ಕೃಷಿ

ರೈತರೇ ಕೀಟ ಹತೋಟಿಗೆ ನೀವೇ ತಯಾರಿಸಿ ನಾಟಿ ಕೀಟನಾಶಕ : ಇದು ಖರ್ಚಿಲ್ಲದ, ಹೆಚ್ಚು ಪರಿಣಾಮಕಾರಿ ಔಷಧಿ | Vegetable Insecticide

WhatsApp Group Join Now
Telegram Group Join Now

ಇದು ಯಾವುದೇ ಖರ್ಚಿಲ್ಲದೇ, ಸ್ವತಃ ರೈತರೇ ತಯಾರಿಸಬಲ್ಲ ನಿಸರ್ಗಸ್ನೇಹಿ ನಾಟಿ ಕೀಟನಾಶಕ. ಬೆಳೆಗಳ ಅನೇಕ ರೋಗಗಳಿಗೆ ಪರಿಣಾಮಕಾರಿ ಮದ್ದಾಗಬಲ್ಲ ಇದನ್ನು ತಯಾರಿಸಿ ಬಳಸುವ ವಿಧಾನ ಇಲ್ಲಿದೆ…

ಬೆಳೆಗಳಿಗೆ ಬಾಧಿಸುವ ಕೀಟ ಮತ್ತು ಶಿಲೀಂಧ್ರ ರೋಗ ನಿಯಂತ್ರಿಸಲು ರೈತರು ತಾವೇ ತಯಾರಿಸಬಹುದಾದ ಸುಲಭ ಮತ್ತು ಪರಿಣಾಮಕಾರಿ ವಿಧಾನ ಸಸ್ಯಜನ್ಯ ಕೀಟನಾಶಕ. ಸಸ್ಯಜನ್ಯ ಕೀಟನಾಶಕದಿಂದ ಎಲೆ ತಿನ್ನುವ, ರಸ ಹೀರುವ ಹೇನು, ನುಸಿಕೀಟಗಳನ್ನು ನಿಯಂತ್ರಿಸಬಹುದು. ಕಾಂಡಕೊರಕ, ಕಾಯಿ ಕೊರಕ, ಮುಟುರು ರೋಗಗಳಂತಹ ಬಾಧೆಗಳನ್ನೂ ಯಶಸ್ವಿಯಾಗಿ ನಿಯಂತ್ರಿಸಬಹುದು.

ಕೀಟನಾಶಕ ಗುಣವಿರುವ ಹೊಂಗೆ, ಬೇವು, ಆಡುಸೋಗೆ, ವಿಷಮಧಾರಿ, ಸೀತಾಫಲ, ಬಿಲ್ವಾಪತ್ರೆ, ಎಕ್ಕದ ಗಿಡ, ಕಣಗಿಲ, ತುಳಸಿ, ದನದ ಗಂಜಲ ಇತ್ಯಾದಿ ಬಳಸಿ ತಯಾರಿಸಿದ ಔಷಧಗಳನ್ನು ನಾನಾ ರೀತಿಯ ಕೀಟಗಳ ನಿಯಂತ್ರಣಕ್ಕೆ ಬಳಸಬಹುದು. ಸಸ್ಯಜನ್ಯ ಕೀಟನಾಶಕಗಳನ್ನು ಎಲ್ಲ ಕೀಟಗಳ ವಿರುದ್ಧವೂ ಬಳಸಬಹುದೆಂಬುವುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ಜೇನು ಸಾಕಣೆಗೆ ಸರ್ಕಾರದ ಸವಲತ್ತುಗಳು: ಸಣ್ಣ ರೈತರಿಗೆ ಶೇ.90ರಷ್ಟು ಸಹಾಯಧನ

ಸಸ್ಯಜನ್ಯ ಕೀಟನಾಶಕವನ್ನು ಹೇಗೆ ತಯಾರಿಸುವುದು?

200 ಲೀಟರ್ ಡ್ರಮ್‌ನಲ್ಲಿ ಮುಕ್ಕಾಲು ಭಾಗ ನೀರು ತುಂಬಿಸಬೇಕು. ಇದರಲ್ಲಿ ಹತ್ತಾರು ಕೀಟ ವಿಕರ್ಷಕ ಗಿಡಗಳ ಎಲೆಗಳಾದ ಬೇವು, ಎಕ್ಕ, ಲಕ್ಕಿ, ಲಂಟಾನ (ಚದುರಂಗಿ), ಹೊಂಗೆ, ಪಾರ್ಥೇನಿಯಂ ಕಸ, ಉಸಲಕ್ಕಿ ಎಲೆ ಮುಂತಾದ ವಿಷಯುಕ್ತ ಕಳೆ ಸಸ್ಯಗಳನ್ನು ತಲಾ ಮೂರು ಕೆ.ಜಿಗಳಷ್ಟು ತುಂಬಿಸಬೇಕು. ರೈತರು ಲಭ್ಯವಿರುವ ಯಾವುದೇ ವಿಷಕಾರಿ ಕೀಟವಿಕರ್ಷಕ ಸಸ್ಯಗಳನ್ನು ಬಳಸಬಹುದು.

