ಸುದ್ದಿಗಳು

ಅಕಾಲಿಕ ಮಳೆ: ಬೆಳೆ ಹಾನಿಗೆ ಪರಿಹಾರವೇನು? | Untimely rains: Impact of Cyclone Mandus

WhatsApp Group Join Now
Telegram Group Join Now

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೈಕ್ಲೋನ್‌ನಿಂದ ಬೆಳೆ ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಮಳೆ ಮುನ್ಸೂಚನೆ ಏನು? ಬೆಳೆಹಾನಿ, ಜಾನುವಾರು ಸಾವಿನ ಪ್ರಮಾಣವೆಷ್ಟು? ರೈತರು ಅಕಾಲಿಕ ಮಳೆಯಿಂದ ಅನುಭವಿಸುತ್ತಿರುವ ಸಂಕಷ್ಟವೇನು? ಎಂಬ ಕುರಿತ ಸಮಗ್ರ ಮಾಹಿತಿ ಇಲ್ಲಿದೆ…

ಮತ್ತೆ ಮಳೆ ಆವಾಂತರಕ್ಕೆ ದಕ್ಷಿಣದ ರಾಜ್ಯಗಳು ತತ್ತರಿಸುವಂತಾಗಿದೆ. ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಮ್ಯಾಂಡಸ್ ಚಂಡಮಾರುತದ ಪ್ರಭಾವಕ್ಕೆ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟವಾಗುತ್ತಿದ್ದು; ಹಲವು ಕಡೆಗಳಲ್ಲಿ ಜನ, ಜಾನುವಾರುಗಳ ಸಾವು-ನೋವು ಸಂಭವಿಸುತ್ತಿದೆ. ರೈತರ ಬೆಳೆಹಾನಿ ಯಥಪ್ರಕಾರ ಮುಂದುವರೆದಿದೆ.

ಡಿಸೆಂಬರ್ 16ರ ವರೆಗೆ ಮಳೆ

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ. ಮುಂದಿನ ಐದು ದಿನ ಪೈಕಿ ಇಂದು ಡಿಸೆಂಬರ್ 12ರ ಸೋಮವಾರ ಗುಡುಗು ಸಹಿತ ಭಾರಿ ಮಳೆ ಆಗುವುದರಿಂದ ಚಾಮರಾಜನಗರ, ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಂಗಳವಾರದಿಂದ ಮೂರುದಿನ ಸಾಧಾರಣವಾಗಿ ಕೆಲವು ಕಡೆಗಳಲ್ಲಿ ಮಳೆ ಆಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಅಂದರೆ ಡಿಸೆಂಬರ್ 16ರ ವರೆಗೆ ಮಳೆಯಾಗಲಿದ್ದು; ಈ ಪೈಕಿ ಮೊದಲ ಎರಡು ದಿನ ಸಾಧಾರಣದಿಂದ ಭಾರಿ ಮಳೆ ಆಗಲಿದೆ. ನಂತರದ ಒಂದು ದಿನ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ನಂತರ ಎರಡು ದಿನ ತುಂತುರು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಡಿಸೆಂಬರ್ 15ರೊಳಗೆ ಅರ್ಜಿ ಸಲ್ಲಿಸಿ ₹3.50 ಲಕ್ಷ ಬೋರ್‌ವೆಲ್ ಸಹಾಯಧನ ಪಡೆಯಿರಿ

