ತಂತ್ರಜ್ಞಾನ ಸುದ್ದಿಸುದ್ದಿಗಳು

ರಾಮಮಂದಿರ ಹೆಸರಿನಲ್ಲಿ ಸೈಬರ್ ವಂಚನೆ : ಕರ್ನಾಟಕ ಪೊಲೀಸ್ ಇಲಾಖೆ ಎಚ್ಚರಿಕೆ! Ram Mandir Cyber ​​Scam : Police department alert

WhatsApp Group Join Now
Telegram Group Join Now

ಅಯೋಧ್ಯೆ ರಾಮಮಂದಿರದ ಹೆಸರಿನಲ್ಲಿ ಅನೇಕ ವಂಚನೆಗಳು ನಡೆಯುತ್ತಿವೆ. ಈ ವಂಚನಾ ಜಾಲದ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ನೀಡಿದ ಎಚ್ಚರಿಕೆ ಮಾಹಿತಿ ಇಲ್ಲಿದೆ…

Ram Mandir Cyber ​​Scam : Police department alert  : ಬರೋಬ್ಬರಿ ಐನೂರು ವರ್ಷಗಳ ಹಿಂದೂಗಳ ಕನಸು ನೆರವೇರಲು ದಿನಗಣನೆ ಶುರುವಾಗಿದೆ. ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಉತ್ತರ ಪ್ರದೇಶದ ಸರಯೂ ನದಿ ತೀರದ ಅಯೋಧ್ಯಾ ನಗರಿ ಸರ್ವ ಸನ್ನದ್ಧವಾಗುತ್ತಿದೆ. ತ್ರೇತಾಯುಗದಲ್ಲಿ ನಡೆದ ಶ್ರೀರಾಮನ ಪಟ್ಟಾಭಿಷೇಕದಂತೆಯೇ ಅದ್ಧೂರಿ ಉತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.

‘ಸಂಜೀವಿನಿ’ ಮುಹೂರ್ತದಲ್ಲಿ ನಡೆಯಲಿರುವ ರಾಮ ಪ್ರತಿಷ್ಠಾನವು ಜಗತ್ತಿನಲ್ಲಿ ಭಾರತದ ಸ್ಥಾನವನ್ನು ಬಲಪಡಿಸಿ ‘ವಿಶ್ವ ಗುರು’ವಾಗಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ಈ ಶುಭಗಳಿಗೆಯನ್ನು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವಾಗ ಇತ್ತ, ಸೋಷಿಯಲ್ ಮಿಡಿಯಾದಲ್ಲಿ ವಂಚಕರ ಆರ್ಭಟ ಮೇರೆ ಮೀರಿದೆ. ಮಂದಿರದ ಹೆಸರಿನಲ್ಲಿ ಸೈಬರ್ ಕಳ್ಳರು ನಾನಾ ನಮೂನೆಯಲ್ಲಿ ಚೋರಕೃತ್ಯ ಮುಂದುವರೆಸಿದ್ದಾರೆ.

ಇದನ್ನೂ ಓದಿ: SSLC ಪಾಸಾದವರಿಗೆ 4,237 ಸರಕಾರಿ ಬಸ್ ಕಂಡಕ್ಟರ್ ಹುದ್ದೆಗಳು | BMTC And KKRTC Bus Conductor Recruitment 2024

ದೇಣಿಗೆ ಹೆಸರಲ್ಲಿ ವಂಚನೆ

ಹೌದು, ರಾಮ ಮಂದಿರದ ಹೆಸರಿನಲ್ಲಿ ಸೈಬರ್ ಕ್ರಿಮಿನಲ್‌ಗಳು ದೇಣಿಗೆ ಸಂಗ್ರಹಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಮೆಸೇಜುಗಳನ್ನು ಹರಿಬಿಡುತ್ತಿದ್ದಾರೆ. ಈ ಕುರಿತು ಹಿಂದೂ ಆಸ್ತಿಕರು ಜಾಗ್ರತೆ ವಹಿಸಬೇಕು ಎಂದು ಕೆಲ ದಿನಗಳ ಹಿಂದೆ ವಿಶ್ವ ಹಿಂದೂ ಪರಿಷದ್ (VHP) ಎಚ್ಚರಿಕೆ ನೀಡಿತ್ತು. ಈ ಸಂದೇಶಗಳಲ್ಲಿ ಕ್ಯೂಆರ್ ಕೋಡ್ ಕೂಡ ಇದ್ದು; ಇದನ್ನು ಸ್ಕ್ಯಾನ್ ಮಾಡಿ ಹಣ ಪಾವತಿಸಿದರೆ ಅದು ವಂಚಕರ ಖಾತೆಗೆ ಸೇರುತ್ತದೆ ಎಂದು ತಿಳಿಸಲಾಗಿತ್ತು.

