ಸರಕಾರಿ ಯೋಜನೆ

Pradhan Mantri Suryoday Yojana 2024 : ಇನ್ಮುಂದೆ ಮನೆಮನೆಗೂ ಸೋಲಾರ್ ವಿದ್ಯುತ್ | ಕೇಂದ್ರ ಸರಕಾರದ ಹೊಸ ಯೋಜನೆ

WhatsApp Group Join Now
Telegram Group Join Now

Pradhan Mantri Suryoday Yojana 2024 : ರಾಜ್ಯದಲ್ಲಿ ‘ಗೃಹಜ್ಯೋತಿ’ ಉಚಿತ ವಿದ್ಯುತ್ ಯೋಜನೆಯ ಯಶಸ್ವಿ ಅನುಷ್ಠಾನದ ಬೆನ್ನಲ್ಲೇ ಕೇಂದ್ರ ಸರಕಾರ ಸೋಲಾರ್ ವಿದ್ಯುತ್ ಯೋಜನೆ ಜಾರಿಗೊಳಿಸಿದ್ದು; ಈ ಯೋಜನೆಯಡಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮನೆಮನೆಗೂ ಸೋಲಾರ್ ವಿದ್ಯುತ್ ಕಲ್ಪಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಕಳೆದ ಜನವರಿ 22, 2024ರಂದು ನಡೆದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾದ ಬೆನ್ನಲ್ಲೇ ಈ ಯೋಜನೆಯನ್ನು ಘೋಷಿಸಲಾಗಿದೆ. ಸೂರ್ಯವಂಶದ ಪ್ರಖ್ಯಾತ ದೊರೆಗಳಲ್ಲೊಬ್ಬನಾದ ಶ್ರೀರಾಮನ ಸ್ಮರಣಾರ್ಥವಾಗಿ ಈ ಯೋಜನೆಯನ್ನು ಪ್ರಕಟಿಸಿದ್ದು; ‘ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆ’ ಎಂದು ಹೆಸರು ಸೂಚಿಸಲಾಗಿದೆ.

ಇದನ್ನೂ ಓದಿ: Karnataka Village Accountant Recruitment 2024 : 1820 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಚಾಲನೆ | ಪ್ರತಿ ವರ್ಷ 500 ಹುದ್ದೆಗಳ ನೇಮಕಾತಿಗೆ ಸಹಮತಿ

ಏನಿದು ಸೋಲಾರ್ ಯೋಜನೆ?

ಮನೆಯ ಛಾವಣಿಯ ಮೇಲೆ ಸೋಲಾರ್ ಪ್ಯಾನೆಲ್ ಅಂದರೆ ಸೌರ ಫಲಕಗಳನ್ನು ಅಳವಡಿಸಿ ಅದರಿಂದ ವಿದ್ಯುತ್ ಉತ್ಪಾದಿಸಿ ಬಳಸಿಕೊಳ್ಳುವ ವಿಶಿಷ್ಟ ಯೋಜನೆ ಇದು. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸೂರ್ಯೋದಯ ಯೋಜನೆಯಲ್ಲಿ ಸಬ್ಸಿಡಿ ವ್ಯವಸ್ಥೆ ರೂಪಿಸಲಾಗಿದೆ.

ಈಗಾಗಲೇ ಇದೇ ಮಾದರಿಯ ಕೇಂದ್ರ ಸರಕಾರ ಪ್ರಾಯೋಜಿತ ‘ಸೋಲಾರ್ ರೂಫ್ ಟಾಪ್’ (solar rooftop) ಯೋಜನೆ ಜಾರಿಯಲ್ಲಿದ್ದು; ‘ಸೂರ್ಯೋದಯ’ ಯೋಜನೆಯಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲವಾಗುವ ಉದ್ದೇಶವನ್ನು ಹೊಂದಲಾಗಿದೆ.

ಇದನ್ನೂ ಓದಿ: Post Office Gram surakha yojane :1500 ರೂಪಾಯಿ ಹೂಡಿಕೆ ಮಾಡಿ 35 ಲಕ್ಷ ರೂಪಾಯಿ ಪಡೆಯುವ ಪೋಸ್ಟಾಫೀಸ್ ಸ್ಕೀಮ್ | ಇದು ಗ್ರಾಮೀಣ ಜನರಿಗಾಗಿ ಇರುವ ಬಂಪರ್ ಯೋಜನೆ

ಯೋಜನೆಯ ಉದ್ದೇಶವೇನು?

ದೇಶದ ಬಡ ಮತ್ತು ಮಧ್ಯಮ ವರ್ಗದ ಜನರ ವಿದ್ಯುತ್ ಬಿಲ್’ನ ಮೊತ್ತವನ್ನು ಕಡಿಮೆ ಮಾಡುವುದು ಮತ್ತು ಇಂಧನ ಕ್ಷೇತ್ರದಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಯ ಉದ್ದೇಶವಾಗಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ.

ಮನೆಯ ಮೇಲ್ಚಾವಣಿಯ ಮೇಲೆ ಸೌರಫಲಕಗಳನ್ನು ಅಳವಡಿಸುವುದರಿಂದ ಉತ್ಪಾದನೆಯಾದ ವಿದ್ಯುತ್ತನ್ನು ಜನರು ತಮ್ಮ ಮನೆಗೆ ಬಳಸಿಕೊಳ್ಳಬಹುದು. ಬಳಸಿ ಮಿಕ್ಕಿದರೆ ಉಳಿದ ಹೆಚ್ಚಿನ ವಿದ್ಯುತ್ತನ್ನು ಮಾರಾಟ ಮಾಡಿ ಆದಾಯವನ್ನು ಕೂಡ ಗಳಿಸಬಹುದಾಗಿದೆ.

