ಉದ್ಯೋಗ

Karnataka State Govt Recruitment 2023 | ರಾಜ್ಯ ಸರಕಾರದ 43 ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now

ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲು ರಾಜ್ಯ ಸರಕಾರ ಸನ್ನದ್ಧವಾಗಿದೆ. ರಾಜ್ಯ ಸರಕಾರ ಭರ್ತಿ ಮಾಡಿಕೊಳ್ಳಲು ಆಯೋಜಿಸಿರುವ ಇಲಾಖಾವಾರು ಹುದ್ದೆಗಳೆಷ್ಟು? ಯಾರಿಗೆಲ್ಲ ಅವಕಾಶ ಸಿಗಲಿದೆ? ಇಲ್ಲಿದೆ ಸಮಗ್ರ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರದ ಎಲ್ಲಾ ಖಾಲಿ ಹುದ್ದೆಗಳನ್ನು ಆದಷ್ಟು ಬೇಗನೆ ಭರ್ತಿ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವುದಾಗಿ ಜನರಿಗೆ ಮಾತು ನೀಡಿದ್ದೇವೆ. ಕೊಟ್ಟ ಮಾತಿನಂತೆ ಆದಷ್ಟು ಬೇಗನೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಅರ್ಹರನ್ನು ಪಾರದರ್ಶಕವಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕಳೆದ ಸರ್ಕಾರದ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ನೇಮಕಾತಿ ಹಗರಣಗಳಿಂದ ನೊಂದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸುತ್ತೇವೆ. ಅರ್ಹರನ್ನು ಪಾರದರ್ಶಕವಾಗಿ ನೇಮಕ ಮಾಡಿಕೊಂಡು ನಿರುದ್ಯೋಗ ಸಮಸ್ಯೆ ನಿವಾರಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಶೀಘ್ರವೇ ಸರ್ಕಾರದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅರ್ಹರನ್ನು ಗುರುತಿಸಿ ಪ್ರಾಮಾಣಿಕವಾಗಿ ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

New BPL Card Application: ಜೂನ್‌ನಿಂದ ಮತ್ತೆ BPL ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ | ನಿಮ್ಮೂರಿನ BPL ಕಾರ್ಡ್ ದಾರರ ಪಟ್ಟಿ ಇಲ್ಲಿ ಚೆಕ್ ಮಾಡಿ

ಖಾಲಿ ಇರುವ ಹುದ್ದೆಗಳೆಷ್ಟು?

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 2.58 ಲಕ್ಷ ಹುದ್ದೆಗಳ ಪೈಕಿ ಒಂದು ಲಕ್ಷ ಹುದ್ದೆಗಳನ್ನು ಈ ಒಂದು ವರ್ಷದೊಳಗೆ ಭರ್ತಿ ಮಾಡಲಾಗುವುದು ಎಂದು ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದರು. ಬೆಳಗಾವಿಯಲ್ಲಿ ನಡೆದ ಕಳೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಸಿ.ಎನ್.ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ್ದ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು, ಒಟ್ಟು 43 ವಿವಿಧ ಇಲಾಖೆಗಳಲ್ಲಿ ‘ಎ’ ಯಿಂದ ‘ಡಿ’ ವೃಂದದವರೆಗೆ ಮಂಜೂರಾಗಿರುವ 7,69,981 ಹುದ್ದೆಗಳಲ್ಲಿ 5,11,272 ಭರ್ತಿಯಾಗಿದ್ದು; 2,58,709 ಹುದ್ದೆಗಳು ಖಾಲಿಯಿವೆ. ಈ ಪೈಕಿ ಗ್ರೂಪ್ ಸಿ ಮತ್ತು ಡಿ ವೃಂದಗಳಲ್ಲಿ ಅಂದಾಜು 82,700 ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದಲ್ಲಿ ತುಂಬಲಾಗಿದೆ. ಜತೆಗೆ ಎ ಹಾಗೂ ಬಿ ವೃಂದದ ಹುದ್ದೆಗಳ ಹೆಚ್ಚುವರಿ ಪ್ರಭಾರವಹಿಸಲಾಗಿದೆ ಎಂದು ಹೇಳಿದ್ದರು.

