ಉದ್ಯೋಗ

Northern railway recruitment 2023 : ಉತ್ತರ ರೈಲ್ವೆಯಲ್ಲಿ SSLC ಮುಗಿಸಿದವರಿಗೆ 3093 ಹುದ್ದೆಗಳ ನೇರ ನೇಮಕಾತಿ | ಯಾವುದೇ ಪರೀಕ್ಷೆ ಇರುವುದಿಲ್ಲ |

WhatsApp Group Join Now
Telegram Group Join Now

ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಉತ್ತರ ರೈಲ್ವೆ ಇಲಾಖೆಯಲ್ಲಿ 10ನೇ ತರಗತಿ ಪಾಸಾದವರಿಗೆ, ಯಾವುದೇ ಪರೀಕ್ಷೆ ಇಲ್ಲದೆ 3,093 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ..

Northern railway recruitment 2023 : ಭಾರತ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ಅಡಿಯಲ್ಲಿ ಬರುವ ಉತ್ತರ ರೈಲ್ವೆ ವಿಭಾಗದಲ್ಲಿ 3093 ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಜಾಲತಾಣ, ಅಧಿಕೃತ ಅಧಿಸೂಚನೆ, ವೇತನ ಮತ್ತು ವಯೋಮಿತಿಗಳ ವಿವರ, ಪ್ರಮುಖ ದಿನಾಂಕಗಳು, ಸಹಾಯವಾಣಿ ಮತ್ತು ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ…

Northern railway recruitment 2023  ಸಂಕ್ಷಿಪ್ತ ವಿವರ:

  • ನೇಮಕಾತಿ ಪ್ರಾಧಿಕಾರ : ಉತ್ತರ ರೈಲ್ವೆ, ಆರ್‌ಆರ್‌ಸಿ
  • ಹುದ್ದೆಗಳ ಹೆಸರು : ಅಪ್ರೆಂಟಿಸ್ ಹುದ್ದೆ
  • ಒಟ್ಟು ಖಾಲಿ ಹುದ್ದೆಗಳು : 3093
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ

ಇದನ್ನೂ ಓದಿ: SSLC ಪಾಸಾದರಿಂದ ರಕ್ಷಣಾ ವಿಭಾಗದ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 25 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ | ಮಹಿಳೆಯರಿಗೂ ಅವಕಾಶ | SSC GD Constable recruitment 2023

ವಿದ್ಯಾರ್ಹತೆ ಏನು?
Northern railway recruitment 2023 ಉತ್ತರ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿಯಲ್ಲಿ 50% ನೊಂದಿಗೆ ಪಾಸಾಗಿ ITI ಕೋರ್ಸ್ ಮುಗಿಸಿರಬೇಕು.

ಆಯ್ಕೆ ವಿಧಾನ ಹೇಗಿರುತ್ತದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ 10ನೇ ತರಗತಿ ಮತ್ತು ITI ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ದಪಡಿಸಿ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಮಾಸಿಕ ಸಂಬಳವೆಷ್ಟು?
Northern railway recruitment 2023 ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಪೆಂಡ್ ರೀತಿಯಲ್ಲಿ 7,000 ರೂಪಾಯಿ ನೀಡಲಾಗುತ್ತದೆ. ಅಭ್ಯರ್ಥಿಗಳಿಗೆ ಸ್ಟೈಪೆಂಡ್ ಜೊತೆಗೆ ತರಬೇತಿ ಕೂಡ ನೀಡಲಾಗುತ್ತದೆ.

ಇದನ್ನೂ ಓದಿ: District court Peon recruitment 2023 : SSLC ಪಾಸಾದವರಿಂದ ಜಿಲ್ಲಾ ನ್ಯಾಯಾಲಯದಲ್ಲಿ ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ | 41 ಹುದ್ದೆಗಳು

ವಯೋಮಿತಿ ಎಷ್ಟಿರಬೇಕು?
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ನಿಗದಿಪಡಿಸಿದ ದಿನಾಂಕಕ್ಕೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು. ಮೀಸಲಾತಿ ಬಯಸುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ OBC ಅಭ್ಯರ್ಥಿಗಳಿಗೆ 3 ವರ್ಷ SC / ST ಅಭ್ಯರ್ಥಿಗಳಿಗೆ 5 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಶುಲ್ಕ ಎಷ್ಟು?
ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 100 ರೂಪಾಯಿ ನಿಗದಿಪಡಿಸಲಾಗಿದೆ. SC / ST, ವಿಶೇಷ ಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 11-12-2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-01-2024

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ಲಿಂಕುಗಳು

  • ಅಧಿಸೂಚನೆ : Download
  • ಅಧಿಕೃತ ಜಾಲತಾಣ : Click here
  • ಸಹಾಯವಾಣಿ : 9560268721, 9560268722

