ಸಾಲ ಯೋಜನೆ

ಸಣ್ಣ ವ್ಯಾಪಾರಕ್ಕೆ 10 ಲಕ್ಷ ರೂಪಾಯಿ ಧನ ಸಹಾಯ : ಇಲ್ಲಿ ಅರ್ಜಿ ಸಲ್ಲಿಸಿ | Pradhan Mantri Mudra Yojana (PMMY)

WhatsApp Group Join Now
Telegram Group Join Now

ಇದು ಬಂಡವಾಳದ ಸಮಸ್ಯೆಯಿಂದಾಗಿ ವ್ಯಾಪಾರೋದ್ಯಮ ಶುರು ಮಾಡಲು ಸಾಧ್ಯವಾಗದ ಉತ್ಸಾಹಿಗಳಿಗೆ ಧನಸಹಾಯ ಕಲ್ಪಿಸುವ ವಿಶೇಷ ಯೋಜನೆ. ₹50,000 ದಿಂದ 10 ಲಕ್ಷ ತನಕ ಸಾಲ ಪಡೆಯಬಹುದು. ಈ ಸಾಲ ಪಡೆಯಲು ಬೇಕಾಗುವ ದಾಖಲೆಗಳೇನು? ಯಾವ್ಯಾವ ಉದ್ಯೋಗಕ್ಕೆ ಸಾಲ ಸಿಗಲಿದೆ? ಯಾವ್ಯಾವ ಬ್ಯಾಂಕುಗಳು ಸಾಲ ನೀಡುತ್ತವೆ? ಅರ್ಜಿ ಸಲ್ಲಿಕೆ ಹೇಗೆ? ಇತ್ಯಾದಿ ಸಮಗ್ರ  ಮಾಹಿತಿ ಇಲ್ಲಿದೆ…

ಕೇಂದ್ರ ಸರಕಾರದ ಈ ಯೋಜನೆಯಲ್ಲಿ ಯಾವುದೇ ಜಾಮೀನು ಇಲ್ಲದೇ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿ ತನಕ ಸಾಲ ಪಡೆಯಬಹುದು. ಈ ಸಾಲ ಸೌಲಭ್ಯ ಬಳಸಿಕೊಂಡು ಸಣ್ಣ ಮತ್ತು ಅತಿ ಸಣ್ಣ ಉದ್ಯಮೆದಾರರು, ವ್ಯಾಪಾರರಸ್ತರು ಹೊಸ ಉದ್ಯಮ ಶುರು ಮಾಡಬಹುದು. ಪಿಎಂ ಮುದ್ರಾ ಸಾಲ ಯೋಜನೆ ಹೆಸರಿನ ಈ ಸಾಲ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2015ರಲ್ಲಿ ಈ ಸಾಲ ಯೋಜನೆಯನ್ನು ಉದ್ಘಾಟಿಸಿದರು.

ಹಣಕಾಸಿನ ಕೊರತೆಯಿಂದಾಗಿ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಲು ಸಾಧ್ಯವಾಗದಿರುವ ಉತ್ಸಾಹಿಗಳಿಗೆ ಧನಸಹಾಯ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಣ್ಣ ವ್ಯಾಪಾರವನ್ನು ಪ್ರಾರಂಭಿಸುವ ಅಥವಾ ಅಸ್ತಿತ್ವದಲ್ಲಿರುವ ಉದ್ಯಮವನ್ನು ವಿಸ್ತರಿಸಲು ಬಯಸುವ ವ್ಯಕ್ತಿಗಳು ಈ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ 2022ರ ಅಡಿಯಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: SSLC, PUC ಪಾಸಾದವರಿಗೆ ಐಸಿಐಸಿಐ ಬ್ಯಾಂಕ್‌ನಲ್ಲಿ 4,000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾರೆಲ್ಲ ಸಾಲ ಪಡೆಯಬಹುದು?

