ಸರಕಾರಿ ಯೋಜನೆ

ಈ ನಂಬರ್‌ಗೆ ಕಾಲ್ ಮಾಡಿದರೆ ಸಾಕು ಮನೆ ಬಾಗಿಲಿಗೇ ಬರ‍್ತಾರೆ ಉಚಿತ ದನದ ಡಾಕ್ಟರ್ | ಹಸು, ಎಮ್ಮೆ, ಕುರಿ, ಮೇಕೆ, ಹಂದಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ

WhatsApp Group Join Now
Telegram Group Join Now

ರಾಜ್ಯ ಸರಕಾರ ವಿನೂತನ ಪಶು ವೈದ್ಯ ಸೇವೆ ಆರಂಭಿಸಿದ್ದು; ಈ ನಂಬರ್‌ಗೆ ಕಾಲ್ ಮಾಡಿದರೆ ಔಷಧಿ, ಚಿಕಿತ್ಸೆ ಸಲಕರಣೆ ಸಮೇತ ರೈತರ ಮನೆ ಬಾಗಿಲಿಗೇ ದನದ ಡಾಕ್ಟರ್ ಬರಲಿದ್ದಾರೆ. ಪಶು ವೈದ್ಯರನ್ನು ಮನೆ ಬಾಗಿಲಿಗೇ ಕರೆಸಿ ಹಸು, ಎತ್ತು, ಎಮ್ಮೆ, ಕುರಿ, ಮೇಕೆ, ಹಂದಿಗಳಿಗೆ ಚಿಕಿತ್ಸೆ ಕೊಡಿಸುವುದು ಹೇಗೆ? ಇಲ್ಲಿದೆ ಮಾಹಿತಿ

‘ಪಶು ಸಂಜೀವಿನಿ ಯೋಜನೆಯ ಮುಂದುವರಿದ ಭಾಗವಾಗಿ ರಾಜ್ಯ ಸರಕಾರ ಸಂಚಾರಿ ಪಶು ಚಿಕಿತ್ಸಾಲಯ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯನ್ವಯ ಇನ್ಮುಂದೆ ಔಷಧಿ, ಚಿಕಿತ್ಸೆ ಸಲಕರೆಣೆ ಸಮೇತ ರೈತರ ಮನೆ ಬಾಗಿಲಿಗೇ ದನದ ಡಾಕ್ಟರ್ ಬರಲಿದ್ದಾರೆ. ನಮ್ಮೂರಲ್ಲಿ ದನದ ಆಸ್ಪತ್ರೆ ಇಲ್ಲ, ಆಸ್ಪತ್ರೆ ಇದ್ದರೂ ಡಾಕ್ಟರ್ ಇಲ್ಲ, ಡಾಕ್ಟರ್ ಇದ್ದರೂ ತುರ್ತು ಔಷಧಿ, ಸಲಕರಣೆಗಳಿಲ್ಲ ಎಂಬ ರೈತರ ಸಮಸ್ಯೆಗೆ ಸಂಚಾರಿ ಪಶು ಚಿಕಿತ್ಸಾಲಯ ಪರಿಹಾರವಾಗಲಿದೆ.

ಇದನ್ನೂ ಓದಿ: ರೈತರು ಕೃಷಿ ಯಂತ್ರಗಳಿಗೆ ಉಚಿತ ಡಿಸೇಲ್ ಪಡೆಯಲು ಮೊಬೈಲ್ ಮೂಲಕವೇ ಹೆಸರು ನೋಂದಣಿ ಮಾಡುವುದು ಹೇಗೆ?

