ತಂತ್ರಜ್ಞಾನ ಸುದ್ದಿ

fake sim card fraud : ನಿಮ್ಮ ಹೆಸರಿನಲ್ಲಿ ಯಾರಾದರೂ ನಕಲಿ ಸಿಮ್ ಖರೀದಿಸಿದ್ದಾರಾ? ಮೋಸ ಹೋಗುವ ಮೊದಲು ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ…

WhatsApp Group Join Now
Telegram Group Join Now

ಯಾರಾದರು ನಿಮ್ಮ ದಾಖಲೆಗಳನ್ನು ಸೃಷ್ಟಿಸಿ, ನಕಲಿ ಸಿಮ್ ಕಾರ್ಡ್ ಖರೀದಿಸಿ ಅದನ್ನು ಅಪರಾಧ ಕೃತ್ಯಕ್ಕೆ ಬಳಸುತ್ತಿದ್ದರೆ ದೊಡ್ಡ ದುರಂತಕ್ಕೆ ಬಲಿಯಾಗಬೇಕಾಗುತ್ತದೆ. ಹಾಗಾದರೆ ಮೊಬೈಲ್‌ನಲ್ಲಿಯೇ ನಕಲಿ ಸಿಮ್ ಪತ್ತೆ ಹಚ್ಚುವುದು ಹೇಗೆ? ಅದನ್ನು ಬ್ಲಾಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

Fake Sim Card Fraud : ಆಧಾರ್, ವೋಟರ್ ಐಡಿ, ಪಾನ್ ಕಾರ್ಡ್ ಸೇರಿದಂತೆ ಇತರೆ ವೈಯಕ್ತಿಕ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ, ಬ್ಯಾಂಕ್ ಖಾತೆಗಳಿಂದ ಹಣ ದೋಚಲು ಹಾಗೂ ಇತರೆ ಅಪರಾಧ ಕೃತ್ಯಗಳಿಗೆ ದುರ್ಬಳಕೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ವಂಚನಾ ಜಾಲಕ್ಕೆ ಎರಡೂ ಬದಿಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಇಂತಹ ಕಳ್ಳ ದಂಧೆೆಯನ್ನು ತಡೆಯಲು ಸರ್ಕಾರವು ಮುಂದಾಗಿದೆ.

ಇದನ್ನೂ ಓದಿ: Pension Schemes New Rules : ಇನ್ಮುಂದೆ ಇವರಿಗೆ ವೃದ್ದಾಪ್ಯ ವೇತನ ಸೇರಿ ಎಲ್ಲ ಪಿಂಚಣಿ ಬಂದ್ | ಹೊಸ ರೂಲ್ಸ್

ನಕಲಿ ಸಿಮ್ ಹೇಗೆ ದುರ್ಬಳಕೆಯಾಗುತ್ತದೆ?

ಯಾರದೋ ಹೆಸರಿನಲ್ಲಿ ಮತ್ತ್ಯಾರದೋ ದಾಖಲೆಗಳನ್ನು ಕೊಟ್ಟು ನಕಲಿ ಸಿಮ್ ಕಾರ್ಡ್’ಗಳನ್ನು ಖರೀದಿಸಿ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವ ಖದೀಮರ ಸಂಖ್ಯೆ ಹೆಚ್ಚಾಗಿದೆ. ಇದು ಸಾರ್ವಜನಿಕರಲ್ಲಿ ಭಯ ಭೀತಿ ಉಂಟುಮಾಡಿದೆ. ನಕಲಿ ಸಿಮ್ ಕಾರ್ಡ್ ಅನ್ನು ಕಡಿವಾಣ ಹಾಕಲು 2023ರ ದೂರ ಸಂಪರ್ಕ ಕಾಯ್ದೆಯು ಇದೆ ಜನವರಿ 1ರಿಂದ ಅನುಷ್ಠಾನಕ್ಕೆ ಬಂದಿದೆ.

ಸೈಬರ್ ಕ್ರೈಂ, ಆರ್ಥಿಕ ವಂಚನೆ, ಬ್ಯಾಂಕ್ ಖಾತೆಯಿಂದ ಹಣ ದೋಚಲು, ಕಳ್ಳತನ ಮಾಡಲು, ಭ್ರಷ್ಟಾಚಾರ ಮಾಡಲು ಹಾಗೂ ಭಯೋತ್ಪಾದನಾ ಕೆಲಸಗಳಿಗೆ ಅಮಾಯಕರ ಹೆಸರಿನಲ್ಲಿರುವ ನಕಲಿ ಸಿಮ್ ಕಾರ್ಡುಗಳು ಬಳಕೆಯಾಗುತ್ತಿವೆ. ಇಂತಹ ಅನೇಕ ಪ್ರಕರಣಗಳು ಪೊಲೀಸ್ ತನಿಖಾ ವರದಿಯಲ್ಲಿ ದೃಢಪಟ್ಟಿದ್ದು, ಕೇಂದ್ರ ದೂರ ಸಂಪರ್ಕ ಇಲಾಖೆಯ ಮಾಹಿತಿ ಪ್ರಕಾರ ಬರೋಬ್ಬರಿ 55.52 ಲಕ್ಷ ನಕಲಿ ಸಿಮ್ ಕಾರ್ಡ್ಗಳ ಸಂಪರ್ಕ ಕಡಿತಗೊಳಿಸಲಾಗಿದೆ.

