ಸರಕಾರಿ ಯೋಜನೆಸಾಲ ಯೋಜನೆ

Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

WhatsApp Group Join Now
Telegram Group Join Now

ಸ್ವಯಂ ಉದ್ಯೋಗ ಮಾಡಲು 2023-2024ನೇ ಸಾಲಿನ ವಿವಿಧ ಕಲ್ಯಾಣ ಯೋಜನೆಗಳಡಿ ಸಾಲ, ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳ ಅಭಿವೃದ್ಧಿಗಾಗಿ ಸರಕಾರ ಸಹಾಯಧನ, ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸರಕಾರ ಈ ಯೋಜನೆಯಡಿ ಅರ್ಹ ಫಲನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2023-2024ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ವಿವಿಧ ಎಸ್‌ಸಿ/ ಎಸ್ಟಿ ಜನಾಂಗದ ಕಲ್ಯಾಣ ಯೋಜನೆಗಳನ್ನು ಈ ಕೆಳಕಂಡ ನಿಗಮಗಳ ಮೂಲಕ ಅನುಷ್ಟಾನಗೊಳಿಸಲಾಗಿದೆ.

ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ಥಿಗಳು ಈ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ.

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

ಯಾವೆಲ್ಲ ಯೋಜನೆಗಳಿಂದ ಸಾಲ ಸೌಲಭ್ಯ?

  1. ಸ್ವಯಂ ಉದ್ಯೋಗ ನೇರಸಾಲ ಯೋಜನೆ
  2. ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ)
  3. ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ

ಸ್ವಯಂ ಉದ್ಯೋಗ ನೇರಸಾಲ ಯೋಜನೆ : ಹಣ್ಣು ಹಂಪಲು, ಮೀನು, ಮಾಂಸ, ಕುರಿ, ಹಂದಿ, ಮೊಲ, ಹಸು ಸಾಕಾಣಿಕೆ, ಮಳಿಗೆ / ತಳ್ಳುಗಾಡಿ ದುಡಿಮೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ನಿಗಮಗಳಿಂದ ಘಟಕ ವೆಚ್ಚ 1 ಲಕ್ಷ ರೂಪಾಯಿ ನೆರವು ಒದಗಿಸಲಾಗುತ್ತದೆ. ಇದರಲ್ಲಿ 50,000 ರೂಪಾಯಿ ಸಬ್ಸಿಡಿಯಾಗಿದ್ದು; ಉಳಿಕೆ 50,000 ರೂಪಾಯಿ ಸಾಲವಾಗಿರುತ್ತದೆ. ಸದರಿ ಯೋಜನೆಯಲ್ಲಿ ಪಡೆದ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಮರುಪಾವತಿಸಬೇಕು.

ಇದನ್ನೂ ಓದಿ: New Ration Card: ಹೊಸ ಕಾರ್ಡ್ ವಿತರಣೆಗೆ ಸರಕಾರದ ಗ್ರೀನ್ ಸಿಗ್ನಲ್ : ಯಾರಿಗೆಲ್ಲ ಸಿಗಲಿದೆ ಹೊಸ ರೇಷನ್ ಕಾರ್ಡ್?

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ (ಬ್ಯಾಂಕ್‌ಗಳ ಸಹಯೋಗದೊಂದಿಗೆ) : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ನಿರುದ್ಯೋಗಿ ವಿದ್ಯಾವಂತ ಯುವಕ-ಯುವತಿಯರಿಗೆ ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕವನ್ನು ಆರಂಭಿಸಲು ನಿಗಮದ ಸಹಾಯಧನ ಮತ್ತು ಬ್ಯಾಂಕಿನ ಸಾಲದ ವ್ಯವಸ್ಥೆಯೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯಡಿ 2 ಹಂತದಲ್ಲಿ ಘಟಕ ವೆಚ್ಚವನ್ನು ಆಧಾರಿಸಿ ಸಹಾಯಧನವನ್ನು ಈ ಕೆಳಕಂಡ೦ತೆ ನಿಗಧಿ ಪಡಿಸಲಾಗಿದೆ.

