ಸುದ್ದಿಗಳು

ರೈತರಿಗೆ ಸಾಲ ನೀಡಲು ಬ್ಯಾಂಕುಗಳ ಹಿಂದೇಟು : ಸರಕಾರಿ ಸಬ್ಸಿಡಿ ಯೋಜನೆಗಳು ಮಣ್ಣುಪಾಲು | farmers Bank loan

WhatsApp Group Join Now
Telegram Group Join Now

ರೈತರು ಬೆಳೆ ಸಾಲ ಹೊಂದಿದ್ದಾರೆ ಅಥವಾ ಯಾರದೋ ಬ್ಯಾಂಕಿನ ಸಾಲಕ್ಕೆ ಜಾಮೀನುದಾರರಾಗಿದ್ದಾರೆ ಎಂಬ ಕಾರಣ ನೀಡಿ ಹಲವು ಬ್ಯಾಂಕುಗಳು ಸಬ್ಸಿಡಿ ಸಾಲ ನೀಡಲು ನಿರಾಕರಿಸುತ್ತಿವೆ. ಬ್ಯಾಂಕುಗಳ ಈ ಹಿಂದೇಟಿಗೆ ಕಾರಣವೇನು? ರೈತರಿಗೆ ಸಾಲ ನೀಡಲು ಇರುವ ನಿಯಮಗಳೇನು? ರೈತರು ಸಬ್ಸಿಡಿ ಯೋಜನೆಯಡಿ ಸಾಲ ಪಡೆಯಲು ಏನು ಮಾಡಬೇಕು? ಇತ್ಯಾದಿ ಮಾಹಿತಿ ಇಲ್ಲಿದೆ…

ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಆದಾಯ ದ್ವಿಗುಣಗೊಳಿಸಲು ನಾನಾ ನಮೂನೆ ಸಬ್ಸಿಡಿ ಯೋಜನೆಗಳನ್ನು ಜಾರಿಗೊಳಿಸಿವೆ. ಸಣ್ಣ ರೈತರಿಗಿಷ್ಟು, ಅತೀ ಸಣ್ಣ ರೈತರಿಗಿಷ್ಟು, ಅದರಲ್ಲೂ ಜಾತಿ, ಪಂಗಡವಾರು ರೈತರಿಗೆ ಇಂತಿಷ್ಟು ಅಂತ ಕಲರ್ ಕಲರ್ ಸಬ್ಸಿಡಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆದರೆ ಇವೆಲ್ಲವೂ ಆಟಕ್ಕುಂಟು ಲೆಕ್ಕಕ್ಕಿಲ್ಲದ ಯೋಜನೆಗಳು ಎಂಬ ಟೀಕೆ ರೈತ ಸಮುದಾಯದಿಂದ ವ್ಯಕ್ತವಾಗುತ್ತಿದೆ. ಕಾರಣ; ಸರಕಾರದ ಈ ಯೋಜನೆಗಳ ಲಾಭ ಪಡೆಯಲು ಮುಂದಾಗುವ ರೈತರಿಗೆ ಬ್ಯಾಂಕುಗಳು ಕ್ಯಾರೇ ಅನ್ನುತ್ತಿಲ್ಲ ಎಂಬುವುದು ರೈತರ ಅಳಲಾಗಿದೆ.

ನಿಜ, ಗ್ರಾಮೀಣ ಭಾಗದ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ನಿರಾಕರಿಸುತ್ತಿರುವುದರಿಂದ ಬಹುತೇಕ ಸರ್ಕಾರದ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಇದರಿಂದ ಸರ್ಕಾರಿ ಯೋಜನೆಗಳ ಬಗ್ಗೆಯೇ ರೈತರಿಗೆ ನಿರಾಸಕ್ತಿ ಮೂಡುತ್ತಿದೆ. ಮಾತ್ರವಲ್ಲ ರೈತರ ಬದುಕಿಗೆ ನೆರವಾಗಬೇಕಿರುವ ವಿವಿಧ ಯೋಜನೆಗಳ ಕೋಟಿ ಕೋಟಿ ಅನುದಾನ ಕೊಳೆಯುತ್ತಿದೆ. ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯ ಸೂಕ್ತ ಸಮಯಕ್ಕೆ ಸಿಗದಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ.