Northern railway recruitment 2023

————————–

PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

PhonePe Loan : ಡಿಜಿಟಲ್ ಪಾವತಿಯಲ್ಲಿ ಗ್ರಾಹಕರ ನಂಬಿಕೆಗೆ ಹೆಸರಾಗಿರುವ ಫೋನ್ ಪೇ ತನ್ನ ಎಲ್ಲಾ ಅರ್ಹ ಗ್ರಾಹಕರಿಗೂ ಸಾಲ ಸೌಲಭ್ಯ ನೀಡಲು ಮುಂದಾಗುತ್ತಿದೆ. ಸರಿ ಸುಮಾರು 50 ಕೋಟಿಗೆ ಹೆಚ್ಚು ಬಳಕೆದಾರರು ಮತ್ತು 3.7 ಕೋಟಿ ಗ್ರಾಹಕರನ್ನು ಹೊಂದಿರುವ ಫೋನ್ ಪೇ ಪ್ಲಾಟ್ ಫಾರ್ಮ್’ನಲ್ಲಿ ಬಳಕೆದಾರರಿಗೆ ಕಡಿಮೆ ಅವಧಿಯಲ್ಲಿ ಸಾಲ ಸೌಲಭ್ಯ ಸಿಗಲು ಅನುಕೂಲವಾಗುವಂತೆ ಸಾಲ ನೀಡಲು, ಫೋನ್ ಪೇ ಸಾಲ ಸೌಲಭ್ಯ (PhonePe loan service) ಆರಂಭಿಸುತ್ತಿದೆ. ಇದರ ಅನ್ವಯ ಈಗಾಗಲೇ ಬ್ಯಾಂಕ್‌ಗಳು ಮತ್ತು ಬ್ಯಾಂಕಿ೦ಗ್ ಅಲ್ಲದ ಹಣಕಾಸು ಕಂಪನಿಗಳೊ೦ದಿಗೆ NFBC (Non Banking Financial Company)) ಮಾತುಕತೆ ಮಾಡಿಕೊಂಡಿದೆ.

ಇದನ್ನೂ ಓದಿ: ಜನವರಿಯಿಂದ ಪದವೀಧರರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ಸಹಾಯಧನ | ಅರ್ಜಿ ಸಲ್ಲಿಕೆ ಹೇಗೆ? | Karnataka Yuva Nidhi Scheme

ಈ ಸೌಲಭ್ಯ ಯಾವಾಗಿನಿಂದ ಆರಂಭವಾಗಲಿದೆ? : Phonepe loan service ಸುಮಾರು 6 ತಿಂಗಳಿನಲ್ಲಿ ಸಾಲ ಸೌಲಭ್ಯದ ಜೊತೆಗೆ ಇನ್ನು ಹಲವಾರು ಉತ್ಪನ್ನಗಳೊಂದಿಗೆ ಜನರಿಗೆ ಅನುಕೂಲವಾಗುವಂತೆ ಅನೇಕ ಪ್ರಾಡಕ್ಟ್ಗಳನ್ನು ಸಿದ್ಧ ಮಾಡುತ್ತಿದೆ. ಸದ್ಯ ಫೋನ್ ಪೇ ಕಂಪನಿಯವರು ತಮ್ಮಲ್ಲಿರುವ ಡೇಟಾಬೇಸ್’ನಿಂದ ಸಾಲ ಸೌಲಭ್ಯಕ್ಕೆ ಅರ್ಹರಿರುವ ಗ್ರಾಹಕರನ್ನು ಹುಡುಕುತ್ತಿದೆ. ಈ ಅರ್ಹ ಗ್ರಾಹಕರಿಗೆ ಮೊಬೈಲ್’ನಲ್ಲಿಯೆ ಸಾಲ ಸೌಲಭ್ಯದ ಜೊತೆಗೆ ಇನ್ನು ಹಲವಾರು ಪ್ರಾಡಕ್ಟ್’ಗಳನ್ನು ನೀಡಲು ಮುಂದಾಗಿದೆ.

ಸಾಲ ಸೌಲಭ್ಯಕ್ಕೆ ಯಾರು ಅರ್ಹರು? : ಒಬ್ಬ ವ್ಯಕ್ತಿ ಯಾವುದೇ ಸಾಲ ಸೌಲಭ್ಯ ಪಡೆಯಲು ಅವನ ಅಥವಾ ಅವಳ ಸಿಬಿಲ್ ಸ್ಕೋರ್ (Cibil score) 750ರ ಮೇಲಿರಬೇಕು. ಹೀಗೆ ಉತ್ತಮ ಸ್ಕೋರ್ ಹೊಂದಿರುವ ಯಾರು ಬೇಕಾದರು ಸರಳವಾಗಿ ಸಾಲ ಸೌಲಭ್ಯ ಪಡೆಯಬಹುದಾಗಿದೆ. ನಿಮ್ಮ ವೈಯಕ್ತಿಕ ಸಿಬಿಲ್ ಸ್ಕೋರನ್ನು ಪರೀಕ್ಷಿಸಲು ಹತ್ತಿರದ ಕಂಪ್ಯೂಟರ್ ಸೇವಾ ಕೇಂದ್ರಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ನೀಡಿ ಚೆಕ್ ಮಾಡಿಸಿಕೊಳ್ಳಬಹುದು.

