ಸುದ್ದಿಗಳು

10 ದಿನಗಳ ಉಚಿತ ಜೇನು ಕೃಷಿ ತರಬೇತಿಗೆ ಅರ್ಜಿ ಆಹ್ವಾನ | Beekeeping Training

WhatsApp Group Join Now
Telegram Group Join Now

ಊಟ, ವಸತಿಯ ಜೊತೆಗೆ ಉಚಿತ ಜೇನು ತರಬೇತಿಯನ್ನು ನೀಡಲಾಗುತ್ತಿದ್ದು; ಆಸಕ್ತ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಜೇನು ಕೃಷಿಗೆ ಸಿಗುವ ಸರಕಾರಿ ಸವಲತ್ತುಗಳು ಮತ್ತು ತರಬೇತಿ ಪಡೆಯಲು ಅರ್ಜಿ ಸಲ್ಲಿಕೆ ಕುರಿತ ವಿವರ ಇಲ್ಲಿದೆ…

ಜೇನು ಸಾಕಾಣಿಕೆಯಲ್ಲಿ ಇಂದು ದೊಡ್ಡ ಮಟ್ಟದ ಆದಾಯವಿದೆ. ಜೇನು ಸಾಕಾಣಿಕೆಯನ್ನು ಕೃಷಿ ಜತೆಗೆ ಉಪ ಕಸುಬನ್ನಾಗಿ ಮಾಡಿಕೊಂಡಿರುವ ಹಲವರು ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ತೀರಾ ಸಣ್ಣ ಮಟ್ಟದಲ್ಲಿ ಅಂದರೆ ಐದರಿಂದ ಹತ್ತು ಜೇನು ಪೆಟ್ಟಿಗೆ ಇಟ್ಟುಕೊಂಡಿರುವವರು ಕೂಡ ಹೆಚ್ಚು ಪರಿಶ್ರಮವಿಲ್ಲದೆ ತಿಂಗಳಿಗೆ ಐದಾರು ಸಾವಿರ ರೂಪಾಯಿ ಗಳಿಸುವವರಿದ್ದಾರೆ. ಕಡಿಮೆ ಬಂಡವಾಳ ಹೂಡಿ ಬಂಪರ್ ಆದಾಯ ಪಡೆಯುವ ವಿಶಿಷ್ಠ ಉಪ ಕಸುಬು ಇದು.

ಇದನ್ನೂ ಓದಿ: ಹಿಸ್ಸಾ ನಕಾಶೆ, ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಯನ್ನು ಕೇವಲ ಏಳೇ ದಿನಗಳಲ್ಲಿ ಪಡೆಯಿರಿ

ಜೇನು ಪ್ರಕೃತಿದತ್ತವಾಗಿ ಸೃಜಿಸುವ ಉತ್ಪನ್ನವಾದ್ದರಿಂದ ಇದಕ್ಕೆ ಯಾವುದೇ ರೀತಿಯ ನಿರ್ಧಿಷ್ಟ ಸ್ಥಳವೂ ಬೇಡ. ಜೇನಿಗೆ ಮಕರಂದ ಸವಿಯಲು ಪೂರಕವಾದ ಸ್ಥಳವಾದರೆ ಸಾಕು. ರೈತರು ಜಮೀನಿನ ಒಂದು ಭಾಗದಲ್ಲೇ ಇತರ ಕೃಷಿಯ ಜೊತೆಗೆ ಜೇನು ಸಾಕಾಣಿಕೆಯನ್ನು ನಡೆಸಬಹುದು. ಅದರಿಂದ ನೇರ ಆದಾಯ ಮಾತ್ರವಲ್ಲ, ಜೇನು ಪರಾಗಸ್ಪರ್ಶದಿಂದ ಬೆಳೆಯ ಇಳುವರಿ ಹೆಚ್ಚಿಸಿಕೊಳ್ಳುವ ಮೂಲಕ ಪರೋಕ್ಷ ಆದಾಯವನ್ನೂ ಗಳಿಸಬಹುದು.

