ಸರಕಾರಿ ಯೋಜನೆ

Sakhi Niwas Vasati Yojane : ಮಹಿಳೆಯರಿಗಾಗಿ ಕೇಂದ್ರ ಸರಕಾರದ ‘ಸಖಿ ನಿವಾಸ’ ಹೊಸ ವಸತಿ ಯೋಜನೆ | ಯಾರಿಗೆಲ್ಲ ಸಿಗಲಿದೆ ಈ ಯೋಜನೆ ಸೌಲಭ್ಯ?

WhatsApp Group Join Now
Telegram Group Join Now

ಮಹಿಳೆಯರಿಗೆ ವಸತಿ ವ್ಯವಸ್ಥೆಯನ್ನು ಒದಗಿಸಿ ಕೊಡುವ ಹೊಸ ಯೋಜನೆ ಇದಾಗಿದ್ದು, ಈ ಯೋಜನೆಯ ಸೌಲಭ್ಯ ಯಾರಿಗೆಲ್ಲ ಸಿಗಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

Sakhi Niwas Vasati Yojane : ನಗರದಲ್ಲಿ ಹೆಚ್ಚಿದ ವಸತಿ ಖರ್ಚಿನಿಂದ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಮಹಿಳೆಯರು ಯೋಚನೆ ಮಾಡುತ್ತಾರೆ. ಅದರಲ್ಲೂ ವಿವಾಹಿತ ಮಹಿಳೆಯರಿಗೆ ತಮ್ಮ ಮಕ್ಕಳ ಚಿಂತೆಯಿರುತ್ತದೆ ಮತ್ತು ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಹಣಕಾಸು ಸಮಸ್ಯೆ.

ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಮಕ್ಕಳಿರುವ ಉದ್ಯೋಗಸ್ಥ ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ‘ಸಖಿ ನಿವಾಸ ವಸತಿ ಯೋಜನೆ’ ಎಂಬ ವಿಶೇಷ ಯೋಜನೆಯೊಂದನ್ನು ಸರಕಾರ ಜಾರಿಗೆ ತಂದಿದೆ. ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯದ ಕೊರತೆ ನಿಗಿಸುವ ಉದ್ದೇಶ ಹೊಂದಿದ ಈ ಯೋಜನೆ ಬಡ ಕುಟುಂಬದ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಉದ್ಯೋಗಿಗಳಿಗೆ ಅತ್ಯಂತ ಉಪಕಾರಿಯಾಗಲಿದೆ.

ಇದನ್ನೂ ಓದಿ: Railway recruitment 2024 : ರೈಲ್ವೆ ಇಲಾಖೆ ನೇಮಕಾತಿ 2024 | ITI, SSLC ಅರ್ಭ್ಯಥಿಗಳಿಂದ 5,696 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮಹಿಳೆಯರಿಗೆ ಸುರಕ್ಷಿತ ತಾಣ

ದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆಯುತ್ತಿರುವ ಮಹಿಳೆಯರ ಸಂಖ್ಯೆ ದಿನದಿಂದ ಜನಕ್ಕೆ ಹೆಚ್ಚುತ್ತಲೆ ಇದೆ. ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಮಹಿಳೆಯರು ತಮ್ಮ ಕುಟುಂಬವನ್ನು ತೊರೆದು ಬರುವ ಪರಿಸ್ಥಿತಿ ಉಂಟಾಗುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋದಾಗ ಮಹಿಳೆಯರಿಗೆ ಕಾಡುವ ಮೊದಲ ಸಮಸ್ಯೆಯೇ ‘ಹೊಸ ಜಾಗದಲ್ಲಿ ವಸತಿ ವ್ಯವಸ್ಥೆ ಹೇಗೆ?’ ಎಂಬ ಕೊರಗು!

ಮಹಿಳೆಯರ ಎಲ್ಲಾ ತೊಂದರೆಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರವು ನೆರವಿಗೆ ನಿಂತಿದ್ದು ‘ಸಖಿ ನಿವಾಸ ವಸತಿ ಯೋಜನೆ’ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರಿಗೆ ಇದೊಂದು ಸುರಕ್ಷಿತ ತಾಣವಾಗಲಿದ್ದು; ಈ ಯೋಜನೆಯ ಸೌಲಭ್ಯವನ್ನು ಯಾರು ಪಡೆಯಬಹುದು ಮತ್ತು ಏನೆಲ್ಲಾ ಸೌಲಭ್ಯಗಳಿರುತ್ತವೆ ಎಂಬ ಸಂಪೂರ್ಣ ನೋಡೋಣ.