ಇದನ್ನೂ ಓದಿ: Joint account condition for drought relief : ಬರ ಪರಿಹಾರಕ್ಕೆ ಜಂಟಿ ಖಾತೆ ಶರತ್ತು | ಕೇಂದ್ರ ಸಚಿವೆಯ ಹೊಸ ಕಂಡಿಷನ್

ಘಟಕ ಸ್ಥಾಪನೆಗೆ ಸಬ್ಸಿಡಿ ಎಷ್ಟು?

ಸೂರ್ಯೋದಯ ಯೋಜನೆ ಘಟಕ ಸ್ಥಾಪನೆಗೆ 40 ಪರ್ಸೆಂಟ್ ಸಬ್ಸಿಡಿ ಸಿಗಲಿದೆ. 3 kw ಸೌರಫಲಕ ಅಳವಡಿಕೆ 2.20 ಲಕ್ಷ ರೂಪಾಯಿ ಹಾಗೂ 5 kw ಸೌಲಫಲಕ ಅಳವಡಿಕೆಗೆ 3.5 ಲಕ್ಷ ವೆಚ್ಚವಾಗಲಿದೆ. ಸಾಮಾನ್ಯವಾಗಿ 3 kw ಸಾಮರ್ಥ್ಯದ ಸೌಲಫಲಕದಿಂದ 360 ಯೂನಿಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ.

ಎಲ್ಲ ರೀತಿ ವಿದ್ಯುತ್ ಚಾಲಿತ ಆಧುನಿಕ ಉಪಕರಣಗಳನ್ನು ಹೊಂದಿರುವ ಒಂದು ದೊಡ್ಡ ಕುಟುಂಬಕ್ಕೆ ಆಗಿ ಮಿಕ್ಕುವಷ್ಟು ವಿದ್ಯುತ್ 3 kw ಸಾಮರ್ಥ್ಯದ ಸೌಲಫಲಕದಿಂದ ಸಿಗಲಿದೆ. ಒಂದೊಮ್ಮೆ ಇನ್ವೆಸ್ಟ್ ಮಾಡಿದರೆ ಸಾಕು, ಇದರಿಂದ ಪ್ರತಿ ಮನೆಗೂ ವಿದ್ಯುತ್ ವೆಚ್ಚಾವಾಗಿ ವರ್ಷಕ್ಕೆ 30,240 ರೂಪಾಯಿ ಉಳಿತಾಯವಾಗಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಮಾಸಿಕ ಕಂತುಗಳ ಸೌಲಭ್ಯ

ಸುರ್ಯೋದಯ ಯೋಜನೆಯ ಮತ್ತೊಂದು ವಿಶೇಷವೆಂದರೆ ಸೌರಫಲಕ ಘಟಕ ಅಳವಡಿಕೆಗೆ ವಿನಿಯೋಗವಾಗುವ ಹಣವನ್ನು ಒಟ್ಟಗೇ ಪಾವತಿಸದೇ ಮಾಸಿಕ ಕಂತುಗಳಲ್ಲಿ ಪಾವತಿಸಲು ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಎಲ್ಲಾ ವರ್ಗದ ಜನರಿಗೆ ಸುಲಭವಾಗಿ ತಲುಪಿಸುವ ಉದ್ದೇಶದಿಂದ ವೆಚ್ಚವನ್ನು ತಿಂಗಳಿಗೆ ಸುಮಾರು 4,000 ದಿಂದ 5,000 ರೂಪಾಯಿಗಳ ಇಎಂಐ ಸೌಲಭ್ಯವಿದೆ. ಈ ಇಎಂಐ ವ್ಯವಸ್ಥೆಯು ಗ್ರಾಹಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ.

ಸದರಿ ಸೂರ್ಯೋದಯ ಯೋಜನೆ ಅನುಷ್ಠಾನ ಕಾರ್ಯ ಪ್ರಗತಿಯಲ್ಲಿದ್ದು; ಶೀಘ್ರದಲ್ಲಿಯೇ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಯಾರೆಲ್ಲ ಈ ಯೋಜನೆಯ ಪ್ರಯೋಜನ ಪಡೆಯಬಹುದು? ಅರ್ಜಿ ಸಲ್ಲಿಕೆ ಹೇಗೆ? ಸೌರಫಲಕ ಘಟಕ ಅಳವಡಿಕೆ ಕುರಿತ ಸಮಗ್ರ ಮಾಹಿತಿ ಇಷ್ಟರಲ್ಲೇ ತಿಳಿಯಲಿದೆ. ಇಂತಹ ವಿಶೇಷ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಜಾಯಿನ್ ಆಗಿ.

Pradhan Mantri Suryoday Yojana 2024

ಇದನ್ನೂ ಓದಿ: Pension Schemes New Rules : ಇನ್ಮುಂದೆ ವಾರ್ಷಿಕ 32,000 ರೂಪಾಯಿ ಆದಾಯ ಇರುವವರಿಗಷ್ಟೇ ವೃದ್ಧಾಪ್ಯ ವೇತನ , ವಿಧವಾ ವೇತನ ಸಿಗಲಿದೆ | ಸರಕಾರದ ಹೊಸ ರೂಲ್ಸ್

WhatsApp Group Join Now
Telegram Group Join Now

Related Posts

error: Content is protected !!