ಸರಕಾರದ ಸವಲತ್ತುಗಳು

ಜೇನು ಸಾಕಾಣಿಕೆಗೆ ಸರ್ಕಾರದಿಂದಲೂ ಬಹಳಷ್ಟು ಸವಲತ್ತುಗಳಿವೆ. ಜೇನು ಸಾಕಣೆ ಮಾಡುವ ಸಣ್ಣ ರೈತರಿಗೆ ತೋಟಗಾರಿಕೆ ಇಲಾಖೆ ಶೇ.75 ಸಬ್ಸಿಡಿ ನೀಡುತ್ತಿದೆ. ಎಸ್ಸಿ-ಎಸ್ಟಿ ಸಮುದಾಯದವರಿಗೆ ಶೇ.90 ಸಹಾಯಧನದ ಸೌಲಭ್ಯವೂ ಇದೆ. ಜೇನು ಸಾಕಣೆಗೆ ಪೋತ್ಸಾಹ ನೀಡಲು ತೋಟಗಾರಿಕೆ ಇಲಾಖೆ ಕೋಟಿ ಕೋಟಿ ಅನುದಾನ ಮೀಸಲಿಡುತ್ತದೆ.

ಇದನ್ನೂ ಓದಿ: ಕೋಳಿ ಸಾಕಣೆಗೆ ₹25 ಲಕ್ಷ, ಕುರಿ-ಮೇಕೆ ತಳಿ ಸಂವರ್ಧನೆಗೆ ₹50 ಲಕ್ಷ ಆರ್ಥಿಕ ನೆರವು

ಜೇನು ತುಪ್ಪ ಸಂಸ್ಕರಣೆ ಘಟಕ ನಿರ್ಮಾಣಕ್ಕೂ ನೆರವು ಕಲ್ಪಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಖಾದಿ ಆಯೋಗವೂ ಜೇನು ಕೃಷಿಗೆ ಬಹಳ ದೊಡ್ಡಮಟ್ಟದಲ್ಲಿಯೇ ನೆರವು ನೀಡುತ್ತಿದೆ. ಜೇನು ಸಾಕಣೆಯಿಂದ ಬೆಳೆಯ ಇಳುವರಿ ಸರಾಸರಿ ಶೇ.20ರಿಂದ 30ರ ವರೆಗೆ ಹೆಚ್ಚಳವಾಗುತ್ತದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಜೇನು ಕೃಷಿಗೆ ಸಾಕಷ್ಟು ನೆರವು ನೀಡುತ್ತಿದೆ.

ಉಚಿತ ತರಬೇತಿ

ಈ ಎಲ್ಲ ಹಿನ್ನಲೆಯಲ್ಲಿ ರೈತರನ್ನು ಹಾಗೂ ಉದ್ಯೋಗಾಕಾಂಕ್ಷಿ ಯುವಕ, ಯುವತಿಯರನ್ನು ಜೇನು ಕೃಷಿಯತ್ತ ಸೆಳೆಯಲು ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿರುವ ರುಡ್‌ಸೆಟ್ ಸಂಸ್ಥೆ ಉಚಿತ ಜೇನು ಕೃಷಿ ತರಬೇತಿ ಆಯೋಜಿಸುತ್ತ ಬರುತ್ತಿದೆ. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಪ್ರತಿಷ್ಠಾನ ಮತ್ತು ಕೆನರಾ ಬ್ಯಾಂಕ್ ಜೊತೆಯಾಗಿ ಕಳೆದ 40 ವರ್ಷಗಳಿಂದ ಮುನ್ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯಲ್ಲಿ 10 ದಿನಗಳ ಜೇನು ಕೃಷಿ ಉಚಿತ ತರಬೇತಿಯನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಯ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸದರಿ ಸಂಸ್ಥೆಯ ನೇತೃತ್ವದಲ್ಲಿ ಇದೇ ಡಿಸೆಂಬರ್ 12, 2022ರಿಂದ ಡಿಸೆಂಬರ್ 21, 2022 ರವರೆಗೆ 10 ದಿನಗಳ ಕಾಲ ಉಚಿತ ಜೇನು ಕೃಷಿ ತರಬೇತಿ ನಡೆಯಲಿದೆ. ಊಟ, ವಸತಿಯ ಜೊತೆಗೆ ಉಚಿತ ಜೇನು ತರಬೇತಿಯನ್ನು ನೀಡಲಾಗುತ್ತಿದ್ದು; ಆಸಕ್ತ ಆಸಕ್ತ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?

