ಉದ್ಯೋಗ

10ನೇ ತರಗತಿ ಪಾಸಾದವರಿಗೆ ಚಾಲಕ ಮತ್ತು ಜವಾನ ಹುದ್ದೆಗಳ ನೇಮಕಾತಿ | ಸಂಬಳ ₹52,650 | Raichur district court recruitment 2023

WhatsApp Group Join Now
Telegram Group Join Now

10ನೇ ತರಗತಿ ಪಾಸಾದವರಿಗೆ ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಧೀನದ ವಿವಿಧ ನ್ಯಾಯಾಲಯಗಳಲ್ಲಿ ಅನೇಕ ಜವಾನ, ಚಾಲಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ…

Raichur district court recruitment 2023 ಸಂಕ್ಷಿಪ್ತ ವಿವರ

 • ನೇಮಕಾತಿ ಸಂಸ್ಥೆ : ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
 • ಹುದ್ದೆಗಳ ಹೆಸರು : ಅನೇಕ ಹುದ್ದೆಗಳು
 • ಒಟ್ಟು ಖಾಲಿ ಹುದ್ದೆಗಳು : 27
 • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
 • ಉದ್ಯೋಗ ಸ್ಥಳ : ರಾಯಚೂರು ಜಿಲ್ಲೆ

ಇದನ್ನೂ ಓದಿ: ಜನವರಿಯಿಂದ ಪದವೀಧರರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? | Karnataka Yuva Nidhi Scheme

Raichur district court recruitment 2023 : ರಾಯಚೂರು ಜಿಲ್ಲೆಯ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಜಾಲತಾಣ, ಅಧಿಕೃತ ಅಧಿಸೂಚನೆ, ವೇತನ ಮತ್ತು ವಯೋಮಿತಿಗಳ ವಿವರ, ಪ್ರಮುಖ ದಿನಾಂಕಗಳು, ಸಹಾಯವಾಣಿ ಮತ್ತು ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

ಹುದ್ದೆಗಳ ಸಂಪೂರ್ಣ ವಿವರ 

 1. ಶೀಘ್ರ ಲಿಪಿಗಾರರು (Stenographer) – 01
 2. ಬೆರಳಚ್ಚುಗಾರರು (Typist) – 5+3
 3. ಬೆರಳಚ್ಚು ನಕಲುಗಾರರು (Typist – Copyist) – 01
 4. ಆದೇಶ ಜಾರಿಕಾರರು (Process server) – 05
 5. ಚಾಲಕ (Driver) – 01
 6. ಜವಾನ (Peon) – 10

ಇದನ್ನೂ ಓದಿ: SSLC ಪಾಸಾದರಿಂದ ರಕ್ಷಣಾ ವಿಭಾಗದ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 25 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಮಹಿಳೆಯರಿಗೂ ಅವಕಾಶ | SSC GD Constable recruitment 2023

ವಿದ್ಯಾರ್ಹತೆ ಏನು? ((Educational Qualification) : Raichur district court job recruitment 2023 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನಂತೆ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ.

 • ಶೀಘ್ರ ಲಿಪಿಗಾರರು : ದ್ವಿತೀಯ ಪಿಯುಸಿ (PUC) ಜೊತೆಗೆ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಶೀಘ್ರಲಿಪಿಯಲ್ಲಿ ಹಿರಿಯ ದರ್ಜೆ ಮತ್ತು ಬೆರಳಚ್ಚು ಹಿರಿಯ ದರ್ಜೆ (Senior grade) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸಾಗಿರಬೇಕು.
 • ಬೆರಳಚ್ಚುಗಾರರು : ಪಿಯುಸಿ (PUC) ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಪಾಸಾಗಿರಬೇಕು.
 • ಬೆರಳಚ್ಚು ನಕಲುಗಾರರು : ಪಿಯುಸಿ (PUC) ಜೊತೆಗೆ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (Senior grade) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
 • ಆದೇಶ ಜಾರಿಕಾರರು : ಎಸ್‌ಎಸ್‌ಎಲ್‌ಸಿ (SSLC) ಪಾಸಾಗಿರಬೇಕು.
 • ಜವಾನ ಮತ್ತು ಚಾಲಕರು : ಎಸ್‌ಎಸ್‌ಎಲ್‌ಸಿ (SSLC) ಪಾಸಾಗಿರಬೇಕು. ಚಾಲಕ ವೃತ್ತಿಗೆ ವಾಹನಾ ಚಾಲನಾ ಪರವಾನಗಿ ಹೊಂದಿರಬೇಕು.