ಅತಿ ಹೆಚ್ಚು ಹುದ್ದೆ ಖಾಲಿ ಇರುವ ಇಲಾಖೆಗಳು 

ಪ್ರಾಥಮಿಕ ಶಿಕ್ಷಣ (66,059), ಆರೋಗ್ಯ (34,644), ಒಳಾಡಳಿತ (23,557), ಉನ್ನತ ಶಿಕ್ಷಣ 12,674), ಕಂದಾಯ (10,621), ಪಂಚಾಯತ್ ರಾಜ್ (10,409), ಪಶುಸಂಗೋಪನೆ (9,972), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (8,063) ಅತಿ ಹೆಚ್ಚು ಹುದ್ದೆ ಖಾಲಿ ಇರುವ ಇಲಾಖೆಗಳಾಗಿವೆ.

Zero Interest Crop Loan: 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ಬೆಳೆಸಾಲ | ರೈತರು ಸಾಲ ಪಡೆಯಲು ಏನು ಮಾಡಬೇಕು?

ಇಲಾಖಾವಾರು ಖಾಲಿ ಹುದ್ದೆಗಳ ವಿವರ

 1. ಕೃಷಿ-6316
 2. ಪಶುಸಂಗೋಪನ- 9,972
 3. ಹಿಂದುಳಿದ ವರ್ಗಗಳ ಕಲ್ಯಾಣ- 8,063
 4. ಸಹಕಾರ- 4,738
 5. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ-5,738
 6. ಇ-ಆಡಳಿತ-75
 7. ಪರಿಸರ ಮತ್ತು ಜೀವಿಶಾಸ್ತ್ರ- 04
 8. ಇಂಧನ- 245
 9. ಆರ್ಥಿಕ- 8,779
 10. ಮೀನುಗಾರಿಕೆ- 777
 11. ಆಹಾರ ಮತ್ತು ನಾಗರೀಕ ಸರಬರಾಜು- 1,187
 12. ಅರಣ್ಯ- 4,562
 13. ಕೈಮಗ್ಗ ಮತ್ತು ಜವಳಿ- 39
 14. ಉನ್ನತ ಶಿಕ್ಷಣ- 12,674
 15. ಒಳಾಡಳಿತ- 23,557
 16. ತೋಟಗಾರಿಕೆ- 3,092
 17. ವಾರ್ತಾ ಇಲಾಖೆ- 319
 18. ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ- 60
 19. ಕನ್ನಡ ಮತ್ತು ಸಂಸ್ಕೃತಿ ಇಲಾಖೆ- 423
 20. ಕಾರ್ಮಿಕ- 2,500
 21. ಕಾನೂನು- 8,370
 22. ಭಾರಿ ಮತ್ತು ಮಧ್ಯಮ ಕೈಗಾರಿಕೆ- 353
 23. ಬಾರಿ ನೀರಾವರಿ- 500
 24. ಗಣಿ ಮತ್ತು ಭುವಿಜ್ಞಾನ ಇಲಾಖೆ- 677
 25. ಸಣ್ಣ ನೀರಾವರಿ- 1,095
 26. ಅಲ್ಪಸಂಖ್ಯಾತರ ಕಲ್ಯಾಣ- 3,633
 27. ಸಂಸAದೀಯ ವ್ಯವಹಾರಗಳು- 435
 28. ಯೋಜನ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ- 1,282
 29. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ- 66,059
 30. ಲೋಕೋಪಯೋಗಿ- 2,063
 31. ಕಂದಾಯ- 10,621
 32. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್- 10,409
 33. ಪರಿಶಿಷ್ಟ ಜಾತಿಗಳ ಕಲ್ಯಾಣ- 9,592
 34. ಪರಿಶಿಷ್ಟ ಪಂಗಡಗಳ ಕಲ್ಯಾಣ- 2,318
 35. ರೇಷ್ಮೆ ಇಲಾಖೆ- 2,802
 36. ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ- 4,216
 37. ಸಣ್ಣ ಕೈಗಾರಿಕೆ- 356
 38. ಪ್ರವಾಸೋದ್ಯಮ- 286
 39. ಸಾರಿಗೆ ಇಲಾಖೆ- 1,602
 40. ನಗರಾಭಿವೃದ್ಧಿ- 839
 41. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ- 3,230
 42. ಯುವಜನ ಸೇವೆಗಳು- 207
 43. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ- 34,644

…ಹೀಗೆ ರಾಜ್ಯ ಸರಕಾರದ 43 ಇಲಾಖೆಗಳಲ್ಲಿ ಒಟ್ಟು 2,58,709 ಹುದ್ದೆಗಳು ಖಾಲಿ ಇದ್ದು; ಇವುಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲು ರಾಜ್ಯ ಸರಕಾರ ಸನ್ನದ್ಧವಾಗಿದ್ದು; ಎಲ್ಲ ಹಂತದ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೂ ಅವಕಾಶ ಸಿಗಲಿದೆ.

