ವಿದ್ಯಾರ್ಥಿವೇತನಸರಕಾರಿ ಯೋಜನೆ

SSP post matric Scholarship 2024 : ಕರ್ನಾಟಕ ರಾಜ್ಯ ಸರ್ಕಾರದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ | ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

SSP post matric Scholarship 2024

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡಲು ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡುತ್ತಿದ್ದು, 2023-24ನೇ ಸಾಲಿನ ವಿದ್ಯಾರ್ಥಿವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

SSP Post matric Scholarship 2024 : ಕರ್ನಾಟಕ ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ರಾಜ್ಯ ಸರಕಾರದ ವಿವಿಧ ನಾಲ್ಕು ಇಲಾಖೆಗಳ ವಿದ್ಯಾರ್ಥಿ ವೇತನವನ್ನು ಒಂದೇ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ‘ಸ್ಟೇಟ್ ಸ್ಕಾಲರ್ ಶಿಪ್ ಪೋರ್ಟಲ್’ (State Scholarship Portal) ಪೋರ್ಟಲ್ ಸ್ಥಾಪಿಸಲಾಗಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಅಂದರೆ 11ನೇ ತರಗತಿ ನಂತರದ ಶಿಕ್ಷಣಕ್ಕೆ ಅರ್ಜಿ ಆಹ್ವಾನಿಸಿದ್ದು, ವಿದ್ಯಾರ್ಥಿ ವೇತನ ಪಡೆಯಲು, ಬೇಕಾಗಿರುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಅರ್ಹರಿರುವ ಎಲ್ಲಾ ಅಭ್ಯರ್ಥಿಗಳು ಸಂಪೂರ್ಣ ಲೇಖನವನ್ನು ಓದಿ, ‘ಸ್ಟೇಟ್ ಸ್ಕಾಲರ್ ಶಿಪ್ ಪೋರ್ಟಲ್’ ಮೂಲಕ ಇಂದೇ ಅರ್ಜಿ ಸಲ್ಲಿಸಿ…

ಇದನ್ನೂ ಓದಿ: Ayushman health card application : ಆಯುಷ್ಮಾನ್ ಆರೋಗ್ಯ ಕಾರ್ಡ್ 5 ಲಕ್ಷ ರೂಪಾಯಿ ವರೆಗೂ ಉಚಿತ ಚಿಕಿತ್ಸೆ | ಮೊಬೈಲ್’ನಲ್ಲೇ ಸಲ್ಲಿಸಿ ಅರ್ಜಿ

ಯಾವೆಲ್ಲ ಇಲಾಖೆಗಳ ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ? 

 1. ಸಮಾಜ ಕಲ್ಯಾಣ ಇಲಾಖೆ
 2. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
 3. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ
 4. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

1. SSP Post matric Scholarship for OBC students

ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಮೆಟ್ರಿಕ್ ನಂತರದ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ, ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ನೀಡುತ್ತಿದೆ. ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Anganwadi Jobs : ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಮಹಿಳೆಯರಿಂದ ಅರ್ಜಿ ಆಹ್ವಾನ | 152 ಹುದ್ದೆಗಳು

2. SSP Post matric Scholarship for Minority students

ಕರ್ನಾಟಕ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಇಲಾಖೆ ವತಿಯಿಂದ, ಮೆಟ್ರಿಕ್ ನಂತರದ ತರಗತಿಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯ ಇಲಾಖೆಯ ವಿದ್ಯಾರ್ಥಿ ವೇತನ ಪಡೆಯಲು, ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಸಮುದಾಯಗಳಾದ ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಜೈನ್, ಸಿಖ್, ಫಾರ್ಸಿ ಜನಾಂಗದವರಾಗಿರಬೇಕು.

3. SSP Post matric Scholarship for SC Students

ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ವರ್ಗಕ್ಕೆ (SC) ಸೇರಿರಬೇಕು.

ಇದನ್ನೂ ಓದಿ: Janamitra recruitment 2024 : ಗ್ರಾಮ ಪಂಚಾಯತಿಗಳಲ್ಲಿ 25,000 ಜನಮಿತ್ರ ಹುದ್ದೆಗಳ ನೇಮಕಾತಿ | 10ನೇ ತರಗತಿ ಪಾಸಾದವರಿಗೆ ಅವಕಾಶ

4. SSP Post matric Scholarship for ST Students

ಕರ್ನಾಟಕ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ನಂತರದ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಪರಿಶಿಷ್ಟ ಪಂಗಡಕ್ಕೆ (ST) ಸೇರಿರಬೇಕು.

ಸಾಮಾನ್ಯ ಅರ್ಹತೆಗಳು

ಈ ಎಲ್ಲಾ ಇಲಾಖೆಗಳ ವತಿಯಿಂದ ನೀಡಲಾಗುತ್ತಿರುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

 • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು ಮತ್ತು ಕರ್ನಾಟಕ ರಾಜ್ಯದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರಬೇಕು.
 • ಹಿಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳು ಕನಿಷ್ಠ 50% ಅಂಕಗಳೊ೦ದಿಗೆ ಪಾಸಾಗಿರಬೇಕು.
 • ಕುಟುಂಬದ ವಾರ್ಷಿಕ ವರಮಾನವು 2 ಲಕ್ಷ ರೂಪಾಯಿಯ ಒಳಗಿರಬೇಕು.

