ಸಾಲ ಯೋಜನೆ

Home Loan : ಮನೆಯ ಮೇಲೆ ಸಾಲ ಪಡೆಯಬೇಕೆ? ಇಲ್ಲಿದೆ ಸಾಲ ಪಡೆಯುವ ಮಹತ್ವದ ಮಾಹಿತಿ

WhatsApp Group Join Now
Telegram Group Join Now

ನಿಮ್ಮ ಮನೆಯ ಮೇಲೆ ಗೃಹ ಸಾಲ ಅಥವಾ ಹೋಂ ಲೋನ್ ತೆಗೆದುಕೊಳ್ಳಲು ಬಯಸಿದ್ದರೆ, ಬ್ಯಾಂಕ್’ಗಳಲ್ಲಿ ಲಭ್ಯವಿರುವ ವಿವಿಧ ಸಾಲಗಳ ಸಂಪೂರ್ಣ ಮಾಹಿತಿ ಇಲ್ಲಿದೆ…

Home Loan : ದೇಶದ ರಾಷ್ಟ್ರೀಕೃತ, ಖಾಸಗಿ ಅಥವಾ ಸರ್ಕಾರಿ ಬ್ಯಾಂಕುಗಳು ಜನಸಾಮಾನ್ಯರಿಗೆ ಮನೆ ಖರೀದಿಸಲು, ನಿವೇಶನ ಖರೀದಿ ಮಾಡಲು, ಖರೀದಿಸಿದ ನಿವೇಶನದಲ್ಲಿ ಮೇಲೆ ಮನೆಯನ್ನು ಕಟ್ಟಿಕೊಳ್ಳಲು ಅಥವಾ ಈಗಾಗಲೇ ಕಟ್ಟಿದ ಮನೆಯನ್ನು ನವೀಕರಣ ಮಾಡಲು ಸೇರಿದಂತೆ ಹಲವಾರು ರೀತಿಯ ಸಾಲವನ್ನು ನೀಡುತ್ತವೆ. ಗೃಹ ಸಾಲವೆಂದರೆ ನಿಮ್ಮ ಆಸ್ತಿಯನ್ನು ಒತ್ತೆ ಇಟ್ಟು ರಿಯಲ್ ಎಸ್ಟೇಟ್ (Real estate) ಅನ್ನು ಖರೀದಿಸಲು ಅಥವಾ ನವೀಕರಿಸಲು ಬ್ಯಾಂಕ್’ಗಳಿ೦ದ ಹಣ ಎರವಲು ಪಡೆಯುವ ಸುರಕ್ಷಿತ ಸಾಲವೇ ಗೃಹ ಸಾಲವಾಗಿದೆ.

ಗೃಹ ಸಾಲವು ಬಡವರಿಗೆ ಮತ್ತು ಮನೆ ಕಟ್ಟಿ ಆರ್ಥಿಕ ಸಮಸ್ಯೆಯಿಂದ ಪರದಾಡುತ್ತಿರುವವರಿಗೆ ಅತ್ಯಂತ ಉಪಕಾರಿಯಾಗಿದೆ. ಗೃಹ ಸಾಲವು (Home loan) ಸಾಮಾನ್ಯ ಜನರಿಗೆ ಕೈಗೆಟಕುವ ಬಡ್ಡಿ ದರದಲ್ಲಿ (Low interest) ಸಿಗುತ್ತಿದ್ದು ಹೆಚ್ಚಿನ ಅವಧಿವರೆಗೆ ಹೆಚ್ಚಿನ ಮೌಲ್ಯದ ಹಣವನ್ನು ಪಡೆದುಕೊಳ್ಳಬಹುದಾದ ಉತ್ತಮ ಸೌಲಭ್ಯವಾಗಿದೆ. ಗೃಹ ಸಾಲದಲ್ಲಿ ಇರುವ ವಿಧಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀದಿದ್ದೇವೆ.

ಇದನ್ನೂ ಓದಿ: Government Business Loan Schemes : ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು | 10 ಲಕ್ಷದಿಂದ 1 ಕೋಟಿ ತನಕ ಸಾಲ

ಗೃಹ ಸಾಲದ ವಿಧಗಳು (Types of Home loans)

  1. ಮನೆ ಖರೀದಿ ಸಾಲ
  2. ಭೂಮಿ ಖರೀದಿ ಸಾಲ
  3. ಮನೆ ನಿರ್ಮಾಣಕ್ಕೆ ಸಾಲ
  4. ಮನೆ ವಿಸ್ತರಣೆ ಸಾಲ
  5. ಹೋಮ್ ಕನ್ವರ್ಷನ್ ಸಾಲ

ಸಾಮಾನ್ಯವಾಗಿ ಆಸಕ್ತರು ಬ್ಯಾಂಕುಗಳಿ೦ದ ಮನೆಗಾಗಿ ಈ ಮೇಲಿನ ಐದು ರೀತಿಯ ವಿವಿಧ ಸಾಲಗಳನ್ನು (Types of loans) ಪಡೆಯಬಹುದಾಗಿದ್ದು, ಈ ಸಾಲಗಳ ವಿವರ ಈ ಕೆಳಗಿನಂತಿವೆ.