ಇದನ್ನೂ ಓದಿ: ಡಿಸಿಸಿ ಬ್ಯಾಂಕ್ ಹುದ್ದೆಗಳಿಗೆ 10ನೇ ತರಗತಿ, PUC ಪಾಸಾದವರಿಂದ ಅರ್ಜಿ | Mandya DCC Bank recruitment 2024

ಏನಿದು ಸಖಿ ನಿವಾಸ ಯೋಜನೆ?

ಕೇಂದ್ರ ಸರ್ಕಾರವು ಈ ಮುಂಚೆ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ವಸತಿ ಸೌಲಭ್ಯವನ್ನು ಒದಗಿಸುವ ಸಲುವಾಗಿ ಬಾಡಿಗೆ ಜಾಗದಲ್ಲಿ ಕಟ್ಟಡಗಳನ್ನು ನಿರ್ಮಿಸಿ ಹಾಸ್ಟೆಲ್’ಗಳನ್ನು ನಡೆಸುವ ಯೋಜನೆಯನ್ನು 1972-73ರಲ್ಲೇ ಜಾರಿಗೆ ತಂದಿದೆ. 2022 ಏಪ್ರಿಲ್ 1ರಿಂದ ಇದೆ ಯೋಜನೆಯನ್ನು ಸ್ವಲ್ಪ ತಿದ್ದುಪಡಿ ಮಾಡಿ ಭಾರತದ ವಿವಿಧ ಪ್ರದೇಶಗಳಲ್ಲಿ ‘ಸಖಿ ನಿವಾಸ್ ಯೋಜನೆ’ ಅಡಿಯಲ್ಲಿ ಬಾಡಿಗೆಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲು ಆರಂಭಿಸಿತು. ಈ ಹಾಸ್ಟೆಲ್’ಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ, ಅವರ ಮಕ್ಕಳಿಗೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಬೇರೆ ಊರಿಗೆ ಬರುವ ಮಹಿಳೆಯರಿಗೆ ಉಳಿಯಲು ಮಾತ್ರ ಅವಕಾಶವಿದೆ.

ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದು ಈ ಹಾಸ್ಟೆಲ್’ಗಳನ್ನು ವರ್ಕಿಂಗ್ ವುಮೆನ್ ಹಾಸ್ಟೆಲ್ (working women hostel) ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯ ಅಡಿಯಲ್ಲಿ ಉನ್ನತ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಬರುವ ಮಹಿಳೆಯರಿಗೆ ಕಡಿಮೆ ದರದಲ್ಲಿ ವಸತಿ ಸೌಕರ್ಯ ಮತ್ತು ಅವರ ಮಕ್ಕಳಿಗೆ ವಸತಿ ಊಟ ಹಾಗೂ ಡೇ ಕೇರ್ ನಂತಹ ಅನೇಕ ಮೂಲ ಸೌಕರ್ಯಗಳು ಸಿಗಲಿವೆ.

ಇದನ್ನೂ ಓದಿ: SSLC ಪಾಸಾದವರಿಗೆ 4,237 ಸರಕಾರಿ ಬಸ್ ಕಂಡಕ್ಟರ್ ಹುದ್ದೆಗಳು | BMTC And KKRTC Bus Conductor Recruitment 2024

ಈ ಸೌಲಭ್ಯ ಯಾರಿಗೆಲ್ಲ ಸಿಗಲಿದೆ?

ಸಖಿ ನಿವಾಸದ ಸೌಲಭ್ಯವನ್ನು ಯಾವುದೇ ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರು ಪಡೆಯಬಹುದು. ಅವರು ಒಂಟಿಯಾಗಿರಬಹುದು, ವಿಧವೆಯರಾಗಿರಬಹುದು, ವಿಚ್ಛೇದಿತರು, ಪತಿಯಿಂದ ಬೇರ್ಪಟ್ಟವರು, ವಿವಾಹಿತೆಯರು ಎಲ್ಲರಿಗೂ ವಸತಿ ಸೌಕರ್ಯ ಲಭ್ಯವಾಗಲಿದೆ. ಸಮಾಜದ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.

