ಸರಕಾರಿ ಯೋಜನೆ

ಪಿಎಂ ಕಿಸಾನ್ ಆರ್ಥಿಕ ನೆರವು ₹6,000ದಿಂದ ₹8,000ಕ್ಕೆ ಹೆಚ್ಚಳ? | Increase in PM-Kisan Amount

WhatsApp Group Join Now
Telegram Group Join Now

ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ಸಿಗುತ್ತಿರುವ ಹಣಕಾಸು ನೆರವು ಹೆಚ್ಚಳ ಮಾಡಲು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದ್ದು; ಇಷ್ಟರಲ್ಲಿಯೇ ಈ ಮೊತ್ತ ಹೆಚ್ಚಲಿದೆ ಎನ್ನಲಾಗುತ್ತಿದೆ. ಹಾಗಿದ್ದರೆ ಎಷ್ಟು ಹಣ ಹೆಚ್ಚಾಗಲಿದೆ? ಈ ಹೆಚ್ಚಳಕ್ಕೆ ಕಾರಣವೇನು? ಯಾವಾಗಿನಿಂದ ಹೆಚ್ಚುವರಿ ಹಣ ರೈತರ ಖಾತೆಗೆ ಸೇರಲಿದೆ? ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ…

ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲೊಂದಾದ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುತ್ತಿರುವ ಹಣಕಾಸು ನೆರವು ಶೀಘ್ರದಲ್ಲಿಯೇ ಹೆಚ್ಚಳವಾಗಲಿದೆಯಾ? ಹೀಗೊಂದು ಬಲವಾದ ಸಿಹಿಸುದ್ದಿ ಹರಿದಾಡುತ್ತಿದ್ದು; ಇಷ್ಟರಲ್ಲಿಯೇ ಪಿಎಂ ಕಿಸಾನ್ ಆರ್ಥಿಕ ನೆರವು ಹೆಚ್ಚಲಿದೆ ಎಂದೇ ಹೇಳಲಾಗುತ್ತಿದೆ. ಏಕೆಂದರೆ ಪಿಎಂ ಕಿಸಾನ್ ಆರ್ಥಿಕ ನೆರವು ಹೆಚ್ಚಳವೂ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕಳೆದ ಡಿಸೆಂಬರ್ 19ರಂದು ಆರೆಸ್ಸೆಸ್ ಬೆಂಬಲಿತ ಭಾರತೀಯ ಕಿಸಾನ್ ಸಂಘ (BKS) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದೆ. ಕೇಂದ್ರ ಸರಕಾರ ಇದಕ್ಕೆ ಸಕಾರಾತ್ಮಕವಾಗಿ ಸಂದಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಅಂಗಸಂಸ್ಥೆಯಾದ ಭಾರತೀಯ ಕಿಸಾನ್ ಸಂಘ (BKS) ಕಳೆದ ನಾಲ್ಕು ತಿಂಗಳಿಂದ ದೇಶದಾದ್ಯಂತ ಜನ ಜಾಗರಣ ರ‍್ಯಾಲಿ ಆಯೋಜಿಸಿತ್ತು. ದಕ್ಷಿಣ ರಾಜ್ಯ ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಬೃಹತ್ ಸಭೆಗಳನ್ನು ಒಳಗೊಂಡಂತೆ ಸುಮಾರು 20,000 ಕಿ.ಮೀ ಪಾದಯಾತ್ರೆ, 13,000 ಕಿ.ಮೀ ಸೈಕಲ್ ರ‍್ಯಾಲಿಗಳು ಮತ್ತು 18,000 ಬೀದಿ ಸಭೆಗಳನ್ನು ನಡೆಸಲಾಗಿತ್ತು. ಆಬಳಿಕ ಮೊನ್ನೆ ಡಿಸೆಂಬರ್ 19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಿಸಾನ್ ಘರ್ಜನಾ ರ‍್ಯಾಲಿಯನ್ನು ಆಯೋಜಿಸಿ ತನ್ನ ಶಕ್ತಿ ಪ್ರದರ್ಶಿಸಿದೆ.

ಪ್ರಮುಖ ಬೇಡಿಕೆಗಳೇನು?

