ಉದ್ಯೋಗ

ಕೇಂದ್ರ ಸರಕಾರದ 10 ಲಕ್ಷ ಹುದ್ದೆಗಳ ನೇಮಕ | SSC ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಇಲ್ಲಿದೆ | SSC Exam Calendar 2023

WhatsApp Group Join Now
Telegram Group Join Now

ಕೇಂದ್ರ ಸರಕಾರದ ನಾನಾ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈಚೆಗೆ ರೋಜ್‌ಗಾರ್ ಮೇಳಕ್ಕೆ ಚಾಲನೆ ನೀಡಲಾಗಿದೆ. ಈ ಹುದ್ದೆಗಳಿಗೆ ನೇರವಾಗಿ ಅಂದರೆ ಪರೀಕ್ಷೆಗಳನ್ನು ನಡೆಸದೇ ನೇಮಕ ಮಾಡಿಕೊಳ್ಳುವ ಪರಿಪಾಠ ಇಲ್ಲ. ಹೀಗಾಗಿ ಸಿಬ್ಬಂದಿ ನೇಮಕಾತಿ ಆಯೋಗವು (SSC) ಅಭ್ಯರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗುವ ಹಿನ್ನಲೆಯಲ್ಲಿ ಮುಂಚಿತವಾಗಿಯೇ ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. ಈ ಪರೀಕ್ಷೆಗಳು ನಡೆಯುವ ದಿನಾಂಕ, ಪರೀಕ್ಷೆ ತಯಾರಿ, ನೇಮಕಾತಿ ಪ್ರಕ್ರಿಯೆ ಕುರಿತ ಮಾಹಿತಿ ಇಲ್ಲಿದೆ…

ಕೇಂದ್ರ ಸರಕಾರದ ನಾನಾ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ರೋಜ್‌ಗಾರ್ ಮೇಳ ಉದ್ಘಾಟಿಸಲಾಗಿದೆ. ರೋಜಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಹಂತ ಹಂತವಾಗಿ 10 ಲಕ್ಷ ಹುದ್ದೆಗಳಿಗೆ ಈ ಯೋಜನೆಯಡಿ ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರದ ಸುಮಾರು 39 ಇಲಾಖೆ, ಸೇನೆ, ಅರೆಸೇನಾ ಪಡೆ, ನಿಗಮ, ಸಂಸ್ಥೆ, ನಿಯಮಿತ ಹಾಗೂ ಇನ್ನಿತರ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಶೀಘ್ರದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಖಾಲಿ ಹುದ್ದೆಗಳನ್ನು ಈಗಾಗಲೇ ಪಟ್ಟಿ ಮಾಡಲಾಗುತ್ತಿದ್ದು, ಇವುಗಳಿಗೆ ಮುಂದಿನ ಒಂದು ವರ್ಷದಲ್ಲಿ ನೇಮಕ ಮಾಡಿಕೊಂಡು, ಪ್ರಧಾನಿ ಸಮ್ಮುಖದಲ್ಲಿಯೇ ಅವರಿಗೆಲ್ಲಾ ನೇಮಕಾತಿ ಪತ್ರ ವಿತರಿಸುವ ಯೋಜನೆ ಇದಾಗಿದೆ.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ಕೇಂದ್ರ ರೈಲ್ವೆಯಲ್ಲಿ 2,422 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೀಗಾಗಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ವಿಫುಲ ಅವಕಾಶಗಳು ಲಭ್ಯವಿದ್ದು; ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ, ವಂಚಕರ ಜಾಲಕ್ಕೆ ಬಲಿಯಾಗದೇ ಸೂಕ್ತ ತಯಾರಿ ಮೂಲಕ ಪ್ರಯತ್ನಿಸಿದರೆ ಉದ್ಯೋಗ ನಿಶ್ಚಿತ. ಕೇಂದ್ರ ಸರ್ಕಾರದ ಯಾವುದೇ ಹುದ್ದೆಗೆ ಕೇಂದ್ರ ಲೋಕಸೇವಾ ಆಯೋಗ (UPSC), ಸಿಬ್ಬಂದಿ ನೇಮಕಾತಿ ಆಯೋಗ (SSC), ರೈಲ್ವೇ ಇಲಾಖೆಯಲ್ಲಿನ ಹುದ್ದೆಗಳಿಗೆ ರೈಲ್ವೆ ನೇಮಕಾತಿ ಮಂಡಳಿ (RRB) ಹೀಗೆ ವಿವಿಧ ನೇಮಕಾತಿ ಪ್ರಾಧಿಕಾರಗಳ ಮೂಲಕವೇ ನೇಮಕ ಮಾಡಿಕೊಳ್ಳುತ್ತವೆ.