ಇದೇ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಇಂದಿನಿಂದ ಮುಂದಿನ ಎರಡು ದಿನ ಹಗರು ಮಳೆ ಬೀಳಲಿದೆ. ರಾಜ್ಯದ ಈ ಮಳೆ ನಿಗದಿ ಪ್ರದೇಶಗಳಲ್ಲಿ ಚಳಿ ಹೆಚ್ಚಾಗಿ ಕಂಡು ಬರಲಿದೆ. ಕಳೆದ 24 ಗಂಟೆಯಲ್ಲಿ ಕೋಲಾರದಲ್ಲಿ ಅಧಿಕ ಮಳೆ 8 ಸೆಂಟಿ ಮೀಟರ್, ಚಿಂತಾಮಣಿ, ರಾಯಲ್‌ಪಾಡು ತಲಾ 7 ಸೆಂ.ಮೀ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇವನಹಳ್ಳಿ ಹಾಗೂ ಗೌರಿಬಿದನೂರಿನಲ್ಲಿ 5 ಸೆಂ.ಮೀ ಮಳೆಯಾಗಿದೆ. ಬೆಂಗಳೂರು ನಗರ, ಯಲಹಂಕ, ಪಾವಗಡ ಹಾಗೂ ಮಧುಗಿರಿಯಲ್ಲಿ 4 ಸೆಂಟಿ ಮೀಟರ್‌ನಷ್ಟು ಮಳೆಯಾಗಿದೆ. ಉಳಿದೆಡೆ ಸಾಧಾರಣ ಮಳೆ ಕಂಡು ಬಂದಿದೆ. ದಕ್ಷಿಣ ಒಳನಾಡು ಭಾಗದಲ್ಲಿ ಇಡಿ ದಿನ ಚಳಿ ಹಾಗೂ ಮೋಡ ಕವಿದ ಕಂಡು ಬಂದಿದೆ.

ಬೆಳೆಗೆ ಹಾನಿ, ರೈತರ ಪರದಾಟ

ಸಾಮಾನ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಶುರುವಾಗುವ ಚಳಿಗಾಲ ಫೆಬ್ರವರಿವರೆಗೆ ಇರುತ್ತದೆ. ಆದರೆ, ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಮುನ್ನವೇ ಚಳಿ ಶುರುವಾಗಿ ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಕಳೆದ ವಾರ ಹಿಂಗಾರು ಮಳೆ ಕ್ಷೀಣ ಹಾಗೂ ಬಿಸಿಲು ವಾತಾವರಣ ಇದ್ದ ಪರಿಣಾಮ ಚಳಿ ಕಡಿಮೆಯಾಗಿತ್ತು. ಈಗ ಸೈಕ್ಲೋನ್ ಪರಿಣಾಮದಿಂದ ಮೋಡದಲ್ಲಿ ತೇವಾಂಶ ಇರುವುದರಿಂದ ಮತ್ತೆ ಚಳಿ ತೀವ್ರಗೊಂಡಿದೆ. ಕೆಲ ಜಿಲ್ಲೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ಇದರಿಂದ ಬೆಳೆನಷ್ಟ, ಜನಾವಾರು ಸಾವು-ನೋವು ಸಂಭವಿಸುತ್ತಿದೆ.

ಇದನ್ನೂ ಓದಿ:  ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ಭತ್ತ, ಅಡಿಕೆ ಕೊಯ್ಲಿನ ಅವಧಿ ಇದಾಗಿರುವ ಕಾರಣ ಅಕಾಲಿಕ ಮಳೆಯಿಂದ ರೈತರು ಕಂಗೆಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಭಟ್ಕಳ, ಕಾರವಾರ, ಸಿದ್ದಾಪುರ, ಕುಮಟಾದಲ್ಲಿ ಮಳೆಗೆ ರೈತರು ಪರದಾಡುವಂತಾಗಿದೆ. ಮಲೆನಾಡು ಭಾಗದಲ್ಲಿ ಅಡಿಕೆ ಕೊಯ್ಲು ಆರಂಭಗೊಂಡಿದ್ದು ಅಡಿಕೆ ಒಣಗಿಸಲು ರೈತರು ಪಾಲಿಹೌಸ್, ಡ್ರೈಯರ್ ಮೊರೆ ಹೋಗುತ್ತಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಅಡಿಕೆ, ಮೆಕ್ಕೆಜೋಳ, ಭತ್ತ ಕಟಾವಿಗೆ ಬಂದಿದ್ದು, ರೈತರು ಪರದಾಡುವಂತಾಗಿದೆ. ಬನವಾಸಿ ಭಾಗದಲ್ಲಿ ಭತ್ತ ಕಟಾವು ಮಾಡಿ ಗದ್ದೆಯಲ್ಲಿ ಬಿಟ್ಟಿರುವ ರೈತರು ಅವುಗಳನ್ನು ಮಳೆಯಿಂದ ರಕ್ಷಿಸಲು ಹೆಣಗುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಹಾವೇರಿ, ವಿಜಯನಗರದಲ್ಲಿ ಮಳೆಯಾಗಿರುವುದರಿಂzದಿಲ್ಲಿಯೂ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.