ಆಹಾರ ಉತ್ಪನ್ನಗಳ ತಯಾರಿ, ಜವಳಿ ಕ್ಷೇತ್ರ, ಸಮುದಾಯ, ಸಾಮಾಜಿಕ, ಸಾರಿಗೆ ವಲಯ ಮತ್ತು ವೈಯಕ್ತಿಕ ಸೇವಾ ಚಟುವಟಿಕೆಗಳಿಗೆ ಸಾಲ ದೊರೆಯುತ್ತದೆ. ಉದಾಹರಣೆಗೆ ಆಟೋ ರಿಕ್ಷಾ, ಸಣ್ಣ ಸರಕುಗಳ ಸಾಗಾಟ ವಾಹನ, ತ್ರಿಚಕ್ರ ವಾಹನ, ಇ- ರಿಕ್ಷಾ, ಕಾರು, ಟ್ಯಾಕ್ಸಿ ಖರೀದಿ, ಸೆಲೂನ್, ಬ್ಯೂಟಿಪಾರ್ಲರ್, ವ್ಯಾಯಾಮ ಶಾಲೆ (ಜಿಮ್), ಅಂಗಡಿ, ಹೊಲಿಗೆ ಅಂಗಡಿ, ಡಿ.ಟಿ.ಪಿ., ಝರಾಕ್ಸ್, ಕೊರಿಯರ್ ಏಜೆಂಟ್ಸ್, ಆಹಾರ ಮಳಿಗೆಗಳು, ಕೈಮಗ್ಗ, ಉಡುಪು ತಯಾರಿ ಘಟಕ ನಿರ್ಮಾಣ… ಹೀಗೆ ಆದಾಯ ತರಬಲ್ಲ ಬಹುತೇಕ ಸಣ್ಣ ಮತ್ತು ಅತೀ ಸಣ್ಣ ಉದ್ದಿಮೆಗಳಿಗೆ ಸಾಲ ಪಡೆಯಬಹುದು.

ಕನಿಷ್ಠ 18 ವರ್ಷ ತುಂಬಿರುವ ವ್ಯಕ್ತಿಗಳು ತಮ್ಮ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಖಾಯಂ ವಿಳಾಸ, ವ್ಯಾಪಾರದ ವಿಳಾಸ ಮತ್ತು ಮಾಲೀಕತ್ವದ ಪುರಾವೆ, ಮೂರು ವರ್ಷಗಳ ಬ್ಯಾಲೆನ್ಸ್ ಶೀಟ್, ಆದಾಯ ತೆರಿಗೆ ರಿಟರ್ನ್ಸ್ ಮತ್ತು ಸ್ವಯಂ ಮೌಲ್ಯಮಾಪನ ರಿಟರ್ನ್ಸ್, ಪಾಸ್‌ಪೋರ್ಟ್ ಗಾತ್ರದ ಫೋಟೋಗಳೊಂದಿಗೆ ಸಾಲಕ್ಕಾಗು ಅರ್ಜಿ ಸಲ್ಲಿಸಬಹುದು.

ಮುದ್ರಾ ಯೋಜನೆಯ ವಿಧಗಳು 

1. ಶಿಶು ಸಾಲ: ಮುದ್ರಾ ಯೋಜನೆ ಸ್ವೀಕರಿಸುವವರು ಈ ಕಾರ್ಯಕ್ರಮದ ಅಡಿಯಲ್ಲಿ 50,000 ರೂಪಾಯಿ ವರೆಗೆ ಸಾಲವನ್ನು ಪಡೆಯಬಹುದು.

2. ಕಿಶೋರ ಸಾಲ: ಈ ಮುದ್ರಾ ಯೋಜನೆಯಲ್ಲಿ ಭಾಗವಹಿಸುವವರು 50,000 ದಿಂದ 5 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಪಡೆಯಬಹುದು.

3. ತರುಣ್ ಸಾಲ: ಈ ಮುದ್ರಾ ಯೋಜನೆಯು ಸ್ವೀಕರಿಸುವವರಿಗೆ 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಒದಗಿಸುತ್ತದೆ.