ಸದರಿ ಉಚಿತ ಜೇನು ಕೃಷಿ ತರಬೇತಿಗಾಗಿ ಕಡ್ಡಾಯವಾಗಿ ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಎಪಿಎಲ್ ಕಾರ್ಡ್‌ದಾರರು ಉದ್ಯೋಗ ಖಾತ್ರಿ ಜಾಬ್ ಕಾರ್ಡ್, ಸ್ವ ವಿವರ, ನಾಲ್ಕು ಪೋಟೋ, ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ರುಡ್ ಸೆಟ್ ಇನ್ಟಿಟ್ಯೂಟ್, ಉಜಿರೆ-೫೭೪೨೪೦ಗೆ ಸಲ್ಲಿಸಬಹುದಾಗಿದೆ. ಈ ತರಬೇತಿಗೆ ಅರ್ಜಿ ಸಲ್ಲಿಸಲು ವಯೋಮಿತಿ 18 ರಿಂದ 45 ವರ್ಷವಾಗಿರಬೇಕು. ತರಬೇತಿಯ ಸಂದರ್ಭದಲ್ಲಿ ಊಟ ಮತ್ತು ವಸತಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 08256 236404, 9902594791, 9591044014, 9980885900, 9448484237ಗೆ ಸಂಪರ್ಕಿಸಿ.

ರುಡ್ ಸೆಟ್ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

================================

ಇವುಗಳನ್ನೂ ಓದಿ:

ಈ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹50,000 ಹಣಕಾಸಿನ ನೆರವು

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಈ ವಿದ್ಯಾರ್ಥಿಗಳಿಗೆ ಸಿಗಲಿದೆ ವರ್ಷಕ್ಕೆ ₹50,000 ಹಣಕಾಸಿನ ನೆರವು

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ 787 ಕಾನ್ಸ್‌ಟೇಬಲ್ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ತೆಂಗು ರೈತರ ಸಂಸ್ಥೆಯಿಂದ ಕರ್ನಾಟಕದ ಪ್ರತಿ ಜಿಲ್ಲೆಗೆ 50 ಜನ ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಕೆಎಂಎಫ್‌ನಿಂದ ಬಂಪರ್ ಬೆಲೆಗೆ ಮೆಕ್ಕೆಜೋಳ ಖರೀದಿ: ರೈತರೇ ಈ ಅವಕಾಶ ಬಳಸಿಕೊಳ್ಳಿ

ನರೇಗಾ ಯೋಜನೆಯಲ್ಲಿ ರೈತರಿಗೆ ₹2.5 ಲಕ್ಷ ಸಹಾಯಧನ 

ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ 

20 ಕುರಿ, 1 ಮೇಕೆ ಗಿಫ್ಟ್: ಮುಖ್ಯಮಂತ್ರಿ ಘೋಷಣೆ | ಈ ಗಿಫ್ಟ್ ಪಡೆಯಲು ಯಾರೆಲ್ಲ ಅರ್ಹರು?

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಗ್ರಾಮ ಪಂಚಾಯತಿಯಲ್ಲಿ ನಿಮ್ಮ ಆಸ್ತಿ ಇ-ಸ್ವತ್ತು ನೋಂದಣಿಗೆ ಈ ಸರಳ ಕ್ರಮ ಅನುಸರಿಸಿ 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!