ಸರಕಾರಿ ಯೋಜನೆ

ಸಿರಿಧಾನ್ಯ ಬೆಳೆಗೆ ಪ್ರೋತ್ಸಾಹಧನ, ₹10 ಲಕ್ಷ ಸಬ್ಸಿಡಿ ಸಹಿತ ಸಾಲ ಸೌಲಭ್ಯ | Siridhanya Crop Raithasiri Scheme

WhatsApp Group Join Now
Telegram Group Join Now

2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಿಸಿರುವ ಹಿನ್ನಲೆಯಲ್ಲಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸಿರಿಧಾನ್ಯ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ 6,000 ರೂಪಾಯಿ ನಗದು ಪ್ರೋತ್ಸಾಹಧನ ನೀಡುತ್ತಿದೆ. ಜೊತೆಗೆ ಸಿರಿಧಾನ್ಯ ಕೃಷಿ, ಸಂಸ್ಕರಣ ಘಟಕ ಸ್ಥಾಪನೆ, ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ 10 ಲಕ್ಷ ರೂಪಾಯಿ ಸಬ್ಸಿಡಿ ಸಹಿತ ಸಾಲಸೌಲಭ್ಯ ನೀಡುತಿದೆ. ಈ ಬಗ್ಗೆ ಸಮಗ್ರಮಾಹಿತಿ ಇಲ್ಲಿದೆ…

ಸರಕಾರ ಸಿರಿಧಾನ್ಯ ಕೃಷಿ, ಸಂಸ್ಕರಣ ಘಟಕ ಸ್ಥಾಪನೆ, ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ತಾಲ್ಲೂಕು, ಜಿಲ್ಲೆ, ರಾಜ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಗಾರ, ಸಿರಿಧಾನ್ಯ ಮೇಳ, ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಹುಮುಖ್ಯವಾಗಿ ಸಿರಿಧಾನ್ಯ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಕಳೆದ ವರ್ಷದಿಂದ ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹಧನವನ್ನು ಸಹ ಒದಗಿಸುತ್ತಿದೆ. ಅದಕ್ಕೆಂದೇ ರೈತಸಿರಿ ಹೆಸರಿನ ಯೋಜನೆ ಅನುಷ್ಠಾನಗೊಳಿಸಿದೆ.

ಸಿರಿಧಾನ್ಯ ಕೃಷಿಗೆ ₹6,000 ಪ್ರೋತ್ಸಾಹಧನ 

2022-23ನೇ ಸಾಲಿನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ (ಆರ್‌ಕೆವಿವೈ) ಯೋಜನೆಯಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳನ್ನು (ರಾಗಿ, ಜೋಳ ಮತ್ತು ಸಜ್ಜೆ ಹೊರತುಪಡಿಸಿ) ಬೆಳೆದ ರೈತರಿಗೆ ಬೆಳೆ ಸಮೀಕ್ಷೆ ಆಧಾರದ ಮೇರೆಗೆ ಪ್ರತಿ ಹೆಕ್ಟೇರ್‌ಗೆ 6,000 ರೂಪಾಯಿ ನಗದು ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.

ರಾಷ್ಟ್ರೀಯ ಕೃಷಿ ವಿಕಾಸ (ಆರ್‌ಕೆವಿವೈ) ರೈತಸಿರಿ ಯೋಜನೆ ಲೆಕ್ಕ ಶೀರ್ಷಿಕೆ: 2401-00-800-1-57ರಡಿಯ ರೈತಸಿರಿ ಯೋಜನೆಯಡಿ ನೇರ ಸೌಲಭ್ಯ ವರ್ಗಾವಣೆ ಮೂಲಕ ರೈತರ ಬ್ಯಾಂಕ್ ಖಾತೆಗೆ 6,000 ಪ್ರೋತ್ಸಾಹಧನ ಜಮೆ ಮಾಡಿ ಹೆಚ್ಚಿನ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ.

ಇದನ್ನೂ ಓದಿ: ಜಮೀನು ಕಾಲುದಾರಿ, ಬಂಡಿದಾರಿ ಸಮಸ್ಯೆಗೆ ಇಲ್ಲಿದೆ ಸುಲಭ ಕಾನೂನು ಪರಿಹಾರ… 

ಫಲಾನುಭವಿಗಳ ಅರ್ಹತೆ

ರೈತಸಿರಿ ಯೋಜನೆಯ ಫಲಾನುಭವಿಗಳು ರೈತರಾಗಿದ್ದು ಜಮೀನು ಅವರ ಹೆಸರಿನಲ್ಲಿರಬೇಕು. ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು. ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದರೆ, ಅವರು ಮರಣ ಹೊಂದಿದ್ದಲ್ಲಿ ಮಾತ್ರ ಗ್ರಾಮಲೆಕ್ಕಿಗರಿಂದ ದೃಢೀಕರಿಸಿ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದು.