ಮ್ಯಾಂಡಸ್ ಚಂಡಮಾರುತ ಪ್ರಭಾವ ತಗ್ಗಿದ್ದು, ಸೋಮವಾರದಿಂದ ಮಳೆ ಇಳಿಮುಖವಾಗುವ ಸಾಧ್ಯತೆಯಿದೆ. ಆದರೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕಾರಣ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯಲ್ಲಿ ಇಂದು ಡಿಸೆಂಬರ್ 12ರ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಂಡಮಾರುತದಿಂದಾಗಿ ಕೋಲಾರ ಜಿಲ್ಲೆಯಲ್ಲಿ ಅಂದಾಜು ೧೫ ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ರಾಗಿ ಬೆಳೆ ನಾಶವಾಗಿದೆ. ಜತೆಗೆ, ಅವರೆ ಹೂವುಗಳು ನೆಲಕ್ಕುದುರಿ ಫಸಲು ಕುಂಠಿತವಾಗುವ ಭೀತಿ ಉಂಟಾಗಿದೆ.

ಇದನ್ನೂ ಓದಿ: ರೈತರೇ ನರೇಗಾ ಯೋಜನೆಯ ಈ ಅವಕಾಶ ಬಳಸಿಕೊಳ್ಳಿ | ಪ್ರತಿ ಫಲಾಭವಿಗೆ ಸಿಗಲಿದೆ ₹2.5 ಲಕ್ಷ ನೆರವು… 

ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಮ್ಯಾಂಡಸ್ ಚಂಡಮಾರುತದ ಪ್ರಭಾವವು ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲೂ ಉಂಟಾಗಿದೆ. ಇಲ್ಲಿ ನಿನ್ನೆ ಭಾನುವಾರ ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆಗಾಗ ತುಂತುರು ಮಳೆ ಬಿದ್ದಿತು. ಶನಿವಾರ ರಾತ್ರಿ ಜೋರು ಮಳೆ ಸುರಿಯಿತು. ಚಾಮರಾಜನಗರ ಹಾಗೂ ಯಳಂದೂರು ಭಾಗದಲ್ಲಿ ಹೆಚ್ಚು ಮಳೆಯಾಗಿದೆ.

ಪ್ರವಾಹ ಮತ್ತು ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರಿಗೆ ಚಂಡಮಾರುತವು ಸೃಷ್ಟಿಸಿರುವ ಪ್ರತಿಕೂಲ ವಾತಾವರಣವು ಮತ್ತೊಂದು ಸಂಕಷ್ಟ ತಂದೊಡ್ಡಿದೆ. ಭತ್ತದ ಬೆಳೆ ಕೊಯ್ಲು ಹಾಗೂ ಒಕ್ಕಣೆಗೆ ಅಡ್ಡಿಯಾಗಿದೆ. ಇದೇ ಪರಿಸ್ಥಿತಿ ಇನ್ನೂ ಕೆಲವು ದಿನ ಮುಂದುವರಿಯುವ ಮುನ್ಸೂಚನೆ ಇದ್ದು, ಬೆಳೆಗಳು ಇನ್ನಷ್ಟು ಹಾಳಾಗುವ ಆತಂಕ ರೈತರನ್ನು ಕಾಡತೊಡಗಿದೆ.