ಈ ವಿಚಾರವಾಗಿ ವಿಶ್ವ ಹಿಂದೂ ಪರಿಷದ್ ವಕ್ತಾರ ವಿನೋಬ್ ಬನ್ಸಾಲ್ ಅವರು ಗೃಹ ಸಚಿವಾಲಯ ಮತ್ತು ಉತ್ತರ ಪ್ರದೇಶ ಹಾಗೂ ದಿಲ್ಲಿ ಪೊಲೀಸ್‌ರಿಗೆ ಮಾಹಿತಿ ನೀಡಿದ್ದರು. ಮಂದಿರ ನಿರ್ಮಾಣವನ್ನು ನೋಡಿಕೊಳ್ಳುತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಹೊರತಾಗಿ ದೇಣಿಗೆ ಸಂಗ್ರಹಿಸಲು ಯಾರಿಗೂ ಅಧಿಕಾರವಿಲ್ಲ ಎಂದು ಅವರು ಒತ್ತಿ ಹೇಳಲಾಗಿತ್ತು. ಇದೀಗ ವಿಐಪಿ ಪಾಸ್ ಒದಗಿಸುವ ಸಂಬಂಧ ಅಂಥದೇ ಮತ್ತೊಂದು ಸಂದೇಶ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರ ಮತ್ತು ವಿವಿಧ ವೃತ್ತಿ ಉಪಕರಣ ಪಡೆಯಲು ಅರ್ಜಿ ಆಹ್ವಾನ Free Sewing Machine & Free Improved Tool Kits

ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಕೆ

ಇದೇ ಜನವರಿ 22, ಸೋಮವಾರ ಮಧ್ಯಾಹ್ನ ಮೃಗಶಿರಾ ನಕ್ಷತ್ರದಲ್ಲಿ 12 ಗಂಟೆ 29 ನಿಮಿಷ 8 ಸೆಕೆಂಡುಗಳಿ೦ದ ಕೇವಲ ‘84 ಸೆಕೆಂಡು’ ಅವಧಿಯಲ್ಲಿ ನೆರವೇರಲಿರುವ ಬಾಲರಾಮನ ಪ್ರಾಣ ಪ್ರತಿಷ್ಠೆಯನ್ನು ಕೋಟ್ಯಂತರ ರಾಮಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇದನ್ನು ದುರ್ಬಳಕೆ ಮಾಡಿಕೊಂಡ ಸೈಬರ್ ಖದೀಮರು, ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ VIP ಪಾಸ್ ಕೊಡುವುದಾಗಿ ಲಿಂಕ್ ಕಳುಹಿಸಿ ಮೋಸ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರಾಜ್ಯ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ.

ನಿಮ್ಮ ಮೊಬೈಲ್‌ಗೆ ವಾಟ್ಸಾಪ್ ಅಥವಾ ಎಸ್‌ಎಂಎಸ್‌ನಲ್ಲಿ ಸೈಬರ್ ಕಳ್ಳರು ಲಿಂಕ್ ಕಳುಹಿಸುತ್ತಾರೆ. ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ವಿಐಪಿ ಪಾಸ್ ಬೇಕೆಂದರೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಂಬ ಸಂದೇಶ ಬರುತ್ತದೆ. ಆಕಸ್ಮಾತ್ ಲಿಂಕ್ ಕ್ಲಿಕ್ ಮಾಡಿದರೆ, ಅಪಾಯ ಖಚಿತ ಮತ್ತು ಉಚಿತ. ಆದರಿಂದ ಯಾವುದೇ ಅಪರಿಚಿತ ಲಿಂಕ್ ಬಂದರೇ ಅಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೈಬರ್ ವಂಚನೆಗೆ ಒಳಗಾಗಬೇಡಿ ಎಂದು ರಾಜ್ಯ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Anganwadi Teacher Job Karnataka : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಲಿಂಕ್ ಕ್ಲಿಕ್ ಮಾಡಿದರೆ ಕಾಸು ಖತಂ

‘Congratulations you are lucky apko milta hai hai VIP access on 22 January Ram Mandir Ayodhya Inaugration!’ -ಎಂಬ ಸಂದೇಶದ ಜತೆಗೆ APK ಲಿಂಕ್ ಫೈಲ್ ಕೂಡ ಮೊಬೈಲ್‌ಗಳಲ್ಲಿ ಹರಿದಾಡುತ್ತಿದೆ. ಒಂದು ವೇಳೆ ನೀವೇನಾದರೂ APK ಲಿಂಕ್ ಕ್ಲಿಕ್ ಮಾಡಿದರೆ ವಂಚನೆಗೆ ಗುರಿಯಾದಿರಿ ಅಂತಲೇ ಅರ್ಥ.

‘ಈ ಲಿಂಕ್ ಅನ್ನು ಕ್ಲಿಕ್ ಮಾಡಿ ರಾಮಮಂದಿರ ಉದ್ಘಾಟನೆಗೆ ನೇರ VIP ಪಾಸ್ ಪಡೆದುಕೊಳ್ಳಿ ಎಂದು ನಂಬಿಸುವ ಯಾವುದೇ ರೀತಿಯ ಲಿಂಕ್ ಅಥವಾ APK ಫೈಲ್ ಮೇಲೆ ಕ್ಲಿಕ್ ಮಾಡದಿರಿ. ಸೈಬರ್ ವಂಚಕರು ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಅಥವಾ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯಬಹುದು. ಎಚ್ಚರಿಕೆ! ಎಚ್ಚರಿಕೆ!!’ ಎಂದು ರಾಜ್ಯ ಪೊಲೀಸ್ ಇಲಾಖೆ ಪ್ರತಿ ಸಂದೇಶವನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದೆ. ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರ!!!

Ram Mandir Cyber ​​Scam : Police department alert

ಇದನ್ನೂ ಓದಿ: Government Business Loan Schemes : ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ

WhatsApp Group Join Now
Telegram Group Join Now

Related Posts

error: Content is protected !!