ಪಶುಪಾಲನೆ

ದಿನಕ್ಕೆ 33.8 ಲೀಟರ್ ಹಾಲು ಕೊಡುತ್ತದೆ ಈ ಎಮ್ಮೆ | The Murrah breed of buffalo gives more milk

WhatsApp Group Join Now
Telegram Group Join Now

ಮುರ್ರಾ ತಳಿಯ ಎಮ್ಮೆ ಮತ್ತು ಕೋಣಗಳು ಭಾರೀ ಸುದ್ದಿ ಮಾಡುತ್ತಿವೆ. ಮುರ್ರಾ ತಳಿಯ ಕೋಣವೊಂದು 35 ಕೋಟಿ ಬೆಲೆಗೆ ಮಾರಾಟವಾದರೆ, ಇದೇ ತಳಿಯ ಎಮ್ಮೆ ದಿನಕ್ಕೆ 33.8 ಲೀಟರ್ ಹಾಲು ನೀಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ….

ಸಾಮಾನ್ಯವಾಗಿ ಎಮ್ಮೆಗಳು ದಿನವೊಂದಕ್ಕೆ 10 ರಿಂದ 16 ಲೀಟರ್ ಹಾಲು ಕೊಡುವುದುಂಟು. ಆದರೆ ಹರಿಯಾಣದ ಕೈತಾಲ್‌ನ ಬುಧಖೇಡ ನಿವಾಸಿ ನರೇಶ್ ಎಂಬುವವರ ಮುರ್ರಾ ತಳಿಯ ಎಮ್ಮೆಯೊಂದು ಬರೋಬ್ಬರಿ 33.8 ಲೀಟರ್ ಹಾಲು ನೀಡುವ ಮೂಲಕ ರಾಷ್ಟ್ರೀಯ ದಾಖಲೆ ಮಾಡಿದೆ. ಮೊದಲ ಸೂಲು ಮರಿ ಹಾಕಿದಾಗ 19ರಿಂದ 20 ಲೀಟರ್ ಹಾಲು ನೀಡುತ್ತಿತ್ತು. ಎರಡನೇ ಬಾರಿ 30 ಲೀಟರ್ ಹಾಗೂ ಈಗ ಮೂರನೇ ಬಾರಿ 33.8 ಲೀಟರ್ ಹಾಲು ನೀಡುತ್ತಿದೆ.

24 ಗಂಟೆಗಳಲ್ಲಿ 33.8 ಲೀಟರ್ ಹಾಲು ನೀಡುವ ಮೂಲಕ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಿಂದ ಹೊಸ ದಾಖಲೆ ನಿರ್ಮಿಸಿದೆ. ಇದು ಭಾರತದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಿಸುವ ಎಮ್ಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುರ್ರಾ ಎಮ್ಮೆಗಳು ಕರು ಹಾಕಿದ ಎಂಟು ತಿಂಗಳುಗಳವರೆಗೆ ಹಾಲು ಕೊಡುತ್ತವೆ.

ಇದನ್ನೂ ಓದಿ: SSLC ಪಾಸ್ ಆದವರಿಗೆ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ , 24,369 ಹುದ್ದೆಗಳು… 

‘ಎಮ್ಮೆಗೆ ಕಡಲೆ ಚಿನ್ನಿ, ಶೇಂಗಾ ಹಿಂಡಿ, ಗೋಧಿ ತೌಡು ಮಿಶ್ರಿತ ಆಹಾರವನ್ನು ರಾತ್ರಿ ವೇಳೆಯಲ್ಲಿ ನೆನೆಯಲಿಟ್ಟು ಬೆಳಗ್ಗೆ ತಿನ್ನಲು ಕೊಡುತ್ತೇವೆ. ಹಸಿ ಮೇವು ಹಾಗೂ ಒಣ ಮೇವು ಮಿಶ್ರಣ ಮಾಡಿದ ಮೇವು ಹಾಕುತ್ತೇವೆ ಎನ್ನುತ್ತಾರೆ ಎಮ್ಮೆ ಮಾಲೀಕ ನರೇಶ್. ಈ ಎಮ್ಮೆಗೆ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಬಿಬಿ) 33.8 ಲೀಟರ್ ಹಾಲು ನೀಡುವ ದಾಖಲೆಯ ಪ್ರಮಾಣ ಪತ್ರದೊಂದಿಗೆ ಸುಧಾರಿತ ತಳಿ ಸ್ಥಾನಮಾನವನ್ನು ಕೂಡ ನೀಡಿದೆ.