ನಾಲ್ಕು ಪ್ರಮುಖ ಬೇಡಿಕೆಗಳ ಮೇಲೆ ಭಾರತೀಯ ಕಿಸಾನ್ ಸಂಘ (ಬಿಕೆಎಸ್) ಈ ರ‍್ಯಾಲಿಯನ್ನು ಆಯೋಜಿಸಿತ್ತು. ಅವುಗಳೆಂದರೆ…

  1. ಕೃಷಿ ವೆಚ್ಚದ ಆಧಾರದ ಮೇಲೆ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಜಾರಿಗೊಳಿಸಬೇಕು ಮತ್ತು ಖಚಿತಪಡಿಸಬೇಕು.
  2. ಜಿಎಸ್‌ಟಿಯಿಂದ ಕೃಷಿ ಉತಪನ್ನಗಳನ್ನು ಹೊರಗಿಡಬೇಕು. ಅಂದರೆ ಎಲ್ಲಾ ರೀತಿಯ ಕೃಷಿ ಉತ್ಪನ್ನದ ಮೇಲೆ ಜಿಎಸ್‌ಟಿ ಹೇರಬಾರದು.
  3. ಕೇಂದ್ರದ ಮಹತ್ವದ ಯೋಜನೆಯಾದ ಕಿಸಾನ್ ಸಮ್ಮಾನ್ ನಿದಿಯ ಮೊತ್ತವನ್ನು ಏರಿಕೆ ಮಾಡಬೇಕು.
  4. ಕುಲಾಂತರಿ ಬೆಳೆಗಳಿಗೆ ನೀಡಿರುವ ಅನುಮತಿಯನ್ನು ಕೂಡಲೇ ಹಿಂಪಡೆಯಬೇಕು.

ಇದನ್ನೂ ಓದಿ: ರೈತರ ಬ್ಯಾಂಕ್ ಖಾತೆಗೆ ₹339 ಕೋಟಿ ಹಾಲಿನ ಪ್ರೋತ್ಸಾಹಧನ ಜಮೆ

ರೈತರ ನೆರವಿನ ಯೋಜನೆ

2019ರ ಫೆಬ್ರವರಿ 24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಪಿಎಂ ಕಿಸಾನ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು. ಆ ಲೋಕಸಭಾ ಚುನಾವಣೆ ಇದ್ದುದರಿಂದ ಈ ಯೋಜನೆ ಜಾರಿಗೆ ತಂದ ಕೇವಲ ಐದು ವಾರಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೈತರನ್ನು ಈ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಮತ್ತು ಅಧಿಕಾರಿಗಳು ಈ ಯೋಜನೆಯನ್ನು ಮರೆತರು. ಆನಂತರ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ರೈತರೂ ಕೂಡ ಆಸಕ್ತಿ ತೋರಲಿಲ್ಲ. ಜತೆಗೆ ಅಧಿಕಾರಿಗಳೂ ಶ್ರದ್ಧೆವಹಿಸದ ಪರಿಣಾಮ ಯೋಜನೆಗೆ ಹಿನ್ನಡೆ ಉಂಟಾಗಿದೆ.

ದುರಂತವೆಂದರೆ ಅನರ್ಹರು ನಕಲಿ ದಾಖಲೆ ಸೃಷ್ಠಿಸಿ ಯೋಜನೆಯ ಲಾಭ ಪಡೆಯಲು ಆಂಭಿಸಿರುವುದರಿಂದ ಇಡೀ ಯೋಜನೆ ಭ್ರಷ್ಟಾಚಾರ ಅಖಾಡವಾಗಿದೆ. ನೂರಾರು ಕೋಟಿ ರೂಪಾಯಿ ಸಹಾಯಧನ ಅನರ್ಹರ ಪಾಲಾಗಿದೆ. ಸದ್ಯ ಕರ್ನಾಟಕ, ತಮಿಳುನಾಡು, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿವೆ. ತಮಿಳುನಾಡಲ್ಲಿ ಎಂಟೂವರೆ ಲಕ್ಷ ಅನರ್ಹರ ಖಾತೆಗಳಿಗೆ ಸಹಾಯಧನ ಜಮೆಯಾಗಿದ್ದು, ಅತಿಹೆಚ್ಚು ವಂಚನೆ ಪ್ರಕರಣಗಳು ದಾಖಲಾದ ರಾಜ್ಯವಾಗಿದೆ.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ಸಾಲ ಕೊಡಿಸುವ ನೆಪದಲ್ಲಿ ರೈತರ ಆಸ್ತಿ ದಾಖಲೆ ಮತ್ತು ಆಧಾರ್ ಕಾರ್ಡ್ ಪಡೆದು ನೋಂದಣಿ ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಯಾರದ್ದೋ ಜಮೀನಿಗೆ ಇನ್ಯಾರದ್ದೋ ಬ್ಯಾಂಕ್ ಖಾತೆಗೆ ಸಹಾಯಧನ ವರ್ಗಾವಣೆಯಾಗಿದೆ. ದುರಂತವೆಂದರೆ ಅನೇಕ ರೈತರಿಗೆ ತಮ್ಮ ಜಮೀನಿಗೆ ಬೇರೆ ಯಾರೋ ಸಹಾಯಧನ ಪಡೆಯುತ್ತಿರುವ ವಿಚಾರವೇ ಗೊತ್ತಿಲ್ಲ. ಈ ಎಲ್ಲ ಕಾರಣದಿಂದಾಗಿ ಈ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಲು ಮತ್ತು ನಿಜವಾದ ರೈತರಿಗೆ ಮಾತ್ರ ಯೋಜನೆಯ ಹಣ ದೊರೆಯುವಂತೆ ಮಾಡಲು ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ.