ಒಂದು ವೇಳೆ ಜಮೀನು ಮಹಿಳೆಯ ಹೆಸರಿನಲ್ಲಿದ್ದರೆ, ಕುಟುಂಬದ ಇತರೆ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಮಹಿಳೆಯರ ಹೆಸರಿನಲ್ಲಿಯೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಮುಖ್ಯವಾಗಿ ಫಲಾನುಭವಿ ರೈತರು ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಸಿರಿಧಾನ್ಯಗಳಿಗೆ ಬೆಳೆದಿರಬೇಕು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಮಹಿಳೆಯರು, ಹಿಂದುಳಿದ ವರ್ಗದ ರೈತರಿಗೆ ಹೆಚ್ಚಿನ ಆದ್ಯತೆ ಇದೆ. ಪ್ರತಿ ಫಲಾನುಭವಿ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್‌ಗೆ ಮಾತ್ರ ಸೀಮಿತವಾಗುವಂತೆ ಪ್ರೋತ್ಸಾಹಧನ ನೀಡಲಾಗುವುದು.

ಗಮನಿಸಿ: 2022-23ನೇ ಸಾಲಿನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ (NFSM) ಯೋಜನೆಯಡಿ ಸಿರಿಧಾನ್ಯ ಪ್ರಾತ್ಯಕ್ಷಿಕೆಯ ಫಲಾನುಭವಿಗಳು ’ರೈತಸಿರಿ’ ಯೋಜನೆಯಡಿ ಪ್ರೋತ್ಸಾಹಧನ ಪಡೆಯಲು ಅರ್ಹವಿರುವುದಿಲ್ಲ.

ಇದನ್ನೂ ಓದಿ: ಮೊಬೈಲ್‌ನಲ್ಲೇ ಪಡೆಯಿರಿ ನಿಮ್ಮೂರಿನ ಮಳೆ, ಬೆಳೆ, ಜಾನುವಾರು ಮಾಹಿತಿ

₹10 ಲಕ್ಷ ಸಬ್ಸಿಡಿ ಸಹಿತ ಸಾಲ ಸೌಲಭ್ಯ 

ಕಳೆದ ವರ್ಷ 2021-22ನೇ ಸಾಲಿನಲ್ಲಿ ’ರೈತಸಿರಿ’ ಯೋಜನೆಯಡಿ ಸಿರಿಧಾನ್ಯ ಬೆಳೆದ ರೈತರಿಗೆ ಪ್ರೋತ್ಸಾಹಧನ ನೀಡುವ ಜೊತೆಗೆ ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಸಹಾಯಧನ ನೀಡಲು ಪುಸ್ತಾವನೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಈ ಸಂಬಂಧ ಜಿಲ್ಲೆಗಳಿಂದ ಹೆಚ್ಚಿನ ಪುಸ್ತಾವನೆಗಳು ಸ್ವೀಕೃತವಾಗಿರಲಿಲ್ಲ. ಹೀಗಾಗಿ 2022-23ನೇ ಸಾಲಿನಲ್ಲಿ ’ರೈತಸಿರಿ’ ಯೋಜನೆಯಡಿ ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ ಘಟಕಗಳಿಗೆ ಸಹಾಯಧನವನ್ನು ಮುಂದುವರೆಸಲಾಗಿದ್ದು ಸದರಿ ಯೋಜನೆಯಡಿ ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣಾ ಘಟಕ ಪುಸ್ತಾವನೆಯ ಯಂತ್ರೋಪಕರಣಗಳ (End to End machinary) ಒಟ್ಟು ವೆಚ್ಚದ ಮೇಲೆ ಪ್ರೋತ್ಸಾಹಧನವಾಗಿ ಶೇ.50ರಷ್ಟು ಅಥವಾ ಗರಿಷ್ಠ ರೂ.10 ಲಕ್ಷಗಳವರೆಗೆ ಪಡೆಯಬಹುದಾಗಿದೆ.

ಯಾರು ಅರ್ಹರು?

ಅರ್ಹ ನವೋದ್ಯಮಿಗಳು, ರೈತ ಸಂಘಗಳು, ನೊಂದಾಯಿತ ಸ್ವ-ಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು (FPO), ಖಾಸಗಿ ಉದ್ದಿಮೆದಾರರು, ಆಹಾರ ಘಟಕಗಳ ಸ್ಥಾಪನೆ ಅಥವಾ ಉದ್ದಿಮೆಯಲ್ಲಿ ಕಾರ್ಯನಿರತರು ಈ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹರಾಗಿರುತ್ತಾರೆ.

