ಸರಕಾರಿ ಯೋಜನೆ

Subsidy Agricultural Machinery: ಕೃಷಿ ಯಂತ್ರೋಪಕರಣ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ | ಅರ್ಜಿ ಸಲ್ಲಿಕೆ ಹೇಗೆ?

WhatsApp Group Join Now
Telegram Group Join Now

ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿಯಲ್ಲಿ ತಮಗೆ ಬೇಕಾಗುವ ಕೃಷಿ ಯಂತ್ರಗಳನ್ನು ಪಡೆಯಬಹುದು… 

ಕೃಷಿಯಲ್ಲಿ ಆಧುನಿಕತೆ ತರಲು ಕೃಷಿ ಯಂತ್ರೋಪಕರಣಗಳ ಖರೀದಿಗೆ ಹಲವು ಸಬ್ಸಿಡಿ ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜಾರಿಗೆ ತಂದಿವೆ. ಬಹುತೇಕ ಬಿತ್ತನೆಯಿಂದ ಹಿಡಿದು ಬೆಳೆ ಕಟಾವು ವರೆಗೂ ಬೇಕಾಗುವ ಎಲ್ಲಾ ಕೃಷಿ ಯಂತ್ರೋಪಕರಣಗಳು ಇಂದು ಸಬ್ಸಿಡಿ ದರದಲ್ಲಿ ರೈತರಿಗೆ ಸಿಗುತ್ತವೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಲಭ್ಯತೆ ಆಧಾರದ ಮೇಲೆ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ನೀಡಲಾಗುತ್ತದೆ.

ವಿಶೇಷವೆಂದರೆ, ಈಗ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಯಿಂದಷ್ಟೇ ಅಲ್ಲದೇ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿಯೂ ತಮಗೆ ಬೇಕಾಗುವ ಕೃಷಿ ಯಂತ್ರಗಳನ್ನು ಸಬ್ಸಿಡಿಯಲ್ಲಿ ಪಡೆಯಬಹುದು. ರೈತರು ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ಅಲೆಯದೇ ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿಯೇ ಅರ್ಜಿ ಸಲ್ಲಿಸಿ ಸಬ್ಸಿಡಿಯಲ್ಲಿ ಯಂತ್ರೋಪಕರಣಗಳನ್ನು ಪಡೆಯಬಹುದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ರೈತರಿಗೆ ಶೂನ್ಯ ಬಡ್ಡಿ ಸಾಲ 5 ಲಕ್ಷ, ಮಧ್ಯಮಾವಧಿ ಸಾಲ 20 ಲಕ್ಷ:  ಈ ವರ್ಷದಿಂದಲೇ ಜಾರಿ…

ಸಬ್ಸಿಡಿಯಲ್ಲಿ ಸಿಗುವ ಉಪಕರಣಗಳು ಯಾವುವು?

2021-22ನೇ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿಯಲ್ಲಿ ಗ್ರಾಮೀಣ ಕೃಷಿ ಯಂತ್ರೋಪಕರಣಗಳ ಸೇವಾ ಕೇಂದ್ರ ಆರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ರೈತರಿಗೆ ಸಣ್ಣ ಟ್ರ‍್ಯಾಕ್ಟರ್, ಟಿಲ್ಲರ್, ಟ್ರ‍್ಯಾಕ್ಟರ್ ಟ್ರ‍್ಯಾಲಿ, ಕ್ರಾಪ್ ರೀಪರ್, ಪೋಸ್ಟ್ ಹೋಲ್ ಡಿಗ್ಗರ್, ಪಾವರ್ ವೀಡರ್, ರೈಸ್ ಟ್ರಾನ್ಸ್ ಪ್ಲೆಟರ್, ಭೂಮಿ ಸಿದ್ದತೆ ಉಪಕರಣಗಳು, ನಾಟಿ ಬಿತ್ತನೆ ಉಪಕರಣಗಳು, ಕುಯ್ಲು ಮತ್ತು ಒಕ್ಕಣೆ ಉಪಕರಣಗಳು, ಡೀಸೆಲ್ ಪಂಪ್‌ಸೆಟ್, ಕೊಯ್ದು ಒಕ್ಕಣೆಗಳು, ಅಂತರ ಬೇಸಾಯ ಉಪಕರಣಗಳು ಸೇರಿದಂತೆ ಹಲವು ಕೃಷಿ ಉಪಕರಣಗಳು ಸಿಗುತ್ತವೆ.

