಷಿಸಿದ ಮಹತ್ವದ ಯೋಜನೆ ಇದಾಗಿದೆ.

ಭಾರತದ ಎಲ್ಲಾ ನಾಗರಿಕರಿಗೂ ಅಪಘಾತ ವಿಮೆ ಒದಗಿಸುವ ಯೋಜನೆಯಾಗಿದ್ದು ಅದರಲ್ಲೂ ಮುಖ್ಯವಾಗಿ ಅಸಂಘಟಿತ ಕಾರ್ಮಿಕರ ವರ್ಗಕ್ಕೆ ವಿಮಾ ಸುರಕ್ಷೆಗಾಗಿ ಹೇಳಿ ಮಾಡಿದ ಯೋಜನೆಯಾಗಿದೆ. ಇದು ಒಂದು ವರ್ಷದ ಯೋಜನೆಯಾಗಿದ್ದು; ಪ್ರತಿವರ್ಷ ಪುನರ್ ನವೀಕರಣಗೊಳ್ಳುತ್ತದೆ. ಜೂನ್ 1ರಿಂದ ಮೇ 31ರ ವರೆಗೆ ಜಾರಿಯಲ್ಲಿರುತ್ತದೆ.

New BPL Card Application: ಜೂನ್‌ನಿಂದ ಮತ್ತೆ BPL ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ನಿಮ್ಮೂರಿನ BPL ಕಾರ್ಡ್ ದಾರರ ಪಟ್ಟಿ ಇಲ್ಲಿ ಚೆಕ್ ಮಾಡಿ

ಯೋಜನೆಗೆ ಯಾರೆಲ್ಲ ಅರ್ಹರು?

ಈ ಯೋಜನೆಗೆ 18 ರಿಂದ 70 ವರ್ಷದ ವರೆಗಿನ ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹೊಂದಿದ ಭಾರತೀಯ ನಾಗರಿಕರೆಲ್ಲರೂ ಅರ್ಹರಾಗಿರುತ್ತಾರೆ. ಆಧಾರ್ ಸಂಖ್ಯೆ ಅವಶ್ಯವಾಗಿ ನೀಡಬೇಕಾಗುತ್ತದೆ. ವರ್ಷಕ್ಕೊಮ್ಮೆ ಬ್ಯಾಂಕ್ ಖಾತೆಯಿಂದ 20 ರೂಪಾಯಿಯನ್ನು ಪ್ರತಿವರ್ಷ ಮೇ 31ರ ನಂತರ ಸ್ವಯಂ ಡೆಬಿಟ್ ಮಾಡಲಾಗುತ್ತದೆ.

ಈ ಯೋಜನೆಯಡಿ, ಅಪಘಾತದಲ್ಲಿ ಮರಣ ಹೊಂದಿದರೆ ಅಥವಾ ಸಂಪೂರ್ಣವಾಗಿ ಅಂಗವಿಕಲರಾಗಿದ್ದರೆ 2 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಮತ್ತೊಂದೆಡೆ, ಭಾಗಶಃ ಅಂಗವಿಕಲರಾಗಿದ್ದರೆ 1 ಲಕ್ಷ ರೂಪಾಯಿ ಸಹಾಯವನ್ನು ನೀಡಲಾಗುತ್ತದೆ.

Zero Interest Crop Loan: 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ಬೆಳೆಸಾಲ | ರೈತರು ಸಾಲ ಪಡೆಯಲು ಏನು ಮಾಡಬೇಕು?

ತುರ್ತು ಪರಿಹಾರ

ಒಬ್ಬ ವ್ಯಕ್ತಿ 2 ಲಕ್ಷ ರೂಪಾಯಿಯ ಕೇವಲ ಒಂದು ಅಪಘಾತ ವಿಮೆಯನ್ನು ಹೊಂದಬಹುದು. ಒಂದಕ್ಕಿAತಲೂ ಹೆಚ್ಚು ಬ್ಯಾಂಕ್ ಖಾತೆಗಳಲ್ಲಿ ಈ ವಿಮಾ ಪಡೆದಿದ್ದರೆ ವಿಮಾ ಮೊತ್ತ ಒಂದು ಆಧಾರ್ ಸಂಖ್ಯೆಗೆ ಮಾತ್ರ ಸೀಮಿತವಾಗಿರುತ್ತದೆ.

