ಉದ್ಯೋಗ

ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಲ್ಲಿ 2,104 ಹುದ್ದೆಗಳು : ಶೀಘ್ರ ಬೃಹತ್ ನೇಮಕಾತಿ | Veterinary and Fisheries Sciences University Recruitment

WhatsApp Group Join Now
Telegram Group Join Now

ರಾಜ್ಯದ ಏಕೈಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬರೋಬ್ಬರಿ 2,104 ವಿವಿಧ ಹುದ್ದೆಗಳು ಖಾಲಿ ಇವೆ. ಇದರಿಂದ ರೈತರಿಗೂ, ವಿದ್ಯಾರ್ಥಿಗಳಿಗೆ ಆಗುವ ತೊಂದರೆ ಏನು? ಖಾಲಿ ಹುದ್ದೆಗಳ ಭರ್ತಿ ಯಾವಾಗ? ಸಮಗ್ರ ಮಾಹಿತಿ ಇಲ್ಲಿದೆ…

ಇದು ರಾಜ್ಯದ ಏಕೈಕ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. ಫೈವ್ ಸ್ಟಾರ್ ಗ್ರೇಡ್ ಜೊತೆಗೆ ದೇಶದಲ್ಲಿಯೇ 12ನೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಆದರೆ ಈ ವಿಶ್ವವಿದ್ಯಾಲಯ ಆರಂಭವಾದಾಗಿನಿAದಲೂ ಇಲ್ಲಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಹೀಗಾಗಿ ಬರೋಬ್ಬರಿ 2,104 ಹುದ್ದೆಗಳು ಖಾಲಿ ಉಳಿದಿವೆ. ಪಶುಪಾಲನೆ, ಹೈನುಗಾರಿಕೆ ಮತ್ತು ಮೀನು ಸಾಕಾಣಿಕೆಯಂತಹ ರೈತೋದ್ಯಮಗಳ ಪ್ರಧಾನ ಅಭಿವೃದ್ಧಿಗಾಗಿ 2005ರಂದು ರಾಜ್ಯದ ಗಡಿ ಜಿಲ್ಲೆ ಬೀದರ್‌ನಲ್ಲಿ ಸ್ಥಾಪನೆಯಾದ ಕಪಪಮೀವಿವಿ ಅರ್ಥಾತ್ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (Veterinary and Fisheries Sciences University) ಇನ್ನಿಲ್ಲದ ಸಿಬ್ಬಂದಿ ಕೊರತೆ ಎದುರಿಸುತ್ತಿದೆ.

ಕರ್ನಾಟಕದಲ್ಲಿನ ಪಶುವೈದ್ಯಕೀಯ, ಪಶುವಿಜ್ಞಾನ, ಹೈನುಗಾರಿಕೆ ಮತ್ತು ಮತ್ಸö್ಯ ವಿಜ್ಞಾನಗಳಲ್ಲಿನ ಶಿಕ್ಷಣ, ಕಲಿಕೆ, ಸಂಶೋಧನೆ ಮತ್ತು ವಿಸ್ತರಣಾ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿಯ ಧ್ಯೇಯವನ್ನೊಳಗೊಂಡ ತಂತ್ರಜ್ಞಾನಗಳನ್ನು ಹಳ್ಳಿಗಳಿಗೆ ವರ್ಗಾಯಿಸುವ ಜವಾಬ್ದಾರಿಯೊಂದಿಗೆ ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ರೈತಾಪಿ ಜನರ ಅಭ್ಯುದಯವೇ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವೆಂಬುದನ್ನು ಸಾರಿ ಹೇಳುವ ‘ಗ್ರಾಮ್ಯಮುಖಿ-ರೈತಸ್ನೇಹಿ’ ಎಂಬ ಧ್ಯೇಯವಾಕ್ಯವನ್ನು ವಿಶ್ವವಿದ್ಯಾಲಯವು ಹೊಂದಿದೆ.