ನೀರಾವರಿ ಉಪಕರಣಗಳಿಗೂ ಸಬ್ಸಿಡಿ

ರೈತರನ್ನು ನೀರಿನ ಮಿತ ಬಳಕೆ ಮಾಡಲು ಪ್ರೋತ್ಸಾಹಿಸುವುದಕ್ಕಾಗಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮದಡಿ ಲಭ್ಯವಿರುವ ನೀರನ್ನು ಸಮರ್ಥ ಬಳಕೆ ಮಾಡುವಲ್ಲಿ ಅನುವಾಗುವಂತೆ ಸೂಕ್ಷ್ಮ ನೀರಾವರಿ ಘಟಕಗಳಾದ ತುಂತುರು ನೀರಾವರಿ ಘಟಕ ಮತ್ತು ಹನಿ ನೀರಾವರಿ ಘಟಕಗಳನ್ನು ಸಬ್ಸಿಡಿಯಲ್ಲಿ ನೀಡಲಾಗುತ್ತದೆ.

ರೈತರಿಗೆ 2 ಹೆಕ್ಟೇರ್ ಪ್ರದೇಶದವರಿಗೆ ಶೇ.90 ರಷ್ಟು ಸಹಾಯಧನ ನೀಡಲಾಗುವುದು. ನೀರು ದೊರೆಯುವ ಸ್ಥಳದಿಂದ ನೀರು ಹರಿಸುವ ಪೈಪುಗಳನ್ನು ನೀಡಲಾಗುವುದು. ಶೇ.50 ರಿಂದ 75ರ ವರೆಗೆ ಪಿವಿಸಿ ಪೈಪ್‌ಗಳಿಗೆ ಸಬ್ಸಿಡಿ ನೀಡಲಾಗುವುದು. ತುಂತುರು, ಹನಿ ನೀರಾವರಿ ಘಟಕಕ್ಕಾಗಿ ರೈತರಿಗೆ ಸಹಾಯಧನ ನೀಡಲಾಗುವುದು.

PM-kisan eKYC Update: ಜೂನ್ 3ಒರೊಳಗೆ eKYC ಮಾಡದಿದ್ದರೆ ರೈತರಿಗೆ ವರ್ಷಕ್ಕೆ 10,000 ರೂಪಾಯಿ ನಷ್ಟ! … 

3 ಲಕ್ಷ ರೂಪಾಯಿ ವರೆಗೆ ಸಹಾಯಧನ 

ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಕೃಷಿ ಯಂತ್ರೋಪಕರಣಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ. ಆಯಾ ಯಂತ್ರೋಪಕರಣಗಳಿಗೆ ಅನುಗುಣವಾಗಿ ಶೇ.90, ಶೇ.60 ಮತ್ತು ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಸಾಮಾನ್ಯ ವರ್ಗದ ರೈತರಿಗೆ ಶೇ. 50ರಷ್ಟು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆಗೆ ಶೇ. 90ರಷ್ಟು ಸಹಾಯಧನ ಸಿಗುತ್ತದೆ.

ಸಾಮಾನ್ಯ ವರ್ಗದವರೆಗೆ ಗರಿಷ್ಟ ಒಂದು ಲಕ್ಷ ರೂಪಾಯಿ ವರೆಗೆ ಸಹಾಯಧನ ಸಿಗುತ್ತದೆ. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೆಗೆ ಗರಿಷ್ಟ 3 ಲಕ್ಷ ರೂಪಾಯಿ ವರೆಗೆ ಸಹಾಯಧನ ನೀಡಲಾಗುವುದು.

