ವಿದ್ಯಾರ್ಥಿವೇತನ

ರೈತ ಮಕ್ಕಳೇ ಅರ್ಜಿ ಸಲ್ಲಿಸಿ ₹2,500ದಿಂದ ₹11,000 ವಿದ್ಯಾರ್ಥಿವೇತನ ಪಡೆಯಿರಿ: ಬ್ಯಾಂಕ್ ಖಾತೆಗೆ ನೇರ ಹಣ ಜಮಾ | Raitha Vidyanidhi Scholarship

WhatsApp Group Join Now
Telegram Group Join Now

ವಿದ್ಯಾನಿಧಿ ವಿದ್ಯಾರ್ಥಿವೇತನ ಯೋಜನೆಯಲ್ಲಿ ಪಿಯುಸಿ, ಐಟಿಐ, ಪದವಿ, ಎಲ್‌ಎಲ್‌ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮಾ, ಎಂಬಿಬಿಎಸ್, ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವ ಕೃಷಿಕರು, ಕೃಷಿ ಕಾರ್ಮಿಕರು, ಮೀನುಗಾರರು, ನೇಕಾರರು ಹಾಗೂ ಆಟೋ-ಟ್ಯಾಕ್ಸಿ ಚಾಲಕರ ಮಕ್ಕಳಿಗೆ 2,500 ದಿಂದ 11,000 ಸಾವಿರ ರೂಪಾಯಿ ವರೆಗೆ ನೆರವು ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ, ವಿದ್ಯಾರ್ಥಿವೇತನ ಮೊತ್ತ ಇತ್ಯಾದಿ ಮಾಹಿತಿ ಇಲ್ಲಿದೆ…

ಮುಖ್ಯಮಂತ್ರಿ ರೈತ ವಿದ್ಯಾನಿಧಿ ವಿದ್ಯಾರ್ಥಿವೇತನ ಯೋಜನೆಯು ಆರಂಭದಲ್ಲಿ ರೈತ ಮಕ್ಕಳಿಗಾಗಿಯೇ ರಾಜ್ಯ ಸರಕಾರ ಅನುಷ್ಠಾನಗೊಳಿಸಿದ ವಿಶೇಷ ವಿದ್ಯಾರ್ಥಿ ವೇತನ ಯೋಜನೆಯಾಗಿದೆ. ಇದನ್ನು ಕ್ರಮೇಣ ರೈತ ಮಕ್ಕಳ ಜೊತೆಗೆ ಕೃಷಿ ಕಾರ್ಮಿಕರ ಮಕ್ಕಳು, ಮೀನುಗಾರರು, ನೇಕಾರರು ಹಾಗೂ ಆಟೋ-ಟ್ಯಾಕ್ಸಿ ಚಾಲಕರ ಮಕ್ಕಳಿಗೂ ವಿಸ್ತರಿಸಲಾಗಿದ್ದು, ಈ ವರ್ಗದ ಕುಟುಂಬಗಳ ಎಲ್ಲಾ ವಿದ್ಯಾರ್ಥಿಗಳು ವಿದ್ಯಾನಿಧಿ ಸ್ಕಾಲರಶೀಪ್ ಯೋಜನೆಯ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: ಗಂಗಾಕಲ್ಯಾಣ ಉಚಿತ ಬೋರ್‌ವೆಲ್ ಯೋಜನೆಗೆ ಯಾವೆಲ್ಲ ರೈತರು ಅರ್ಹರು? | ಬೇಕಾಗುವ ದಾಖಲೆಗಳೇನು? ಫಲಾನುಭವಿಗಳ ಆಯ್ಕೆ ಹೇಗೆ? | ಜಾತಿವಾರು ರೈತರ ಲೀಸ್ಟ್ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ

ವಿದ್ಯಾನಿಧಿ ವಿದ್ಯಾರ್ಥಿವೇತನ ಯೋಜನೆಯ ಅನ್ವಯ ಪ್ರೌಢಶಾಲೆ (ಹೆಣ್ಣುಮಕ್ಕಳಿಗೆ ಮಾತ್ರ), ಪಿಯುಸಿ, ಐಟಿಐ, ಪದವಿ, ಎಲ್‌ಎಲ್‌ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮಾ, ಎಂಬಿಬಿಎಸ್, ಇಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರು ಕೃಷಿಕರು, ಕೃಷಿ ಕಾರ್ಮಿಕರು, ಮೀನುಗಾರರು, ನೇಕಾರರು ಹಾಗೂ ಆಟೋ-ಟ್ಯಾಕ್ಸಿ ಚಾಲಕರ ಮಕ್ಕಳಿಗೆ 2,500 ದಿಂದ 11,000 ರೂಪಾಯಿ ವರೆಗೆ ನೆರವು ನೀಡಲಾಗುತ್ತದೆ.

