ಸುದ್ದಿಗಳು

ಶ್ರೀರಾಮ ಮಂದಿರ ದರ್ಶನಕ್ಕೆ ಅಯೋಧ್ಯೆಗೆ ವಿಶೇಷ ರೈಲು ವ್ಯವಸ್ಥೆ | ಟಿಕೆಟ್ ಬುಕಿಂಗ್ ಹೇಗೆ? Special train arrangement to Ayodhya for Sri Rama darshan

WhatsApp Group Join Now
Telegram Group Join Now

ಅಯೋಧ್ಯೆಯ ರಾಮ ಮಂದಿರ ದರ್ಶನಕ್ಕೆ ನೈಋತ್ಯ ರೈಲ್ವೇ ಇಲಾಖೆಯು ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಎಲ್ಲೆಲ್ಲಿಂದ ಹೊರಡಲಿವೆ ರೈಲುಗಳು? ಟಿಕೆಟ್ ಬುಕಿಂಗ್ ಹೇಗೆ? ಇಲ್ಲಿದೆ ಮಾಹಿತಿ…

Special train arrangement to Ayodhya for Sri Rama darshan : ದೂರದ ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ಲೋಕಾರ್ಪಣೆ ಆಗಲಿರುವ ಶ್ರೀರಾಮ ಮಂದಿರ (Ram mandir) ಇದೇ ಜನವರಿ 22ರ ನಂತರ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ. ಇದು ರಾಮಭಕ್ತರ ಶತಶತಮಾನದ ಬಹುದಿನ ಕನಸಾಗಿರುವುದರಿಂದ ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಶ್ರೀರಾಮ ದರ್ಶನಕ್ಕೆ ಸನ್ನದ್ಧರಗಿದ್ದಾರೆ. ಇದಕ್ಕೆ ಪೂರಕವಾಗಿ ಸರಕಾರ ಮತ್ತು ರೈಲ್ವೇ ಇಲಾಖೆ ಕೂಡ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.

ಹೌದು, ಇದೇ ಜನವರಿ 22ರ ‘ಸಂಜೀವಿನಿ’ ಮೂಹೂರ್ತದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ಮಂದಿರದಲ್ಲಿ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಅದಾದ ನಂತರ ರಾಮಭಕ್ತರ ದರ್ಶನಕ್ಕೆ ದೇವಾಲಯ ಮುಕ್ತವಾಗಲಿದೆ. ಲಕ್ಷಾಂತರ ಸಂಖ್ಯೆಯಲ್ಲಿ ರಾಮಭಕ್ತರು ಮಂದಿರ ವೀಕ್ಷಣೆಗೆ ತೆರಳಲಿದ್ದಾರೆ. ಅವರ ಅನುಕೂಲಕ್ಕಾಗಿ ಕರ್ನಾಟಕದ ವಿವಿಧ ನಗರಗಳಿಂದ ನೇರವಾಗಿ ಅಯೋಧ್ಯೆ ನಗರಕ್ಕೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲು ನೈಋತ್ಯ ರೈಲ್ವೇ ಇಲಾಖೆ (South Western Railway Department) ಮುಂದಾಗಿದೆ.

ಇದನ್ನೂ ಓದಿ: ರಾಮಮಂದಿರ ಹೆಸರಿನಲ್ಲಿ ಸೈಬರ್ ವಂಚನೆ : ಕರ್ನಾಟಕ ಪೊಲೀಸ್ ಇಲಾಖೆ ಎಚ್ಚರಿಕೆ! Ram Mandir Cyber ​​Scam : Police department alert

ಎಲ್ಲೆಲ್ಲಿಂದ ಹೊರಡಲಿವೆ ರೈಲು?

ನೈಋತ್ಯ ರೈಲ್ವೆ ವಲಯವು ರಾಜ್ಯದ ವಿವಿಧೆಡೆಯಿಂದ ಒಂದು ಡಜನ್‌ಗೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದ್ದು; ಶೀಘ್ರದಲ್ಲೇ ರೈಲುಗಳ ಸಮಯ ಹಾಗೂ ದಿನ ನಿಗದಿಪಡಿಸಿ ಅಧಿಕೃತವಾಗಿ ಪ್ರಕಟಣೆ ಹೊರಡಿಸಲಿದೆ. ಭಕ್ತರ ಗುಂಪುಗಳನ್ನು ವಿಂಗಡಿಸಿ ಒಬ್ಬರೋ, ಇಬ್ಬರೋ ನಾಯಕರನ್ನಾಗಿ ಮಾಡಿ ಅಯೋಧ್ಯೆ ಪ್ರವಾಸಕ್ಕೆ (Ayodhya Tour) ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ.

