ಸರಕಾರಿ ಯೋಜನೆ

ಸಬ್ಸಿಡಿ ಸಹಿತ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | ತಕ್ಷಣ ಸಿಗಲಿದೆ 50,000 ರೂಪಾಯಿ | Subsidized loan facility for craftsmans

WhatsApp Group Join Now
Telegram Group Join Now

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಸಾಲ ಮತ್ತು ಸಹಾಯಧನ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಸಬ್ಸಿಡಿ ಸಹಿತ 50,000 ರೂಪಾಯಿ ಸಾಲ ಸಿಗಲಿದೆ. ಈ ಸಾಲಕ್ಕೆ ಯಾರೆಲ್ಲ ಅರ್ಹರು? ಅರ್ಜಿ ಸಲ್ಲಿಕೆ ಹೇಗೆ? ಸಾಲ ಪಡೆಯಲು ಮಾನದಂಡಗಳೇನು? ಇತ್ಯಾದಿ ವಿವರ ಇಲ್ಲಿದೆ…

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಕುಶಲಕರ್ಮಿಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ  ಆಹ್ವಾನಿಸಲಾಗಿದೆ. 76ನೇ ಸ್ವಾತಂತ್ರೋತ್ಸವದ ಭಾಷಣದಲ್ಲಿ ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರು ಘೋಷಿಸಿದಂತೆ ಕುಶಲಕರ್ಮಿಗಳಿಗೆ ಸಾಲ ಸಹಾಯಧನ ಯೋಜನೆಯಡಿ ಕುಶಲಕರ್ಮಿಗಳ ಜೀವನಮಟ್ಟ ಸುಧಾರಿಸಲು, ಕುಶಲಕರ್ಮಿಗಳ ವೃತ್ತಿಯನ್ನು ಅಭಿವೃದ್ದಿಪಡಿಸಿಕೊಳ್ಳಲು ಹಾಗೂ ವೃತ್ತಿ ಮುಂದುವರೆಸಿಕೊಂಡು ಹೋಗಲು ಅನುವಾಗುವಂತೆ ಸರ್ಕಾರದ ಸಹಾಯಧನ ಸೇರಿದಂತೆ ಗರಿಷ್ಠ 50,000 ರೂಪಾಯಿಗಳ ವರೆಗೆ ಬ್ಯಾಂಕುಗಳ ಮುಖೇನ ಸಾಲ ಸೌಲಭ್ಯ ಒದಗಿಸಲಾಗುವುದು.

ಈ ಕುಶಲಕರ್ಮಿಗಳು ಹಣಕಾಸು ಲಭ್ಯತೆ, ಸಾಲ ಸೌಲಭ್ಯ, ದುಡಿಮೆ ಬಂಡವಾಳ, ಹೊಸ ವಿನ್ಯಾಸ, ಮಾರುಕಟ್ಟೆ ಅವಕಾಶ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂಥವರಿಗೆ ವಾಣಿಜ್ಯ ಬ್ಯಾಂಕುಗಳು, ಸಹಕಾರ ಬ್ಯಾಂಕುಗಳು ಮತ್ತು ಪತ್ತಿನ ಸಹಕಾರ ಸಂಘಗಳನ್ನು ಹೊರತುಪಡಿಸಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ ಈ ಸಾಲ ಸೌಲಭ್ಯ ಸಿಗಲಿದೆ. ಈ ಎಲ್ಲ ಅತಿ ಸಣ್ಣ ಕುಶಲಕರ್ಮಿಗಳು ಬ್ಯಾಂಕುಗಳಿಂದ ಸುಲಭವಾಗಿ 50,000 ರೂಪಾಯಿ ಸಾಲ ಸೌಲಭ್ಯ ಪಡೆಯಬಹುದು. ಇದರಲ್ಲಿ 15,000 ರೂಪಾಯಿ ಸಬ್ಸಿಡಿಯಾಗಿದ್ದು; 35,000 ರೂಪಾಯಿ ಸಾಲವನ್ನು ಸುಲಭ ಕಂತುಗಳಲ್ಲಿ ಹಂತಹಂತವಾಗಿ ಪಾವತಿಸಬಹುದು.

ಇದನ್ನೂ ಓದಿ: ಸ್ವಯಂ ಉದ್ಯೋಗಕ್ಕೆ 2 ಲಕ್ಷ ರೂಪಾಯಿ ಸಾಲ ಸೌಲಭ್ಯ | ಜನವರಿ 17ರ ಒಳಗೆ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಹೇಗೆ?

