ಸರಕಾರಿ ಯೋಜನೆ

Belevime: ಹೀಗೆ ಬೆಳೆ ಹಾಳಾದರೆ ಮಾತ್ರ ರೈತರಿಗೆ ಬೆಳೆವಿಮೆ ಪರಿಹಾರ ಸಿಗಲಿದೆ

WhatsApp Group Join Now
Telegram Group Join Now

ಯಾವೆಲ್ಲ ಕಾರಣಕ್ಕೆ ಬೆಳೆಹಾನುಯಾದರೆ ರೈತರಿಗೆ ಬೆಳೆ ವಿಮೆ ಪರಿಹಾರ ಸಿಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2023-24ನೇ ಸಾಲಿನ ಮುಂಗಾರು ಬೆಳೆಗಳ ವಿಮಾ ನೋಂದಣಿಗೆ ಕೆಲವು ಬೆಳೆಗಳನೋಂದಣಿ ಕಳೆದ ಆಗಸ್ಟ್ 07ಕ್ಕೆ ಮುಕ್ತಾಯವಾಗಿದೆ. ಇನ್ನೊಂದಷ್ಟು ಬೆಳೆಗಳ ನೋಂದಣಿಗೆ ಆಗಸ್ಟ್ 16 ಕೊನೆಯ ದಿನವಾಗಿದೆ.

ಬೆಳೆವಾರು ನಿಗದಿಪಡಿಸಿದ ವಿಮಾ ಮೊತ್ತವನ್ನು ರೈತರು ಮುಂಗಾರು ಹಂಗಾಮಿನಲ್ಲಿ ಶೇ.2ರಷ್ಟು (ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು) ಮೊತ್ತವನ್ನು ಮಾತ್ರ ಪಾವತಿಸಬೇಕು. ಈ ಯೋಜನೆಯಡಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದರೆ ರೈತರು ಆಯಾ ಬೆಳೆಗೆ ತಕ್ಕಂತೆ ಬೆಳೆನಷ್ಟ ಪರಿಹಾರ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಗೃಹಲಕ್ಷ್ಮಿ ಹಣ ಈ ದಿನ ಜಮಾ ಗ್ಯಾರಂಟಿ ಯಾರಿಗೆಲ್ಲ ಹಣ ಗ್ಯಾರಂಟೀ? ಇಲ್ಲಿದೆ ಮಾಹಿತಿ…

ಈ ರೀತಿ ಬೆಳೆಹಾನಿ ಆಗಿರಬೇಕು?

ಹಾಲಿ ಇರುವ ಬೆಳೆಗಳಿಗೆ ಬಿತ್ತನೆಯಿಂದ ಕಟಾವಿನ ಹಂತದ ವರೆಗೆ ವಿಮಾ ರಕ್ಷಣೆ ಇರುತ್ತದೆ. ಹಾಗಂತ ಬೆಳೆವಿಮೆ ಮಾಡಿಸಿದ ತಕ್ಷಣ ಎಲ್ಲರಿಗೂ ವಿಮಾ ಪರಿಹಾರ ಸಿಗುವುದಿಲ್ಲ. ಈ ಕೆಳಗಿನ ನಿರ್ಧಿಷ್ಟ ಕಾರಣಕ್ಕೆ ಬೆಳೆ ಹಾನಿಯಾದರೆ ಮಾತ್ರ ವಿಮಾ ಪರಿಹಾರ ಸಿಗಲಿದೆ.

ಬರ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿAದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳ ವರೆಗೆ) ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಹಾಗೂ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೂ ಕೂಡ ನಷ್ಟ ಪರಿಹಾರ ಒದಗಿಸಲಾಗುತ್ತದೆ.

ಇದನ್ನೂ ಓದಿ: ರೈತರು 5 ಲಕ್ಷ ರೂಪಾಯಿ ಶೂನ್ಯ ಬಡ್ಡಿ ಬೆಳೆ ಸಾಲ ಪಡೆಯಲು ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ…

ನೋಂದಣಿ ಹೇಗೆ?

ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್‌ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊAದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಲು ಅವಕಾಶ ಇದೆ.

ಈಗಾಗಲೇ ಬೆಳೆವಾರು ಬೆಳೆ ವಿಮೆ ಕಂತು ಮಾಡಿಸಿದ ರೈತರಿಗೆ ವಿಮಾ ಕಂಪೆನಿ ಆದ್ಯತೆ ಮೇರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಪ್ರಸ್ತುತ ಸಾಲಿನ ಬೆಳೆ ವಿಮೆ ಅರ್ಜಿಯನ್ನು ರೈತರು ಕಾಲಮಿತಿಯಲ್ಲಿ ತುಂಬಿದರೆ ಮಾತ್ರ ವಿವಿಧ ಕಾರಣಕ್ಕೆ ಬೆಳೆ ನಷ್ಟವಾದಲ್ಲಿ ಮಾತ್ರ ಈ ಪರಿಹಾರ ಸಿಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ನಿಮ್ಮ ಜಿಲ್ಲೆಯ ಬೆಳೆ ವಿಮಾ ಕಂಪನಿಯ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 1800180 1551 ಉಚಿತ ಸಹಾವಾಣಿ ನಂಬರಿಗೆ ಕರೆ ಮಾಡಬಹುದು.

ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಯಾವಾಗ ಸಿಗಲಿದೆ? ಮಹತ್ವದ ಮಾಹಿತಿ ಇಲ್ಲಿದೆ…

WhatsApp Group Join Now
Telegram Group Join Now

Related Posts

error: Content is protected !!