ಇದನ್ನೂ ಓದಿ: Udyogini loan Scheme 2023 : ಮಹಿಳೆಯರು 3 ಲಕ್ಷ ರೂಪಾಯಿ ಬಡ್ಡಿ ಇಲ್ಲದ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಸಮಗ್ರ ಮಾಹಿತಿ

ಗೂಗಲ್ ಪೇ ಸಾಲ ಸೌಲಭ್ಯ (Google pay loan) : ಇದೆ ರೀತಿ ಈಗಾಗಲೇ ಗೂಗಲ್ ಪೇ ಸಾಲ ಸೌಲಭ್ಯವನ್ನು ಆರಂಭಿಸಿದ್ದು, ಸಣ್ಣ ವ್ಯಾಪಾರಿಗಳಿಗೆ ತಕ್ಷಣವೇ 15,000 ರೂಪಾಯಿ ವರೆಗೂ ಸಾಲವನ್ನು ಪಡೆಯಲು ವ್ಯವಸ್ಥೆ ಮಾಡಿದೆ. 15,000 ರೂಪಾಯಿ ಸಾಲ ಪಡೆದ ಮೇಲೆ ಅದನ್ನು ₹111ಕ್ಕಿಂತ ಕಡಿಮೆ ಮರುಪಾವತಿ ಮಾಡಬಹುದು. ಗೂಗಲ್ ಪೇ ಈ ಸಾಲ ಸೌಲಭ್ಯವನ್ನು ಒದಗಿಸಲು ಟೆಕ್ ದೈತ್ಯ (Tech giant) DMI Financeನೊಂದಿಗೆ ಪಾಲುದಾರಿಕೆ ಹೊಂದಿದೆ. ಹಲವಾರು ವ್ಯಾಪಾರಿಗಳಿಗೆ ಕಾರ್ಯನಿರತ ಬಂಡವಾಳದ ಅವಶ್ಯಕತೆಯನ್ನು ಪೂರೈಸಲು epaylater ಸಹಭಾಗಿತ್ವದಲ್ಲಿ ಗೂಗಲ್ ಪೇ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುತ್ತಿದೆ.

ಬ್ಯಾಂಕುಗಳಲ್ಲಿ ಸಾಲ ಪಡೆಯಲು ಹೋದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಜನರಿಗೆ ತುರ್ತು ಸಮಯದಲ್ಲಿ ಸಾಲ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ಈ ಡಿಜಿಟಲ್ ಸಾಲ ಸೌಲಭ್ಯಗಳು ಅನೇಕ ಜನರಿಗೆ ಬಹಳ ಉಪಯುಕ್ತವಾಗಿದ್ದು, ತುರ್ತು ಸಮಯದಲ್ಲಿ ತಮ್ಮ ಮೊಬೈಲ್’ನಲ್ಲಿಯೇ ಕಡಿಮೆ ಅವಧಿಯಲ್ಲಿ ಸರಳ ಸಾಲ ಪಡೆಯಲು ಉಪಕಾರಿಯಾಗಿದೆ. ಫೋನ್ ಪೇ ಸಾಲ ಸೌಲಭ್ಯ ಆರಂಭವಾದ ಮೇಲೆ ಅದರ ವಹಿವಾಟು ವಿವರಗಳು ಮತ್ತಷ್ಟು ತಿಳಿಯಲಿವೆ.

ಇದನ್ನೂ ಓದಿ: 10ನೇ ತರಗತಿ ಪಾಸಾದವರಿಗೆ ಚಾಲಕ ಮತ್ತು ಜವಾನ ಹುದ್ದೆಗಳ ನೇಮಕಾತಿ | ಸಂಬಳ ₹52,650 | Raichur district court recruitment 2023

Karnataka State Police Recruitment : 4,547 ಕಾನ್‌ಸ್ಟೇಬಲ್ ಮತ್ತು ಪಿಎಸ್‌ಐ ಹುದ್ದೆಗಳಿಗೆ ಪಿಯುಸಿ, ಪದವಿಧರರ ನೇಮಕ | ರಾಜ್ಯ ಪೊಲೀಸ್ ಇಲಾಖೆಯಲ್ಲಿ 17,828 ಹುದ್ದೆಗಳು ಖಾಲಿ

WhatsApp Group Join Now
Telegram Group Join Now

Related Posts

error: Content is protected !!