1. ಮನೆ ಖರೀದಿ ಸಾಲ : ಹೆಸರೇ ಸೂಚಿಸುವಂತೆ ಈ ವಿಧದ ಸಾಲವು, ಗೃಹ ಸಾಲದ ಅತ್ಯಂತ ಸಾಮಾನ್ಯ ವಿಧವಾಗಿದೆ. ಈ ಗೃಹ ಸಾಲವು ಅಭಿವೃದ್ಧಿ ಪ್ರಾಧಿಕಾರದಿಂದ ಹೊಸದಾದ ಅಪಾರ್ಟ್’ಮೆಂಟ್, ಮನೆ ಅಥವಾ ಬಂಗಲೆಗಳನ್ನು ಖರೀದಿಸಲು ಪಡೆಯಬಹುದಾದ ಸಾಲವಾಗಿದೆ. ಆಸ್ತಿಯು ನಿರ್ಮಾಣ ಹಂತದಲ್ಲಿ ಅಥವಾ ಈಗಾಗಲೇ ಸಿದ್ಧವಾದ ಆಸ್ತಿಯನ್ನು ಖರೀದಿಸಲು ಬ್ಯಾಂಕುಗಳಿ೦ದ ಈ ಸಾಲವನ್ನು ನೀವು ಪಡೆಯಬಹುದಾಗಿದೆ.

ಸಾಮಾನ್ಯವಾಗಿ ಇಂತಹ ಸಾಲವನ್ನು ಒದಗಿಸುವ ಬ್ಯಾಂಕುಗಳು ಅಥವಾ ಹೌಸಿಂಗ್ ಫೈನಾನ್ಸ್’ನಂತಹ (Housing finance) ಸಣ್ಣ ಕಂಪನಿಗಳು ಗೃಹ ಸಾಲದ ಮೇಲೆ ಪ್ರತಿ ವರ್ಷಕ್ಕೆ 8.40% ರಿಂದ 13-14%ರ ವರೆಗೆ ಬಡ್ಡಿ ದರದಲ್ಲಿ ಜನಸಾಮಾನ್ಯರಿಗೆ ಅವರವರ ವೈಯಕ್ತಿಕ ಕ್ರೆಡಿಟ್ ಸ್ಕೋರ್ (Cibil score or credit score) ಆಧಾರದ ಮೇಲೆ ಬಡ್ಡಿ ನಿಗದಿಪಡಿಸುತ್ತವೆ. ಗೃಹ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಪಡೆಯಲು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿಟ್ಟುಕೊಳ್ಳುವುದು ಮುಖ್ಯ.

ಇದನ್ನೂ ಓದಿ:  ಸಾಲ ಪಡೆಯುವವರಿಗೆ PhonePe ಹೊಸ ಅಪ್ಡೇಟ್ | PhonePe Loan Credit score Advice

2. ನಿವೇಶನ ಖರೀದಿ ಸಾಲ : ಒಬ್ಬ ವ್ಯಕ್ತಿಯು ಹೊಸದಾಗಿ ಮನೆಯನ್ನು ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಸೈಟ್/ನಿವೇಶನ (flat) ಅಥವಾ ಭೂಮಿ ಖರೀದಿಸಲು ಬ್ಯಾಂಕುಗಳಿ೦ದ ಅಥವಾ ಫೈನಾನ್ಸ್ ಕಂಪನಿಗಳಿ೦ದ ಪಡೆಯುವ ಸಾಲವೇ ನಿವೇಶನ ಖರೀದಿ ಸಾಲವಾಗಿದೆ. ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳು ಸಾಲವನ್ನು ನಿಮ್ಮ ನಿವೇಶನದ ದರದ ಶೇಕಡ 80-85ರಷ್ಟು ಮೊತ್ತದಷ್ಟು ಸಾಲವನ್ನು ವಿವಿಧ ವಾರ್ಷಿಕ ಬಡ್ಡಿ ದರದಲ್ಲಿ ನೀಡುತ್ತವೆ.

3. ಮನೆ ನಿರ್ಮಾಣಕ್ಕೆ ಸಾಲ : ಜನಸಾಮಾನ್ಯರು ಮನೆ ಕಟ್ಟಿಸಲು ನಿವೇಶನ ಹೊಂದಿದ್ದರೂ ಸಹ ಆರ್ಥಿಕ ಸಮಸ್ಯೆಯಿಂದ ಸ್ವಂತ ಮನೆ ಕಟ್ಟಲು ಸಾಧ್ಯವಾಗಿರುವುದಿಲ್ಲ. ನಿವೇಶನ ಖರೀದಿಸಿದ ಮೇಲೆ ಮನೆ ಕಟ್ಟಿಕೊಳ್ಳಲು ಬ್ಯಾಂಕುಗಳಿ೦ದ ಪಡೆಯುವ ಸಾಲವೇ ಮನೆ ನಿರ್ಮಾಣ ಸಾಲ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಖರೀದಿಸಿದ ನಿವೇಶನದ ಮೇಲೆ ಸಾಲ ಸಿಗುವುದು ಕಷ್ಟ. ಹಳ್ಳಿಗಳಲ್ಲಿರುವ ನಿವೇಶನವು ಇ-ಸ್ವತ್ತು ಖಾತೆ ಆಗಿದ್ದರೆ ಸುಲಭದಲ್ಲಿ ಸಾಲ ಸಿಗುತ್ತದೆ.