ಸದರಿ ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆ (DBT) ಮೂಲಕ ವರ್ಗಾಯಿಸಲಾಗುತ್ತದೆ. ಇ-ಆಡಳಿತ ಇಲಾಖೆಯು ನಿರ್ವಹಿಸುತ್ತಿರುವ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಿಂದ ಕೃಷಿ ಇಲಾಖೆಗೆ ಅರ್ಹ ವಿದ್ಯಾರ್ಥಿಗಳ ದಾಖಲಾತಿಗಳನ್ನು ವಿದ್ಯಾರ್ಥಿ ವೇತನ ವರ್ಗಾವಣೆಗಾಗಿ ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಈಗಾಗಲೇ ಬೇರೆ ಯಾವುದೇ ವಿದ್ಯಾರ್ಥಿವೇತನ ಯೋಜನೆಯಿಂದ ಪ್ರಯೋಜನ ಪಡೆಯುತ್ತಿದ್ದರೂ ಸಹ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಇದನ್ನೂ ಓದಿ: ಕುರಿ ಮೇಕೆ ಸಾಕಣೆ ಸಹಾಯಧನಕ್ಕೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ | ಫೆಬ್ರವರಿ 24ರೊಳಗೆ ಅರ್ಜಿ ಸಲ್ಲಿಸಿ

ಅರ್ಹತೆಗಳೇನು?

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ತಂದೆ ವೃತ್ತಿಯಲ್ಲಿ ಕೃಷಿಕ, ಮೀನುಗಾರ, ನೇಕಾರ, ಕೃಷಿ ಕಾರ್ಮಿಕ ಹಾಗೂ ಆಟೋ, ಟ್ಯಾಕ್ಸಿ ಚಾಲಕರಾಗಿರಬೇಕು. ಅರ್ಜಿದಾರರು ಕೇಂದ್ರ ಅಥವಾ ರಾಜ್ಯ ಮಂಡಳಿಯಿಂದ ಮಾನ್ಯತೆ ಪಡೆದ ಶಾಲೆಯಿಂದ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಯಾವ ವ್ಯಾಸಂಗಕ್ಕೆ ಎಷ್ಟೆಷ್ಟು ವಿದ್ಯಾರ್ಥಿವೇತನ?

  • ಪ್ರೌಢ ಶಿಕ್ಷಣ (8 ರಿಂದ 10ನೇ ತರಗತಿ) ಓದುತ್ತಿರುವ ವಿದ್ಯಾರ್ಥಿನಿಯರು ಅಥವಾ ಅನ್ಯಲಿಂಗದವರಿಗೆ 2,000 ರೂಪಾಯಿ
  • ಪದವಿಯ ಮುಂಚೆ ಪಿಯುಸಿ/ ಐಟಿಐ/ ಡಿಪ್ಲೋಮ ಓದುತ್ತಿರುವ ವಿದ್ಯಾರ್ಥಿಗಳಿಗೆ 2,500 ರೂಪಾಯಿ, ವಿದ್ಯಾರ್ಥಿನಿಯರು/ ಅನ್ಯಲಿಂಗದವರಿಗೆ 3,000 ರೂಪಾಯಿ
  • ಎಲ್ಲಾ ಬಿಎ ಬಿಎಸ್ಸಿ ಬಿಕಾಂ ಇತ್ಯಾದಿ ಓದುತ್ತಿರುವ (ಎಂಬಿಬಿಎಸ್, ಬಿಇ/ಬಿ ಟೆಕ್ ಮತ್ತು ವೃತ್ತಿಪರ ಕೋರ್ಸ್‌ಗಳನ್ನು ಹೊರತುಪಡಿಸಿ) ವಿದ್ಯಾರ್ಥಿಗಳಿಗೆ 5,000 ರೂಪಾಯಿ, ವಿದ್ಯಾರ್ಥಿನಿಯರು / ಅನ್ಯಲಿಂಗದವರಿಗೆ 5,500 ರೂಪಾಯಿ
  • ಎಲ್‌ಎಲ್‌ಬಿ, ಪ್ಯಾರಾಮೆಡಿಕಲ್, ಬಿ ಫಾರ್, ನರ್ಸಿಂಗ್ ಇತ್ಯಾದಿ ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ (ಪುರುಷರು) 7,500 ರೂಪಾಯಿ, ವಿದ್ಯಾರ್ಥಿನಿಯರು /ಅನ್ಯಲಿಂಗದವರಿಗೆ 8,000 ರೂಪಾಯಿ
  • ಎಂಬಿಬಿಎಸ್, ಬಿಇ/ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ  10,000 ರೂಪಾಯಿ, ವಿದ್ಯಾರ್ಥಿನಿಯರು/ ಅನ್ಯಲಿಂಗದವರಿಗೆ 11,000 ರೂಪಾಯಿ