ಅಧಿಕಾರಿಗಳು ಅದರ ಹಾಲಿನ ಕೊಬ್ಬಿನ ಗುಣಮಟ್ಟವನ್ನು 10ರಲ್ಲಿ 9.31 ಎಂದು ಹೇಳಿದ್ದಾರೆ. ಹೀಗಾಗಿ ಈ ತಳಿಯ ಪೋಷಣೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕ್ಷೇತ್ರದಲ್ಲಿ ಡೈರಿ ರೈತರ ಸಂಘ ಆಯೋಜಿಸಿದ್ದ 3ನೇ ಡಿಎಫ್‌ಎ ಇಂಟರ್‌ನ್ಯಾಷನಲ್ ಡೈರಿ ಮತ್ತು ಅಗ್ರಿ ಎಕ್ಸ್‌ಪೋ ಮಿಲ್ಕಿಂಗ್ ಶಿಬಿರದಲ್ಲಿ ಎಮ್ಮೆ ಮಾಲೀಕರನ್ನು ಸನ್ಮಾನಿಸಿದ್ದಾರೆ. ಈ ಎಮ್ಮೆ ಇದೀಗ ದೇಶಾದ್ಯಂತ ಖ್ಯಾತಿ ಪಡೆದಿದ್ದು; ಕೋಟಿ ರೂಪಾಯಿ ಕೊಡುತ್ತೇವೆ ಎಂದರೂ ಎಮ್ಮೆ ಮಾರಾಟ ಮಾಡುವುದಿಲ್ಲ ಎನ್ನುತ್ತಾರೆ ಎಮ್ಮೆ ಮಾಲೀಕ ನರೇಶ್.

ಇದನ್ನೂ ಓದಿ: ರೈತರೇ ತೋಟಗಾರಿಕೆಯ ಈ ಸಬ್ಸಿಡಿ ಸೌಲಭ್ಯಗಳನ್ನು ತಪ್ಪದೇ ಬಳಸಿಕೊಳ್ಳಿ

35 ಕೋಟಿ ಬೆಲೆಯ ಕೋಣ

 

 

ಇನ್ನು ಇದೇ ಹರಿಯಾಣ ಮೂಲದ ಮುರ್ರಾ ತಳಿಯ ದಷ್ಟಪುಷ್ಟವಾಗಿರುವ ರಾಜು ಮತ್ತು ಗರುಡ ಹೆಸರಿ ಈ ಕೋಣಗಳು ಕೂಡ ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿವೆ. ಮೊನ್ನೆ ದೀಪಾವಳಿ ಪ್ರಯುಕ್ತ ತೆಲಂಗಾಣದ ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ನಡೆದ ಸದರ್ ಉತ್ಸವದಲ್ಲಿ ಈ ಕೋಣಗಳು ಪ್ರದರ್ಶನದಲ್ಲಿ ವಿಸೇಷ ಗಮನ ಸೆಳೆದವು.

ಕೆಲವೇ ದಿನಗಳ ಹಿಂದೆ ಹರಿಯಾಣದಿಂದ ಮುರ್ರಾ ತಳಿಯ ರಾಜು ಹೆಸರಿನ ಕೋಣಕ್ಕೆ ಬರೋಬ್ಬರಿ 35 ಕೋಟಿ ರೂಪಾಯಿ ನೀಡಿ, ಹೈಮದ್ ಆಲಂ ಖಾನ್ ಎಂಬ ಮಾಲೀಕನಿಂದ ಖರೀದಿಸಿ ತಂದಿರುವ ಮಧು ಯಾದವ್ ಅವರು ಇದರ ವೀರ್ಯದ ಒಂದು ಹನಿಗೆ 1,200 ರಿಂದ 1,500 ರೂಪಾಯಿ ಇದೆ. ರಾಜ್ಯದಲ್ಲಿ ಮುರ್ರಾ ತಳಿ ಎಮ್ಮೆಗಳಿಗೂ ಬೇಡಿಕೆ ಇದ್ದು, ಈ ತಳಿ ಬೆಳವಣಿಗೆಗೆ ನೆರವಾಗುವ ಕೆಲಸ ಮಾಡುತ್ತಿದ್ದೇನೆ ಎಂದು ಮಧು ಮಾಹಿತಿ ನೀಡಿದರು. ಈ ಕೋಣಗಳಿಗೆ ಪ್ರತಿದಿನ ಆಹಾರವಾಗಿ ಹಾಲು, ಪಿಸ್ತಾ, ಬಾದಾಮಿ, ಗೋಡಂಬಿ, ಸೇಬು, ಕೋಳಿ ಮೊಟ್ಟೆ, ಕಡಲೆ, ಮೆಂತ್ಯ, ಶೇಂಗಾ, ಕ್ಯಾರೆಟ್, ಬೀಟ್‌ರೂಟ್‌ಗಳನ್ನು ನೀಡಲಾಗುತ್ತಿದೆಯಂತೆ.

ಇದನ್ನೂ ಓದಿ: 

ಸಣ್ಣ ವ್ಯಾಪಾರ ಹಾಗೂ ವಾಣಿಜ್ಯ ವಾಹನ ಖರೀದಿಗೆ ₹10 ಲಕ್ಷ ಸಾಲ ಸೌಲಭ್ಯ

WhatsApp Group Join Now
Telegram Group Join Now

Related Posts

error: Content is protected !!