ಪಶುಪಾಲನೆ

ಕುರಿ-ಮೇಕೆ ಸಾಕಣೆ ಮತ್ತು ಹೈನುಗಾರಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ | Sheep-Goat and Dairy farming Free Training

WhatsApp Group Join Now
Telegram Group Join Now

ಸರಳ ಸಾಂಪ್ರದಾಯಿಕ ಕುರಿ-ಮೇಕೆ ಸಾಕಣೆ ಮತ್ತು ಹೈನುಗಾರಿಕೆ ತರಬೇತಿಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದೆ. ತರಬೇತಿ ಎಲ್ಲಿ? ತರಬೇತಿಗೆ ಪ್ರವೇಶ ಪಡೆಯಲು ಬೇಕಾಗುವ ದಾಖಲೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… 

ಇಂದು ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಣೆ ಸಣ್ಣ ರೈತರು, ಕೃಷಿ ಕಾರ್ಮಿಕರು, ರೈತ ಮಹಿಳೆಯರು ಹಾಗೂ ರೈತ ಮಕ್ಕಳಿಗೆ ಹೊಸ ಭರವಸೆಯ ಕಿರಣವಾಗಿದೆ. ಹವಾಮಾನ ವೈಪರಿತ್ಯದಿಂದ ಕೃಷಿ ಆದಾಯ ಕೈಕೊಟ್ಟಾಗ ಜೀವನಕ್ಕೆ ಆಸರೆಯಾಗುವುದೇ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಣೆಯ ಆದಾಯ. ಹೈನುಗಾರಿಕೆಯಲ್ಲಿ ಹಾಲು, ಗೊಬ್ಬರ, ಗಂಜಲದಿ೦ದ ಆದಾಯ ದೊರೆತರೆ, ಆಡು-ಕುರಿಗಳ ಸಾಕಣೆಯಲ್ಲಿ ಮಾಂಸ, ಹಾಲು, ಚರ್ಮ, ಉಣ್ಣೆ, ಗೊಬ್ಬರ ಮಾರಿ ಲಾಭ ಗಳಿಸಬಹುದು. ಹೀಗಾಗಿ ಅನೇಕ ಯುವ ಉತ್ಸಾಹಿಗಳು ಹೈನುಗಾರಿಕೆ, ಆಡು-ಕುರಿ ಸಾಕಣೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸತೊಡಗಿದ್ದಾರೆ.

ಇದನ್ನೂ ಓದಿ: ಬೇಸಿಗೆ ಬಿಸಿಲ ಬಾಧೆಗೆ ಬಸವಳಿಯುತ್ತಿರುವ ಅಡಿಕೆ ತೋಟಗಳು: ಇಲ್ಲಿದೆ ಪರಿಹಾರ

ಆದರೆ ಅನೇಕರು ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಣೆಯಲ್ಲಿ ಸೂಕ್ತ ಅನುಭವ, ಮಾಹಿತಿ ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ. ದೊಡ್ಡ ದೊಡ್ಡ ಪ್ರಾಜೆಕ್ಟು, ಬೃಹತ್ ಶೆಡ್ಡು, ವಿದೇಶಿ ತಳಿಗಳ ಆಕರ್ಷಣೆಗೆ ಒಳಗಾಗದೇ, ಸಣ್ಣಪುಟ್ಟ ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ಸರಳ ಪದ್ಧತಿ ಅಳವಡಿಸಿಕೊಂಡರೆ ಹೈನುಗಾರಿಕೆ ಮತ್ತು ಆಡು-ಕುರಿ ಸಾಕಣೆಯದಲ್ಲಿ ಗೆಲುವು ಸುಲಭ.

ಹೀಗೆ ಸರಳ ಸಾಂಪ್ರದಾಯಿಕ ಕುರಿ ಮೇಕೆ ಸಾಕಣೆ ಕುರಿತ ತರಬೇತಿಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಹಮ್ಮಿಕೊಂಡು ಬರುತ್ತಿದೆ. ವಿವಿಧ ಜಿಲ್ಲೆಗಳಲ್ಲಿ ಕಾಲಕಾಲಕ್ಕೆ ಉಚಿತ ತರಬೇತಿ ಆಯೋಜಿಸುತ್ತ ಬರುತ್ತಿರುವ ಸದರಿ ಇಲಾಖೆಯು ಧಾರವಾಡದಲ್ಲಿ ಇದೇ ಎಪ್ರಿಲ್ 2023 ರಿಂದ ಮಾರ್ಚ್ 2024ರ ವರೆಗೆ ಒಂದು ವರ್ಷದ ಅವಧಿಯಲ್ಲಿ ಉಚಿತ ವೈಜ್ಞಾನಿಕ ಹೈನುಗಾರಿಕೆ ಮತ್ತು ಕುರಿ ಮತ್ತು ಆಡು ಸಾಕಾಣಿಕೆ ಕುರಿತು ಪ್ರತ್ಯೇಕ ತಂಡವಾರು ಎರಡೆರಡು ದಿನಗಳ ತರಬೇತಿ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಬೇಸಿಗೆ ಬಿಸಿಲಿನಿಂದ ಎಮ್ಮೆ-ಹಸು, ಆಡು-ಕುರಿ, ಕೋಳಿಗಳ ರಕ್ಷಣೆ ಹೇಗೆ? | ಇಲ್ಲಿದೆ ತಜ್ಞ ವೈದ್ಯರ ಸಲಹೆ

ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯ ರೈತರು ಅಥವಾ ರೈತ ಮಹಿಳೆಯರು ತರಬೇತಿ ಪಡೆಯಲು ಅರ್ಜಿ ಸಲ್ಲಿಸಬಹುದು. ಹೆಸರು ನೊಂದಣಿಗೆ ಬೇಕಾಗುವ ದಾಖಲೆಗಳೇನು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಪ್ರೋತ್ಸಾಹಧನ ಮತ್ತು ಭತ್ಯೆ ಇತ್ಯಾದಿ ವಿವರಗಳನ್ನು ದೂರವಾಣಿ ಸಂಖ್ಯೆ: 08362 443743 ಅಥವಾ 9591024499/ 8618022108 ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಬಹುದು. ಕಚೇರಿ ಸಮಯ ಬೆಳ್ಳಗೆ 10-00 ರಿಂದ ಸಂಜೆ 5-00 ಗಂಟೆಯ ನಡುವೆ ಕರೆ ಮಾಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: KMF ಹುದ್ದೆಗಳಿಗೆ SSLC, ಪದವಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ | ಸಂಬಳ: 42,000-97,100

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here
WhatsApp Group Join Now
Telegram Group Join Now

Related Posts

error: Content is protected !!