ಸುದ್ದಿಗಳು

Electric Vehicle Tax Incentives : ಇ-ವಾಹನಗಳ ಖರೀದಿಗೆ ತೆರಿಗೆ ರದ್ದು | ಸರಕಾರದ ಅಧಿಕೃತ ಆದೇಶ

WhatsApp Group Join Now
Telegram Group Join Now

ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಿದೆ. ಯಥಾಪ್ರಕಾರ ಯಾವುದೇ ತೆರಿಗೆ ಪಾವತಿಸದೇ ಇವಿ ವಾಹನಗಳನ್ನು ಖರೀದಿಸಬಹುದು…

Electric Vehicle Tax Incentives : ದುಬಾರಿ ಬೆಲೆಯ ವಿದ್ಯುತ್ ಚಾಲಿತ (Electric Vehicle) ವಾಹನಗಳನ್ನು ಖರೀದಿಸುವ ಯೋಚನೆ ನಿಮಗಿದೆಯೇ? ಹಾಗಿದ್ದರೆ ಇ-ವಾಹನ ಖರೀದಿಸುವವರಿಗಾಗಿ ರಾಜ್ಯ ಸರ್ಕಾರ ಶುಭ ಸುದ್ದಿ ನೀಡಿದೆ. 20 ಲಕ್ಷಕ್ಕಿಂತ ಹೆಚ್ಚು ಮೊತ್ತದ ಇ.ವಿಗಳಿಗೆ ತೆರಿಗೆ ವಿನಾಯಿತಿ ಮುಂದುವರಿಕೆಗೆ ಸರಕಾರ ಆದೇಶಿಸಿದೆ.

ರಾಜ್ಯದಲ್ಲಿ ನೋಂದಣಿಯಾಗುವ 20 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ವಿದ್ಯುತ್ ಚಾಲಿತ ವಾಹನಗಳಿಗೆ ಆಜೀವ ತೆರಿಗೆ ವಿನಾಯಿತಿ (Lifetime tax exemption) ಹಿಂಪಡೆಯುವ೦ತೆ ರಾಜ್ಯ ರಸ್ತೆ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವವನ್ನು ರಾಜ್ಯ ಸರಕಾರ ತಿರಸ್ಕರಿಸಿದೆ. ಆ ಮೂಲಕ ಪರಿಸರಸ್ನೇಹಿ (Environmentally friendly) ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದೆ.

ಇದನ್ನೂ ಓದಿ: SSLC ಪಾಸಾದವರಿಗೆ 4,237 ಸರಕಾರಿ ಬಸ್ ಕಂಡಕ್ಟರ್ ಹುದ್ದೆಗಳು | BMTC And KKRTC Bus Conductor Recruitment 2024

ಇ-ವಾಹನಗಳಿಗೆ ತೆರಿಗೆಯೇ ಇಲ್ಲ!

2016ರಲ್ಲಿ ಕೇಂದ್ರ ಸರಕಾರವು ಪರಿಸರಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ಉತ್ತೇಜಿಸುವ ಉದ್ದೇಶದಿಂದ ಎಲ್ಲಾ ಬಗೆಯ ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ (Road tax exemption) ಘೋಷಿಸಿತ್ತು. ಅಂದರೆ ಯಾವುದೇ ರೀತಿಯ ತೆರಿಗೆ ಪಾವತಿಸದೇ ವಾಹನ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ತೆರಿಗೆ ವಿನಾಯಿತಿಯಿಂದ ಆದಾಯ ಇಳಿಕೆಯಾದ ಕಾರಣ ಸಾರಿಗೆ ಪ್ರಾಧಿಕಾರವು, ಎಲ್ಲಾ ಬಗೆಯ ಇ-ವಾಹನಗಳಿಗೆ ತೆರಿಗೆ ವಿಧಿಸಲು ಅನುಮತಿ ಕೋರಿ ಹಿಂದೆಯೇ ಪ್ರಸ್ತಾವ ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಸರಕಾರ ತಿರಸ್ಕರಿಸಿತ್ತು.