ಹಸು, ಎತ್ತು, ಎಮ್ಮೆ, ಕುರಿ, ಮೇಕೆ, ಹಂದಿಗಳಿಗೆ ಮನೆ ಬಾಗಿಲಲ್ಲೇ ಚಿಕಿತ್ಸೆ ಸಿಗಲಿದೆ. ಪ್ರಾಣಿಗಳ ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಯಡಿ ಪ್ರಾಣಿಗಳ ಸಂಚಾರಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಿದೆ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು 275 ಸಂಚಾರಿ ಪಶು ಚಿಕಿತ್ಸಾಲಯಗಳನ್ನು ನಡೆಸಲು ಆರ್ಥಿಕ ನೆರವು ನೀಡಲಿದೆ. ಅವುಗಳಲ್ಲಿ 68 ವಾಹನಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾರ್ಯನಿರ್ವಹಿಸಲಿವೆ. ಉಳಿದ ಚಿಕಿತ್ಸಾಲಯಗಳು ರಾಜ್ಯದ ಇತರ ಭಾಗಗಳಲ್ಲಿ ಕಾರ್ಯನಿರ್ವಹಿಸಲಿವೆ. 275 ಸಂಚಾರಿ ಪಶು ಚಿಕಿತ್ಸಾಲಯಗಳಲ್ಲಿ ಬೆಂಗಳೂರು ವಿಭಾಗಕ್ಕೆ 70 ವಾಹನಗಳು, ಬೆಳಗಾವಿ ವಿಭಾಗಕ್ಕೆ 82 ಸಂಚಾರಿ ಕ್ಲಿನಿಕ್‌ಗಳನ್ನು ಮಂಜೂರು ಮಾಡಲಾಗುವುದು ಎಂದು ಪಶುಸಂಗೋಪನಾ ಸಚಿವರು ತಿಳಿಸಿದರು.

ಇದನ್ನೂ ಓದಿ: ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಏನಿದು ಸಂಚಾರಿ ಪಶು ಚಿಕಿತ್ಸಾಲಯ?

ರೈತರ ಮನೆ ಬಾಗಿಲಲ್ಲೇ ಪಶು ವೈದ್ಯ ಸೇವೆ ನೀಡುವ ವಿಶಿಷ್ಟ ಯೋಜನೆ ಇದು. ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ಸರಕಾರ ಸಂಚಾರಿ ಪಶು ಚಿಕಿತ್ಸಾಲಯ ಯೋಜನೆಯನ್ನು ರಾಜ್ಯದಲ್ಲಿ ಆರಂಭಿಸಿದೆ. ಈ ವಾಹನದಲ್ಲಿ ಪಶು ವೈದ್ಯರು, ಪಶು ವೈದ್ಯ ಸಹಾಯಕರು ಇರಲಿದ್ದಾರೆ. ಇದರಿಂದ ರೈತರು ಸಾಕುವ ದನ, ಎಮ್ಮೆ, ಕುರಿ, ಮೇಕೆ, ಹಂದಿ ಸಹಿತ ಇತರ ಜಾನುವಾರುಗಳಿಗೆ ಅನಾರೋಗ್ಯ ಕಾಡಿದಾಗ ತ್ವರಿತಗತಿಯಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿದೆ.

ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅತ್ಯಗತ್ಯವಾಗಿರುವ ಔಷಧಗಳು, ಸಾಧನ, ಸಲಕರಣೆಗಳಲ್ಲದೆ ಶಸ್ತ್ರಚಿಕಿತ್ಸಾ ವಾಹನಗಳನ್ನು ಒಳಗೊಂಡ ‘ಪಶು ಸಂಜೀವಿನಿ ಯೋಜನೆಯ ಮುಂದುವರಿದ ಭಾಗವಾಗಿ ರಾಜ್ಯ ಸರಕಾರ ಈ ಸಂಚಾರಿ ಪಶು ಚಿಕಿತ್ಸಾಲಯ ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರ ಪಶು ಸಂಗೋಪನೆ ಸಚಿವ ಪುರುಷೋತ್ತಮ್ ರೂಪಾಲ್ ಅವರು ರಾಜ್ಯ ಸರಕಾರದ ಈ ಯೋಜನೆಗೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈತರೇ ನಿಮ್ಮ ಜಮೀನು ಮೇಲಿನ ಸಾಲ ತೀರಿಸಿಯೂ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಹೀಗೆ ಮಾಡಿ | ಮೊಬೈಲ್‌ನಲ್ಲೇ ನೋಡಿ ನಿಮ್ಮ ಜಮೀನು ಸಾಲ… 