ಮೊದಲಿಗೆ ಅರ್ಜಿ ಆಹ್ವಾನಿಸಿ, ನಿಗದಿತ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಅಗತ್ಯ ಇರುವ ಹುದ್ದೆಗಳಿಗೆ ಕೌಶಲ ಪರೀಕ್ಷೆ, ದೈಹಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇನ್ನು ಕೆಲವು ಹುದ್ದೆಗಳಿಗೆ ಸಂದರ್ಶನವೂ ನಡೆಯಲಿದೆ. ಯಾವುದೇ ಹುದ್ದೆಗಳಿಗೆ ನೇರವಾಗಿ ಅಂದರೆ ಪರೀಕ್ಷೆಗಳನ್ನು ನಡೆಸದೇ ನೇಮಕ ಮಾಡಿಕೊಳ್ಳುವ ಪರಿಪಾಠ ಇಲ್ಲ.

ಇದನ್ನೂ ಓದಿ: ಸದ್ಯದಲ್ಲೇ ಒಂದು ಲಕ್ಷ ರಾಜ್ಯ ಸರಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಹೀಗಾಗಿ ಕೇಂದ್ರ ಸರಕಾರದ ನೇಮಕಾತಿ ಕುರಿತಂತೆ ಅಭ್ಯರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗುವ ಉದ್ದೇಶದಿಂದ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಸಿಬ್ಬಂದಿ ನೇಮಕಾತಿ ಆಯೋಗ (SSC) 2023-24ನೇ ಸಾಲಿನಲ್ಲಿ ನಡೆಸಲಿರುವ ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ.

ವಾರ್ಷಿಕ ಸುಮಾರು 15 ರಿಂದ 20 ಪರೀಕ್ಷೆಗಳನ್ನು ಸಾಮಾನ್ಯವಾಗಿ ಎಸ್‌ಎಸ್‌ಸಿ ನಡೆಸಿಕೊಂಡು ಬಂದಿದೆ. ಕೇಂದ್ರ ಲೋಕಸೇವಾ ಆಯೋಗ (UPSC)ದಂತೆ ಸಿಬ್ಬಂದಿ ನೇಮಕಾತಿ ಆಯೋಗ (SSC) ಕೂಡ ಪ್ರತಿ ವರ್ಷ ಪರೀಕ್ಷೆಗಳ ವೇಳಾಪಟ್ಟಿಯನ್ನು ಮೊದಲೇ ಪ್ರಕಟಿಸುತ್ತದೆ. ಇದರಿಂದ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಅನುಕೂಲವಾಗಲಿದೆ. ಮುಂದಿನ 18 ತಿಂಗಳಿನಲ್ಲಿ ಕೇಂದ್ರ ಸರ್ಕಾರದ 10 ಲಕ್ಷ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ಎಸ್‌ಎಸ್‌ಸಿಯ ಪರೀಕ್ಷೆಗಳು ಯಾವಾಗ ನಡೆಯುತ್ತವೆ ಎಂಬುದು ಬಹಳ ಮಹತ್ವ ಪಡೆದಿದೆ.

ಇದನ್ನೂ ಓದಿ: ಪಿಎಂ ಕಿಸಾನ್ 13ನೇ ಕಂತು ಶೀಘ್ರ ಬಿಡುಗಡೆ: ನಿಮ್ಮೂರಿನ ಯಾರಿಗೆಲ್ಲ ಹಣ ಸಿಗಲ್ಲ ಮೊಬೈಲ್‌ನಲ್ಲೇ ಚೆಕ್ ಮಾಡಿ

ಈ ವೇಳಾಪಟ್ಟಿಯಲ್ಲಿ 2023ರಲ್ಲಿ ನಡೆಯಲಿರುವ ಪರೀಕ್ಷೆಗಳ ಪ್ರಮುಖ ದಿನಾಂಕಗಳಿದ್ದು; ಆಯಾಯ ಪರೀಕ್ಷೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆ ನಡೆಸಬಹುದು.

ಸಿಬ್ಬಂದಿ ನೇಮಕಾತಿ ಆಯೋಗದ (SSC) ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ ಸಿಬ್ಬಂದಿ ನೇಮಕಾತಿ ಆಯೋಗ (SSC) ಅಧಿಕೃತ ವೆಬ್‌ಸೈಟ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ಕೇಂದ್ರ ಸರಕಾರದ ನೇಮಕಾತಿ ಪ್ರಕ್ರಿಯೆ ನಡೆಸುವ ವಿವಿಧ ನೇಮಕಾತಿ ಪ್ರಾಧಿಕಾರಗಳ ಅಧಿಕೃತ ವೆಬ್‌ಸೈಟ್ ಕೊಂಡಿಗಳು 

  1. UPSC ಅಧಿಕೃತ ವೆಬ್‌ಸೈಟ್  : https://www.upsc.gov.in
  2. RRB (ರೈಲ್ವೆ) ಅಧಿಕೃತ ವೆಬ್‌ಸೈಟ್ :  https://www.rrbbnc.gov.in
  3. ಭಾರತೀಯ ಸೇನೆ  ಅಧಿಕೃತ ವೆಬ್‌ಸೈಟ್ : https://www.joinindianarmy.nic.in
  4. NCS ಅಧಿಕೃತ ವೆಬ್‌ಸೈಟ್ : https://www.ncs.gov.in

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ರಸಗೊಬ್ಬರ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!