ಉದ್ಯೋಗ

Shivamogga Gram panchayat recruitment 2024: PUC ಮುಗಿಸಿದವರಿಗೆ ಗ್ರಾಮ ಪಂಚಾಯತಿ ಗ್ರಂಥಾಲಯ ಹುದ್ದೆಗಳು | ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ

WhatsApp Group Join Now
Telegram Group Join Now

Shivamogga Gram panchayat recruitment 2024

ಪಿಯುಸಿ ಪಾಸಾದವರಿಗೆ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ…

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಒಟ್ಟು 251 ಗ್ರಾಮ ಪಂಚಾಯತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸದರಿ ಗ್ರಾಮ ಪಂಚಾಯತಿ ಗ್ರಂಥಾಲಯಗಳಲ್ಲಿ ಪ್ರಸ್ತುತ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

Shivamogga Gram panchayat recruitment 2024 ಸಂಕ್ಷಿಪ್ತ ವಿವರ 

  • ನೇಮಕಾತಿ ಇಲಾಖೆ : ಜಿಲ್ಲಾ ಪಂಚಾಯತ್ ಕಾರ್ಯಾಲಯ, ಶಿವಮೊಗ್ಗ
  • ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ : 14
  • ಹುದ್ದೆಗಳ ಹೆಸರು : ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು
  • ಅರ್ಜಿ ಸಲ್ಲಿಕೆ : ಆಫ್‌ಲೈನ್ ಮುಖಾಂತರ
  • ಉದ್ಯೋಗ ಸ್ಥಳ : ಶಿವಮೊಗ್ಗ ಜಿಲ್ಲೆ

ಇದನ್ನೂ ಓದಿ: Janamitra recruitment 2024 : ಗ್ರಾಮ ಪಂಚಾಯತಿಗಳಲ್ಲಿ 25,000 ಜನಮಿತ್ರ ಹುದ್ದೆಗಳ ನೇಮಕಾತಿ | 10ನೇ ತರಗತಿ ಪಾಸಾದವರಿಗೆ ಅವಕಾಶ

ವಿದ್ಯಾರ್ಹತೆ ಏನು?

ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಪಿಯುಸಿ ಶಿಕ್ಷಣದ ಜೊತೆಗೆ ಸರ್ಟಿಫಿಕೇಷನ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಪಡೆದಿರಬೇಕು ಹಾಗೂ ಕನಿಷ್ಠ 03 ತಿಂಗಳು ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು.

ಇತರೆ ಅರ್ಹತೆಗಳು

ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು (Library supervisor) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸಂಬ೦ಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯಾಗಿರಬೇಕು. ಒಂದು ವೇಳೆ ಸಂಬAಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿ ಲಭ್ಯತೆ ಇಲ್ಲದೆ ಇದ್ದಲ್ಲಿ ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿನ ಹತ್ತಿರದ ಗ್ರಾಮ ಪಂಚಾಯತಿಯ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದು. ಇದಕ್ಕೆ ಸಂಬ೦ಧಿಸಿದ೦ತೆ ಸಕ್ಷಮ ಪ್ರಾಧಿಕಾರವಾದ ತಹಶೀಲ್ದಾರರಿಂದ ವಾಸಸ್ಥಳ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ: Karnataka Village Accountant Recruitment 2024 : 1820 ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಗೆ ಅಧಿಕೃತ ಚಾಲನೆ | ಪ್ರತಿ ವರ್ಷ 500 ಹುದ್ದೆಗಳ ನೇಮಕಾತಿಗೆ ಸಹಮತಿ

ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಅಂದರೆ 23-02-2024ಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು ಹಾಗೂ ಗರಿಷ್ಠ ವಯೋಮಿತಿಯು ವರ್ಗಗಳಿಗೆ ಅನುಗುಣವಾಗಿ ಈ ಕೆಳಗಿನಂತೆ ಇರಬೇಕು.

ಸಾಮಾನ್ಯ ವರ್ಗದ (General) ಅಭ್ಯರ್ಥಿಗಳಿಗೆ 35 ವರ್ಷ, 2ಎ, 2ಬಿ, 3ಎ ಮತ್ತು 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ಹಾಗೂ ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ 40 ವರ್ಷ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: Surveyor recruitment 2024 : PUC ಪಾಸಾದವರಿಗೆ 939 ಸರ್ವೆಯರ್ ಹುದ್ದೆಗಳು | ಭೂಮಾಪಕರ ನೇಮಕಾತಿಗೆ ದಿನಗಣನೆ | ಕಂದಾಯ ಸಚಿವರಿಂದ ಮಹತ್ವದ ಮಾಹಿತಿ

ಮಾಸಿಕ ಸಂಬಳವೆಷ್ಟು?

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 15,196 ರೂಪಾಯಿ ಸಂಬಳ ನೀಡಲಾಗುವುದು.

ಅರ್ಜಿ ಸಲ್ಲಿಸುವುದು ಹೇಗೆ?

ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ನಮೂನೆ ಡೌನ್ಲೋಡ್ ಮಾಡಿಕೊಂಡು ಅಥವಾ ಕೆಳಗೆ ನೀಡಿರುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ನಿಖರವಾದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಂಬ೦ಧ ಪಟ್ಟ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು.

ಇದನ್ನೂ ಓದಿ: HDFC Parivartan scholarship 2023-24 : 75,000 ರೂಪಾಯಿ ವರೆಗೆ ಉಚಿತ ವಿದ್ಯಾರ್ಥಿವೇತನ | 1ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಅವಕಾಶ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು 

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 05-02-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 23-02-2024

ಅಧಿಸೂಚನೆ : Download
ಅರ್ಜಿ ನಮೂನೆ : Download
ಇಲಾಖೆಯ ಅಧಿಕೃತ ಜಾಲತಾಣ : Click here
ಸಹಾಯವಾಣಿ : 08182-223770

ಇದನ್ನೂ ಓದಿ: Google Pay loan up to 8 lakh : 2 ನಿಮಿಷದಲ್ಲಿ ಸಿಗುತ್ತೆ ₹8 ಲಕ್ಷ ರೂಪಾಯಿ ವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!