ಇದನ್ನೂ ಓದಿ: ₹50,000 ವಿಶೇಷ ಪ್ರೊತ್ಸಾಹಧನಕ್ಕೆ D.Ed, B.Ed ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಯೋಜನೆಯ ವಿಶೇಷತೆ 

ಒಬ್ಬರಿಗೆ ಒಂದು ಸಾಲ ಮಾತ್ರ ದೊರೆಯುತ್ತದೆ. ಶಿಶು ಮತ್ತು ಕಿಶೋರ್ ಸಾಲಗಳಿಗೆ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕಗಳಿಲ್ಲ. ತರುಣ್ ಸಾಲಕ್ಕೆ ಸಾಲದ ಮೊತ್ತದ ಶೇ.0.50 ಬಡ್ಡಿ ವಿಧಿಸಲಾಗುತ್ತದೆ. ಈ ಮುದ್ರಾ ಯೋಜನೆಯಡಿ ನೀಡಿದ ಸಾಲಕ್ಕೆ ಯಾವುದೇ ಸಬ್ಸಿಡಿ ಇರುವುದಿಲ್ಲ. ಆದಾಗ್ಯೂ ಕೆಲವು ಸರಕಾರಿ ಯೋಜನೆಗಳ ಲಿಂಕ್ ಆಗಿದ್ದ ವೇಳೆ ಅದರಲ್ಲಿ ಸರಕಾರದ ಬಂಡವಾಳ ಸಬ್ಸಿಡಿ ಒದಗಿಸುವ ಆಯ್ಕೆ ಇದ್ದರೆ ಪರಿಗಣಿಸಲಾಗುತ್ತದೆ.

ಮುದ್ರಾ ಯೋಜನೆ ಜಾಮೀನು ರಹಿತ ಸಾಲ, ಈ ಸಾಲಗಳಿಗೆ ಯಾವುದೇ ಮೇಲಾಧಾರ ಇರುವುದಿಲ್ಲ ಎಂಬುದು ವಿಶೇಷ. ಆದರೆ ನೆನಪಿಡಿ ಇದು ಬಡ್ಡಿರಹಿತ ಸಾಲವಲ್ಲ. ಸಾಲದ ಬಡ್ಡಿ ದರವು ಈ ಯೋಜನೆಯ ಮಾರ್ಗಸೂಚಿ ಮತ್ತು ಖಾತೆದಾರನ ಬ್ಯಾಂಕ್ ವ್ಯವಹಾರ, ಕ್ರೆಡಿಟ್ ಸ್ಕೋರ್‌ಗಳ ಮೇಲೆ ಅವಲಂಬಿತವಾಗಿರುತ್ತದೆ. ಮುದ್ರಾ ಯೋಜನೆ ಕುರಿತು ಹೆಚ್ಚಿನ ಮಾಹಿತಿಗೆ ಮೇಲ್ಕಾಣಿಸಿದ ಸ್ಥಳೀಯ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು.

ಇದನ್ನೂ ಓದಿ: ಇನ್ಮುಂದೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ಸೌಲಭ್ಯಗಳು ಕಟ್

ಯಾವ್ಯಾ ಬ್ಯಾಂಕುಗಳಲ್ಲಿ ಸಾಲ ಸಿಗಲಿದೆ?

ಸಾರ್ವಜನಿಕ ವಲಯದ ಬ್ಯಾಂಕುಗಳು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಕೆನರಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಹಾಗೂ ಆಫ್ ಇಂಡಿಯಾ.