ಜಾನುವಾರುಗಳ ಸಾವು-ನೋವು

ಈ ಅಕಾಲಿಕ ಮಳೆಯಿಂದ ಜಾನುವಾರುಗಳ ಆರೋಗ್ಯದ ಮೇಲೂ ಪರಿಣಾಮ ಬೀರತೊಡಗಿದೆ. ಮಳೆಯಿಂದ ಉಂಟಾಗಿರುವ ಶೀತಗಾಳಿ ವಾತಾವರಣದಿಂದ ಕುರಿಗಳು ಸಾವಿಗೀಡಾಗುತ್ತಿವೆ. ಅಲ್ಲದೆ, ಜಾನುವಾರುಗಳ ಮೇವಿಗೂ ರೈತರು ಪರಿತಪಿಸುವಂತಾಗಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೌಡರಹಟ್ಟಿ ಗ್ರಾಮದಲ್ಲಿ ಶೀತಗಾಳಿ, ಜಡಿಮಳೆಗೆ ನಿನ್ನೆ ಡಿಸೆಂಬರ್ 11ರ ಭಾನುವಾರ ಏಳು ಕುರಿಗಳು ಮೃತಪಟ್ಟರೆ, 15ಕ್ಕೂ ಹೆಚ್ಚು ಕುರಿಗಳು ರೋಗಕ್ಕೆ ತುತ್ತಾಗಿವೆ.

ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಉಪ್ಪಾರಹಳ್ಳಿ ತಾಂಡಾದಲ್ಲಿ ಹತ್ತಕ್ಕೂ ಹೆಚ್ಚು ಕುರಿಗಳು ಡಿಸೆಂಬರ್ 10ರಂದು ರಾತ್ರಿ ಬಲಿಯಾಗಿವೆ. ಪಶುಇಲಾಖೆ ವೈದ್ಯರು ಕುರಿಗಳಿಗೆ ಚುಚ್ಚುಮದ್ದು ನೀಡಿ, ಗೋಣಿ ಹೊದಿಸುವಂತೆ ಮತ್ತು ದೂರದಲ್ಲಿ ಬೆಂಕಿ ಹಾಕಿ ಬಿಸಿ ಕೊಡುವಂತೆ ರೈತರಿಗೆ ತಿಳಿಸಿದ್ದಾರೆ. ಮಳೆಗಾಲ ಮುಗಿಯುವ ತನಕ ಕುರಿಗಳ ಉಣ್ಣೆ ಕತ್ತರಿಸದಂತೆ ಸಲಹೆ ನೀಡಿದ್ದಾರೆ.

========================

ಇವುಗಳನ್ನೂ ಓದಿ:

ಕೇವಲ ₹6,000ಕ್ಕೆ ₹60,000 ಬೆಲೆಯ ಹಸು, ಎಮ್ಮೆ, ಕುರಿ-ಮೇಕೆ ಖರೀದಿಗೆ ಅರ್ಜಿ ಆಹ್ವಾನ

ದಿನಕ್ಕೆ 300 ರೂಪಾಯಿ ಭತ್ಯೆ ಸಹಿತ ಉಚಿತ ಮೀನುಗಾರಿಕೆ ತರಬೇತಿ

ಮಣ್ಣಿನ ಆರೋಗ್ಯ ತಪಾಸಣೆ: ರೈತರಿಗೆ ಸಿಗಲಿದೆ ಅಧಿಕ ಆದಾಯ

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ರೈತರಿಗೆ ₹24,000 ಕೋಟಿ ಶೂನ್ಯ ಬಡ್ಡಿ ಸಾಲ: ಮುಖ್ಯಮಂತ್ರಿ ಘೋಷಣೆ 

ಇನ್ಮುಂದೆ ಸರಕಾರಿ ನೌಕರರಿಗೆ ನಿವೃತ್ತಿಯ ವರೆಗೂ ಸಿಗಲಿದೆ ವಿಮಾ ಸೌಲಭ್ಯ

ಬೆಳೆಹಾನಿ ಪರಿಹಾರಕ್ಕೆ ರೈತರಿಗೆ ಆಧಾರವಾದ ಬೆಳೆ ಸಮೀಕ್ಷೆ 

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಕೂಡಲೇ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

ಸಮಗ್ರ ಮಾಹಿತಿಗಾಗಿ ನಮ್ಮ ಟೆಲಿಗ್ರಾಂ ಗ್ರುಪ್ ಸೇರಲು ಇಲ್ಲಿ ಕ್ಲಿಕ್ ಮಾ

WhatsApp Group Join Now
Telegram Group Join Now

Related Posts

error: Content is protected !!