ಇದನ್ನೂ ಓದಿ: ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕುವ Whatsapp Cyber Crime | ವಾಟ್ಸಪ್ ವಂಚನೆಯಿಂದ ಬಜಾವಾಗಲು ಹೀಗೆ ಮಾಡಿ…

ಬೀಳಲಿದೆ ಭಾರೀ ದಂಡ

ನಕಲಿಗಳಿಗೆ ಕಡಿವಾಣ ಹಾಕುವ ಹಿನ್ನಲೆಯಲ್ಲಿ 2024 ಜನವರಿ 1 ರಿಂದ ದೂರಸಂಪರ್ಕ ಕಾಯ್ದೆ ಜಾರಿಯಾಗಿದ್ದು, ಸಿಮ್ ಕಾರ್ಡ್ ಖರೀದಿಸಲು ಹಲವು ಕಠಿಣ ನಿಯಮಗಳನ್ನು ಬಿಗಿ ಮಾಡಲಾಗಿದೆ. ಸಿಮ್ ಕಾರ್ಡ್ ಡೀಲರ್‌ಗಳು ಮತ್ತು ಸಿಮ್ ಕಾರ್ಡ್’ಗಳನ್ನು ಮಾರುವವರು ಪೊಲೀಸ್ ಪರಿಶೀಲನೆ ಮತ್ತು ಬಯೋಮೆಟ್ರಿಕ್ಸ್’ಗೆ  ಒಳಗಾಗುವುದು ಕಡ್ಡಾಯವಾಗಿದೆ.

ನೋಂದಣಿ ಮಾಡಿಸದೇ ಇರುವವರು ಸಿಮ್ ಕಾರ್ಡ್ ಮಾರಾಟ ಮಾಡಲು ಅರ್ಹರಿರುವುದಿಲ್ಲ ಮತ್ತು ಸಿಮ್ ಕಾರ್ಡ್ ಮಾರಲು ಅನುಮತಿ ಇಲ್ಲ. ಆಕಸ್ಮಾತ್ ಇಂತಹ ನಕಲಿ ಸಿಮ್ ಮಾರಾಟದಲ್ಲಿ ಸಿಕ್ಕಿ ಬಿದ್ದರೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಿ 10 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ.

ಇದನ್ನೂ ಓದಿ: LPG Gas e-KYC Updates : ಮೊಬೈಲ್‌ನಲ್ಲೇ ಚೆಕ್ ಮಾಡಿ ಎಲ್‌ಪಿಜಿ ಗ್ಯಾಸ್ ಇಕೆವೈಸಿ ಸ್ಟೇಟಸ್ | ಇಲ್ಲಿದೆ ಸಂಪೂರ್ಣ ಮಾಹಿತಿ

ನಕಲಿ ಸಿಮ್ ಪರಿಶೀಲನೆ ಹೇಗೆ?

ಈಗಾಗಲೇ ಒಂದು ವೇಳೆ ನಿಮ್ಮ ಹೆಸರಿನಲ್ಲಿ ಬೇರೆಯವರು ವಂಚನೆ ಮಾಡಲು ನಕಲಿ ದಾಖಲೆಗಳನ್ನು ಸಲ್ಲಿಸಿ ಸಿಮ್ ಖರೀದಿಸಿದ್ದರೆ ಅಂತಹ ಸಿಮ್ ಕಾರ್ಡ್’ಗಳನ್ನು ಕೆಲವೇ ನಿಮಿಷದಲ್ಲಿ ನಿಮ್ಮ ಮೊಬೈಲ್’ನಲ್ಲಿಯೇ ಬ್ಲಾಕ್ ಮಾಡಬಹುದಾಗಿದೆ. ಈ ವಿಧಾನ ಅನುಸರಿಸಿ ಎಲ್ಲರೂ ತಮ್ಮ ಸುರಕ್ಷತೆ ಕಾಪಾಡಿಕೊಳ್ಳಿ ಎಂದು ಪೊಲೀಸರು ಸೂಚಿಸಿದ್ದಾರೆ.

