ಉದ್ಯೋಗ

10th ಪಾಸಾದವರಿಗೆ ಟಾಟಾ ಮೆಮೋರಿಯಲ್ ಸೆಂಟರ್‌ನಲ್ಲಿ ಉದ್ಯೋಗವಕಾಶ | ಕೇಂದ್ರ ಸರಕಾರಿ ಹುದ್ದೆಗಳು TMC recruitment 2023

WhatsApp Group Join Now
Telegram Group Join Now

10ನೇ ತರಗತಿ ಪಾಸಾದವರಿಗೆ, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಟಾಟಾ ಮೆಮೋರಿಯಲ್ ಸೆಂಟರ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಸಂಪೂರ್ಣ ಮಾಹಿತಿ ಇಲ್ಲಿದೆ…

TMC Recruitment 2023 : Tata Memorial centre 1941ರಲ್ಲಿ ಸ್ಥಾಪಿತವಾಗಿ, 1962ರಿಂದ ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಈ ಸಂಸ್ಥೆಯು ಕೇಂದ್ರ ಅಣು ಶಕ್ತಿ ಸಚಿವಾಲಯದ ಅಧೀನದಲ್ಲಿ ಸ್ವಾಯತ್ತ ಸಂಸ್ಥೆಯಾಗಿದೆ. ದೇಶದ ಒಟ್ಟು 62 ಪ್ರಮುಖ ಕ್ಯಾನ್ಸರ್ ಚಿಕಿತ್ಸೆ ಹಾಗೂ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ.

ಸದರಿ ಅತ್ಯುನ್ನತ ಸಂಸ್ಥೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು; ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು ಬೇಕಾಗಿರುವ ಅಧಿಕೃತ ಜಾಲತಾಣ, ಅಧಿಕೃತ ಅಧಿಸೂಚನೆ, ವೇತನ ಮತ್ತು ವಯೋಮಿತಿಗಳ ವಿವರ, ಪ್ರಮುಖ ದಿನಾಂಕಗಳು, ಸಹಾಯವಾಣಿ ಮತ್ತು ವಿದ್ಯಾರ್ಹತೆಯ ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ…

ಇದನ್ನೂ ಓದಿ: ಜಿಲ್ಲಾ ಪಂಚಾಯತ್ ಹೊಸ ನೇಮಕಾತಿ | ನರೇಗಾ ಯೋಜನೆಯಡಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ Zilla Panchayat Recruitment 2023

TMC Recruitment 2023 ಹುದ್ದೆಗಳ ಸಂಕ್ಷಿಪ್ತ ವಿವರ

  • ನೇಮಕಾತಿ ಸಂಸ್ಥೆ : ಟಾಟಾ ಮೆಮೋರಿಯಲ್ ಸೆಂಟರ್
  • ಹುದ್ದೆಗಳ ಹೆಸರು : ಅಟೆಂಡೆ೦ಟ್ ಹಾಗೂ ಟ್ರೇಡ್ ಹೆಲ್ಪರ್
  • ಅರ್ಜಿ ಸಲ್ಲಿಕೆ : ಆನ್‌ಲೈನ್ ಮುಖಾಂತರ
  • ಒಟ್ಟು ಹುದ್ದೆಗಳು : 63
  • ಉದ್ಯೋಗ ಸ್ಥಳ : ಮುಂಬೈ ಹಾಗೂ ಗುವಾಹಟಿ

ಹುದ್ದೆಗಳ ವಿವರ

  • ಅಟೆಂಡೆ೦ಟ್ (Attendant) 40 ಹುದ್ದೆಗಳು : ಈ ಹುದ್ದೆಗಳಿಗೆ ಮುಂಬೈಯ ಪರೇಲ್‌ನಲ್ಲಿರುವ ಟಾಟಾ ಮೆಮೋರಿಯಲ್ ಸೆಂಟರ್‌ಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
  • ಟ್ರೇಡ್ ಹೆಲ್ಪರ್ (Trade Helper) 23 ಹುದ್ದೆಗಳು : ಟ್ರೇಡ್ ಹೆಲ್ಪರ್ ಹುದ್ದೆಗಳಿಗೆ ಗುವಾಹಟಿಯ ಡಾ. ಭುವನೇಶ್ವರ್ ಬರೋಹ್ ಸೆಂಟರ್ ಇನ್ಸ್ಟಿಟ್ಯೂಟ್ ಗೆ ನೇಮಕಾತಿ ಮಾಡಿಕೊಳ್ಳಲಾಗುವುದು.

