ಉದ್ಯೋಗ

Co-operative Bank recruitment 2024 :10ನೇ ತರಗತಿ ಪಾಸಾದವರಿಗೆ ಕೊ-ಆಪರೇಟಿವ್ ಬ್ಯಾಂಕ್’ನಲ್ಲಿ ಉದ್ಯೋಗವಕಾಶ

WhatsApp Group Join Now
Telegram Group Join Now

ಕೋ-ಆಪರೇಟಿವ್ ಬ್ಯಾಂಕ್’ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು; ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲದೆ…

Sri sudha co-operative bank recruitment 2024 : ಬೆಂಗಳೂರಿನ ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್’ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು, ಸದರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿ ಅರ್ಜಿ ಅಹ್ವಾನಿಸಲಾಗಿದೆ. ಸದರಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ, ವಯೋಮಿತಿ ವಿವರ, ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರ ಹಾಗೂ ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ.

Sri sudha co-operative bank recruitment 2024 ಸಂಕ್ಷಿಪ್ತ ವಿವರ

  • ನೇಮಕಾತಿ ಸಂಸ್ಥೆ : ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಲಿ. ಬೆಂಗಳೂರು
  • ಖಾಲಿ ಹುದ್ದೆಗಳ ಸಂಖ್ಯೆ : 18
  • ಅರ್ಜಿ ಸಲ್ಲಿಕೆ : ಆಫ್‌ಲೈನ್
  • ಉದ್ಯೋಗ ಸ್ಥಳ : ಬೆಂಗಳೂರು

ಇದನ್ನೂ ಓದಿ: Anganwadi Jobs : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ | 152 ಹುದ್ದೆಗಳು

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಕಚೇರಿ ಸಹಾಯಕರು : ಒಟ್ಟು 07 ಕಚೇರಿ ಸಹಾಯಕರು ಹುದ್ದೆಗಳಿಗೆ ಅರ್ಜಿ ಆಃವಾನಿಸಲಾಗಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10ನೇ ತರಗತಿ ಅಥವಾ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.

ಕಿರಿಯ ಸಹಾಯಕರು ಗ್ರೇಡ್ II : 10 ಹುದ್ದೆಗಳಿಗೆ ಅರ್ಜಿ ಆಃವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಪದವಿ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್’ನಲ್ಲಿ ಪಾಂಡಿತ್ಯ ಹೊಂದಿರಬೇಕು.

ಸಿಸ್ಟಮ್ ಅಡ್ಮಿನಿಸ್ಟ್ರೇಟರ್ : 01 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಂಗೀಕೃತ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ಸ್/ ಇನ್ಸಾರ್ಮೆಷನ್ ಸೈನ್ಸ್ನಲ್ಲಿ ಬಿ.ಇ/ಬಿ.ಟೆಕ್ ಅಥವಾ ತತ್ಸಮಾನ ತಾಂತ್ರಿಕ ಪದವಿ ಪಡೆದಿರಬೇಕು. ಪದವಿ ಜೊತೆಗೆ ಕೋರ್ ಬ್ಯಾಂಕಿ೦ಗ್, ನೆಟ್‌ವರ್ಕಿಂಗ್, ಸೈಬರ್ ಸೆಕ್ಯೂರಿಟಿಯ ಜ್ಞಾನ ಹೊಂದಿರಬೇಕು.

ಇದನ್ನೂ ಓದಿ: BMTC Conductor recruitment 2024 : SSLC ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿ | 2,500 ಹುದ್ದೆಗಳು

ವಯೋಮಿತಿ ವಿವರ

Sri sudha co-operative bank recruitment 2024 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.

ಮಾಸಿಕ ಸಂಬಳ

ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್’ನ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಮಾಸಿಕ ಸಂಬಳವನ್ನು ಹುದ್ದೆಗಳ ಅನುಗುಣವಾಗಿ ಈ ಕೆಳಗಿನಂತೆ ನೀಡಲಾಗುತ್ತದೆ.