ಇದನ್ನೂ ಓದಿ: ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ ₹3.50 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಬ್ಯಾಂಕುಗಳ ಹಿಂದೇಟಿಗೆ ಕಾರಣವೇನು?

ಬಹುತೇಕ ಬ್ಯಾಂಕುಗಳು ರೈತರಿಗೆ ನೀಡಿದ ಸಾಲ ಮರುಪಾವತಿ ಆಗುವುದಿಲ್ಲ ಎಂಬ ಕುತ್ಸಿತ ಮನಃಸ್ಥಿಗೆ ಬಂದು ಬಿಟ್ಟಿವೆ ಎನ್ನುತ್ತಾರೆ ಸರಕಾರಿ ಯೋಜನೆಗಳಿಂದ ವಂಚಿತರಾದ ರೈತರು. ನಿಜ, ಗ್ರಾಮೀಣ ಭಾಗದ ಬಹಳಷ್ಟು ಬ್ಯಾಂಕ್ ಅಧಿಕಾರಿಗಳು ಬೆಳೆ ಸಾಲದ ನೆಪ ಹೇಳಿ ಹೊಸ ಯೋಜನೆಯಡಿ ಸಾಲ ನೀಡಲು ನಿರಾಕರಿಸುತ್ತಿದ್ದಾರೆ. ಕೆಲವು ಬ್ಯಾಂಕುಗಳಲ್ಲಿ ಬೆಳೆಸಾಲ ಪಡೆದ ಅನೇಕ ಸುಸ್ತಿದಾರ ರೈತರ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿವೆ. ಅವರ ಖಾತೆಗೆ ಸಂದಾಯವಾಗುವ ಹಣ ಸಾಲಕ್ಕೆ ವಜಾ ಆಗುತ್ತಿದೆ ಎಂದು ಕೆಲವು ರೈತರು ಆರೋಪಿಸುತ್ತಿದ್ದಾರೆ.

ರೈತರು ಬೆಳೆ ಸಾಲ ಹೊಂದಿದ್ದಾರೆ ಅಥವಾ ಯಾರದೋ ಬ್ಯಾಂಕಿನ ಸಾಲಕ್ಕೆ ಜಾಮೀನುದಾರರಾಗಿದ್ದಾರೆ ಎಂಬ ಕಾರಣ ನೀಡಿ ಸಬ್ಸಿಡಿ ಸಾಲವನ್ನು ನಿರಾಕರಿಸಲಾಗುತ್ತಿದೆ. ಬ್ಯಾಂಕುಗಳ ಈ ಚೆಲ್ಲಾಟದಿಂದ ಬೇಸರಗೊಂಡ ರೈತರು ಸರ್ಕಾರದ ಯೋಜನೆಯನ್ನು ನಿರ್ಲಕ್ಷಿಸಿ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗುವತ್ತ ಮುಖ ಮಾಡುತ್ತಿದ್ದಾರೆ. ಇನ್ನು ಸರಕಾರಿ ಸಬ್ಸಿಡಿ ಯೋಜನೆಗಳ ಪ್ರಯೋಜನ ಪಡೆದೇ ತೀರಬೇಕೆಂಬ ಛಲವುಳ್ಳ ಕೆಲವು ರೈತರು ಖಾಸಗಿ ಲೇವಾದೇವಿದಾರರಿಂದ ದುಬಾರಿ ಬಡ್ಡಿ ದರದಲ್ಲಿ ಕೈ ಸಾಲ ಪಡೆದು ಬೆಳೆ ಸಾಲವನ್ನು ಮರುಪಾವತಿಸಲು ಮುಂದಾಗುತ್ತಿದ್ದಾರೆ. ಇದು ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ಈಡು ಮಾಡುತ್ತಿದೆ.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ನಿಯಮವೇನಿದೆ?

ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದು ಮರುಪಾವತಿಸದೆ ಕಟಬಾಕಿ ಉಳಿಸಿಕೊಂಡ ರೈತರಿಗೆ ಸಾಲ ನೀಡುವುದು ಆಯಾ ಬ್ಯಾಂಕ್ ಪಾಲಿಸಿಗೆ ಬಿಟ್ಟಿದ್ದಾಗಿದೆ. ಆದರೆ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ಮಾರ್ಗಸೂಚಿ ಪ್ರಕಾರ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಸಣ್ಣ ಮತ್ತು ಅತೀ ಸಣ್ಣ ಕಟಬಾಕಿ ರೈತರಿಗೆ ಗರಿಷ್ಠ 50,000 ರೂಪಾಯಿ ವರೆಗೆ ಸಾಲ ನೀಡಲು ನಿರಾಕರಿಸುವಂತಿಲ್ಲ. ಪಹಣಿ ಮತ್ತಿತರ ಸರಳ ದಾಖಲೆಗಳ ಆಧಾರದ ಮೇಲೆ 1.60 ಲಕ್ಷ ವರೆಗೆ ಸಾಲವನ್ನು ನೀಡಬೇಕು. ಈ ಸಾಲಕ್ಕೆ ಭೋಜಾ ಏರಿಸಬಾರದು. ಒಂದು ವೇಳೆ 1.60 ಲಕ್ಷ ಬೆಳೆಸಾಲಕ್ಕೆ ಭೋಜಾ ಏರಿಸಿದರೆ ಅದು ಅಪರಾಧ.

ಡಿಸಿಸಿ ಬ್ಯಾಂಕಿನವರು ಕಾನೂನು ಸಲಹೆ ಪಡೆದುಕೊಳ್ಳದೇ 1.60 ಲಕ್ಷದ ವರೆಗೆ ಬೆಳೆಸಾಲ ನೀಡುತ್ತವೆ. ಅದರಂತೆ ಇತರ ಬ್ಯಾಂಕುಗಳು ಕೂಡ ರೈತರಿಗೆ ಬೆಳೆ ಸಾಲ ನೀಡುವಾಗ ಕಾನೂನು ಸಲಹೆಗಾರರ ಶುಲ್ಕವನ್ನು ಬ್ಯಾಂಕುಗಳೇ ಭರಿಸಬೇಕು. ಆದರೆ ಹಲವು ಬ್ಯಾಂಕುಗಳಲ್ಲಿ ಕಾನೂನು ಸಲಹೆಗಾರರ ಶುಲ್ಕವನ್ನು ರೈತರಿಂದ ವಸೂಲಿ ಮಾಡಲಾಗುತ್ತಿದೆ. ರೈತರ ಒಪ್ಪಿಗೆಯನ್ನು ಪಡೆದುಕೊಳ್ಳದೇ ಅವರ ಖಾತೆಯಲ್ಲಿ ಇರುವ ಹಣವನ್ನು ಕಡಿತಗೊಳಿಸಬಾರದು. ಯಾವುದೇ ರೀತಿಯ ಸಾಲ ಬಾಕಿ ಇದ್ದರೆ ಆ ಬಗ್ಗೆ ಖಾತೆದಾರರ ಸಮ್ಮತಿ ಪಡೆದುಕೊಂಡೇ  ಬಾಕಿ ಹಣವನ್ನು ಕಟಾಯಿಸಬೇಕು.

ಇದನ್ನೂ ಓದಿ: ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ನಬಾರ್ಡ್ ರೈತ ಉತ್ಪಾದಕರ ಸಂಘಟನೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುತ್ತಿದೆ. ಸಮಗ್ರ ಕೃಷಿಯನ್ನು ಉತ್ತೇಜಿಸಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಗ್ರಾಮೀಣ ಭಾಗದ ರಾಷ್ಡ್ರೀಕೃತ ಬ್ಯಾಂಕುಗಳು ರೈತರಿಗೆ ಸರಕಾರಿ ಸಬ್ಸಿಡಿ ಯೋಜನೆಗಳ ಅಡಿಯಲ್ಲಿ ಸಾಲ ನೀಡಲು ಹಿಂದೇಟು ಹಾಕುತ್ತಿರುವುದು ಶೋಚನೀಯ. ಈ ಬಗ್ಗೆ ಸೂಕ್ತ ನಿಯಮ ಪಾಲನೆಗೆ ಸರಕಾರವೇ ಬ್ಯಾಂಕುಗಳಿಗೆ ಆದೇಶಿಸುವ ಮೂಲಕ ರೈತರಿಗೆ ನೆರವಾಗಬೇಕಿದೆ.

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೆಎಂಎಫ್‌ನಿಂದ ಬಂಪರ್ ಬೆಲೆಗೆ ಮೆಕ್ಕೆಜೋಳ ಖರೀದಿ: ರೈತರೇ ಈ ಅವಕಾಶ ಬಳಸಿಕೊಳ್ಳಿ

ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ 

ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ 

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!