  1. ಎಸ್‌ಸಿ / ಎಸ್‌ಟಿ ಜನಾಂಗದ ಅರ್ಹ ನಿರುದ್ಯೋಗಿಗಳು ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡು, ಆದಾಯಗಳಿಸಲು ಘಟಕ ವೆಚ್ಚಕ್ಕೆ ಬ್ಯಾಂಕಿನಿAದ ಮಂಜೂರಾದ ಸಾಲದ ಶೇ.70ರಷ್ಟು ಅಥವಾ ಗರಿಷ್ಠ ರೂ. 2.00 ಲಕ್ಷದ ವರೆಗೆ ಸಹಾಯ ಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.
  2. ಘಟಕ ವೆಚ್ಚದ ಶೇ.70% ರಷ್ಟು ಅಥವಾ ಗರಿಷ್ಠ ರೂ. 1.00 ಲಕ್ಷಗಳನ್ನು ನಿಗಮದಿಂದ ಮಂಜೂರು ಮಾಡಿ ಬ್ಯಾಂಕ್ ಸಹಯೋಗದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

ಇದನ್ನೂ ಓದಿ: ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಹಣ ಪ್ರತಿ ತಿಂಗಳು ಈ ದಿನ ಗ್ಯಾರಂಟಿ ಜಮಾ : ಪಕ್ಕಾ ಡೇಟ್ ಫಿಕ್ಸ್ | Gruhalakshmi, Annabhagya Pension Money Deposit Date fix

ಮೈಕ್ರೋಕ್ರೆಡಿಟ್ (ಪ್ರೇರಣಾ) ಯೋಜನೆ : ಎಸ್‌ಸಿ/ ಎಸ್‌ಟಿ ಸಮುದಾಯಗಳ ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಗುಂಪುಗಳು ಸ್ವಯಂ ಉದ್ಯೋಗ ಕೈಗೊಂಡು ಆದಾಯ ಗಳಿಸಲು ಕನಿಷ್ಠ 10 ಸಂಖ್ಯೆಯ ಸದಸ್ಯರಿರುವ ನೋಂದಾಯಿತ ಮಹಿಳಾ ಸ್ವಸಹಾಯ ಸಂಘಗಳಿಗೆ 2.50 ಲಕ್ಷ ರೂಪಾಯಿಗಳ (ಪ್ರತಿ ಸದಸ್ಯರಿಗೆ ರೂ. 15,000/-ಗಳ ಸಹಾಯಧನ ಮತ್ತು ರೂ. 10,000/-ಗಳ ಬೀಜ ಧನ) ಸೌಲಭ್ಯವನ್ನು ನಿಗಮದಿಂದ ಮಂಜೂರು ಮಾಡಲಾಗುವುದು. ಇದರಲ್ಲಿ 1.50 ಲಕ್ಷ ರೂಪಾಯಿ ಸಹಾಯಧನವಾಗಿದ್ದು; ಉಳಿಕೆ ರೂ. 1 ಲಕ್ಷ (ಶೇಕಡ 4ರಷ್ಟು ಬಡ್ಡಿದರ) ಸಾಲವಾಗಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಮೇಲ್ಕಾಣಿಸಿದ ವಿವಿಧ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು ಇಚ್ಚಿಸುವ ಅರ್ಹ ಫಲಾನುಭವಿಗಳು ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಜನ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

ನವೆಂಬರ್ 29, 2023 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರುಗಳ ಕಛೇರಿ ಅಥವಾ ನಿಗಮಗಳ ವೆಬ್ ಸೈಟ್ ಅಥವಾ ಕಲ್ಯಾಣಮಿತ್ರ ಏಕೀಕೃತ ಎಸ್.ಸಿ / ಎಸ್.ಟಿ ಸಹಾಯವಾಣಿ 9482-300-400 ಸಂಪರ್ಕಿಸಬಹುದು. ಅರ್ಜಿ ಸಲ್ಲಿಕೆಗೆ ನಿಮ್ಮ ಹತ್ತಿರದ ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಗ್ರಾಮ ಒನ್ ಸೇವಾ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.

ಕೃಷಿ, ಪಶುಪಾಲನೆ, ತೋಟಗಾರಿಕೆ ಸರಕಾರಿ ಯೋಜನೆಗಳ ಸಮಗ್ರ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ…

SC / ST ಫಲಾನುಭವಿಗಳ ಭರ್ಜರಿ ಸಬ್ಸಿಡಿ ಯೋಜನೆಗಳು : ಸ್ವಯಂ ಉದ್ಯೋಗ, ಭೂಮಿ ಖರೀದಿ, ಸ್ವಾವಲಂಬಿ ಸಾರಥಿ, ಗಂಗಾಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನ SC/ST Subsidy Schemes 2023-24

WhatsApp Group Join Now
Telegram Group Join Now

Related Posts

error: Content is protected !!