ಹೊಸ APL, BPL ರೇಷನ್ ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಯಾವ ದಾಖಲೆಗಳು ಬೇಕು?

ಜಮೀನಿನ ಪಹಣಿ ಸೇರಿದಂತೆ ಜಮೀನಿನ ಜಮಾಬಂಧಿ, ಬ್ಯಾಂಕ್ ಖಾತೆ ವಿವರ, ಪಾಸ್ ಪೋರ್ಟ್ ಅಳತೆಯ ಫೋಟೋ ಸಲ್ಲಿಸಬೇಕು. ರೈತರ ಬ್ಯಾಂಕ್ ಪಾಸ್‌ಬುಕ್‌ನಲ್ಲಿ ರೈತರ ವಂತಿಕೆ ಸರಬರಾಜು ಸಂಸ್ಥೆಗೆ ಆರ್.ಟಿ.ಜಿ.ಎಸ್ ಜಮವಾಣೆಯಾದ ಜೆರಾಕ್ಸ್ ಪ್ರತಿ ಇರಬೇಕು. ಇನ್ನು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ದಾಖಲೆಗಳು ಬೇಕು.

ರೈತರು ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ಪಡೆಯಲು ತಮ್ಮ ವ್ಯಾಪ್ತಿಯಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ಮೇಲ್ಕಾಣಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಅಲ್ಲಿ ಲಭ್ಯತೆಯ ಆಧಾರದ ಮೇಲೆ ರೈತರಿಗೆ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಲಾಗುವುದು.

ನಿಮ್ಮ ಹತ್ತಿರದ ಕೃಷಿ ಕೇಂದ್ರಗಳ ಸಂಪರ್ಕ ಸಂಖ್ಯೆ ಮತ್ತು ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ…

ಇದನ್ನೂ ಓದಿ:

Shakti Smart Card: ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ: ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

Cloud Seeding: ಕೈ ಕೊಟ್ಟ ಮುಂಗಾರು | ರೈತರಿಗೆ ಮಳೆ ತರಿಸಲು ಮುಂದಾದ ರಾಜ್ಯ ಸರಕಾರ

ರೈತರು ಮತ್ತು ರೈತ ಮಹಿಳೆಯರಿಂದ ಉಚಿತ ಹೈನುಗಾರಿಕೆ, ಕುರಿ-ಮೇಕೆ ಸಾಕಣೆ ತರಬೇತಿಗೆ ಅರ್ಜಿ ಆಹ್ವಾನ

ಹೈನು ರೈತರ ಚಿತ್ತ ಗಮನ ಖಾಸಗಿ ಹಾಲಿನ ಡೈರಿಗಳತ್ತ: ಕೆಎಂಎಫ್‌ನ ಕನಿಷ್ಠ ಬೆಲೆ, ಗರಿಷ್ಠ ಕ್ವಾಲಿಟಿ ಟಾರ್ಗೆಟ್‌ಗೆ ಬೆಚ್ಚಿದ ರೈತರು

ಹೊಸ ರೇಷನ್ ಕಾರ್ಡ್ ವಿತರಣೆಗೆ ಆನ್‌ಲೈನ್ ಅರ್ಜಿ ಆಹ್ವಾನ | ಬಿಪಿಎಲ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು?

ರೈತರ ಖಾತೆಗೆ ಶೀಘ್ರದಲ್ಲೇ 403 ಕೋಟಿ ರೂಪಾಯಿ ಹಾಲಿನ ಪ್ರೋತ್ಸಾಹಧನ ಹಾಲಿನ ಪ್ರೋತ್ಸಾಹಧನ ಜಮೆ | ನಿಮ್ಮ ಪ್ರೋತ್ಸಾಹಧನ ಸ್ಟೇಟಸ್ ಮೊಬೈಲ್‌ನಲ್ಲೇ ಚೆಕ್ ಮಾಡಿ…

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

 

ನಿರಂತರ ಉಚಿತ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!