ಈ ವಿಮಾ ಯೋಜನೆಯಲ್ಲಿ ಕಾಯುವ ಅಗತ್ಯವಿಲ್ಲ. ವಿಮಾ ಯೋಜನೆಗೆ ಒಳಪಟ್ಟ ನಂತರ ಎರಡನೇ ದಿನವೇ ಅಪಘಾತದಿಂದ ಸಾವು ಸಂಭವಿಸಿದರೂ ನಾಮನಿರ್ದೇಶಿತರಿಗೆ ವಿಮಾ ಮೊತ್ತ ಲಭ್ಯವಾಗುತ್ತದೆ. ಆದರೆ ಯೋಜನೆಯಲ್ಲಿ ಅವಧಿಯ ನಂತರ ಯಾವುದೇ ಹಣವನ್ನು ಹಿಂದಿರುಗಿಸಲಾಗುವುದಿಲ್ಲ.

India Post Recruitment 2023 : SSLC ಪಾಸಾದವರಿಂದ ಅಂಚೆ ಇಲಾಖೆ 12,828 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ | ಸಂಬಳ: 12,000-29,380… 

ಯೋಜನೆ ಯಾವಾಗ ಸಮಾಪ್ತಿಗೊಳ್ಳುತ್ತದೆ ?

ನಾಗರಿಕನು 70ನೇ ವರ್ಷಕ್ಕೆ ತಲುಪಿದಾಗ ಅಥವಾ ಉಳಿತಾಯ ಖಾತೆಯನ್ನು ಮುಚ್ಚಿದಾಗ, ಇಲ್ಲವೇ ಅಥವಾ ಖಾತೆಯಲ್ಲಿ ಅವಶ್ಯವಿರುವಷ್ಟು ಹಣ ಇಲ್ಲದೇ ಇದ್ದಾಗ ಈ ಯೋಜನೆ ಯಾವಾಗ ಸಮಾಪ್ತಿಗೊಳ್ಳುತ್ತದೆ. ಆದ್ದರಿಂದ ಬ್ಯಾಂಕ್ ಅಥವಾ ಅಂಚೆ ಖಾತೆಯಲ್ಲಿ ಪ್ರೀಮಿಯಂ ಕಡಿತಕ್ಕೆ ಸಮನಾದ ಬ್ಯಾಲೆನ್ಸ್ ಅನ್ನು ಇರಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಪಾಲಿಸಿಯನ್ನು ಮುಚ್ಚಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯ ಲಾಭವನ್ನು ಪಡೆಯಬಹುದು ಅಥವಾ ಬ್ಯಾಂಕ್ ಖಾತೆಯನ್ನು ತೆರೆಯುವಾಗ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ವಿಮಾ ರಕ್ಷಣೆಗೆ ಸಹ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ನಿಮ್ಮ ಬ್ಯಾಂಕ್‌ನ ವೆಬ್‌ಸೈಟ್‌ಗೆ ಹೋಗಿ ಮತ್ತು ವಿಮಾ ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ಈ ವಿಮೆಯನ್ನು ಆಯ್ಕೆ ಮಾಡಿ. ಇದರ ನಂತರ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ರಸೀದಿಯನ್ನು ಪಡೆಯಿರಿ.

ಪ್ರಮುಖ ಲಿಂಕ್‌ಗಳು

 

 

 

 

 

ಉದ್ಯೋಗ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ಸರಕಾರಿ ಯೋಜನೆಇಲ್ಲಿ ಕ್ಲಿಕ್ ಮಾಡಿ
ಕೃಷಿ ಮಾಹಿತಿಇಲ್ಲಿ ಕ್ಲಿಕ್ ಮಾಡಿ
ವಾಟ್ಸಾಪ್ ಗ್ರುಪ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಂ ಗ್ರುಪ್ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

WhatsApp Group Join Now
Telegram Group Join Now

Related Posts

error: Content is protected !!