ಸರಕಾರಿ ಯೋಜನೆ

ಇನ್ಮುಂದೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡದಿದ್ದರೆ ಸೌಲಭ್ಯಗಳು ಕಟ್: ಮೊಬೈಲ್‌ನಲ್ಲೇ ಮಾಡಿ Aadhaar Update

WhatsApp Group Join Now
Telegram Group Join Now

ಕೇಂದ್ರ ಸರಕಾರ ದೇಶದಲ್ಲಿ ಆಧಾರ್ ಕಾರ್ಡ್‌ನ್ನು ಪ್ರತಿ 10 ವರ್ಷಗಳಿಗೊಮ್ಮೆ Update ಮಾಡುವುದನ್ನು ನಿನ್ನೆಯಿಂದ ಕಡ್ಡಾಯವಾಗಿಸಿದೆ. Update ಮಾಡದಿದ್ದರೆ ಯಾವೆಲ್ಲ ಸೌಲಭ್ಯಗಳು ಕಟ್ ಆಗಲಿವೆ? ನಿಮ್ಮ ಆಧಾರ್ ಕಾರ್ಡ್ Update ಮಾಡುವುದು ಹೇಗೆ? ಇತ್ಯಾದಿ ಸಮಗ್ರ ಮಾಹಿತಿ ಇಲ್ಲಿದೆ…

ಕೇಂದ್ರ ಸರಕಾರ ಹೊರಡಿಸಿದ ಹೊಸ ಮಾರ್ಗಸೂಚಿಯಂತೆ ಇನ್ನು ಮುಂದೆ ದೇಶದಲ್ಲಿ ಆಧಾರ್ ಕಾರ್ಡ್ ಪ್ರತಿ ಹತ್ತು ವರ್ಷಗಳಿಗೊಮ್ಮೆ ನವೀಕರಣ ಮಾಡುವುದು ಕಡ್ಡಾಯವಾಗಿದೆ. ಈ ನೀತಿಯನ್ನು ತಕ್ಷಣವೇ ಜಾರಿಗೆ ಬರುವಂತೆ ಭಾರತದಲ್ಲಿನ ಎಲ್ಲಾ ಆಧಾರ್ ಕಾರ್ಡ್‌ದಾರರಿಗೆ ಜಾರಿಗೊಳಿಸಲಾಗಿದೆ. ಈ ಮೂಲಕ ಆಧಾರ್ ಕಾರ್ಡ್ ಅನ್ನು ಆರಂಭಿಕ ದಾಖಲಾತಿ ದಿನಾಂಕದಿಂದ ಹತ್ತು ವರ್ಷಗಳ ನಂತರ ಮರೆಯದೇ ನವೀಕರಿಸುವುದು ಅನಿವಾರ್ಯವಾಗಿದೆ.

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI ) ಇದೇ ರೀತಿಯ ನಿಯಮವನ್ನು ಈ ಹಿಂದೆ ಹೇಳಿತ್ತು. ನಾಗರಿಕರು ತಮ್ಮ ಆಧಾರ್ ಮಾಹಿತಿಯನ್ನು ನಿಯಮಿತವಾಗಿ ನವೀಕರಿಸಲು ಮುಂದಾಗುತ್ತಿದ್ದರು. ಇದೀಗ ಆಧಾರ್ ವಂಚನೆಯನ್ನು ತಡೆಯುವ ಭಾಗವಾಗಿ ಕೇಂದ್ರವು ಈ ನಿಯಮವನ್ನು ಕಡ್ಡಾಯಗೊಳಿಸಿದೆ. ಈವರೆಗೂ ದೇಶದಲ್ಲಿ 134 ಕೋಟಿ ಜನರಿಗೆ ಆಧಾರ್ ಸಂಖ್ಯೆ ವಿತರಣೆಯಾಗಿದೆ. ಈ ಪೈಕಿ ಕಳೆದ ವರ್ಷ 16 ಕೋಟಿಗೂ ಹೆಚ್ಚು ಜನರು ಮಾಹಿತಿಗಳನ್ನು ಅಪ್‌ಡೇಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶೀಘ್ರದಲ್ಲಿಯೇ ಎಲ್ಲ ರೈತರಿಗೂ ಬೆಳೆವಿಮೆ ಪರಿಹಾರ: ನಿಮಗೆ ಎಷ್ಟು ಬೆಳೆವಿಮೆ ಬರಲಿದೆ ಚೆಕ್ ಮಾಡಿಕೊಳ್ಳಿ

ಎಲ್ಲದಕ್ಕೂ ಆಧಾರ್

ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಆಧಾರ್ ದೃಢೀಕರಣ ಬಳಕೆ ಮಾಡಲಾಗುತ್ತದೆ. ನೇರ ನಗದು ವರ್ಗಾವಣೆ, ಪಡಿತರ, ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಗಳು ಆಧಾರ್ ಸಂಖ್ಯೆಯ ಜೋಡಣೆಯ ಮೂಲಕವೇ ಸರ್ಕಾರದ ನೆರವು ಪಡೆಯುತ್ತಿದ್ದಾರೆ.

