ಸರಕಾರಿ ಯೋಜನೆಸುದ್ದಿಗಳು

ಮೂರು ತಿಂಗಳ ಗೃಹಲಕ್ಷ್ಮೀ ಹಣ ಒಟ್ಟಿಗೆ ಜಮಾ : 15 ದಿನಗಳೊಳಗೆ ಹಣ ಸಂದಾಯ

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ ಹಣ ತಲುಪದ ಮಹಿಳೆಯರಿಗೆ ಒಟ್ಟಿಗೇ 6,000 ರೂಪಾಯಿ ಹಣ ಜಮಾ ಆಗಲಿದೆ. ಯಾವ ದಿನ ಹಣ ಸಿಗಲಿದೆ? ಯಾರಿಗೆಲ್ಲ ಹಣ ಬರಲಿದೆ? ಈ ಕುರಿತ ಸಚಿವರ ಸ್ಪಷ್ಟನೆ ಇಲ್ಲಿದೆ…

Three Months Gruhalakshmi money Deposit Together : ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿ, ವಿವಿಧ ತಾಂತ್ರಿಕ ದೋಷದಿಂದ ಈ ತನಕ ಒಂದೇ ಒಂದು ಕಂತಿನ ಹಣ ಬಾರದೇ ಪರದಾಡುತ್ತಿರುವ ಮಹಿಳೆಯರಿಗೆ ಒಟ್ಟು ಮೂರು ತಿಂಗಳ ಹಣ ಒಂದೇ ಸಲಕ್ಕೆ ಸಂದಾಯವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹೇಳಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ ತಾಂತ್ರಿಕ ಸಮಸ್ಯೆಗೆ ಸಂಬ೦ಧಿಸಿದ೦ತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಳೆದ ಆಗಸ್ಟ್ 15ರೊಳಗೆ ನೋಂದಣಿ ಮಾಡಿಕೊಂಡಿದ್ದರೂ ಈಗವರೆಗೆ ಹಣ ಸಂದಾಯವಾಗದಿದ್ದರೆ ಅಂಥವರಿಗೆ ಒಟ್ಟಿಗೆ ಮೂರು ತಿಂಗಳ ಹಣ ನೀಡಲಾಗುವುದು. ಇದುವರೆಗೆ ಹಣ ಬಾರದಿದ್ದರೆ ಪೂರ್ಣ ಬಾಕಿ ಹಣ ಹಾಕಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Loan Schemes : ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ | ಪಡೆದ ಸಾಲಕ್ಕೆ 70% ಸಬ್ಸಿಡಿ

15 ದಿನಗಳೊಳಗೆ ಹಣ ಜಮಾ

ದೀಪಾವಳಿ ಹಬ್ಬದ ವೇಳೆಗೆ ಅಥವಾ ಮುಂದಿನ 15 ದಿನಗಳೊಳಗೆ ಎಲ್ಲಾ ಫಲಾನುಭವಿಗಳಿಗೆ ಹಣ ಹೋಗುವಂತೆ ಕ್ರಮ ವಹಿಸಲಾಗುವುದು. ಸಮಸ್ಯೆಗಳನ್ನು ಬಗೆಹರಿಸಲು ಪ್ರತಿದಿನ ಮೂರು ಜಿಲ್ಲೆಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಮುಂದಿನ 10-15 ದಿನದಲ್ಲಿ ಗೃಹಲಕ್ಷ್ಮೀ ಯೋಜನೆಯ ಗೊಂದಲಗಳನ್ನು ಸಂಪೂರ್ಣ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೂ ಶೇ.95ರಷ್ಟು ಫಲಾನುಭವಿಗಳಿಗೆ ಹಣ ಸಂದಾಯವಾಗಿದೆ. ಸುಮಾರು 7.9 ಲಕ್ಷ ಮಹಿಳೆಯರಿಗೆ ಹಣ ಪಾವತಿ ಬಾಕಿಯಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಿ ಆಯಾ ಫಲಾನುಭವಿಗಳ ಖಾತೆಗೆ ಬಾಕಿ ತಿಂಗಳ ಮೊತ್ತ ಸೇರಿಸಿ ಇನ್ನು 15 ದಿನಗಳೊಳಗೆ ಸಹಾಯಧನ ಸಂದಾಯ ಮಾಡಲಾಗುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಎಫ್‌ಐಡಿ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ : ಇಲ್ಲಿದೆ ಕೃಷಿ ಇಲಾಖೆ ಪ್ರಕಣೆ FID Registration

ಹಣ ವಹಿವಾಟು ವಿವರ

  • ಗೃಹಲಕ್ಷ್ಮಿ ಯೋಜನೆಗೆ ಈವರೆಗೂ 1,16,65,000 ಮಹಿಳೆಯರು ನೋಂದಣಿ ಮಾಡಿಸಿದ್ದಾರೆ.
  • ಈ ಪೈಕಿ ಆಗಸ್ಟ್ ತಿಂಗಳಲ್ಲಿ 2,119 ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ ನೇರ ನಗದು ಮೂಲಕ ಜಮೆ ಮಾಡಲಾಗಿದೆ.
  • ಆಗಸ್ಟ್ ತಿಂಗಳಲ್ಲಿ 5 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಹಣ ಹೋಗಿಲ್ಲ.
  • ಸೆಪ್ಟೆಂಬರ್‌ನಲ್ಲಿ ಶೇ.82 ಕುಟುಂಬಗಳಿಗೆ ಹಣ ಹಾಕಲಾಗಿದ್ದು 12 ಲಕ್ಷ ಕುಟುಂಬಗಳಿಗೆ ತಾಂತ್ರಿಕ ದೋಷದಿಂದ ಅಥವಾ ಕೆವೈಸಿ ಸಮಸ್ಯೆಯಿಂದ ಹಣ ಬ್ಯಾಂಕ್ ಖಾತೆಯಲ್ಲೇ ಉಳಿದಿದೆ.
  • ಅಕ್ಟೋಬರ್ ತಿಂಗಳಿನಲ್ಲಿ 2,400 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿವರಿಸಿದರು.

ಕಾಲ್ ಮಾಡಿ…

ಬೇರೆ ಸಮಸ್ಯೆಗಳಿದ್ದಲ್ಲಿ ಮಹಿಳೆಯರು 1902 ಸಹಾಯವಾಣಿ ನಂಬರ್‌ಗೆ ಕೆರೆಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದೂ ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: 

ಹೊಸ ಕಾರ್ಡ್ ವಿತರಣೆಗೆ ಸರಕಾರದ ಗ್ರೀನ್ ಸಿಗ್ನಲ್ : ಯಾರಿಗೆಲ್ಲ ಸಿಗಲಿದೆ ಹೊಸ ರೇಷನ್ ಕಾರ್ಡ್?

ಗೃಹಲಕ್ಷ್ಮಿ, ಅನ್ನಭಾಗ್ಯ, ಪಿಂಚಣಿ ಹಣ ಪ್ರತಿ ತಿಂಗಳು ಈ ದಿನ ಗ್ಯಾರಂಟಿ ಜಮಾ : ಪಕ್ಕಾ ಡೇಟ್ ಫಿಕ್ಸ್ 

ಕುರಿ-ಮೇಕೆ ಶೆಡ್, ದನದ ಕೊಟ್ಟಿಗೆ ನಿರ್ಮಾಣಕ್ಕೆ ₹70,000 ಸಹಾಯಧನ : ಈಗಲೇ ಅರ್ಜಿ ಸಲ್ಲಿಸಿ

WhatsApp Group Join Now
Telegram Group Join Now

Related Posts

error: Content is protected !!