ನೆರವಿನ ಪ್ರಮಾಣ

ಸಿರಿಧಾನ್ಯ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಘಟಕಗಳಿಗೆ ಯೋಜನೆಯ ಪ್ರಸ್ತಾವನೆಯ ಒಟ್ಟು ವೆಚ್ಚದ ಮೇಲೆ ಸಹಾಯಧನ ಎಲ್ಲಾ ವರ್ಗದವರು ಶೇ.50ರಷ್ಟು ಅಥವಾ ಗರಿಷ್ಠ ರೂ.10 ಲಕ್ಷ ಗಳವರೆಗೆ ಪಡೆಯಬಹುದು.

ಯೋಜನಾ ಪ್ರಸ್ತಾವನೆಯ ಒಟ್ಟು ಮೊತ್ತವು ರೂ.5 ಲಕ್ಷಗಳಿಗಿಂತ ಹೆಚ್ಚಾಗಿದ್ದಲ್ಲಿ ನೆರವು ಕೋರುವ ಅರ್ಜಿದಾರರು ಘಟಕ ಸ್ಥಾಪನೆ ಉದ್ದೇಶಕ್ಕಾಗಿ ಯಾವುದಾದರೂ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಕಡ್ಡಾಯವಾಗಿ ಸಾಲ ಪಡೆದಿರಬೇಕು. ಇಂತಹ ಪ್ರಸಂಗಗಳಲ್ಲಿ ಸರ್ಕಾರದಿಂದ ಮಂಜೂರಾಗುವ ನೆರವನ್ನು ಬ್ಯಾಂಕ್ ಸಾಲ ಆಧಾರಿತ ಸಹಾಯಧನವಾಗಿ ಪರಿಗಣಿಸಲಾಗುವುದು.

ಇದನ್ನೂ ಓದಿ: ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಿಗುವ ಸಬ್ಸಿಡಿ ಸೌಲಭ್ಯಗಳು

ಯೋಜನಾ ಪ್ರಸ್ತಾವನೆಯ ಒಟ್ಟು ಮೊತ್ತವು ರೂ.5 ಲಕ್ಷಗಳಿಗಿಂತ ಕಡಿಮೆಯಿದ್ದಲ್ಲಿ ನೆರವು ಕೋರುವ ಅರ್ಜಿದಾರರು ಘಟಕ ಸ್ಥಾಪನೆ ಉದ್ದೇಶಕ್ಕಾಗಿ ಸ್ವಂತ ಬಂಡವಾಳ ಹೂಡಿ ಅಥವಾ ಯಾವುದಾದರೂ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ಘಟಕಗಳನ್ನು ಅಳವಡಿಸಿಕೊಳ್ಳತಕ್ಕದ್ದು. ಇಂತಹ ಪ್ರಸಂಗಗಳಲ್ಲಿ ಸಹಾಯಧನವನ್ನು ಸಂಬಂಧಿಸಿದ ಫಲಾನುಭವಿ/ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.

ಯಂತ್ರೋಪಕರಣಗಳು ISI/BIS ಅಥವಾ ಇತರೆ ಯಾವುದೇ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಾನಕ ಸಂಸ್ಥೆಗಳಿಂದ ಪ್ರಮಾಣ ಪತ್ರ ಪಡೆದಿದ್ದಲ್ಲಿ ಖರೀದಿಗೆ ಅವಕಾಶ ಕಲ್ಪಿಸುವುದು. ಅಲ್ಲದೇ ಪೂರ್ಣ ಯಂತ್ರೋಪಕರಣವು ಹೊಂದಿರದಿದ್ದಲ್ಲಿ ಕನಿಷ್ಠ ಉಪಕರಣದ ಮುಖ್ಯಭಾಗಗಳು/ಘಟಕಗಳು ISI/BIS Mark ಹೊಂದಿರುವುದು.

ದಿನಾಂಕ: 01-04-2021ರ ನಂತರದ ದಿನಾಂಕದಲ್ಲಿ ಖರೀದಿಸಿ ಅಳವಡಿಸಿದ ಘಟಕಗಳಿಗೆ ಮಾತ್ರ ಸಹಾಯಧನ ಒದಗಿಸಲು ಅವಕಾಶವಿರುತ್ತದೆ.