ಹೀಗಾಗಿ ಕೇಂದ್ರದ ಅಧಿಕೃತ ದಾಖಲೆ ಪ್ರಕಾರ, ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ ೧೦ ವರ್ಷಗಳು ಪೂರ್ಣಗೊಂಡ ನಂತರ, ಗುರುತಿನ ಪುರಾವೆ (ಪಿಒಐ) ಮತ್ತು ವಿಳಾಸದ ಪುರಾವೆಯನ್ನು ಸಲ್ಲಿಸುವ ಮೂಲಕ ಆಧಾರ್‌ನಲ್ಲಿ ತಮ್ಮ ಪೂರಕ ದಾಖಲೆಗಳನ್ನು ಒಮ್ಮೆಯಾದರೂ ನವೀಕರಿಸಬೇಕು ಎಂದು ತಿಳಿಸಿದೆ. ಇದನ್ನೂ ಓದಿ: ಅರ್ಜಿದಾರರಿಗೆ ಹೊಸ ರೇಷನ್ ಕಾರ್ಡ್ ಯಾವಾಗ ಸಿಗುತ್ತದೆ? ಇಲ್ಲಿದೆ ಮಹತ್ವದ ಮಾಹಿತಿ

ಏಕೆ ನವೀಕರಣ? 

ದೇಶದಲ್ಲಿ ಲಕ್ಷಾಂತರ ನಕಲಿ ಆಧಾರ್ ಕಾರ್ಡ್‌ಗಳಿವೆ ಎಂಬ ಆರೋಪವಿದೆ. ಅಕ್ರಮ ವಲಸಿಗರಿಗೂ ತುಂಬಾ ಸುಲಭವಾಗಿ ಆಧಾರ್ ಕಾರ್ಡ್ ಸಿಗುತ್ತಿದೆ. ಗುರುತಿನ ಚೀಟಿ ಹಾಗೂ ವಿಳಾಸದ ದಾಖಲೆಗಳನ್ನು ಅಪ್‌ಡೇಟ್ ಮಾಡುವುದು ಕಡ್ಡಾಯ ಮಾಡಿದರೆ ನಕಲಿ ಆಧಾರ್ ಹಾವಳಿಗೆ ತುಸು ಕಡಿವಾಣ ಬೀಳುವ ಸಾಧ್ಯತೆ ಇದೆ.

ಜನ ಕೆಲಸ, ವೃತ್ತಿ ಜೀವನ ಇನ್ನಿತರ ಕಾರಣಕ್ಕೆ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗಿ ನೆಲೆಸಿರುತ್ತಾರೆ. ವಯಸ್ಸಾಗುತ್ತ ಆಗುತ್ತ ವ್ಯಕ್ತಿಯ ಫೋಟೊ ಚಹರೆ ಕೂಡ ಬದಲಾಗುತ್ತಿರುತ್ತದೆ. ಆಧಾರ್ ಕಾರ್ಡ್‌ನಲ್ಲಿರುವ 10 ವರ್ಷಗಳ ಹಿಂದಿನ ಮುಖ ಚಹರೆಯ ಫೋಟೋ ಮೂಲಕ ವ್ಯಕ್ತಿಯ ಗುರುತು ಪತ್ತೆ ಮಾಡುವುದೂ ಕಷ್ಟಕರ. ಆಧಾರ್ ನವೀಕರಿಸಿದರೆ ಈ ಸಮಸ್ಯೆ ಇರುವುದಿಲ್ಲ.