ಲಭ್ಯ ಮಾಹಿತಿಯ ಪ್ರಕಾರ ಉತ್ತರ ಕರ್ನಾಟಕದ ಹುಬ್ಬಳ್ಳಿಯಿಂದ 3 ರೈಲುಗಳು, ಬೆಳಗಾವಿಯಿಂದ 2 ರೈಲುಗಳು, ಶಿವಮೊಗ್ಗದಿಂದ 2 ರೈಲುಗಳು ಹಾಗೂ ಮೈಸೂರಿನಿಂದ 2 ರೈಲುಗಳು ಸೇರಿ ರಾಜ್ಯದ ವಿವಿಧ ನಗರಗಳಿಂದ ಸುಮಾರು 12ಕ್ಕೂ ಹೆಚ್ಚು ರೈಲುಗಳು ನೇರವಾಗಿ ಅಯೋಧ್ಯೆಗೆ ಸಂಚರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: PhonePe, Google pya, Paytm ಮೂಲಕ ಬೇರೆಯವರಿಗೆ ತಪ್ಪಾಗಿ ಹಣ ಕಳಿಸಿದರೆ ವಾಪಾಸು ಪಡೆಯುವುದು ಹೇಗೆ? Online Money Transaction

ಟಿಕೆಟ್ ಬುಕ್ಕಿಂಗ್ ಹೇಗೆ?

ಅಯೋಧ್ಯೆಯಿಂದ ಬಂದ ಮಂತ್ರಾಕ್ಷತೆಯನ್ನು ಸದ್ಯಕ್ಕೆ ರಾಜ್ಯದ ರಾಮಭಕ್ತರ ಮನೆ ಮನೆಗಳಿಗೆ ಮುಟ್ಟಿಸಲಾಗುತ್ತಿದೆ. ಹಾಗಂತ ಮಂತ್ರಾಕ್ಷತೆ ಪಡೆದ ಎಲ್ಲರಿಗೂ ಜನವರಿ 22ರಂದು ಅಯೋಧ್ಯೆಗೆ ತೆರಳುವ ಅವಕಾಶ ಸಿಗುವುದಿಲ್ಲ. ಈಗಿನ ಮಾಹಿತಿ ಪ್ರಕಾರ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠೆ ಮುಗಿದ ಬಳಿಕ ರಾಮದರ್ಶನಕ್ಕೆ ರೈಲುಗಳ ಸಂಚಾರ ಆರಂಭವಾಗುತ್ತವೆ. ಅಂದರೆ ಜನವರಿ 22ರ ನಂತರವಷ್ಟೇ ಭಕ್ತರ ದರ್ಶನಕ್ಕೆ ರಾಮ ದೇಗುಲ ಮುಕ್ತವಾಗಲಿದೆ.

ಅಯೋಧ್ಯೆಯಲ್ಲಿ ರಶ್ ಆಗಬಾರದು ಎಂಬ ಮುಂದಾಲೋಚನೆಯಿAದ ಒಂದು ರೈಲು ಹೋಗಿ ಬಂದ ಬಳಿಕ ಮತ್ತೊಂದು ರೈಲು ಆ ಊರಿನಿಂದ ಹೊರಡಲಿದೆ. ಈ ರೈಲುಗಳಲ್ಲಿ ಪ್ರಯಾಣಿಸಲು ರಾಮಭಕ್ತರಿಗೆ ಕೌಂಟರ್ ಟಿಕೆಟ್ ಸಿಗಯವುದಿಲ್ಲ. ಆನ್‌ಲೈನ್‌ನಲ್ಲಿ ಮುಂಗಡ ಟಿಕೆಟ್ ಬುಕ್ (Book advance tickets online) ಮಾಡಿಕೊಳ್ಳಬೇಕು. ಬುಕಿಂಗ್ ಆದ ಟಿಕೆಟ್ ಸಂಖ್ಯೆಯ ಆಧಾರದ ಮೇಲೆ ರೈಲುಗಳನ್ನು ಬಿಡಲಾಗುತ್ತದೆ ಎಂದು ನೈರುತ್ಯ ರೈಲ್ವೆ ಪಿಆರ್‌ಓ ಮಂಜುನಾಥ ಕನಮಡಿ ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Anganwadi Teacher Job Karnataka : ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ನೇಮಕಕ್ಕೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಈಗಾಗಲೇ ರಾಜ್ಯ ಸರಕಾರವು ಉತ್ತರ ಭಾರತದ ಕಾಶಿಯಾತ್ರೆ ಮತ್ತು ದಕ್ಷಿಣ ಭಾರತದ ರಾಮೇಶ್ವರ, ಕನ್ಯಾಕುಮಾರಿ, ಮಧುರೈ, ತಿರುವನಂತಪುರ ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರ ದರ್ಶನಕ್ಕೆ ಧಾರ್ಮಿಕ ದತ್ತಿ ಇಲಾಖೆಯಿಂದ ಸಹಾಯಧನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಗೂ ಧಾರ್ಮಿಕ ಪ್ರವಾಸ (Religious tour) ಭಾಗ್ಯವನ್ನು ರಾಜ್ಯ ಸರಕಾರ ಕಲ್ಪಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Home Guards Karnataka : 247 ಸ್ವಯಂ ಸೇವಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೆ ಅರ್ಜಿ ಸಲ್ಲಿಸಿ…

WhatsApp Group Join Now
Telegram Group Join Now

Related Posts

error: Content is protected !!