ಸರಕಾರಿ ಯೋಜನೆ

ಖಾಸಗಿ ವಾಹನ ಚಾಲಕರು, ನಿರ್ವಾಹಕರು, ಕ್ಲೀನರ್‌ಗಳಿಗೆ ಸಿಗಲಿದೆ ₹5 ಲಕ್ಷ ವಿಮಾ ಪರಿಹಾರ | Private Commercial Transport Workers Accident Compensation Scheme

WhatsApp Group Join Now
Telegram Group Join Now

ಖಾಸಗಿ ವಾಣಿಜ್ಯ ಸಾರಿಗೆಗಳಾದ ಲಾರಿ, ಟೆಂಪೋ, ಟ್ಯಾಂಕರ್, ಗೂಡ್ಸ್ ವಾಹನದಂತಹ ಸರಕು ಸಾಗಾಣಿಕೆಯ ವಾಹನಗಳ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‌ಗಳು ಈ ಯೋಜನೆಯ ₹5 ಲಕ್ಷ ವಿಮಾ ಪರಿಹಾರ ಪ್ರಯೋಜನ ಪಡೆಯಬಹುದು. ಅರ್ಜಿ ಸಲ್ಲಿಕೆ ಹೇಗೆ? ಮಾನದಂಡಗಳೇನು? ಇತ್ಯಾದಿ ಮಾಹಿತಿ ಇಲ್ಲಿದೆ…

ಅಪಘಾತ ಸಂತ್ರಸ್ತ ಕುಟುಂಬಗಳ ಆಸರೆಗೆಂದೇ ಅನೇಕ ವಿಮಾ ಸೌಲಭ್ಯಗಳಿವೆ. ಬಹುತೇಕ ಯೋಜನೆಗಳ ಪ್ರಯೋಜನ ಪಡೆಯಲು ಹಂತಹಂತವಾಗಿ ಹಣ ಸಂದಾಯ ಮಾಡಬೇಕು. ಆದರೆ ಸರ್ಕಾರದ ಕೆಲವು ಯೋಜನೆಗಳು ಯಾವುದೇ ಕಂತು ಪಾವತಿಸದೇ ಒಂದಾವರ್ತಿ ಸಮರ್ಪಕ ದಾಖಲೆಯೊಂದೆಗೆ ಅರ್ಜಿ ಸಲ್ಲಿಸಿದರೆ ಸಾಕು; ಲಕ್ಷಾಂತರ ರೂಪಾಯಿ ವಿಮಾ ಪರಿಹಾರ ಪಡೆಯಬಹುದು.

ಇಂತಹ ಮಹತ್ವದ ಯೋಜನೆಗಳಲ್ಲಿ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಪ್ರಮುಖವಾದದ್ದು. ಈ ಯೋಜನೆಯನ್ನು ರಾಜ್ಯ ಸರ್ಕಾರವು ಕಾರ್ಮಿಕ ಇಲಾಖೆಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೆ ತಂದಿದೆ.

ಖಾಸಗಿ ವಾಣಿಜ್ಯ ಸಾರಿಗೆಗಳಾದ ಲಾರಿ, ಟೆಂಪೋ, ಟ್ಯಾಂಕರ್, ಗೂಡ್ಸ್ ವಾಹನದಂತಹ ಸರಕು ಸಾಗಾಣಿಕೆಯ ವಾಹನಗಳ ಚಾಲಕರು, ನಿರ್ವಾಹಕರು ಮತ್ತು ಕ್ಲೀನರ್‌ಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಗಮನಾರ್ಹವೆಂದರೆ ಈ ಯೋಜನೆಯು ಅಪಘಾತ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸುವುದರ ಜೊತೆಗೆ ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕೂ ಧನಸಹಾಯ ಒದಗಿಸುತ್ತದೆ.

ಇದನ್ನೂ ಓದಿ: ಸಣ್ಣ ವ್ಯಾಪಾರಕ್ಕೆ 10 ಲಕ್ಷ ರೂಪಾಯಿ ಧನ ಸಹಾಯ : ಇಲ್ಲಿ ಅರ್ಜಿ ಸಲ್ಲಿಸಿ

ಯೋಜನೆಯ ವಿಶೇಷತೆ

20 ರಿಂದ 70 ವಯೋಮಿತಿ ಒಳಗಿನ ಕರ್ನಾಟಕ ರಾಜ್ಯದ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳಿಗೆ ಅನ್ವಯಿಸುತ್ತದೆ. ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತವೆ.