  • ಕಿರಿಯ ಸಹಾಯಕರು ಗ್ರೇಡ್ II : ₹27,650 – ₹52,650
  • ಸಿಸ್ಟಮ್ ಅಡ್ಮಿನಿಸ್ಟ್ರೇಟರ್ : ₹45,300 – ₹88,300
  • ಕಚೇರಿ ಸಹಾಯಕರು : ₹23,500 – ₹47,650

ಇದನ್ನೂ ಓದಿ: Janamitra recruitment 2024 : ಗ್ರಾಮ ಪಂಚಾಯತಿಗಳಲ್ಲಿ 25,000 ಜನಮಿತ್ರ ಹುದ್ದೆಗಳ ನೇಮಕಾತಿ | 10ನೇ ತರಗತಿ ಪಾಸಾದವರಿಗೆ ಅವಕಾಶ

ಅರ್ಜಿ ಸಲ್ಲಿಸುವುದು ಹೇಗೆ ?

ಅರ್ಹ ಅಭ್ಯರ್ಥಿಗಳು ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್’ನ ಅಧಿಕೃತ ಜಾಲತಾಣದಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು, ಲಕೋಟೆ ಮೇಲೆ ಯಾವ ಹುದ್ದೆಗಾಗಿ ಅರ್ಜಿ ಸಲ್ಲಿಸುತ್ತಿದ್ದೀರಿ ಎಂದು ನಮೂದಿಸಿ ಕೆಳಗಿನ ವಿಳಾಸಕ್ಕೆ ಅಂಚೆ ಮುಖಾಂತರ ಅಥವಾ ಖುದ್ದಾಗಿ ಭೇಟಿ ನೀಡಿ ಸಲ್ಲಿಸಿಸಬಹುದು.

ಅರ್ಜಿ ಸಲ್ಲಿಕೆಯ ವಿಳಾಸ : ಸದಸ್ಯ ಕಾರ್ಯದರ್ಶಿ, ನೇಮಕಾತಿ ಸಮಿತಿ, ಶ್ರೀ ಸುಧಾ ಕೋ-ಆಪರೇಟಿವ್ ಬ್ಯಾಂಕ್ ಲಿ., ನಂ. 195/33, ‘ಶ್ರೀ ಸುಧಾ ರಜತ ಭವನ’, ಆರ್.ವಿ. ರಸ್ತೆ, ಜಯನಗರ, ಬೆಂಗಳೂರು-560004

ಅರ್ಜಿ ಶುಲ್ಕ

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 1,180 ರೂಪಾಯಿ ಅರ್ಜಿ ಶುಲ್ಕವನ್ನು ನಿಗಧಿಪಡಿಸಲಾಗಿದೆ.

ಇದನ್ನೂ ಓದಿ: Surveyor recruitment 2024 : PUC ಪಾಸಾದವರಿಗೆ 939 ಸರ್ವೆಯರ್ ಹುದ್ದೆಗಳು | ಭೂಮಾಪಕರ ನೇಮಕಾತಿಗೆ ದಿನಗಣನೆ | ಕಂದಾಯ ಸಚಿವರಿಂದ ಮಹತ್ವದ ಮಾಹಿತಿ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 02-02-2024
  • ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 23-02-2024

ಅಧಿಸೂಚನೆ : Download
ಅರ್ಜಿ ನಮೂನೆ : Download
ಅಧಿಕೃತ ಜಾಲತಾಣ : Click here
ಸಹಾಯವಾಣಿ : +91 88677 01055

ಇದನ್ನೂ ಓದಿ: Shivamogga Gram panchayat recruitment 2024: PUC ಮುಗಿಸಿದವರಿಗೆ ಗ್ರಾಮ ಪಂಚಾಯತಿ ಗ್ರಂಥಾಲಯ ಹುದ್ದೆಗಳು | ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ

Udyoga Mela Govt of Karnataka 2024 : ಸರಕಾರಿ ಉದ್ಯೋಗ ಮೇಳದಲ್ಲಿ ಭರ್ಜರಿ ಉದ್ಯೋಗಾವಕಾಶ | ಎಲ್ಲಾ ರೀತಿ ವಿದ್ಯಾರ್ಹತೆಯ ಉದ್ಯೋಗಾಕಾಂಕ್ಷಿಗಳಿಗೂ ಅವಕಾಶ

WhatsApp Group Join Now
Telegram Group Join Now

Related Posts

error: Content is protected !!