ಈ ನಾಲ್ಕು ಇಲಾಖೆಗಳು ವಿದ್ಯಾರ್ಥಿಗಳಿಗೆ ಡಿಬಿಟಿ (Direct Benefit Transfer) ಮುಖಾಂತರ, ಅರ್ಹ ವಿದ್ಯಾರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತವೆ.

ಇದನ್ನೂ ಓದಿ: Pradhan Mantri Suryoday Yojana 2024 : ಇನ್ಮುಂದೆ ಮನೆಮನೆಗೂ ಸೋಲಾರ್ ವಿದ್ಯುತ್ | ಕೇಂದ್ರ ಸರಕಾರದ ಹೊಸ ಯೋಜನೆ

ಅರ್ಜಿ ಸಲ್ಲಿಸುವುದು ಹೇಗೆ?

ನಾವು ಕೆಳಗೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನಿಮ್ಮ ಮೊಬೈಲ್’ನಲ್ಲಿಯೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ಸಮಸ್ಯೆ ಇದ್ದಲ್ಲಿ ನಾವು ಕೆಳಗೆ ನೀಡಿರುವ, ನಿಮಗೆ ಸಂಬ೦ಧಿತ ಇಲಾಖೆಯ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿಮ್ಮ ತೊಂದರೆಗೆ ಪರಿಹಾರ ಪಡೆದುಕೊಳ್ಳಬಹುದು.

SSP Post matric Scholarship 2023 ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು

 • ವಿದ್ಯಾರ್ಥಿಗಳ ಆಧಾರ್ ಸಂಖ್ಯೆ
 • ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ
 • ವಿದ್ಯಾರ್ಥಿಗಳ E-mail ID
 • ವಿದ್ಯಾರ್ಥಿಗಳ SSLC ನೋಂದಣಿ ಸಂಖ್ಯೆ
 • ಆರ್‌ಡಿ ಸಂಖ್ಯೆ ಸಹಿತ ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
 • ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯುಡಿಐಡಿ ಗುರುತಿನ ಸಂಖ್ಯೆ
 • ವಿದ್ಯಾರ್ಥಿಯ ಮನೆ ವಿಳಾಸ ಸಹಿತ ವಾಸಸ್ಥಳದ ವಿವರ (ಜಿಲ್ಲೆ, ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು)
 • ವಿದ್ಯಾರ್ಥಿಯ ಕಾಲೇಜು ದಾಖಲಾತಿ / ನೋಂದಣಿ ಸಂಖ್ಯೆ
 • ಸಂಬ೦ಧಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ)
 • ಹಾಸ್ಟೆಲ್ ವಿವರಗಳು (ಅನ್ವಯವಾದಲ್ಲಿ).

ಇದನ್ನೂ ಓದಿ: Surveyor recruitment 2024 : PUC ಪಾಸಾದವರಿಗೆ 939 ಸರ್ವೆಯರ್ ಹುದ್ದೆಗಳು | ಭೂಮಾಪಕರ ನೇಮಕಾತಿಗೆ ದಿನಗಣನೆ | ಕಂದಾಯ ಸಚಿವರಿಂದ ಮಹತ್ವದ ಮಾಹಿತಿ

ಇಲಾಖಾವಾರು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು

 • ಆಯುಷ್ ಇಲಾಖೆ 31-01-2024
 • ಬ್ರಾಹ್ಮಣ ಅಭಿವೃದ್ಧಿ ಮಂಡಳಿ 31-01-2024
 • ಕಾಲೇಜು ಶಿಕ್ಷಣ ಇಲಾಖೆ 10-02-2024
 • ಆರ್ಯ ವೈಶ್ಯ ಇಲಾಖೆ 15-02-2024
 • ಹಿಂದುಳಿದ ಕಲ್ಯಾಣ ಇಲಾಖೆ 15-02-2024
 • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 15-02-2024
 • ತಾಂತ್ರಿಕ ಶಿಕ್ಷಣ ಇಲಾಖೆ 29-02-2024
 • ಸಮಾಜ ಕಲ್ಯಾಣ ಇಲಾಖೆ 29-02-2024
 • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ 31-03-2024
 • ವೈದ್ಯಕೀಯ ಶಿಕ್ಷಣ ಇಲಾಖೆ 31-05-2024

ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಲಿಂಕು: ಇಲ್ಲಿ ಕ್ಲಿಕ್ ಮಾಡಿ

ವಿವಿಧ ಇಲಾಖೆಗಳ ಸಹಾಯವಾಣಿ ಸಂಖ್ಯೆಗಳು 

 • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : 080-22374836
 • ಸಮಾಜ ಕಲ್ಯಾಣ ಇಲಾಖೆ : 9008400078
 • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ : 080-22261789
 • ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ : 080-22535931

ಇದನ್ನೂ ಓದಿ: BMTC Conductor recruitment 2024 : SSLC ಪಾಸಾದವರಿಗೆ ಬಿಎಂಟಿಸಿ ಕಂಡಕ್ಟರ್ ಹುದ್ದೆಗಳ ನೇಮಕಾತಿ | 2,500 ಹುದ್ದೆಗಳು

bara parihara release : ಈ ರೈತರಿಗೆ ಬರ ಪರಿಹಾರ ಹಣ ಜಮಾ | ನಿಮ್ಮ ಹೆಸರನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ…

WhatsApp Group Join Now
Telegram Group Join Now

Related Posts

error: Content is protected !!