CFTRI/IIMR/ICRISAT/NIFTEM/DFRL ons pas atrnone as debeat ಅಂತರರಾಷ್ಟ್ರೀಯ ಸಂಸ್ಥೆಗಳಿಂದ ತಂತ್ರಜ್ಞಾನ ಅಳವಡಿಸಿ ತಯಾರಿಸಲಾದ ಯಂತ್ರೋಪಕರಣಗಳಿಗೆ ಅವಕಾಶ ಕಲ್ಪಿಸುವುದು. ಇಲ್ಲದಿದ್ದಲ್ಲಿ ಕನಿಷ್ಠ ಆ ವ್ಯಾಪ್ತಿಯ ಕೃಷಿ/ ತೋಟಗಾರಿಕೆ ವಿಶ್ವವಿದ್ಯಾನಿಲಯದ ಸಂಬಂಧಿಸಿದ ಇಂಜೀನಿಯರಿಂಗ್ ವಿಭಾಗ ಅಥವಾ ಕೋಕ್ಲೋತ್ತರ ವಿಭಾಗದಿಂದ ಸದರಿ ಯಂತ್ರೋಪಕರಣದ ಬಗ್ಗೆ ತೃಪ್ತಿಕರ/ತಾಂತ್ರಿಕ ವರದಿ ಪಡೆಯುವುದು.

ಅನುದಾನ ಬಿಡುಗಡೆ ಹೇಗೆ?

ಅನುಮೋದಿತವಾದ ಪ್ರಸ್ತಾವನೆಗಳಿಗೆ ಘಟಕ ಅನುಷ್ಠಾನ ಪೂರ್ಣಗೊಂಡು ಕಾರ್ಯಾರಂಭದ ನಂತರ ಘಟಕ ಪರಿಶೀಲನೆ ಕೈಗೊಂಡು ಸಹಾಯಧನವನ್ನು ಬಿಡುಗಡೆ ಮಾಡಲಾಗುವುದು.

ಇದನ್ನೂ ಓದಿ: ನಿಮ್ಮ ಹಸುವಿನ ಹಾಲಿನ ಗುಣಮಟ್ಟ ಹೆಚ್ಚಿಸಲು ಹೀಗೆ ಮಾಡಿ | ಹಾಲಿನ ಡಿಗ್ರಿ ಹೆಚ್ಚಿಸುವ ಸರಳ ವಿಧಾನ