ಚಾಲಕರು, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಊರ್ಜಿತ ಚಾಲನಾ ಪರವಾನಗಿಯನ್ನು ಹೊಂದಿರಬೇಕು. ಚಾಲಕರು ಮಂಡಳಿಯಲ್ಲಿ ಯೋಜನೆಯಡಿ ಪ್ರತ್ಯೇಕವಾಗಿ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ.

ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮಂಡಳಿಯ ನಿಯಮಾನುಸಾರ ಅಧಿಸೂಚಿಸಲ್ಪಟ್ಟ ಆಯಾ ಜಿಲ್ಲೆಯ ನೋಂದಣಿ ಅಧಿಕಾರಿಗಳಿಂದ ಯೋಜನೆಯಡಿ ಫಲಾನುಭವಿಯಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

ಇದನ್ನೂ ಓದಿ: 2023ನೇ ಸಾಲಿನ ವಾಯುಪಡೆ ಅಗ್ನಿವೀರರ ನೇಮಕಕ್ಕೆ PUC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ: ₹40,000 ಸಂಬಳ

ಯೋಜನೆಯ ಸೌಲಭ್ಯಗಳು

ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‌ಗಳು ಮರಣ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ರೂ.5 ಲಕ್ಷ ಪರಿಹಾರ ಲಭ್ಯವಾಗುತ್ತದೆ. ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ಗರಿಷ್ಠ ರೂ.2 ಲಕ್ಷದ ವರೆಗೆ ಪರಿಹಾರ ಸಿಗುತ್ತದೆ.

ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ:

-ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಠ ರೂ. 50,000/- ರವರೆಗೆ; ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೊ ಅದನ್ನು ಪಾವತಿಸಲಾಗುವುದು.

-15 ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ, ಗರಿಷ್ಠ ರೂ. 1 ಲಕ್ಷದ ವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೊ ಅದನ್ನು ಪಾವತಿಸಲಾಗುವುದು.

ಇದನ್ನೂ ಓದಿ: ಇನ್ಮುಂದೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ಸೌಲಭ್ಯಗಳು ಕಟ್

ಬೇಕಾಗುವ ದಾಖಲಾತಿಗಳು

  • ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಣಿಯನ್ನು ಮಾಡಬಹುದು ಮತ್ತು ನೋಂದಾಯಿತರು ಸೌಲಭ್ಯವನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
  • ನೋಂದಾವಣೆಗೆ ಇತ್ತೀಚಿನ 2 ಭಾವಚಿತ್ರ ಮತ್ತು 1 ಸ್ಟ್ಯಾಂಪ್ ಸೈಜ್ ಫೋಟೊ
  • ವಿಳಾಸದ ಪುರಾವೆ (ಆಧಾರ್ ಪ್ರತಿ ಅಥವಾ ಮತದಾರರ ಚೀಟಿ)
  • ವಯಸ್ಸಿನ ದೃಢೀಕರಣ ಪತ್ರ (ಆಧಾರ್ ಕಾರ್ಡ್ ಪ್ರತಿ/ ಎಸ್ಸೆಸೆಲ್ಸಿ ಅಂಕಪಟ್ಟಿ/ ಪಾನ್ ಕಾರ್ಡ್ ಪಾಸ್‌ಪೋರ್ಟ್ / ವಾಹನ ಚಾಲನಾ ಪರವಾನಗಿ ಇತ್ಯಾದಿ)
  • ಬ್ಯಾಂಕ್ ಖಾತೆಯ ಝರಾಕ್ಸ್ ಪ್ರತಿ
  • ನಿಗದಿಪಡಿಸಿದ ಉದ್ಯೋಗ ಪ್ರಮಾಣ ಪತ್ರ
  • ಲಭ್ಯವಿದ್ದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಾಲೀಕರಿಂದ ನೀಡಲಾಗಿರುವ
  • ಸಂಸ್ಥೆಯ ಗುರುತು ಚೀಟಿ
  • ಸಾರಿಗೆ ಇಲಾಖೆಯಿಂದ ಪಡೆದ ನಿರ್ವಾಹಕರ ಊರ್ಜಿತ ಪರವಾನಿಗೆ (ನಿರ್ವಾಹಕರಿಗೆ ಮಾತ್ರ)

ಇದನ್ನೂ ಓದಿ: ₹50,000 ವಿಶೇಷ ಪ್ರೊತ್ಸಾಹಧನಕ್ಕೆ D.Ed, B.Ed ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಕ್ಲೇಮ್ ಅರ್ಜಿ ಸಲ್ಲಿಸುವ ವಿಧಾನ

ಪರಿಹಾರ ಮೊತ್ತವನ್ನು ಪಡೆಯಲು ಅಪಘಾತ ಸಂಭವಿಸಿದ ಆರು ತಿಂಗಳ ಒಳಗೆ ಮಂಡಳಿಗೆ ಫಲಾನುಭವಿ / ನಾಮನಿರ್ದೇಶಿತರು ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.

ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ, ಫಲಾನುಭವಿಯ ನಾಮ ನಿರ್ದೇಶಿತರು ಕ್ಲೇಮ್ ಅರ್ಜಿಯ ಜೊತೆಗೆ ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ, ಪ್ರಥಮ ಮಾಹಿತಿ ವರದಿ (FIR) ಮತ್ತು ಊರ್ಜಿತ ಚಾಲನಾ ಪರವಾನಗಿಯನ್ನು ಲಗತ್ತಿಸಿ ಸಲ್ಲಿಸಬೇಕು.

ಅಪಘಾತದಿಂದ ದುರ್ಬಲತೆ ಉಂಟಾದಲ್ಲಿ ಕ್ಲೇಮ್ ಅರ್ಜಿಯ ಜೊತೆಗೆ ಊರ್ಜಿತ ಚಾಲನಾ ಪರವಾನಗಿ / ಬ್ಯಾಡ್ಜ್, ಪ್ರಥಮ ಮಾಹಿತಿ ವರದಿ (FIR) ಮತ್ತು ಒಳರೋಗಿ ಆಸ್ಪತ್ರೆ ವೆಚ್ಚ ಹಿಂಪಡೆಯಲು ವೈದ್ಯಕೀಯ ಪ್ರಮಾಣ ಪತ್ರ / ಬಿಲ್‌ಗಳ ಮೂಲ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

ಸ್ವೀಕರಿಸಿದ ಕ್ಲೇಮ್ ಅರ್ಜಿಯ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿದ್ದಲ್ಲಿ, ಪರಿಹಾರದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

ಇದನ್ನೂ ಓದಿ: SSLC, PUC ಪಾಸಾದವರಿಗೆ ಐಸಿಐಸಿಐ ಬ್ಯಾಂಕ್‌ನಲ್ಲಿ 4,000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಶೈಕ್ಷಣಿಕ ಧನಸಹಾಯ

ಅಪಘಾತದಿಂದ ಮರಣ ಹೊಂದಿದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ, 1ನೇ ತರಗತಿಯಿಂದ 12ನೇ ತರಗತಿಯ ವರೆಗೆ ವಾರ್ಷಿಕ ತಲಾ ರೂ.10,000/-ಗಳ ಶೈಕ್ಷಣಿಕ ಧನ ಸಹಾಯ ನೀಡಲಾಗುವುದು. ಶೈಕ್ಷಣಿಕ ಧನ ಸಹಾಯದ ಕ್ಲೇಮ್ ಅರ್ಜಿಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ಅಥವಾ ನೇರವಾಗಿ ಮಂಡಳಿಗೆ ಸಲ್ಲಿಸಬಹುದು. ಸದರಿ ಅರ್ಜಿಗಳನ್ನು ಪರಿಶೀಲಿಸಿ, ಧನ ಸಹಾಯದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ: ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರ ಕಛೇರಿಗಳು ಹಾಗೂ ಕಾರ್ಮಿಕ ಇಲಾಖೆಯ ಎಲ್ಲಾ ಉಪ ಕಾರ್ಮಿಕ ಆಯುಕ್ತರು, ಸಹಾಯಕ ಕಾರ್ಮಿಕ ಆಯುಕ್ತರು, ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಾರ್ಮಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಕಾರ್ಮಿಕ ಇಲಾಖೆಯ ಉಚಿತ ಸಹಾಯವಾಣಿ ಸಂಖ್ಯೆ : 155214 

ಸಂಪರ್ಕಿಸಬಹುದಾದ ವಿಳಾಸ: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಕಛೇರಿ, ಕಲ್ಯಾಣ ಸುರಕ್ಷಾ ಭವನ, ಡೈರಿ ವೃತ್ತ, ಬನ್ನೇರುಘಟ್ಟ ರಸ್ತೆ ಬೆಂಗಳೂರು-569 029, ವೆಬ್‌ಸೈಟ್: ksuwssb.karnataka.gov.in

ಪೂರಕ ಮಾಹಿತಿ: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ

ಇದನ್ನೂ ಓದಿ: ಕೇಂದ್ರ ಸರಕಾರದ ಈ ಯೋಜನೆಯಲ್ಲಿ ಸಿಗಲಿದೆ 25 ವರ್ಷ ನಿರಂತರ ಉಚಿತ ವಿದ್ಯುತ್

WhatsApp Group Join Now
Telegram Group Join Now

Related Posts

error: Content is protected !!