ಇದನ್ನೂ ಓದಿ: 1.30 ಲಕ್ಷ ಪೊಲೀಸ್ ಕಾನ್ಸ್‌ಟೇಬಲ್‌ ನೇಮಕ | SSLC ಪಾಸಾದವರಿಗೆ ಸುವರ್ಣಾವಕಾಶ

2,104 ಹುದ್ದೆಗಳು ಖಾಲಿ 

ರಾಜ್ಯದಲ್ಲಿ ಈಗಾಗಲೇ ಐದು ಕಡೆಗಳಲ್ಲಿ ಪಶುವೈದ್ಯಕೀಯ ಕಾಲೇಜುಗಳಿವೆ. ಅಥಣಿ ಮತ್ತು ಪುತ್ತೂರುಗಳಲ್ಲಿ ಈಗ ಹೊಸದಾಗಿ ಪಶು ವೈದ್ಯಕೀಯ ಕಾಲೇಜುಗಳು ಆರಂಭವಾಗಿವೆ. ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಈಗ ನೂರಾರು ಸಂಖ್ಯೆಯಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಪಿಎಚ್‌ಡಿ, ಡಿಪ್ಲೋಮಾ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಹಾವೇರಿ, ಹಾಸನ ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಪಾಲಿಟೆಕ್ನಿಕ್ ಕೇಂದ್ರಗಳಿವೆ. ಮಂಗಳೂರಿನಲ್ಲಿ ಹೈನುಗಾರಿಕಾ ವಿಜ್ಞಾನ ಮಹಾ ವಿದ್ಯಾಲಯವಿದೆ.

ಈ ವಿವಿಗಳಲ್ಲಿ ಆಫೀಸರ್ಸ್, ಟೀಚಿಂಗ್, ಟೆಕ್ನಿಕಲ್, ನಾನ್ ಟಿಚೀಂಗ್ ಹುದ್ದೆಗಳು ಸೇರಿ ಒಟ್ಟು 2,104 ಖಾಲಿ ಇವೆ. ಹೀಗಾಗಿ ಎಲ್ಲಾ ಕೆಲಸವನ್ನೂ ಕೂಡಾ ಇರುವ ಸಿಬ್ಬಂದಿಯಿಂದಲೇ ಮಾಡಿಸಬೇಕಾಗಿರುವುದರಿಂದ ಕೆಲಸದ ಒತ್ತಡ ಜಾಸ್ತಿಯಾಗಿದೆ. ಇದರಿಂದ ಸಾಲುಸಾಲು ಸಮಸ್ಯೆಗಳು ತಲೆ ಎತ್ತಿವೆ. ಕೂಡಲೇ ರಾಜ್ಯಪಾಲರು ಮುಂದೆ ಬಂದು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಸಹಕಾರ ಇಲಾಖೆಯಲ್ಲಿ ಕೋ-ಆಪರೇಟಿವ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 52,000 ರೂಪಾಯಿ ಸಂಬಳ

ದೇಶದಲ್ಲಿಯೇ ಅತ್ಯುತ್ತಮ ವಿಶ್ವವಿದ್ಯಾಲಯ 

ಬೀದರ್ ನಂದಿನಗರದಲ್ಲಿರುವ ಪಶುವೈದ್ಯಕೀಯ ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ದೇಶದಲ್ಲಿಯೇ 12ನೇ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿ ಓದಿದ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ರಾಜ್ಯದ ಮೂಲೆ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನಿಗಳೂ ಕೂಡ ಆಗಿದ್ದಾರೆ. ಆದರೆ ಇಂತಹ ವಿವಿಯಲ್ಲಿ ಸಾವಿರಾರು ಹುದ್ದೆಗಳು ಖಾಲಿಯಿದ್ದು, ಆಡಳಿತ ಯಂತ್ರವೇ ಕುಸಿಯುತ್ತಿದೆ.