ಖಾಸಗಿ ವಲಯದ ಬ್ಯಾಂಕ್‌ಗಳು: ಆಕ್ಸಿಸ್ ಬ್ಯಾಂಕ್ ಲಿಮಿಟೆಡ್., ಕ್ಯಾಥೋಲಿಕ್ ಸಿರಿಯನ್ ಬ್ಯಾಂಕ್ ಲಿಮಿಟೆಡ್., ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್., ಡಿಸಿಬಿ ಬ್ಯಾಂಕ್ ಲಿಮಿಟೆಡ್., ಫೆಡರಲ್ ಬ್ಯಾಂಕ್ ಲಿಮಿಟೆಡ್., ಹೆಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್

ಇದನ್ನೂ ಓದಿ: 2023ನೇ ಸಾಲಿನ ವಾಯುಪಡೆ ಅಗ್ನಿವೀರರ ನೇಮಕಕ್ಕೆ PUC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: ₹40,000 ಸಂಬಳ

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು: ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಚೈತನ್ಯ ಗೋದಾವರಿ ಗ್ರಾಮೀಣ ಬ್ಯಾಂಕ್, ಡೆಕ್ಕನ್ ಗ್ರಾಮೀಣ ಬ್ಯಾಂಕ್, ಸಪ್ತಗಿರಿ ಗ್ರಾಮೀಣ ಬ್ಯಾಂಕ್, ಬಿಹಾರ ಗ್ರಾಮೀಣ ಬ್ಯಾಂಕ್, ಮಧ್ಯ ಬಿಹಾರ ಗ್ರಾಮೀಣ ಬ್ಯಾಂಕ್

ಸಹಕಾರಿ ಬ್ಯಾಂಕುಗಳು: ಗುಜರಾತ್ ಸ್ಟೇಟ್ ಕೋ-ಆಪ್ ಬ್ಯಾಂಕ್, ಲಿಮಿಟೆಡ್ ಮೆಹ್ಸಾನಾ ಅರ್ಬನ್ ಕೋ-ಆಪ್ ಬ್ಯಾಂಕ್, ರಾಜ್ಕೋಟ್ ನಾಗರೀಕ್ ಸಹಕಾರಿ ಬ್ಯಾಂಕ್, ಕಲುಪುರ್ ಕಮರ್ಷಿಯಲ್ ಸಹಕಾರ ಬ್ಯಾಂಕ್. ಇಷ್ಟೇ ಅಲ್ಲದೇ ಎಂಎಫ್‌ಐ ಹಾಗೂ ಎನ್‌ಬಿಎಫ್‌ಸಿ ವಲಯದ ಫೈನಾನ್ಶಿಯಲ್ ಕಂಪನಿಗಳೂ ಸಹ ಈ ಸಾಲ ಯೋಜನೆಯ ವ್ಯಾಪಿಗೆ ಒಳಪಟ್ಟಿವೆ.

ಅರ್ಹ ಆಸಕ್ತ ಅಭ್ಯರ್ಥಿಗಳು ಮುದ್ರಾ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

ಇವುಗಳನ್ನೂ ಓದಿ 👇

ಹಸುವಿನಿಂದ ಕರುಗಳಿಗೆ ರೋಗ ನಿರೋಧಕ ಶಕ್ತಿಯನ್ನು ನೈಸರ್ಗಿಕವಾಗಿ ವರ್ಗಾವಣೆ ಮಾಡಬಲ್ಲ ಏಕಮಾತ್ರ ಮಾಧ್ಯಮ ಗಿಣ್ಣದ ಹಾಲು. ಇಂತಹ ಗಿಣ್ಣದ ಹಾಲನ್ನು ಸದ್ಭಳಕೆ ಮಾಡಿಕೊಳ್ಳುವುದು ಹೇಗೆ? ಅದರಿಂದ ಲಾಭ ಗಳಿಕೆ ಹೇಗೆ? ಕರುವಿನ ಬೆಳವಣಿಗೆಗೆ ಗಿಣ್ಣದ ಹಾಲಿನಂದಾಗುವ ಅನುಕೂಲಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

