ಕೃಷಿ

ಕೋಳಿ ಸಾಕಣೆ ರೈತರಿಗೆ ಪ್ರತಿ ಕೋಳಿಗೆ 5 ರೂಪಾಯಿ ಪ್ರೋತ್ಸಾಹಧನ | ರಾಜ್ಯ ಬಜೆಟ್‌ನಲ್ಲಿ ಘೋಷಣೆ? | Incentives for Poultry Farmers

WhatsApp Group Join Now
Telegram Group Join Now

ಹೈನುಗಾರಿಕೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೋತ್ಸಾಹ ಧನ ನೀಡುವಂತೆ ಕೋಳಿ ಸಾಕಣೆ ರೈತರಿಗೂ ಪ್ರತಿ ಮಾಂಸದ ಕೋಳಿಗೆ ೫ ರೂಪಾಯಿ ಪ್ರೋತ್ಸಾಹಧನ ಸಿಗಲಿದೆಯಾ? ಕೋಳಿ ಸಾಕಣೆ ರೈತರ ಬೇಡಿಕೆಗಳೇನು? ಕೋಳಿ ಸಾಕಣೆ ಸಿಗುವ ಸರಕಾರಿ ಸೌಲಭ್ಯಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ…

ಕೋಳಿ ಸಾಕಣೆ ಇಂದು ಹೈನುಗಾರಿಕೆಯಷ್ಟೇ ಲಾಭದಾಯಕ ಕಸುಬಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಾಟಿಕೋಳಿ ಸಾಕಣೆ ಸಾಮಾನ್ಯವಾಗಿದ್ದು; ಹೈನುಗಾರಿಕೆ ಜೊತೆಜೊತೆಗೇ ರೈತರು ನೂರಾರು ಸಂಖ್ಯೆಯಲ್ಲಿ ನಾಟಿ ಕೋಳಿಗಳನ್ನು ಸಾಕಿ ಅವುಗಳ ಮೊಟ್ಟೆ, ಮಾಂಸ ಮಾರಾಟದಿಂದ ಹಣ ಗಳಿಸುತ್ತಿದ್ದಾರೆ. ಇನ್ನೊಂದೆಡೆ ಬಹಳಷ್ಟು ರೈತರು ವಿವಿಧ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಾಂಸದ (ಬ್ರಾಯಿಲರ್) ಕೋಳಿ ಸಾಕಣೆ ಕೂಡ ಮಾಡುತ್ತಿದ್ದಾರೆ. ಕೃಷಿ, ತೋಟಗಾರಿಗೆ ಹೈನೋದ್ಯಮದ ಜತೆಗೆ ರೈತರು ಉಪಕಸುಬಾಗಿ ಕುಕ್ಕುಟೋದ್ಯಮವನ್ನು ಅವಲಂಬಿಸಿದ್ದಾರೆ.

ಮಳೆಬೆಳೆ ಸಮೃದ್ಧಿ: ಅನ್ನದಾತರು ಸತೃಪ್ತ | ರೈತರ ಬದುಕು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳು

ರಾಜ್ಯದಲ್ಲಿ ಕುಕ್ಕುಟ ಕ್ಷೇತ್ರವೂ ವೇಗವಾಗಿ ಬೆಳೆಯುತ್ತಿದ್ದು, ಪ್ರತಿದಿನ ಸಾವಿರಾರು ಕೋಟಿ ರೂಪಾಯಿ ವಹಿವಾಟು ನಡೆಯುತ್ತಿದೆ. ಇದನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಅವಕಾಶಗಳಿವೆ. ಆದರೆ ಸರ್ಕಾರ ಕುಕ್ಕುಟೋದ್ಯಮವನ್ನು ಹೊರಗಿಟ್ಟು ನೋಡುತ್ತಿದೆ. ಇದರಿಂದ ರೈತಾಪಿ ವರ್ಗ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಇದರಿಂದಾಗಿ ರೈತರಿಗೆ ಸಾಕಾಣಿಕೆ ದರ ನಿಗದಿ ಇತ್ಯಾದಿ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ ಎಂಬುವುದು ಕೋಳಿ ಸಾಕಣೆ ರೈತರ ಅಳಲಾಗಿದೆ.

ಈ ಹಿನ್ನಲೆಯಲ್ಲಿ ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಿ ಮುಂಬರುವ ಬಜೆಟ್‌ನಲ್ಲಿ ಕುಕ್ಕುಟ ಕ್ಷೇತ್ರದ ಅಭಿವೃದ್ಧಿಗೆ ಸಮಗ್ರ ಕಾನೂನನ್ನು ಘೋಷಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ…

ಬೇಡಿಕೆಗಳೇನು?