ಇದನ್ನೂ ಓದಿ: ಜಮೀನು ಒತ್ತುವರಿಯಾದರೆ ತಗಾದೆ ಇಲ್ಲದೇ ಹದ್ದುಬಸ್ತು ಮಾಡಿಕೊಳ್ಳುವುದು ಹೇಗೆ? ಇಲ್ಲಿದೆ ತಜ್ಞರ ಸರಳ ಸಲಹೆ

ಬೇಕಾಗುವ ದಾಖಲೆಗಳು

ಗುರುತಿನ ಆಧಾರ, ನಿವಾಸ ಪುರಾವೆ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಮೊಬೈಲ್ ನಂಬರ್, ಬ್ಯಾಂಕ್ ಪಾಸ್ ಬುಕ್ ನ ಫೋಟೊಕಾಪಿ, ರೈತ ಗುರುತಿನ ಚೀಟಿ, 10ನೇ ತರಗತಿ ಅಂಕಪಟ್ಟಿ, ವಯಸ್ಸಿನ ಪುರಾವೆ ಇತರ ಮಹತ್ವದ ದಾಖಲೆಗಳು ಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ರಾಜ್ಯ ವಿದ್ಯಾರ್ಥಿ ವೇತನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬೇಕು. ಹೋಂ ಪೇಜ್‌ನಲ್ಲಿ ಲಭ್ಯವಿರುವ ಖಾತೆಯನ್ನು ರಚಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್‌ನಲ್ಲಿರುವಂತೆ ಹೆಸರು ನಮೂದಿಸಿ, ಲಿಂಗವನ್ನು ಆಯ್ಕೆ ಮಾಡಿ, ಕ್ಯಾಪ್ಯಾ ಕೋಡ್ ಅನ್ನು ನಮೂದಿಸಿ ಅರ್ಜಿಯನ್ನು ಮುಂದುವರಿಸಬೇಕು. ಬಳಿಕ ನಿಮ್ಮ ಪಾಲಕ ಅಥವಾ ಪೋಷಕರ ಆಧಾರ್ ಸಂಖ್ಯೆಯನ್ನು ನಮೂದಿಸಿ. ಮೊಬೈಲ್ ನಂಬರ್ ಭರ್ತಿ ಮಾಡಿ ಮತ್ತು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ತದನಂತರ ಅದೇ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಲಭ್ಯವಾಗುತ್ತದೆ.

ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್‌ನೊಂದಿಗೆ ಅಧಿಕೃತ ವೆಬ್‌ಸೈಟ್‌ಗೆ ಲಾಗ್‌ಇನ್ ಮಾಡಿದರೆ, ವಿದ್ಯಾರ್ಥಿ ಖಾತೆಯ ಮುಖಪುಟಕ್ಕೆ ಪ್ರವೇಶ ಪಡೆಯುತ್ತೀರಿ. ಅಲ್ಲಿ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ವಿವರಗಳಾದ ಆಧಾರ್ ಸಂಖ್ಯೆ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಮತ್ತು NSP ID, FRUIT ID, KUTUMB IDಯನ್ನು ಭರ್ತಿ ಮಾಡಬೇಕಾಗುತ್ತದೆ. ಎಲ್ಲಾ ಅಗತ್ಯ ವಿವರಗಳನ್ನು ಪರಿಶೀಲಿಸಿದ ನಂತರ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಆನಂತರ ಸಲ್ಲಿಸಿದ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು, ಸ್ವೀಕೃತಿ ಚೀಟಿಯೊಂದಿಗೆ ಶಾಲೆಗೆ ಅಥವಾ ಕಾಲೇಜಿಗೆ ಸಲ್ಲಿಸಬೇಕು.

ರಾಜ್ಯ ವಿದ್ಯಾರ್ಥಿ ತಂತ್ರಾಂಶಕ್ಕೆ (ಎಸ್‌ಎಸ್‌ಪಿ ಪೋರ್ಟಲ್) ಭೇಟಿ ನೀಡಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ 

ಇದನ್ನೂ ಓದಿ:

ಕುರಿ ಮೇಕೆ ಸಾಕಣೆ ಸಹಾಯಧನಕ್ಕೆ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ | ಫೆಬ್ರವರಿ 24ರೊಳಗೆ ಅರ್ಜಿ ಸಲ್ಲಿಸಿ

ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

ಪಿಎಂ ಕಿಸಾನ್ 13ನೇ ಕಂತಿನ ಹಣ ಪಡೆಯಬಯಸುವ ರೈತರೇ ನಿಮ್ಮ eKYC ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಕೃಷಿ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ನರೇಗಾ ಯೋಜನೆಯಲ್ಲಿ 2.5 ಲಕ್ಷ ರೂಪಾಯಿ ಸಹಾಯಧನ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ 

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…  

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!