ಇಲ್ಲಿ ಬೀದರ್ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಟೀಚಿಂಗ್ ಹುದ್ದೆಗಳೇ ಇಲ್ಲಿ ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಪಾಠಕ್ಕೂ ಕೂಡ ತೊಂದರೆಯಾಗುತ್ತಿದೆ. ಹೀಗಾಗಿ ಖಾಲಿ ಇರುವ ಹುದ್ದೆಗಳನ್ನ ಬೇಗ ಭರ್ತಿ ಮಾಡಿ ಎಂದು ಇಲ್ಲಿನ ಜನರು ಸರಕಾರಕ್ಕೆ ವಿನಂತಿಸುತ್ತಿದ್ದಾರೆ.

ಇದನ್ನೂ ಓದಿ: ರೈಲ್ವೇ ಇಲಾಖೆಯಲ್ಲಿ 3 ಲಕ್ಷ ಹುದ್ದೆಗಳಿಗೆ ಅರ್ಜಿ ಆಹ್ವಾನ | SSLC, ITI ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ

ಖಾಲಿ ಹುದ್ದೆಗಳ ಭರ್ತಿ ಯಾವಾಗ?

ಸಾಮಾನ್ಯವಾಗಿ ಬೇಸಿಗೆ ಕಾಲ, ಮಳೆಗಾಲದಲ್ಲಿ ಜಾನುವಾರುಗಳಿಗೆ ನಾನಾ ರೋಗಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ಪಶು ಇಲಾಖೆ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಒಬ್ಬೊಬ್ಬ ವೈದ್ಯರು ತಲಾ ಎರೆಡೆರೆಡು ಪಶು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ. ಎಮ್ಮೆ, ಆಕಳು, ಕುರಿ, ಮೇಕೆ ಸೇರಿದಂತೆ ಲಕ್ಷಾಂತರ ಜಾನುವಾರುಗಳಿವೆ. ಅವುಗಳ ಚಿಕಿತ್ಸೆಗೆ ತೊಂದರೆ ಆಗುತ್ತಿದೆ. ಇದರ ಜೊತೆಗೆ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಪಶು ಸಂಗೋಪನಾ ಇಲಾಖೆ ಜಾರಿಗೆ ತರುತ್ತಿರುವ ನಾನಾ ಯೋಜನೆಗಳ ಅನುಷ್ಠಾನ ಕೂಡ ಕಷ್ಟಕರವಾಗುತ್ತಿದೆ. ಹೀಗಾಗಿ ರೈತರು ತಾವು ಚಿಕಿತ್ಸೆಗೆ ತಂದ ಜಾನುವಾರುಗಳಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂದು ದೂರುತ್ತಿದ್ದಾರೆ.

ಸದ್ಯ ರಾಜ್ಯ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿದೆ. ಚುನಾವಣೆ ನಂತರ ಪಶುಪಾಲನಾ ಇಲಾಖೆಯೂ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷಾಂತರ ಖಾಲಿ ಹುದ್ದೆಗಳ ಭರ್ತಿಗೆ ಹೊಸ ಸರಕಾರ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಬಹುಮುಖ್ಯವಾಗಿ ರಾಜ್ಯಪಾಲರು ಸದರಿ ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮನಸ್ಸು ಮಾಡಲಿ ಎಂಬ ಆಗ್ರಹ ಕೇಳಿ ಬರುತ್ತಿದೆ.

ಇದನ್ನೂ ಓದಿ: ಇಲ್ಲಿವೆ ಪಿಯುಸಿ ಪಾಸಾದವರಿಗೆ ಹೆಚ್ಚು ಸಂಬಳ ನೀಡುವ ಕೇಂದ್ರ ಸರ್ಕಾರಿ ಹುದ್ದೆಗಳು

ಪ್ರಮುಖ ಲಿಂಕ್‌ಗಳು

ಉದ್ಯೋಗ ಮಾಹಿತಿClick Here
ಸರಕಾರಿ ಯೋಜನೆClick Here
ಕೃಷಿ ಮಾಹಿತಿClick Here
ವಾಟ್ಸಾಪ್ ಗ್ರುಪ್Click Here
ಟೆಲಿಗ್ರಾಂ ಗ್ರುಪ್Click Here
WhatsApp Group Join Now
Telegram Group Join Now

Related Posts

error: Content is protected !!