ಇದನ್ನೂ ಓದಿ: PUC ಮುಗಿಸಿದವರಿಗೆ ಗ್ರಾಮ ಪಂಚಾಯತ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು | 5,980 ಹುದ್ದೆಗಳು Gram Panchayat Data Entry Operator Recruitment 2023

ಶೈಕ್ಷಣಿಕ ವಿದ್ಯಾರ್ಹತೆ ಏನು? : TMC Recruitment 2023 ಅಟೆಂಡೆ೦ಟ್ ಹಾಗೂ ಟ್ರೇಡ್ ಹೆಲ್ಪರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿ೦ದ 10ನೇ ತರಗತಿ ಪಾಸಾಗಿರಬೇಕು. 10ನೇ ತರಗತಿಯೊಂದಿಗೆ, ಸಂಬ೦ಧಿತ ಕ್ಷೇತ್ರದಲ್ಲಿ ಕನಿಷ್ಠ ಒಂದು ವರ್ಷ ಅನುಭವ ಹೊಂದಿರುವರು ಅರ್ಹರಿರುತ್ತಾರೆ.

ವಯೋಮಿತಿ : ಅಭ್ಯರ್ಥಿಗಳ ವಯಸ್ಸು ನಿಗದಿತ ದಿನಾಂಕಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ ವಯೋಮಿತಿ 25 ವರ್ಷ ಮೀರಿರಬಾರದು. ಒಬಿಸಿ 03 ವರ್ಷ, ಎಸ್ಸಿ / ಎಸ್ಟಿ 05 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ನಿಗದಿಪಡಿಸಲಾಗಿದೆ.

ಮಾಸಿಕ ಸಂಬಳ ಎಷ್ಟಿರುತ್ತದೆ? (TMC Recruitment Salary) : ಅಟೆಂಡರ ಹಾಗೂ ಟ್ರೇಡ್ ಹೆಲ್ಪರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18,000 ರೂಪಾಯಿ ವೇತನ ನೀಡಲಾಗುವುದು.

ಇದನ್ನೂ ಓದಿ: 50,000ಕ್ಕೂ ಹೆಚ್ಚು ಕಾನ್ಸ್’ಟೇಬಲ್ ನೇಮಕಾತಿ | SSLC ಮುಗಿಸಿದವರಿಗೆ ಸುವರ್ಣಾವಕಾಶ | SSC Constable recruitment 2023| apply @ssc.nic.in

ಅರ್ಜಿ ಸಲ್ಲಿಸುವ ಪ್ರಕ್ರಿಯೆ : ಕೆಳಗೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು (official notification) ಮತ್ತೊಮ್ಮೆ ಪರಿಶೀಲಿಸಿ, ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು.

ಆಯ್ಕೆ ಪ್ರಕ್ರಿಯೆ (Selection Procedure) : ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆಯನ್ನು (Written Test) ನಡೆಸಿ, ನಂತರ ಕೌಶಲ ಪರೀಕ್ಷೆ (Skill Test) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಶುಲ್ಕಗಳ ವಿವರ : SC, ST, ಮಾಜಿ ಸೈನಿಕ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದ್ದು ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಇತರೆ ಉಳಿದ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ (Application fees) 300 ರೂಪಾಯಿ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: SSLC ಪಾಸಾದವರಿಗೆ ಕೇಂದ್ರ ಸರಕಾರಿ ನೌಕರಿ: ಕೇಂದ್ರ ಸರಕಾರದ ಉಕ್ಕು ಪ್ರಾಧಿಕಾರದ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 30-10-2023
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17-11-.2023

ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ಲಿಂಕುಗಳು

ಅಧಿಸೂಚನೆ : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಜಾಲತಾಣ : ಇಲ್ಲಿ ಕ್ಲಿಕ್ ಮಾಡಿ
ಸಹಾಯವಾಣಿ : +91-22- 24177000

SC / ST ಫಲಾನುಭವಿಗಳ ಭರ್ಜರಿ ಸಬ್ಸಿಡಿ ಯೋಜನೆಗಳು : ಸ್ವಯಂ ಉದ್ಯೋಗ, ಭೂಮಿ ಖರೀದಿ, ಸ್ವಾವಲಂಬಿ ಸಾರಥಿ, ಗಂಗಾಕಲ್ಯಾಣ ಯೋಜನೆಗಳಿಗೆ ಅರ್ಜಿ ಆಹ್ವಾನ SC/ST Subsidy Schemes 2023-24

WhatsApp Group Join Now
Telegram Group Join Now

Related Posts

error: Content is protected !!