ನೀವು ಆ ಮಾಹಿತಿಯನ್ನು ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಅಂಡ್ ಕನ್‌ಪ್ಯೂಮರ್ ಪ್ರೊಟೆಕ್ಷನ್ (Telecom Analytics for Fraud Management and Consumer Protection -TAFCOP) ವೆಬ್‌ಸೈಟ್‌ಗೆ ಭೇಟಿ ನೀಡಿ ಈ ಕೆಳಗಿನಂತೆ ಪರಿಶೀಲಿಸಿ ಬ್ಲಾಕ್ ಮಾಡಬಹುದಾಗಿದೆ.

ಇದನ್ನೂ ಓದಿ: Google Pay loan upto 1 lakh : ₹1 ಲಕ್ಷದ ವರೆಗೆ ಗೂಗಲ್ ಪೇ ಲೋನ್ | ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ಹಣ, ಮೊಬೈಲ್‌ನಲ್ಲಿಯೇ ಅರ್ಜಿ ಸಲ್ಲಿಸಿ

ನಕಲಿ ಸಿಮ್ ಚೆಕ್ ಮಾಡುವ ವಿಧಾನ

ನಾವು ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ಟೆಲಿಕಾಂ ಅನಾಲಿಟಿಕ್ಸ್ ಫಾರ್ ಫ್ರಾಡ್ ಮ್ಯಾನೇಜ್‌ಮೆಂಟ್ ಅಂಡ್ ಕನ್‌ಪ್ಯೂಮರ್ ಪ್ರೊಟೆಕ್ಷನ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ನಿಮ್ಮ ಮೊಬೈಲ್ ನಂಬರ್ ಮತ್ತು ಅಲ್ಲಿರುವ ಕ್ಯಾಪ್ಚಾ ಕೋಡ್ ನಮೂದಿಸಿ, Validate captcha ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಬರುತ್ತದೆ.

ಒಟಿಪಿಯನ್ನು ನಮೂದಿಸಿದ ನಂತರದಲ್ಲಿ ಲಾಗಿನ್ ಆಗಿ, ನಿಮ್ಮ ಹೆಸರಿನ ದಾಖಲೆಯಲ್ಲಿ ಒಟ್ಟಾರೆ ಎಷ್ಟು ಸಿಮ್ ಖರೀದಿಸಲಾಗಿದೆ ಎಂಬ ಮಾಹಿತಿಯ ಜೊತೆಗೆ, ಮೊಬೈಲ್ ನಂಬರ್’ಗಳನ್ನು ಕೂಡ ಅಲ್ಲಿ ಕಾಣಿಸುತ್ತವೆ.

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

ಅಲ್ಲಿ ತೋರಿಸಲಾಗುವ ಮೊಬೈಲ್ ಸಂಖ್ಯೆಗಳ ಎದುರಿಗೆ ನಾಟ್ ಮೈ ನಂಬರ್ (Not My Number), ನಾಟ್ ರೆಕ್ವೈರ್ಡ್ (Not required) ಮತ್ತು ರೆಕ್ವೈರ್ಡ್ (Required) ಎಂಬ ಮೂರು ಆಯ್ಕೆಗಳು ಇರುತ್ತವೆ.

ನಿಮ್ಮ ಬಳಿ ಇರದೇ ಇರುವ ಅಥವಾ ನೀವು ಖರೀದಿಸದೆ ಇರುವ ನಂಬರ್ ಅಲ್ಲಿ ಕಂಡರೆ ತಕ್ಷಣ ನಾಟ್ ಮೈ ನಂಬರ್ ಅಥವಾ ನಾಟ್ ರೆಕ್ವೈರ್ಡ್ ಎಂಬ ಆಯ್ಕೆ ಮಾಡಿ ರಿಪೋರ್ಟ್ ಮಾಡಿ ವಂಚನೆ ಮತ್ತು ಮೋಸಗಳಿಂದ ತಪ್ಪಿಸಿಕೊಳ್ಳಿ.

ನಕಲಿ ಸಿಮ್ ಪರಿಶೀಲಿಸಲು ಡೈರೆಕ್ಟ್ ಲಿಂಕ್ 👇
https://tafcop.sancharsaathi.gov.in/telecomUser/

ಇದನ್ನೂ ಓದಿ: ಸಾಲ ಪಡೆಯುವವರಿಗೆ PhonePe ಹೊಸ ಅಪ್ಡೇಟ್ | PhonePe Loan Credit score Advice

WhatsApp Group Join Now
Telegram Group Join Now

Related Posts

error: Content is protected !!