ಇದನ್ನೂ ಓದಿ:

ಇಲ್ಲಿದೆ ಅಡಿಕೆ ತೋಟದ ಅಧಿಕ ಇಳುವರಿಯ ಗುಟ್ಟು | ಈ ಸರಳ ವಿಧಾನ ಎಲ್ಲರೂ ಅನುಸರಿಸಬಹುದು

ಬೇಸಿಗೆಗೆ ಅಡಿಕೆ ತೋಟಕ್ಕೆ ಜೀವಾಮೃತವೇ ಜೀವಾಳ | ಬೇಸಿಗೆಗೆ ತಪ್ಪದೇ ಅನುಸರಿಸಿ ಈ ವಿಧಾನ

4-5 ವರ್ಷದಲ್ಲೇ ಫಸಲು ನೀಡುವ ಅಪ್ಪೆಮಿಡಿ ಮಾವು ತಳಿ ಅಭಿವೃದ್ಧಿ | ರೈತರಿಗೆ ವರದಾನ ಈ ಮಾವು

ಹಸು ಎಮ್ಮೆಗಳ ಸರ್ವ ರೋಗಕ್ಕೆ ಇಲ್ಲಿದೆ ಪವರ್‌ಫುಲ್ ನಾಟಿ ಔಷಧಿ | ಪ್ರತಿಯೊಬ್ಬ ರೈತರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ

2007 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ: ಪಿಯುಸಿ ಪಾಸ್ ಆದವರಿಗೆ ಅವಕಾಶ | ತಾಲ್ಲೂಕುವಾರು ಖಾಲಿ ಹುದ್ದೆಗಳ ಪಟ್ಟಿ ಇಲ್ಲಿದೆ…

ಕುರಿ ಸೊಸೈಟಿ ರಚನೆಗೆ ರೂ.5 ಲಕ್ಷ ಪ್ರೋತ್ಸಾಹ ಧನ | ಸದಸ್ಯರಿಗೆ ಸಿಗಲಿದೆ ಕುರಿ ನಿಗಮದಿಂದ ಭರ್ಜರಿ ಸೌಲಭ್ಯ

ಹಸುವಿನ ಹಾಲಿನ ಡಿಗ್ರಿ ಹೆಚ್ಚಿಸಲು ಈ ವಿಧಾನ ಅನುಸರಿಸಿ…

ಹಸು, ಎಮ್ಮೆ ಗಂಜಲದಿಂದ ನೀವೆ ತಯಾರಿಸಿಕೊಳ್ಳಿ ಸಾವಯವ ಯೂರಿಯಾ ಗೊಬ್ಬರ

ಹಸು, ಎಮ್ಮೆಗಳ ಹಾಲು ಹೆಚ್ಚಿಸಲು ಒಂದು ಹಿಡಿ ಅಜೋಲ್ಲಾ ಸಾಕು | ಇದು ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳ ಟಾನಿಕ್

 

ಜಾನುವಾರುಗಳ ಮೃಷ್ಟಾನ್ನ ರಸಮೇವು | ಬೇಸಿಗೆಗೆ ಮೇವಿನ ಕೊರತೆ ನೀಗುವ ಸೈಲೇಜ್ ತಯಾರಿಕೆ ಹೇಗೆ?

ಈ ಬೆಳೆಯಿಂದ ಒಂದು ಎಕರೆಯಲ್ಲಿ ತಿಂಗಳಿಗೆ 2 ಲಕ್ಷ ಆದಾಯ | ಸಣ್ಣ ರೈತರ ಬದುಕು ಬಂಗಾರವಾಗಿಸುವ ಬೆಳೆ

ನಿರಂತರ ಉಚಿತ ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!