ಉದ್ಯೋಗ

SSLC ಪಾಸಾದವರಿಂದ ರೈಲ್ವೇ ಇಲಾಖೆಯ 4,103 ಹುದ್ದೆಗಳಿಗೆ ಅರ್ಜಿ ಆಹ್ವಾನ | South Central Railway Recruitment 2023

WhatsApp Group Join Now
Telegram Group Join Now

SSLC ಪಾಸಾದ ಅಭ್ಯರ್ಥಿಗಳಿಂದ ಸೌತ್ ಸೆಂಟ್ರಲ್ ರೈಲ್ವೆಯ ಒಟ್ಟು 4,103 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಹುದ್ದೆಗಳ ವಿವರ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿ ಇಲ್ಲಿದೆ…

ಸೌತ್ ಸೆಂಟ್ರಲ್ ರೈಲ್ವೆ ಅತಿದೊಡ್ಡ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. SSLC ಪಾಸಾದ ಅಭ್ಯರ್ಥಿಗಳಿಂದ ಒಟ್ಟು 4,103 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಇಚ್ಛೆಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಈ ಅವಕಾಶ ಬಳಸಿಕೊಳ್ಳಬಹುದು.

ಇದನ್ನೂ ಓದಿ: ಸದ್ಯದಲ್ಲೇ ಒಂದು ಲಕ್ಷ ರಾಜ್ಯ ಸರಕಾರಿ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ

ಹುದ್ದೆಗಳ ವಿವರ

ಸೌತ್ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ ಹುದ್ದೆಗಳನ್ನು ಎಸಿ ಮೆಕ್ಯಾನಿಕ್, ಕಾರ್ಪೆಂಟರ್, ಡಿಸೇಲ್ ಮೆಕ್ಯಾನಿಕ್, ಇಲೆಕ್ಟ್ರಿಷಿಯನ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಫಿಟ್ಟರ್, ಮಶಿನಿಸ್ಟ್, ಮೆಕ್ಯಾನಿಕ್ ಮಷಿನ್ ಟೂಲ್ ಮೈಂಟೆನನ್ಸ್, ಪೇಂಟರ್, ವೆಲ್ಡರ್ ಟ್ರೇಡ್‌ಗಳಲ್ಲಿ ನೇಮಕ ಮಾಡಲಾಗುತ್ತದೆ. ಆಯಾಯ ಟ್ರೇಡ್‌ಗೆ ಸಂಬಂಧಿಸಿದ ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ.

  1. ಎಸಿ ಮೆಕ್ಯಾನಿಕ್-250
  2. ಕಾರ್ಪೆಂಟರ್-18
  3. ಡಿಸೇಲ್ ಮೆಕ್ಯಾನಿಕ್-531
  4. ಇಲೆಕ್ಟ್ರಿಷಿಯನ್-1019
  5. ಇಲೆಕ್ಟ್ರಾನಿಕ್ ಮೆಕ್ಯಾನಿಕ್-92
  6. ಫಿಟ್ಟರ್-1460
  7. ಮಶಿನಿಸ್ಟ್-71
  8. ಮೆಕ್ಯಾನಿಕ್ ಮಷಿನ್ ಟೂಲ್ ಮೈಂಟೆನನ್ಸ್-5
  9. ಮಿಲ್ ರೈಟ್ ಮೈಂಟೆನನ್ಸ್-24
  10. ಪೇಂಟರ್-80
  11. ವೆಲ್ಡರ್-553

ಇದನ್ನೂ ಓದಿ: ಕೇಂದ್ರ ಸರಕಾರದ 10 ಲಕ್ಷ ಹುದ್ದೆಗಳ ನೇಮಕ | SSC ವಿವಿಧ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಇಲ್ಲಿದೆ

ವಿದ್ಯಾರ್ಹತೆ: ಸೌತ್ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜತೆಗೆ ಆಯಾ ಟ್ರೇಡ್‌ಗಳಲ್ಲಿ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಕಳೆದ ಡಿಸೆಂಬರ್ 30, 2022ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷವಾಗಿರಬೇಕು ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು. ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: ಪಿಎಂ ಕಿಸಾನ್ 13ನೇ ಕಂತು ಶೀಘ್ರ ಬಿಡುಗಡೆ: ನಿಮ್ಮೂರಿನ ಯಾರಿಗೆಲ್ಲ ಹಣ ಸಿಗಲ್ಲ ಮೊಬೈಲ್‌ನಲ್ಲೇ ಚೆಕ್ ಮಾಡಿ

ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಹಿಳಾ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲ. ಉಳಿದ ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.

ಆಯ್ಕೆ ವಿಧಾನ: ಅಭ್ಯರ್ಥಿಗಳು ವಿದ್ಯಾರ್ಹತೆಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಮಧ್ಯಪ್ರದೇಶ ರಾಜ್ಯಗಳಿಗೆ ಪೋಸ್ಟ್ ಮಾಡಲಾಗುವುದು.

ಇದನ್ನೂ ಓದಿ: PUC ಅಭ್ಯರ್ಥಿಗಳಿಂದ ರಸಗೊಬ್ಬರ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಕೆ ದಿನಾಂಕ: ಸೌತ್ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ ಹುದ್ದೆಗಳಿಗೆ ಕಳೆದ ಡಿಸೆಂಬರ್ 30, 2022ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದ್ದು; ಜನವರಿ 29, 2023 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ.

ಸೌತ್ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಕುರಿತ ಸಂಪೂರ್ಣ ವಿವರವುಳ್ಳ ಅಧಿಸೂಚನೆ (Notification) ಓದಲು ಇಲ್ಲಿ ಕ್ಲಿಕ್ ಮಾಡಿ

ಸೌತ್ ಸೆಂಟ್ರಲ್ ರೈಲ್ವೆ ಅಧಿಕೃತ ವೆಬ್‌ಸೈಟ್ ಭೇಟಿ ಆನ್‌ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಮಾಹಿತಿಗೆ: helpline number: +91 75500 28110 or email ID: [email protected] from Mon to Sat between 9:00 AM and 6:00 PM

ಗಮನಿಸಿ: ಉದ್ಯೋಗ ನೀಡುವ ಸುಳ್ಳು ಭರವಸೆ, ನಕಲಿ ವೆಬ್‌ಸೈಟ್/ ಅಧಿಸೂಚನೆ(ಪ್ರಕಟಣೆ)ಗಳಿಂದ ಎಚ್ಚರವಾಗಿರಿ. ಅಧಿಕೃತ ವೆಬ್‌ಸೈಟ್ ಮೂಲಕವೇ ಅರ್ಜಿ ಸಲ್ಲಿಸಿ. ಬಹುಮುಖ್ಯವಾಗಿ ಅಧಿಸೂಚನೆಯನ್ನು ಎಚ್ಚರಿಕೆಯಿಂದ ವಿವರವಾಗಿ ಓದಿ ಈ ಹುದ್ದೆಗಳಿಗೆ ನೀವು ಅರ್ಹರೆ? ಎಂಬುವುದನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಿ ಮತ್ತು ಕೂಡಲೇ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: 19.61 ಲಕ್ಷ ರೈತರ ಬೆಳೆವಿಮೆ ನೋಂದಣಿ | ಯಾವ ಬೆಳೆಗೆ ಎಷ್ಟು ಪರಿಹಾರ ಮೊಬೈಲ್‌ನಲ್ಲೇ ಚೆಕ್ ಮಾಡಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!