 ₹6,000 ದಿಂದ  ₹8,000ಕ್ಕೆ ಹೆಚ್ಚಳ? 

ಪರಿಸ್ಥಿತಿ ಹೀಗಿರುವಾಗಲೇ ಏತನ್ಮಧ್ಯೆ ಸಮಾನ ಮೂರು ಕಂತುಗಳಲ್ಲಿ ರೈತರಿಗೆ 6,000 ರೂಪಾಯಿ ಹಣವನ್ನು ನೀಡುವ ಪಿ ಎಂ ಕಿಸಾನ್ ಯೋಜನೆಯ ಹಣಕಾಸು ನೆರವು ಹೆಚ್ಚಳವಾಗಬೇಕು ಎಂಬ ಆಗ್ರಹ ಕೇಳಿ ಬರುತ್ತಿದ್ದು; ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಅಂಗ ಸಂಸ್ಥೆಯಾಗಿರುವ ಭಾರತೀಯ ಕಿಸಾನ್ ಸಂಘದಿಂದಲೇ ಈ ಸಂಬಂಧ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಹೀಗಾಗಿ ಇತರ ಬೇಡಿಕೆಗಳಿಗಿಂತ ಮೊದಲು ಪಿಎಂ ಕಿಸಾನ್ ಯೋಜನೆ ಹಣಕಾಸು ನೆರವು ಹೆಚ್ಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: 30 ಗುಂಟೆ ಬಾಡಿಗೆ ಜಾಗದಲ್ಲಿ ತಿಂಗಳಿಗೆ ₹50,000 ಗಳಿಸುವ ರೈತ

ಹಾಗಿದ್ದರೆ ಎಷ್ಟು ಮೊತ್ತ ಹೆಚ್ಚಾಗಲಿದೆ? ಈಗಾಗಲೇ ಸಮಾನ ಮೂರು ಕಂತುಗಳಲ್ಲಿ ರೈತರಿಗೆ 6,000 ರೂಪಾಯಿ ಹಣವನ್ನು ನೀಡಲಾಗುತ್ತಿದೆ. ಈ ಮೊತ್ತಕ್ಕೆ ಹೆಚ್ಚುವರಿ 2,000 ರೂಪಾಯಿ ಸೇರಿಸಿ ಒಟ್ಟು ವಾರ್ಷಿಕ ಮೂರು ಕಂತುಗಳ ಬದಲು ನಾಲ್ಕು ಕಂತುಗಳಲ್ಲಿ 8,000 ರೂಪಾಯಿ ನೀಡಬೇಕು ಎಂಬುವುದು ಭಾರತೀಯ ಕಿಸಾನ್ ಸಂಘ ಬೇಡಿಕೆಯಾಗಿದೆ. ಈ ಬಗ್ಗೆ ಸರಕಾರ ಈಗಾಗಲೇ ಗಂಭೀರ ಚಿಂತನೆ ನಡೆಸಿದ್ದು; ಇಷ್ಟರಲ್ಲಿಯೇ ಈ ನೆರವು ಹೆಚ್ಚಳವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಗ್ರಾಮಠಾಣಾ ನಕ್ಷೆ: ಪ್ರತಿಯೊಬ್ಬರೂ ಅರಿತಿರಬೇಕಾದ ನಿಮ್ಮೂರಿನ ಮಾಹಿತಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!