ಕುಶಲಕರ್ಮಿಗಳು ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಬಂದ ಅರ್ಜಿಗಳನ್ನು ಕೇಂದ್ರದ ಜಂಟಿ ನಿರ್ದೇಶಕರ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಯ ಅನುಮೋದಿಸಿ ಸಂಬಂಧಿಸಿದ ಬ್ಯಾಂಕುಗಳಿಗೆ ಶಿಫಾರಸು ಮಾಡಲಿದೆ. ಸಾಲ ಮಂಜೂರಾದ ಬಳಿಕ ಸಹಾಯಧನದ ಕ್ಲೈಮ್ ಸ್ವೀಕರಿಸಿ ಬ್ಯಾಂಕುಗಳಿಗೆ ಸಾಲದ ಮೇಲೆ ಶೇ.30ರಷ್ಟು ಅಂದರೆ ಗರಿಷ್ಠ 15,000 ರೂಪಾಯಿ ಸಹಾಯಧನವನ್ನು ಸರ್ಕಾರ ಬಿಡುಗಡೆ ಮಾಡಲಿದೆ.

ಕುಶಲಕರ್ಮಿಗಳಿಗೆ ಬ್ಯಾಂಕುಗಳಿಂದ ಪ್ರಕ್ರಿಯೆ ಶುಲ್ಕ, ದಾಖಲಾತಿ ಶುಲ್ಕ, ಮುಂಗಡ ಶುಲ್ಕಗಳಿಂದ ವಿನಾಯಿತಿ ಸಿಗಲಿದ್ದು, ಇಡೀ ಯೋಜನೆಯ ಅನುಷ್ಠಾನ, ಅನುದಾನ ಬಿಡುಗಡೆ ಮತ್ತು ಉಸ್ತುವಾರಿಯನ್ನು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ನಿರ್ದೇಶಕರು ನಿರ್ವಹಿಸಲಿದ್ದಾರೆ. ಸಬ್ಸಿಡಿ ಸಹಿತ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು 2023ರ ಜನವರಿ 21 ಕೊನೆಯ ದಿನವಾಗಿದೆ. ಫೆಬ್ರವರಿ 1ರಿಂದ ಸಾಲ ಸೌಲಭ್ಯ ಪ್ರಕ್ರಿಯೆ ನಡೆಯಲಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ರೈತರೇ ಬೆಳೆವಿಮೆ, ಬೆಳೆಹಾನಿ, ಪಿಎಂ ಕಿಸಾನ್ ಹಣದ ಸಂಪೂರ್ಣ ಮಾಹಿತಿಯನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ

ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕಂಬಳಿ ನೇಯುವವರು, ಕಬ್ಬಿಣದ ಕೆಲಸ ಮಾಡುವವರು (ಕಮ್ಮಾರಿಕೆ) ಬುಟ್ಟಿ ಹೆಣೆಯುವವರು, ಆಭರಣ ತಯಾರಿಕೆ ಮಾಡುವವರು (ಅಕ್ಕಸಾಲಿಗ), ಕಲ್ಲಿನ ಕೆತ್ತನೆ, ಮರದ ಕೆತ್ತನೆಗಳು, ರೈತರ ನೇಗಿಲು, ಕುಂಟೆ, ಎತ್ತಿನ ಬಂಡಿ ತಯಾರಕರು (ಬಡಗಿ), ಶ್ರೀಗಂಧ ಕ್ರಾಫ್ಟ್, ಮೈಸೂರು ರೋಸ್‌ವುಡ್ ಕೆತ್ತನೆ, ಚನ್ನಪಟ್ಟಣ ಆಟಿಕೆಗಳು, ಬಿದರಿ ಕಲೆ, ಕಿನ್ಹಾಳ್ ಆಟಿಕೆಗಳು, ನವಲಗುಂದ ರತ್ನಗಂಬಳಿಗಳು, ಮುಂಡಗೋಡು ಫೈಲ್ ಕಾರ್ಪೆಟ್‌ಗಳು, ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ಗಂಜಿಫಾ ಕಲೆ, ಮಡಿಕೆ ಕುಡಿಕೆ ಮಾಡುವವರು (ಕುಂಬಾರಿಕೆ), ಮಣ್ಣಿನ ವಿಗ್ರಹ ತಯಾರಿಕೆ, ಲೋಹದ ಕರಕುಶಲ, ಬೆತ್ತ ಮತ್ತು ಬಿದಿರು, ಸಂಡೂರು ಲಂಬಾಣಿ ಕಸೂತಿ, ಕಸೂತಿ ಕಲೆ, ಕೋಕೋನಟ್ ಶೆಲ್ ಕ್ರಾಫ್ಟ್, ಚಾಪೆ ಹೆಣೆಯುವವರು ಮುಂತಾದ ಕುಶಲಕರ್ಮಿಗಳು ಈ ಸಾಲ ಪಡೆಯಲು ಅರ್ಹರಾಗಿದ್ದಾರೆ.