  • ಸರಕಾರ ಕುಕ್ಕುಟೋದ್ಯಮವನ್ನು ಸಹ ಹೈನುಗಾರಿಕೆ, ಕುರಿ-ಮೇಕೆ ಸಾಕಣೆಯಂತೆ ಕೃಷಿಯ ಒಂದು ಭಾಗವಾಗಿ ಅಧಿಕೃತವಾಗಿ ಪರಿಗಣಿಸುವ ಮೂಲಕ ಕೋಳಿ ಸಾಕಣೆ ರೈತರನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಮುಂದಾಗಬೇಕು.
  • ಕೃಷಿ, ತೋಟಗಾರಿಕೆ ಮತ್ತು ಹೈನೋದ್ಯಮಕ್ಕಿರುವ ವಿಮಾ ಸೌಲಭ್ಯ ಕುಕ್ಕುಟೋದ್ಯಮಿಗಳ ಪಾಲಿಗೆ ಮರೀಚಿಕೆಯಾಗಿದೆ. ವಿಮೆ ಸೌಲಭ್ಯ ದೊರಕಿಸಿಕೊಡುವ ಮೂಲಕ ಕುಕ್ಕುಟೋದ್ಯಮಕ್ಕೆ ಬೆಳಕಾಗಬೇಕು ಎಂಬುವುದು ಕೋಳಿ ಸಾಕಣೆ ರೈತರ ಬಹುದೊಡ್ಡ ಬೇಡಿಕೆಯಾಗಿದೆ.
  • ಹೈನುಗಾರಿಕೆ ರೈತರಿಗೆ ಪ್ರತಿ ಲೀಟರ್ ಹಾಲಿಗೆ  5 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುವಂತೆ ಕೋಳಿ ಸಾಕಣೆ ರೈತರಿಗೂ ಪ್ರತಿ ಮಾಂಸದ ಕೋಳಿಗೆ 5 ರೂಪಾಯಿ ಪ್ರೋತ್ಸಾಹಧನ ನೀಡಬೇಕು.
  • ಕೃಷಿ ಮತ್ತು ರೇಷ್ಮೆ ಬೆಳೆಗಾರರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೂ ವಿಸ್ತರಿಸಬೇಕು. ಕುಕ್ಕುಟ ಕ್ಷೇತ್ರವನ್ನು ಹೈನುಗಾರಿಕೆ ಕ್ಷೇತ್ರಕ್ಕಿಂತ ಬಲಿಷ್ಠವಾಗಿ ಅಭಿವೃದ್ಧಿಪಡಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.

ಕುರಿ ಮೇಕೆ ಸಾಕಣೆ ಸಹಾಯಧನಕ್ಕೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ | ಫೆಬ್ರವರಿ 24ರೊಳಗೆ ಅರ್ಜಿ ಸಲ್ಲಿಸಿ

ಭೂ ಪರಿವರ್ತನೆಗೆ ವಿನಾಯಿತಿ 

ಈಗಾಗಲೇ ಸರಕಾರ ಕೋಳಿ ಸಾಕಣೆಗೆ ಬಳಕೆಯಾಗುವ ಜಮೀನಿಗೆ ಕರ್ನಾಟಕ ಭೂ ಕಂದಾಯ ಕಾಯಿದೆಯಡಿ ಭೂ ಪರಿವರ್ತನೆಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 2-(ಎ)(1)(ಡಿ)ರಲ್ಲಿ ಕೋಳಿ ಸಾಕಣೆ (ಕೋಳಿ ಫಾರಂ)ಯನ್ನು ಕೃಷಿ ಎಂದು ವ್ಯಾಖ್ಯಾನಿಸಲಾಗಿರುವುದರಿಂದ ಕೋಳಿ ಸಾಕಾಣಿಕೆಗೆ ಬಳಕೆಯಾಗುವ ಜಮೀನಿಗೆ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95ರಡಿ ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲಾಗಿದೆ.

ನಿಯಮಾವಳಿ ಪ್ರಕಾರ ಕೃಷಿ ಜಮೀನನ್ನು ಇತರೆ ಉದ್ದೇಶಗಳಿಗೆ ಬಳಸಬೇಕಾದರೆ, ಭೂ ಕಂದಾಯ ಕಾಯಿದೆ-1964ರ ಕಲಂ 95(2)ರಡಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಭೂ ಪರಿವರ್ತನೆಗೆ ಅನುಮತಿ ಪಡೆಯಬೇಕು. ಆದರೆ, ಕೋಳಿ ಸಾಕಾಣಿಕೆಯನ್ನು ಕೃಷಿ ಎಂದು ಪರಿಗಣಿಸಿರುವುದರಿಂದ ಈ ವಿನಾಯಿತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದೀಗ ರಾಜ್ಯ ಬಜೆಟ್‌ನಲ್ಲಿ ಕೋಳಿ ಸಾಕಣೆ ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರಕಾರ ಪ್ರತಿ ಕೋಳಿಗೆ ೫ ರೂಪಾಯಿ ಪ್ರೋತ್ಸಾಹ ಧನ ನೀಡಬೇಕೆಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.

ಸರಕಾರಿ ಯೋಜನೆಗಳ ನಿಖರ ಮಾಹಿತಿಗಾಗಿ ಇಲ್ಲಿ ಕ್ಲಿಕ್  ಮಾಡಿ

ಇದನ್ನೂ ಓದಿ: 

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಕೃಷಿ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ನರೇಗಾ ಯೋಜನೆಯಲ್ಲಿ 2.5 ಲಕ್ಷ ರೂಪಾಯಿ ಸಹಾಯಧನ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಹೆಚ್ಚು ಹಾಲು ಕೊಡುವ ನಾಟಿ ಹಸುಗಳು | ಹೈನುಗಾರಿಕೆಗೂ ಸೈ ದುಡಿಮೆಗೂ ಜೈ

 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
WhatsApp Group Join Now
Telegram Group Join Now

Related Posts

error: Content is protected !!