ಫಲಾನುಭವಿಗಳು ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳು

 1. ನಿಗದಿತ ನಮೂನೆಯ ಅರ್ಜಿ
 2. ಘಟಕ ಅನುಷ್ಠಾನ ನಿವೇಶನ/ಸ್ಥಳ/ಕಟ್ಟಡದ ದಾಖಲಾತಿ
 3. ವಿವರವಾದ ಯೋಜನಾ ವರದಿ
 4. ಸಂಘ ಸಂಸ್ಥೆಗಳಾಗಿದ್ದಲ್ಲಿ ನೋಂದಣಿ ಪ್ರಮಾಣ ಪತ್ರ, ಮೆಮೋರೆಂಡಮ್ ಮತ್ತು ಸಂಸ್ಥಾ ನಿವೇದನಾ ಪತ್ರ (ಆರ್ಟಿಕಲ್ಸ್ ಆಫ್, ಅಸೋಸಿಯೇಷನ್) ಹಾಗೂ ಸೊಸೈಟಿ ಬೈಲಾಗಳು (ಇದ್ದ ಪಕ್ಷದಲ್ಲಿ), ಪಾಲುದಾರಿಕೆ ಪತ್ರ, ಅಥವಾ ಇತರೆ ಇನ್ಯಾವುದೇ ಸಂಸ್ಥೆ ನೊಂದಾಯಿಸಿದ ಪತ್ರ
 5. ಕಟ್ಟಡ ನೀಲಿ ನಕಾಶೆಯ ನಕಲು ಮತ್ತು ಕಾರ್ಯವಿಧಾನದ ಹಂತಗಳನ್ನು ಸೂಚಿಸುವ ರೇಖಾಚಿತ್ರ
 6. ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಂದ ಮೂಲಭೂತ ಸೌಕರ್ಯ ವ್ಯವಸ್ಥೆಗೆ/ಘಟಕ ಸ್ಥಾಪನೆಗೆ ಪಡೆದ ಪರವಾನಿಗೆ ಪತ್ರ.
 7. ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ಮಂಜುರಾತಿ ಪತ್ರ
 8. ಹಣಕಾಸು ಸಂಸ್ಥೆಯಿಂದ ಘಟಕ ಸ್ಥಾಪನೆಗೆ ಪಡೆದ ಸಾಲ ಮಂಜೂರಾತಿ ಪತ್ರ
 9. ಯಂತ್ರೋಪಕರಣಗಳ ತಯಾರಕರು ಮಾರುಕಟ್ಟೆದಾರರಿಂದ ಪಡೆದ Quotations Invoice
 10. ಈ ಯೋಜನೆಯಡಿ ಯಾವ ಘಟಕಗಳಿಗೆ ಸಹಾಯಧನವನ್ನು ಪಡೆಯಲಾಗುತ್ತದೆಯೋ ಆ ಘಟಕಗಳನ್ನು ಕನಿಷ್ಠ ಮೂರು ವರ್ಷಗಳ ಸಾಲ ಘಟಕದ ಕಾರ್ಯನಿರ್ವಹಣೆಯನ್ನು ವಾಣಿಜ್ಯ ಉತ್ಪಾದನೆಯನ್ನು (commercial production) ಕೈಗೊಳ್ಳುವ ಬಗ್ಗೆ ಮುಚ್ಚಳಿಕೆ ಪತ್ರ ಮತ್ತು ಸಾಧ್ಯವಾಗದಿದ್ದಲ್ಲಿ ಸರ್ಕಾರದ ಸಹಾಯಧನವನ್ನು ಸರಳ ಬಡ್ಡಿ ದರದೊಂದಿಗೆ ಸರ್ಕಾರಕ್ಕೆ ಹಿಂತಿರುಗಿಸುವ ಬಗ್ಗೆ ಹಾಗು ಪ್ರಸ್ತಾವಿತ ಘಟಕಗಳ ಅನುಷ್ಠಾನಕ್ಕಾಗಿ ಸಂಬಂಧಿಸಿದ ಇತರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಂದ ಸರ್ಕಾರಿ, ಅರೆಸರ್ಕಾರಿ ಸಂಸ್ಥೆಗಳಿಂದ ಯಾವುದೇ ರೀತಿಯ ನೆರವು ಪಡೆಯದಿರುವುದರ ಬಗ್ಗೆ ಮುಚ್ಚಳಿಕೆ ಪತ್ರ (Affidavit).
 11. ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಾದಲ್ಲಿ ಜಾತಿ ಪ್ರಮಾಣ ಪತ್ರ
 12. ಆಧಾರ್ ಹಾಗು ಪ್ಯಾನ್ ಕಾರ್ಡ್ ಪ್ರತಿ
 13. ಯಂತ್ರೋಪಕರಣಗಳು / ಯಂತ್ರೋಪಕರಣಗಳ ಪ್ರಮುಖ ಘಟಕಗಳು ISI/BIS Mark ಹೊಂದಿರುವ ಬಗ್ಗೆ ದಾಖಲಾತಿ
 14. ಪೂರ್ಣಗೊಂಡ ಪ್ರಸ್ತಾವನೆಗಳಿಗೆ ಅನುಷ್ಠಾನಗೊಂಡ ಘಟಕಗಳ ಛಾಯಾಚಿತ್ರಗಳೊಂದಿಗೆ ನಿಗದಿತ ನಮೂನೆಯಲ್ಲಿ ತಪಾಸಣಾ ವರದಿ

ಮೇಲ್ಕಂಡ ದಾಖಲಾತಿಗಳ ಪೈಕಿ ಕ್ರಸಂ 1 ರಿಂದ 12ರ ವರೆಗಿನ ದಾಖಲೆಗಳನ್ನು ಅರ್ಜಿಯ ಜೊತೆಯಲ್ಲಿ ಕಡ್ಡಾಯವಾಗಿ ಸಲ್ಲಿಸಿ, ಕ್ರಸಂ 13 ಮತ್ತು 14ರ ದಾಖಲೆಗಳನ್ನು ತಪಾಸಣಾ ವರದಿಯ ಜೊತೆಯಲ್ಲಿ ಸಲ್ಲಿಸಬೇಕು.

ಇದನ್ನೂ ಓದಿ: ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಸೂಚನೆ: ರೈತ ಬಾಂಧವರೇ ಇಲ್ಲಿ ನಮೂದಿಸಲಾದ ಎಲ್ಲಾ ವಿಷಯಗಳು ಪ್ರಾಥಮಿಕ ಮಾಹಿತಿಗಾಗಿ ಮಾತ್ರ. ಇತ್ತೀಚಿನ ಮಾಹಿತಿಗಾಗಿ ದಯಮಾಡಿ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ. ಮಾಹಿತಿ ಮೂಲ: ಕೃಷಿ ಇಲಾಖೆ, ಕರ್ನಾಟಕ ಸರ್ಕಾರ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!