ಸಬ್ಸಿಡಿ ಸಾಲ ಪಡೆಯಲು ಅರ್ಹತೆಗಳೇನು?

ಮೇಲ್ಕಾಣಿಸಿದ ಎಲ್ಲ ವರ್ಗದ ಕುಶಲಕರ್ಮಿಗಳು ಸಾಲ ಪಡೆಯಲು ಕನಿಷ್ಠ ೧೮ ವರ್ಷ ತುಂಬಿರಬೇಕು. ಕರಕುಶಲ ವೃತ್ತಿಗಾಗಿ ಬ್ಯಾಂಕಿನಿಂದ ಪಡೆದ ಸಾಲಕ್ಕೆ ಮಾತ್ರ ಸಹಾಯಧನ (ಸಬ್ಸಿಡಿ) ಲಭ್ಯವಾಗುತ್ತದೆ. ಒಬ್ಬರಿಗೆ ಒಂದು ಬಾರಿ ಮಾತ್ರ ಸಹಾಯಧನ ಸಿಗಲಿದೆ. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಥವಾ ಅಭಿವೃದ್ಧಿ ಆಯುಕ್ತರ (ಕರಕುಶಲ) ಕಚೇರಿಯಲ್ಲಿ ನೋಂದಣಿ ಆಗಿರಬೇಕು ಅಥವಾ ಉಪ ನಿರ್ದೇಶಕರು (ಗ್ರಾಮೀಣ ಕೈಗಾರಿಕೆ) ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಯಿಂದ ದೃಢೀಕರಣಗೊಂಡಿರಬೇಕು.

ಇದನ್ನೂ ಓದಿ: ರೈತರಲ್ಲಿ ಈ ಕಾರ್ಡ್ ಇದ್ದರೆ ಸುಲಭದಲ್ಲಿ ಸಿಗಲಿದೆ ಸರಕಾರಿ ಸೌಲಭ್ಯ | ಕಾರ್ಡ್ ಪಡೆಯಲು ಮೊಬೈಲ್‌ನಲ್ಲೇ ನೋಂದಾಯಿಸಿ

ರಾಜ್ಯದಲ್ಲಿ ಸುಮಾರು 35,000 ಅತಿ ಸಣ್ಣ ನೋಂದಾಯಿತ ಕುಶಲಕರ್ಮಿಗಳಿದ್ದಾರೆ. ಪ್ರತಿ ಕುಶಲಕರ್ಮಿಯು ಪಡೆಯುವ ಸಾಲಕ್ಕೆ ಸಹಾಯಧನ ನೀಡಲು ಪ್ರಸಕ್ತ 2022-23ನೇ ಸಾಲಿನಲ್ಲಿ 5 ಕೋಟಿ ರೂಪಾಯಿ ಹಾಗೂ ಮುಂದಿನ ಮೂರು ಆರ್ಥಿಕ ವರ್ಷಗಳಲ್ಲಿ ಅಂದರೆ 2023-24ರಿಂದ 2025-26ರ ವರೆಗೆ ತಲಾ 15 ಕೋಟಿಯಂತೆ ವೆಚ್ಚ ಆಗಲಿದೆ. ಈವರೆಗೆ ನೋಂದಾಯಿಸಿಕೊಳ್ಳದ ಕುಶಲಕರ್ಮಿಗಳಿಗೂ ಈ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ. ರಾಜ್ಯದ ಸುಮಾರು 30,000 ಕುಶಲಕರ್ಮಿಗಳು ಕೇಂದ್ರ ಸರ್ಕಾರದ ಅಭಿವೃದ್ಧಿ ಆಯುಕ್ತರಲ್ಲಿ (ಕರಕುಶಲ) ನೋಂದಾಯಿಸಿಕೊಂಡಿದ್ದಾರೆ. ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದಲ್ಲಿ ಸುಮಾರು 2,500 ಕುಶಲಕರ್ಮಿಗಳು ನೋಂದಾಯಿಸಿಕೊಂಡಿದ್ದಾರೆ.

ಅರ್ಜಿ ಸಲ್ಲಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು. ರಾಜ್ಯದ 30 ಜಿಲ್ಲೆಗಳ ಕೈಗಾರಿಕಾ ಕೇಂದ್ರಗಳ ಸಂಪರ್ಕ ಸಂಖ್ಯೆ ಮತ್ತು ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

error: Content is protected !!