ಇದನ್ನೂ ಓದಿ: SBI ಮತ್ತೊಂದು 5,447 ಹುದ್ದೆಗಳ ಬೃಹತ್ ನೇಮಕಾತಿ | ರಾಜ್ಯಕ್ಕೆ 387 ಹುದ್ದೆಗಳ ಮೀಸಲಾತಿ | SBI CBO Recruitment 2023

ನೇಮಕಾತಿ ವಿಧಾನ ಹೇಗೆ? (Selection Procedure) : Raichur district court recruitment 2023 ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಬೆರಳಚ್ಚು ನಕಲುಗಾರರು ಹುದ್ದೆಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಉಕ್ತಲೇಖನವನ್ನು ಕೊಟ್ಟು ಬೆರಳಚ್ಚು ಯಂತ್ರ/ಕ೦ಪ್ಯೂಟರ್‌ನಲ್ಲಿ ಬೆರಳಚ್ಚು ಮಾಡಿಸಿ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಇನ್ನು ಆದೇಶ ಜಾರಿಕಾರರು, ಚಾಲಕ ಮತ್ತು ಜವಾನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳ 10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಸಂದರ್ಶನ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.

ಮಾಸಿಕ ಸಂಬಳವೆಷ್ಟು? (monthly salary?) : Raichur district court recruitment 2023 ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸಂಬಳ ಹುದ್ದೆಗಳ ಅನುಗುಣವಾಗಿ ಈ ಕೆಳಗಿನಂತೆ ಇರುತ್ತದೆ :

 • ಶೀಘ್ರ ಲಿಪಿಗಾರರು : ₹27,650 ರಿಂದ ₹52,650ರ ವರೆಗೆ
 • ಆದೇಶ ಜಾರಿಕಾರರು : ₹19950 ರಿಂದ ₹37900ರ ವರೆಗೆ
 • ಬೆರಳಚ್ಚುಗಾರರು : ₹21,400 ರಿಂದ ₹42,000ರ ವರೆಗೆ
 • ಬೆರಳಚ್ಚು ನಕಲುಗಾರರು : ₹21,400 ರಿಂದ ₹42,000ರ ವರೆಗೆ
 • ಚಾಲಕ : 21,400 ರಿಂದ ₹42,000ರ ವರೆಗೆ
 • ಜವಾನ : ₹17,000 ರಿಂದ ₹28,950ರ ವರೆಗೆ

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ವಯೋಮಿತಿ ಎಷ್ಟಿರಬೇಕು? (Age limit?) : ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಶುಲ್ಕ ಎಷ್ಟು? (application fee) : Raichur district court recruitment 2023 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ ₹200 ನಿಗದಿಪಡಿಸಲಾಗಿದೆ. ಇನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಪ್ರವರ್ಗ 1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: Service Security for Gram Panchayat staff : ಗ್ರಾಮ ಪಂಚಾಯತಿ ಜವಾನರು, ಸ್ವಚ್ಛತಾಗಾರರು, ಕರವಸೂಲಿಗಾರರು, ನೀರುಗಂಟಿಗಳಿಗೆ ರಾಜ್ಯ ಸರಕಾರದ ಬಂಪರ್ ಗಿಫ್ಟ್ | ಇನ್ಮುಂದೆ ಸಂಬಳಕ್ಕಿಲ್ಲ ಪರದಾಟ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

 • ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 22-11-2023
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-12-2023
 • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 11-12-2023

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ಲಿಂಕುಗಳು

 • ಅಧಿಸೂಚನೆ 1 : Download
 • ಅಧಿಸೂಚನೆ 1 : Download
 • ಅಧಿಕೃತ ಜಾಲತಾಣ : Click here
 • ಸಹಾಯವಾಣಿ : 08532-228476

PUC ಮುಗಿಸಿದವರಿಗೆ ಗ್ರಾಮ ಪಂಚಾಯತ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು | 5,980 ಹುದ್ದೆಗಳು Gram Panchayat Data Entry Operator Recruitment 2023

WhatsApp Group Join Now
Telegram Group Join Now

Related Posts

error: Content is protected !!