2022-23ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸುವಂತೆ ಕೃಷಿ ಸಚಿವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ರೈತರಿಗೆ ಬೆಳೆವಿಮೆ ಪರಿಹಾರ ಯಾವಾಗ ಬರಲಿದೆ? ಎಷ್ಟು ಬರಲಿದೆ? ದಾಖಲೆ ಪರಿಶೀಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಪಶು ಆಹಾರ ತಯಾರಿಕೆಗಾಗಿ ಕೆಎಂಎಫ್ ವಿವಿಧ ಜಿಲ್ಲೆಗಳಿಂದ ಬೆಂಬಲ ಬೆಲೆಯೊಂದಿಗೆ ಮೆಕ್ಕೆಜೋಳ ಖರೀದಿಸುತ್ತಿದೆ. ಮೆಕ್ಕೆಜೋಳ ಬೆಳೆದ ರೈತರು ಈ ಅವಕಾಶವನ್ನು ಬಳಸಿಕೊಳ್ಳಿ. ಮೆಕ್ಕೆಜೋಳ ಖದೀರಿ ಎಲ್ಲೆಲ್ಲಿ ನಡೆಯಲಿದೆ? ಖರೀದಿ ಪ್ರಕ್ರಿಯೆ ಹೇಗೆ? ಎಷ್ಟು ಬೆಲೆ ಸಿಗಲಿದೆ? ರೈತರು ನೋಂದಣಿ ಮಾಡಿಕೊಳ್ಳುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಶೀಘ್ರದಲ್ಲಿಯೇ ಖಾಸಗಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಅಧಿಕೃತ ಹಕ್ಕು ಪತ್ರಗಳನ್ನು ನೀಡಲು ಸರಕಾರ ಮುಂದಾಗಿದೆ. ಈ ಪಟ್ಟಿಯಲ್ಲಿ ರಾಜ್ಯದ ಯಾವ್ಯಾವ ಜಿಲ್ಲೆ, ತಾಲ್ಲೂಕುಗಳು ಮೊದಲ ಸಾಲಿನಲ್ಲಿವೆ? ಈ ಜಿಲ್ಲೆಯ ದಾಖಲೆರಹಿತ ವಸತಿ ಹೊಂದಿರುವ ಜನ ಏನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

***

ಕಳೆದ ಮೂರು ವರ್ಷಗಳಿಂದ ಅರ್ಜಿದಾರರಿಗೆ ಹೊಸ ಪಡಿತರ ಚೀಟಿ ಸಿಗದೆ ಲಕ್ಷಾಂತರ ಜನ ಪರಿತಪಿಸುತ್ತಿದ್ದಾರೆ. ಹಾಗಾದರೆ ಇವರಿಗೆಲ್ಲ ಹೊಸ ರೇಷನ್ ಕಾರ್ಡ್ ಯಾವಾಗ ಸಿಗಲಿದೆ? ಈ ವಿಳಂಬಕ್ಕೆ ಕಾರಣವೇನು? ರೇಷನ್ ಕಾರ್ಡ್ ಸಿಗದೇ ಬಡ ಜನರಿಗೆ ಆಗುತ್ತಿರುವ ತೊಂದರೆಗಳೇನು? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

*** 

ಕೋಳಿ ಸಾಕಣೆ ರೈತರಿಗೆ ಏಕ ಕಾಲಕ್ಕೆ ಸರಕಾರ ಹಲವು ಶುಭ ಸುದ್ದಿಯನ್ನು ನೀಡಿದೆ. ಕೋಳಿ ಸಾಕಣೆಗೆ ಬಳಕೆಯಾಗುವ ಜಮೀನಿಗೆ ಭೂ ಪರಿವರ್ತನೆ ವಿನಾಯಿತಿ, ವಿಮಾ ಸೌಲಭ್ಯದ ಭರವಸೆ ಹಾಗೂ ಗ್ರಾಮೀಣ ಕೋಳಿ ಸಾಕಣೆಯನ್ನು ಪ್ರೋತ್ಸಾಹಿಸುವ ಪ್ರಯತ್ನಕ್ಕೆ ಮುಂದಾಗಿದೆ. ಕೋಳಿ ಸಾಕಣೆ ರೈತರಿಗೆ ಸಿಗುವ ಸರಕಾರಿ ಸೌಲಭ್ಯಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಪೂರ್ಣ ಓದಿಗೆ ಇಲ್ಲಿ ಲಿಂಕ್ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!