ಸೇವೆ ಪಡೆಯಲು ಈ ನಂಬರ್‌ಗೆ ಕಾಲ್ ಮಾಡಿ

ಸಂಚಾರಿ ಪಶು ಚಿಕಿತ್ಸಾಲಯ ಯೋಜನೆ ವ್ಯವಸ್ಥೆಯಡಿಯಲ್ಲಿ ಪ್ರತ್ಯೇಕ ಕಾಲ್ ಸೆಂಟರ್ ತೆರೆಯಲಾಗಿದೆ. ಪಶು ಸಂಚಾರಿ ಚಿಕಿತ್ಸಾಲಯ ಸೌಲಭ್ಯ ಪಡೆಯಲು ರೈತರು ಟೋಲ್ ಫ್ರೀ ಸಂಖ್ಯೆ-1962 ಅಥವಾ 8277100200 ಕಂಟ್ರೋಲ್ ರೂಮ್ ಸಂಖ್ಯೆಗೆ ಕರೆ ಮಾಡಬಹುದು. ಇದು ಮೊಬೈಲ್ ಕ್ಲಿನಿಕ್ ಅನ್ನು ರೈತರ ಮನೆ ಬಾಗಿಲಿಗೆ ಕಳುಹಿಸುತ್ತದೆ. ಪ್ರತಿ ಸಂಚಾರಿ ಚಿಕಿತ್ಸಾಲಯದಲ್ಲಿ ಪಶುವೈದ್ಯರು ಮತ್ತು ಅವರ ಸಹಾಯಕರು ಇರಲಿದ್ದಾರೆ.

ಸರಕಾರಿ ಯೋಜನೆಗಳ ನಿಖರ ಮಾಹಿತಿಗಾಗಿ ಇಲ್ಲಿ ಕ್ಲಿಕ್  ಮಾಡಿ

ಇದನ್ನೂ ಓದಿ: 

3,036 ಪೋಸ್ಟ್‌ಮಾಸ್ಟರ್ ಹುದ್ದೆಗಳಿಗೆ SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಮೊಬೈಲ್‌ನಲ್ಲೇ ಚೆಕ್ ಮಾಡಿ

ಕೃಷಿ, ಹೈನುಗಾರಿಕೆ, ಕುರಿ-ಮೇಕೆ ಸಾಕಣೆಗೆ ನರೇಗಾ ಯೋಜನೆಯಲ್ಲಿ 2.5 ಲಕ್ಷ ರೂಪಾಯಿ ಸಹಾಯಧನ

ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ: ನಿಮಗೆ ಹಣ ಸಿಗುತ್ತೋ ಇಲ್ವೋ? ಮೊಬೈಲ್‌ನಲ್ಲಿ ಚೆಕ್ ಮಾಡಿ

ತೊಗರಿ ನೆಟೆರೋಗ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ ಪರಿಹಾರ

ಈ ರೈತರಿಗೆ 208 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ಜಮೆ | ನಿಮ್ಮ ಬೆಳೆ ಹಾನಿ ಪರಿಹಾರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ… 

ರೈತರ ಬೆಳೆ ನಷ್ಟಕ್ಕೆ 1 ಲಕ್ಷ ರೂಪಾಯಿ ಪರಿಹಾರ | ಯಾವ್ಯಾವ ಬೆಳೆಗೆ ಸಿಗಲಿದೆ ಪರಿಹಾರ?

ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ರೈತರೇ ನಿಮ್ಮ ಬೆಳೆಸಾಲ ಮನ್ನಾ ಮಾಹಿತಿ ಮೊಬೈಲ್‌ನಲ್ಲೇ ನೋಡಿ

ಜಿರೇನಿಯಂ ಕೃಷಿ: ರೈತರಿಗೆ ಭಾರೀ ಆದಾಯ ತರುವ ವನಸ್ಪತಿ ಬೆಳೆ | ಒಂದು ಟನ್ ಎಲೆಗೆ 12,000 ರೂಪಾಯಿ

ಕಾರ್ಮಿಕ ಕಾರ್ಡ್ ರದ್ದು ಅಭಿಯಾನ | ನಿಮ್ಮ ಕಾರ್ಡ್ ರದ್ದಾದರೆ ಏನು ಮಾಡಬೇಕು?

 

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ
WhatsApp Group Join Now
Telegram Group Join Now

Related Posts

error: Content is protected !!