ಇದರ ಜತೆಗೆ ವಿವಿಧ ಯೋಜನೆಗಳ, ವ್ಯವಹಾರಗಳಿಗೆ ಆಧಾರ್ ಅಗತ್ಯವಾಗಿರುವ ಕಾರಣ ಅದರಲ್ಲಿನ ವಿಳಾಸ ಇತ್ಯಾದಿ ಮಾಹಿತಿ ಸಮರ್ಪಕವಾಗಿ ಅಪ್‌ಡೇಟ್ ಆಗಿರಬೇಕಾಗುತ್ತದೆ. ಆಧಾರ್ ಡೇಟಾಬೇಸ್ ಸಂಗ್ರಹದಲ್ಲೂ ವ್ಯಕ್ತಿಯ ಕುರಿತು ಇತ್ತೀಚಿನ ಮಾಹಿತಿ ದಾಖಲೆಗೆ ಅಗತ್ಯವಾಗಿದೆ ಹೀಗಾಗಿ 10 ವರ್ಷಗಳಿಗೊಮ್ಮೆ ಆಧಾರ್ ನವೀಕರಣ ತೀರಾ ಅಗತ್ಯವಾಗಿದೆ. ಪ್ರತಿ ಆಧಾರ್ ಕಾರ್ಡ್‌ನಲ್ಲಿ ಅದನ್ನು ನೀಡಿರುವ ದಿನಾಂಕ ನಮೂದಾಗಿರುತ್ತದೆ. ಆದರನ್ವಯ 10 ವರ್ಷ ಆಗಿದ್ದರೆ, ದಾಖಲೆಗಳನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು. ಇದನ್ನೂ ಓದಿ: SSLC, PUC ಪಾಸಾದವರಿಗೆ ಐಸಿಐಸಿಐ ಬ್ಯಾಂಕ್‌ನಲ್ಲಿ 4,000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಮೊಬೈಲ್‌ನಲ್ಲೇ ಮಾಡಿ ಅಪ್‌ಡೇಟ್ 

ಮೊಬೈಲ್‌ನಲ್ಲಿ ಆಧಾರ್ ಅಪಡೇಟ್ ಮಾಡಲು ಅವಕಾಶವಿದೆ. ತಮ್ಮ ವೈಯಕ್ತಿಕ ಮಾಹಿತಿಯನ್ನು ನವೀಕರಿಸಲು ತಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಒಟಿಪಿಯನ್ನು ಬಳಸಿ ಲಾಗ್‌ಇನ್ ಮಾಡಬಹುದು. ಆನ್‌ಲೈನ್‌ನಲ್ಲಿ ಮೈ ಆಧಾರ್ ಪೋರ್ಟಲ್ ಅಥವಾ ಮೈ ಆಧಾರ್ ಆಪ್‌ನಲ್ಲಿ ಅಪ್‌ಡೇಟ್ ಡಾಕ್ಯುಮೆಂಟ್ ಎಂಬ ಹೊಸ ಫೀಚರ್ ಅನ್ನು ಪ್ರಾಧಿಕಾರ ನೀಡಿದೆ. ಇಲ್ಲಿ ಸಾರ್ವಜನಿಕರು ಇತ್ತೀಚಿನ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಮಾಹಿತಿ ಪರಿಷ್ಕರಣೆ ಮಾಡಬಹುದು. ತಿದ್ದುಪಡಿಗಳನ್ನು ಮಾಡಲು ಎಡಿಟ್ ಎಂಬ ಆಯ್ಕೆಯನ್ನೂ ನೀಡಲಾಗಿದೆ. ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಮೂಲಕ ತಿದ್ದುಪಡಿಯನ್ನು ಖಚಿತಪಡಿಸಿಕೊಳ್ಳಬೇಕು.

ಅಥವಾ ಆಧಾರ್ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಈ ಪ್ರಕ್ರಿಯೆ ಪೂರೈಸಬಹುದು. ತಮ್ಮ ಆಧಾರ್ ಕಾರ್ಡ್ ನವೀಕರಿಸಲು ಬಯಸುವವರು ಪರಿಶೀಲನೆಗಾಗಿ ತಮ್ಮ ಹತ್ತಿರದ ಯುಐಡಿಎಐ ಕೇಂದ್ರಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕೊಂಡೊಯ್ಯಬೇಕು. ಅಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀಡಲಾಗಿರುವ ಮಾಹಿತಿಯನ್ನು ಹಿಂದಿನ ದಾಖಲೆಗಳೊಂದಿಗೆ ಪರಿಶೀಲಿಸಲಾಗುತ್ತದೆ. ಅದನ್ನು ಗಮನಿಸಿ ಬದಲಾವಣೆಗಳಿದ್ದಲ್ಲಿ ತಿಳಿಸಿದರೆ ಆಧಾರ್ ನವೀಕರಣ ಮಾಡಲಾಗುತ್ತದೆ.  ಇದನ್ನೂ ಓದಿ:  ₹50,000 ವಿಶೇಷ ಪ್ರೊತ್ಸಾಹಧನಕ್ಕೆ D.Ed, B.Ed ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

WhatsApp Group Join Now
Telegram Group Join Now

Related Posts

error: Content is protected !!