ವಸತಿ ಕೊರತೆಯಿದ್ದಲ್ಲಿ ದೈಹಿಕ ವಿಕಲಾಂಗ ಫಲಾನುಭವಿಗಳಿಗೆ ವಿಶೇಷ ಆದ್ಯತೆ ಸಿಗಲಿದೆ. ಉದ್ಯೋಗಕ್ಕಾಗಿ ತರಬೇತಿ ಪಡೆಯುತ್ತಿರುವ ಮಹಿಳೆಯರನ್ನು ಸಹ ಲಭ್ಯತೆಗೆ ಒಳಪಟ್ಟು ವಸತಿಗಾಗಿ ಪರಿಗಣಿಸಲಾಗುತ್ತದೆ. ಕೆಲಸ ಮಾಡುವ ತಾಯಂದಿರ 18 ವರ್ಷದೊಳಗಿನ ಹೆಣ್ಣುಮಕ್ಕಳು ಮತ್ತು 12 ವರ್ಷದೊಳಗಿನ ಗಂಡುಮಕ್ಕಳಿಗೂ ಅವರ ತಾಯಂದಿರೊ೦ದಿಗೆ ವಸತಿ ಸೌಲಭ್ಯ ಸಿಗಲಿದೆ.

ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರ ಮತ್ತು ವಿವಿಧ ವೃತ್ತಿ ಉಪಕರಣ ಪಡೆಯಲು ಅರ್ಜಿ ಆಹ್ವಾನ Free Sewing Machine & Free Improved Tool Kits

ವಿಶ್ವವಿದ್ಯಾನಿಲಯಗಳ ಆವರಣದಲ್ಲಿ ಹಾಸ್ಟೆಲ್

ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ವಿಶ್ವವಿದ್ಯಾಲಯಗಳ ಆವರಣದಲ್ಲಿ ‘ವರ್ಕಿಂಗ್ ವುಮನ್ ಹಾಸ್ಟೆಲ್’ಗಳನ್ನು ಸ್ಥಾಪಿಸಲು ಸೂಕ್ತ ಜಾಗವನ್ನು ಗುರುತಿಸುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗಕ್ಕೆ (UGC) ಸೂಚನೆ ನೀಡಿದೆ. ವಿಶ್ವವಿದ್ಯಾಲಯಗಳು ಹಾಸ್ಟೆಲ್’ಗಳನ್ನು ನಿರ್ಮಿಸಲು ಜಾಗವನ್ನು ಒದಗಿಸಿದರೆ ನಿರ್ಮಾಣ ವೆಚ್ಚ ಸೇರಿದಂತೆ ನಿರ್ವಹಣಾ ವೆಚ್ಚವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಒದಗಿಸಲಿದೆ.

ಇಂದು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿ೦ಗ್, ಗಣಿತ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದ್ದು ಸಮಾಜದ ಸಮಗ್ರ ಪ್ರಗತಿಯಾಗಲಿದೆ. ಇದೇ ರೀತಿ ಉದ್ಯೋಗ ಕ್ಷೇತ್ರದಲ್ಲಿಯೂ ಕೂಡ ಮಹಿಳೆಯರ ಭಾಗವಹಿಸುವಿಕೆ ಶೇ.23.3 ರಿಂದ ಶೇ.37ಕ್ಕೆ ಏರಿಕೆ ಕಂಡಿದೆ. ಆದ್ದರಿಂದ ಈ ಒಂದು ಯೋಜನೆಯು ಉದ್ಯೋಗ ಮತ್ತ ಉನ್ನತ ಶಿಕ್ಷಣಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ಬರುವ ಮಹಿಳೆಯರಿಗೆ ನೆರವಾಗಲಿದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

Sakhi Niwas Vasati Yojane

Ujjwala Scheme Online Application : ಉಜ್ವಲ ಉಚಿತ ಸಿಲಿಂಡರ್ ಅರ್ಜಿ ಆಹ್ವಾನ | ತಕ್ಷಣ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!