ಎಲೆ/ಸಸ್ಯಗಳನ್ನು ಬೇಗನೆ ಕೊಳೆಯಿಸಲು ಬೇಕಾದ 10 ಕೆ.ಜಿ ದನದ ಸಗಣಿ, 10 ಲೀಟರ್ ದನದ ಮೂತ್ರಗಳನ್ನು ನೀರಿನೊಂದಿಗೆ ಡ್ರಮ್‌ನಲ್ಲಿ ಹಾಕಿ 21 ದಿನ ಕೊಳೆಯಿಸಬೇಕು. ಪ್ರತಿದಿನ ಎರಡು ಬಾರಿ ಎಲೆಗಳ ಮಿಶ್ರಣವನ್ನು ತಿರುವಿ ಹಾಕಬೇಕು. ಇದರಿಂದ ಎಲ್ಲ ಎಲೆಕಡ್ಡಿಗಳು ಕೊಳೆತು ನೀರಿನಲ್ಲಿ ಕರಗಿ, ಎಲೆಗಳ ರಸಸಾರವು ನೀರಿನಲ್ಲಿ ಬೆರೆತು ಕೀಟನಾಶಕ ತಯಾರಾಗುವುದು. ಮೊದಲು ಕೊಳೆತ ವಾಸನೆ ಬಹಳವಾಗಿದ್ದು; ನಂತರ ಕಡಿಮೆಯಾಗುವುದು. ಬಹಳ ಶಕ್ತಿಯುತವಾದ ಈ ಸಸ್ಯಜನ್ಯ ಕೀಟನಾಶಕದ ಒಂದು ಲೀಟರ್ ದ್ರಾವಣಕ್ಕೆ 10 ಲೀಟರ್ ನೀರು ಸೇರಿಸಿ ಬಳಸಬೇಕು.

ಇದನ್ನೂ ಓದಿ: ಈ ಕಾರ್ಡ್ ಇದ್ದರೆ ಸಿಗಲಿದೆ ಹೈನುಗಾರಿಕೆ, ಮೀನುಗಾರಿಕೆ, ಕುರಿ-ಮೇಕೆ-ಕೋಳಿ ಸಾಕಣೆಗೆ 3 ಲಕ್ಷ ಸಾಲ | ಈ ಕಾರ್ಡ್ ಪಡೆಯುವುದು ಹೇಗೆ?

ಸಸ್ಯಜನ್ಯ ಕೀಟನಾಶಕವನ್ನು ಹೇಗೆ ಬಳಸಬೇಕು?

ಒಂದು ಲೀಟರ್ ಸಸ್ಯಜನ್ಯ ಕೀಟನಾಶಕಕ್ಕೆ 10 ಲೀಟರ್ ನೀರನ್ನು ಸೇರಿಸಿ ಸಿಂಪರಣೆ ಟ್ಯಾಂಕ್‌ನಲ್ಲಿ ಹಾಕಿಕೊಂಡು ಬೆಳೆಗಳ ಮೇಲೆ ಸಿಂಪಡಿಸಬೇಕು. ನೀರಿನಲ್ಲಿ ಬೆರೆಸಿ ನೀರಾವರಿ ಮಾಡುವುದು, ಅಥವಾ ತೂತು ಮಾಡಿದ ಕೊಡ ಅಥವಾ ಗಡಿಗೆಯಲ್ಲಿ ಕೀಟನಾಶಕವನ್ನು ಹಾಕಿ ನೀರಿನ ಹರಿವಿನಲ್ಲಿ ಮಿಶ್ರಣ ಮಾಡಿ ಗೊಬ್ಬರದ ರೂಪದಲ್ಲಿ ಬೆಳೆಗಳಿಗೆ ಪೂರೈಸಬಹುದು. ಸಸ್ಯಜನ್ಯ ಕೀಟನಾಶಕಗಳು ಗೊಬ್ಬರವಾಗಿಯೂ ಪರಿಣಾಮಕಾರಿಯಾಗಿವೆ.

ರಾಸಾಯನಿಕ ಕೀಟನಾಶಕ ಖರೀದಿಸುವ ಖರ್ಚು ಉಳಿತಾಯವಾಗುತ್ತದೆ. ಸಸ್ಯ ಜನ್ಯ ಕೀಟನಾಶಕ ಬಳಸುವುದರಿಂದ ಎಲೆಗಳು ಹಸಿರಾಗಿ ನಳನಳಿಸುತ್ತವೆ. ಒಂದು ವಾರದ ಬಳಕೆಯ ಅನುಭವದಲ್ಲಿ ಕೀಟ ಬಾಧೆ ಕಡಿಮೆಯಾಗುವುದರ ಪ್ರಭಾವವನ್ನು ಕಾಣಬಹುದು. ಸಿಂಪಡಣೆಯು ಯಾವಾಗಲೂ ಕೀಟಗಳ ಸಂಖ್ಯೆ ಹೆಚ್ಚಿರುವಾಗ ಬೇಕಾಗುತ್ತದೆ. ಅಂದರೆ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಸಿಂಪಡಣೆ ಮಾಡುವುದು ಒಳ್ಳೆಯದು. ಕೆಲವೊಮ್ಮೆ ಅತಿಯಾದ ಕೀಟಗಳು ಕಂಡುಬAದರೆ ಎರಡು ದಿನಗಳ ಅಂತರದಲ್ಲಿ ಮತ್ತೊಮ್ಮೆ ಸಿಂಪಡಣೆ ಮಾಡಬಹುದು. ವಾರಕ್ಕೊಮ್ಮೆಯಂತೆ 3 ಸಾರಿ ಸಿಂಪಡಣೆ ಮಾಡಿದರೆ ಉತ್ತಮ.

ಇದನ್ನೂ ಓದಿ: SBI ₹10 ಲಕ್ಷ ಮುದ್ರಾ ಸಾಲಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ವಿಧಾನ

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here
WhatsApp Group Join Now
Telegram Group Join Now

Related Posts

error: Content is protected !!