ಉದ್ಯೋಗ

Indian post office Staff Car Drivers Recruitment 2023 | ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಅಂಚೆ ಇಲಾಖೆ ಸ್ಟಾಫ್‌ಕಾರ್ ಡ್ರೈವರ್ ಹುದ್ದೆಗಳು

WhatsApp Group Join Now
Telegram Group Join Now

Indian post office Staff Car Drivers Recruitment 2023 

ಭಾರತೀಯ ಅಂಚೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ ಅನೇಕ ಹುದ್ದೆಗಳು ಖಾಲಿ ಇದ್ದು ಈ ಕೇಂದ್ರ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ನಾವು ಕೆಳಗೆ ನೀಡಿರುವ ನೇಮಕಾತಿಯ ಅರ್ಹತೆಯ ಅನುಸಾರ ನೀವು ಅರ್ಹರಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತೀಯ ಅಂಚೆ ಇಲಾಖೆಯಯಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ, ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸುವ ಅಂಚೆ ಕಚೇರಿ ವಿಳಾಸ, ಅಧಿಕೃತ ಜಾಲತಾಣ ಮತ್ತು ಅಧಿಕೃತ ಅಧಿಸೂಚನೆಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ.

ಇದನ್ನೂ ಓದಿ: LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

ನೇಮಕಾತಿಯ ಸಂಕ್ಷಿಪ್ತ ವಿವರ

  • ನೇಮಕಾತಿ ಇಲಾಖೆ : ಭಾರತೀಯ ಅಂಚೆ ಇಲಾಖೆ
  • ಒಟ್ಟು ಖಾಲಿ ಹುದ್ದೆಗಳು : 78 ಹುದ್ದೆಗಳು
  • ಅರ್ಜಿ ಸಲ್ಲಿಸುವ ವಿಧಾನ : ಆಫ್‌ಲೈನ್ ಮುಖಾಂತರ
  • ಹುದ್ದೆಯ ಹೆಸರು : ಸ್ಟಾಫ್ ಕಾರ್ ಡ್ರೈವರ್ (Driver)
  • ಉದ್ಯೋಗ ಸ್ಥಳ : ಕಾನ್ಪುರ್, ಉತ್ತರ ಪ್ರದೇಶ್

ವಿದ್ಯಾರ್ಹತೆ ಏನಿರಬೇಕು?

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಮಂಡಳಿಯಿAದ 10ನೇ ತರಗತಿಯಲ್ಲಿ ಪಾಸಾಗಿರಬೇಕು. ಹಗುರ ಮತ್ತು ಲಘು ವಾಹನಗಳ ಪರವಾನಗಿ ಹೊಂದಿರಬೇಕು. ಜತೆಗೆ ಈ ಕೆಳಗಿನ ಜ್ಞಾನವನ್ನು ಹೊಂದಿದ್ದರೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು.

  • ಮೋಟಾರ್ ಮೆಕಾನಿಸಂ ಮಾಹಿತಿ
  • ಮೂರು ವರ್ಷಗಳ ವಾಹನ ಚಾಲನಾ ಅನುಭವ
  • ಹೋಂ ಗಾರ್ಡ್, ನಾಗರಿಕ ಸ್ವಯಂ ಸೇವಕರು ಮತ್ತು ಸಶಸ್ತ್ರ ಪಡೆ ಸಿಬ್ಬಂದಿಯಾಗಿದ್ದವರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: 12ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯಿತಿ ಹುದ್ದೆಗಳ ಹೊಸ ನೇಮಕಾತಿಗೆ ಅರ್ಜಿ ಅಹ್ವಾನ | Gram Panchayat Recruitment 2024

ತಿಂಗಳ ಸಂಬಳ, ವಯೋಮಿತಿಯ ಮತ್ತು ಆಯ್ಕೆ ಪ್ರಕ್ರಿಯೆ ವಿವರ

ಈ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕ 19,900 ರೂಪಾಯಿಂದ 63200 ರೂಪಾಯಿ ವರೆಗೆ ಇರುತ್ತದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ನಿಗದಿತ ಕೊನೆಯ ದಿನಾಂಕ, ಅಂದರೆ ಫೆಬ್ರವರಿ 9, 2024ಕ್ಕೆ ಗರಿಷ್ಠ 56 ವರ್ಷವನ್ನು ಮೀರಿರಬಾರದು. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಟ್ರೇಡ್ ಟೆಸ್ಟ್, ಡೈವಿಂಗ್ ಟೆಸ್ಟ್, ಥಿಯರಿ ಟೆಸ್ಟ್, ಪ್ರಾಕ್ಟಿಕಲ್ ಟೆಸ್ಟ್ ನಡೆಸುವ ಮೂಲಕ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಇದನ್ನೂ ಓದಿ: Village Accountant Recruitment : 1,839 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ನೇಮಕಾತಿ | ಅಧಿಕೃತ ಜಿಲ್ಲಾವಾರು ಹುದ್ದೆಗಳ ಪಟ್ಟಿ ಬಿಡುಗಡೆ | PUC ಪಾಸಾದವರಿಗೆ ಭರ್ಜರಿ ಅವಕಾಶ

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯಲ್ಲಿ ಅರ್ಜಿ ನಮೂನೆ ಲಭ್ಯವಿರುತ್ತದೆ. ಅರ್ಜಿಯನ್ನು ಭರ್ತಿ ಮಾಡಿದ ನಂತರ ಈ ಕೆಳಗೆ ನೀಡಿರುವ ವಿಳಾಸಕ್ಕೆ ಕಳಿಸಬೇಕು.

ಅರ್ಜಿ ಸಲ್ಲಿಕೆಯ ವಿಳಾಸ : The Manager, Mail Motor Service, Kanpur GPO Complex, Kanpur-208001, Uttar Pradesh

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 29-12-2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-02-2024

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ಲಿಂಕುಗಳು

ಅಧಿಸೂಚನೆ : Download
ಅಧಿಕೃತ ಜಾಲತಾಣ : Click here
ಸಹಾಯವಾಣಿ : 080- 22261032

WhatsApp Group Join Now
Telegram Group Join Now

Related Posts

error: Content is protected !!