ಬಳಿಕ ಇಲಾಖೆಯು 20 ಲಕ್ಷಕ್ಕೂ ಅಧಿಕ ಮೌಲ್ಯದ ಇ-ವಾಹನಗಳಿಗಾದರೂ ಶೇ.18ರಷ್ಟು ತೆರಿಗೆ ವಿಧಿಸುವಂತೆ ಕೆಲ ತಿಂಗಳುಗಳ ಹಿಂದೆ ಪ್ರಸ್ತಾವ ಸಲ್ಲಿಸಿತ್ತು. ಪ್ರಸ್ತಾವಕ್ಕೆ ವಿಧಾನ ಮಂಡಲ ಅಧಿವೇಶನದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ತೆರಿಗೆ ವಿನಾಯಿತಿ ಮುಂದುವರೆಸುವ೦ತೆ ಆಗ್ರಹ ಕೇಳಿ ಬಂದಿತ್ತು. ಈ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತೆರಿಗೆ ವಿನಾಯಿತಿ (Tax Exemption) ಮುಂದುವರಿಸುವ ಭರವಸೆ ನೀಡಿದ್ದರು. ಆ ಪ್ರಕಾರ ಸರಕಾರ ಇ-ವಾಹನಗಳ ತೆರಿಗೆ ವಿನಾಯಿತಿ ಮುಂದುವರಿಸುವ೦ತೆ ಆದೇಶಿಸಿದೆ.

ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರ ಮತ್ತು ವಿವಿಧ ವೃತ್ತಿ ಉಪಕರಣ ಪಡೆಯಲು ಅರ್ಜಿ ಆಹ್ವಾನ Free Sewing Machine & Free Improved Tool Kits

ಹಲವು ಪ್ರಯೋಜನ

ಎಲೆಕ್ಟ್ರಿಕ್ ವಾಹನಗಳ ಖರೀದಿಯಿಂದ ಒಂದೆಡೆ ಶೂನ್ಯ ತೆರಿಗೆ ವಿನಾಯಿತಿ ಸಿಕ್ಕರೆ, ಮತ್ತೊಂದು ಕಡೆಗೆ ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ (Low maintenance cost) ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಖರೀದಿ ದಿನೇ ದಿನೇ ಹೆಚ್ಚಾಗುತ್ತಿದೆ. ಈಗ್ಗೆ ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ವರ್ಷಕ್ಕೆ ಹೆಚ್ಚೆಂದರೆ 11,000 ಇ-ವಾಹನಗಳು ನೋಂದಣಿಯಾಗುತ್ತಿದ್ದವು. ರಾಜ್ಯದಲ್ಲಿ ಕಳೆದ ಒಂದೇ ವರ್ಷದಲ್ಲಿ ಬರೋಬ್ಬರಿ 1.10 ಲಕ್ಷ ವಾಹನಗಳು ನೋಂದಣಿಯಾಗಿವೆ.

ಸರಕಾರದ ತೆರಿಗೆ ವಿನಾಯಿತಿ, ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ವರ್ಷದಲ್ಲಿ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಇ-ವಾಹನಗಳು ನೋಂದಣಿಯಾಗುತ್ತಿವೆ. ಈ ಪ್ರಮಾಣ ವರ್ಷ ವರ್ಷ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳುತ್ತಾರೆ ಸಾರಿಗೆ ಅಧಿಕಾರಿಗಳು. ಈ ಉದ್ದೇಶದಿಂದಲೇ ಸರಕಾರ ತೆರಿಗೆ ವಿನಾಯಿತಿಯನ್ನು ಪುನಃ ಮುಂದುವರೆಸಿದೆ.

Electric Vehicle Tax Incentives

ಇದನ್ನೂ ಓದಿ: Home Guards Karnataka : 247 ಸ್ವಯಂ ಸೇವಕ ಹೋಂ ಗಾರ್ಡ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೆ ಅರ್ಜಿ ಸಲ್ಲಿಸಿ…

Drought relief Release : 25 ಲಕ್ಷ ರೈತರ ಖಾತೆಗೆ ಬರ ಪರಿಹಾರ ಹಣ ಜಮಾ | ಕಂದಾಯ ಸಚಿವರ ಮಹತ್ವದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!