ನಿವೇಶನದ ಮೇಲೆ ಪಡೆಯುವ ಸಾಲದ ಮೇಲಿನ ಬಡ್ಡಿದರವು ಗೃಹ ಸಾಲಕ್ಕಿಂತ ಜಾಸ್ತಿ ಇರುತ್ತದೆ. ಸಾಲ ಪಡೆದ ನಿವೇಶನದಲ್ಲಿಯೇ ಮನೆ ಕಟ್ಟಿದರೆ ನೀವು ತೆರಿಗೆ ಪ್ರಯೋಜನ ಕೂಡ ಪಡೆಯಬಹುದು. ಹಲವು ಬ್ಯಾಂಕ್‌ಗಳು ಸಾಲ ನೀಡುವಾಗ ಆ ನಿವೇಶನದಲ್ಲಿಯೇ, ಇಂತಿಷ್ಟು ನಿರ್ದಿಷ್ಟ ಅವಧಿಯಲ್ಲಿಯೇ ಮನೆ ನಿರ್ಮಾಣ ಮಾಡಬೇಕೆಂದು ನಿಯಮಗಳನ್ನು ಹೊಂದಿವೆ.

ಇದನ್ನೂ ಓದಿ: Adani Capital loan : ಟ್ರ‍್ಯಾಕ್ಟರ್ ಮತ್ತು ಕೃಷಿ ಉಪಕರಣಗಳ ಖರೀದಿಗೆ ಇಲ್ಲಿ ಸಿಗುತ್ತೆ ತಕ್ಷಣ ಸಾಲ | ಕೇವಲ 5 ನಿಮಿಷಗಳಲ್ಲಿ ಸಾಲ ಅನುಮೋದನೆ

4. ಮನೆ ವಿಸ್ತರಣೆ ಸಾಲ : ಈಗಾಗಲೇ ಇರುವ ನಿಮ್ಮ ಮನೆಯನ್ನು ಸ್ಥಳಾವಕಾಶ ಹಾಗೂ ಮಹಡಿಯ ಮೇಲೆ ಮತ್ತೊಂದು ಮಹಡಿಯ ಮನೆ ಕಟ್ಟಲು ಅಥವಾ ವಿಸ್ತರಣೆ ಮಾಡಲು ಹಲವಾರು ಬ್ಯಾಂಕ್‌ಗಳು ಅಥವಾ ಫೈನಾನ್ಸ್ ಕಂಪನಿಗಳು ಹೋಮ್ ಎಕ್ಸ್’ಟೆನ್ಷನ್ ಲೋನ್ (home extension loan) ಅನ್ನು ನೀಡುತ್ತವೆ. ಕೆಲವು ಬ್ಯಾಂಕುಗಳು ಹೋಮ್ ಇಂಪ್ರೂವ್’ಮೆ೦ಟ್ ಲೋನ್ (Home Improvement Loan) ಅನ್ನು ಹೋಮ್ ಎಕ್ಸ್ಟೆನ್ಷನ್ ಸಾಲದ ರೂಪದಲ್ಲಿ ನೀಡುತ್ತವೆ.

5. ಹೋಮ್ ಕನ್ವರ್ಷನ್ ಸಾಲ : ಈಗಾಗಲೇ ನೀವು ಗೃಹ ಸಾಲ ಹೊಂದಿದ್ದು, ಮತ್ತೊಂದು ಅಥವಾ ಬೇರೊಂದು ಮನೆಯನ್ನು ಖರೀದಿಸಲು ಅಥವಾ ನಿರ್ಮಾಣ ಮಾಡಲು ಬಯಸಿದ್ದರೆ ಬ್ಯಾಂಕುಗಳು ಅಥವಾ ಫೈನಾನ್ಸ್ ಕಂಪನಿಗಳು ನಿಮಗೆ ಹೋಮ್ ಕನ್ವರ್ಷನ್ ಸಾಲವನ್ನು ಕೂಡ ನೀಡುತ್ತವೆ. ಆದರೆ ಯಾವುದೇ ವಿಧದ ಸಾಲ ಪಡೆಯಬೇಕೆಂದರೆ ನಿಮ್ಮ ಕ್ರೆಡಿಟ್ ಸ್ಕೋರ್ ಅಥವಾ ಸಿಬಿಲ್ ಸ್ಕೋರ್ ಉತ್ತಮವಾಗಿರುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: PhonePe Loan : ಫೋನ್ ಪೇ ಸಾಲ ಸೌಲಭ್ಯ | ನೀವು ಅರ್ಹರಾ? ಹೀಗೆ ಪರಿಶೀಲಿಸಿ | PhonePe loan details

WhatsApp Group Join Now
Telegram Group Join Now

Related Posts

error: Content is protected !!